Wednesday, 26th February 2020

ಫೋಟೊ ಫ್ಲ್ಯಾಶ್‌ನಿಂದ ವಾಲಿದ ಅಂಬಾರಿ

ಕೆ.ಬಿ.ರಮೇಶನಾಯಕ ಮೈಸೂರು
ವ್ಯಕ್ತಿಯೊಬ್ಬ ಫೋಟೊ ತೆಗೆಸಿಕೊಳ್ಳಲು ದಂತ ಹಿಡಿದು ಗಟ್ಟಿಯಾಗಿ ಜಗ್ಗಿದಲ್ಲದೆ, ಪೂಜಾರಿಯೊಬ್ಬರು ಅರ್ಜುನನ ಸಮೀಪದಲ್ಲೇ ನಿಂತು ಪ್ಲಾಶ್ ಆನ್ ಮಾಡಿ ಫೋಟೊ ತೆಗೆದಿದ್ದೇ ಅಂಬಾರಿ ವಾಲಿಕೊಳ್ಳಲು ಪ್ರಮುಖ ಕಾರಣವೆಂದು ಹೇಳಲಾಗಿದೆ.

ಅಂಬಾರಿ ವಾಲಿದ ಬಗ್ಗೆೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಸೂಕ್ಷ್ಮವಾಗಿ ಹೇಳಿದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆೆತ್ತುಕೊಂಡು ಸರಿಪಡಿಸುವ ಕೆಲಸ ಮಾಡಿದರೂ ಈಗ ಯಾರೋ ಮಾಡಿದ ಅಚಾತುರ್ಯದ ಕೆಲಸಕ್ಕೆೆ ಅರಣ್ಯ ಇಲಾಖೆ ಸಿಬ್ಬಂದಿ ಮುಜುಗರಕ್ಕೆೆ ಸಿಲುಕಿಪೇಚಾಡುವಂತಾಗಿದೆ.

ಈ ವೇಳೆ ಅರಮನೆಯಿಂದ ಜಂಬೂಸವಾರಿ ವೀಕ್ಷಿಸಲು ನಿಂತಿದ್ದ ರಾಜಮಾತೆ ಪ್ರಮೋದಾದೇವಿ ಗಜಪಡೆ ಬಳಿ ಇದ್ದ ಸಿಬ್ಬಂದಿಗೆ ಅದನ್ನು ಸರಿ ಮಾಡುವಂತೆ ಕೈಸನ್ನೆೆ ಮಾಡಿದ್ದರು. ಈ ದೃಶ್ಯಾಾವಳಿಗಳು ಕ್ಯಾಾಮೆರಾ ಕಣ್ಣಲ್ಲಿ ಸೆರೆಯಾಗಿದೆ.

ಅರಮನೆಯ ಖಾಸಗಿ ನಿವಾಸ ಸಮೀಪವಿರುವ ಅಂಬಾರಿ ಕಟ್ಟುವ ಸ್ಥಳದಲ್ಲಿ ಮಂಗಳವಾರ ಮದ್ಯಾಾಹ್ನ 3 ಗಂಟೆಯಿಂದ ಬಿಗಿ ಭದ್ರತೆಯಲ್ಲಿ ಅರ್ಜುನನ ಮೇಲೆ ಅಂಬಾರಿ ಕಟ್ಟುವ ಕಾರ್ಯವನ್ನು ಆರಂಭಿಸಲಾಗಿತ್ತು. ಮಾಧ್ಯಮದವರಿಗೆ ಪ್ರವೇಶ ನಿರ್ಬಂಧಿಸಿ ಕ್ರೇನ್ ಇದ್ದ ಸ್ಥಳದ ಶೀಟ್‌ನಿಂದ ಮುಚ್ಚಲಾಗಿತ್ತು. ಇದರಿಂದ ಆ ಸ್ಥಳದಲ್ಲಿ ಯಾರು ಇದ್ದಾಾರೆ, ಏನು ಮಾಡುತ್ತಿಿದ್ದಾಾರೆ ಎನ್ನುವುದೇ ಕಾಣದಂತಾಗಿತ್ತು. ಆದರೆ ಅರ್ಜುನನ ಬೆನ್ನು ಮತ್ತು ಅಂಬಾರಿ ಮಾತ್ರ ದೂರದಿಂದಲೇ ಗಮನಿಸಬಹುದಾಗಿತ್ತು.

ಸಂಜೆ 4.20ಕ್ಕೆೆ ಪುಷ್ಪಾಾರ್ಚನೆ ಮಾಡಲು ಮುಹೂರ್ತ ನಿಗದಿಪಡಿಸಿದ್ದರಿಂದ 2.50ಕ್ಕೆೆ ಅಂಬಾರಿ ಆನೆ ಅರ್ಜುನ, ಕುಮ್ಕಿಿ ಆನೆಗಳಾದ ವಿಜಯ, ಕಾವೇರಿಯನ್ನು ಕರೆತರಲಾಗಿತ್ತು. ಅರ್ಜುನನ ಬೆನ್ನಿಿನ ಮೇಲಿದ್ದ ಗಾದಿ, ನಮ್ದಾಾದ ಮೇಲೆ 750 ಕೆ.ಜಿ ತೂಕದ ಅಂಬಾರಿಯನ್ನು ಕ್ರೇನ್ ಸಹಾಯದಿಂದ ಇಟ್ಟು ಕಟ್ಟಲಾಗುತ್ತಿಿತ್ತು. 20 ಅಂಬಾರಿ ಕಟ್ಟುವ ಕಾಯಕದಲ್ಲಿ ತೊಡಗಿರುವ ಅನುಭವಿ ಅಕ್ರಮ್ ಪಾಶ ಸೇರಿದಂತೆ 8 ಮಂದಿ ಪರಿಣಿತರೇ ಅಂಬಾರಿ ಕಟ್ಟುತ್ತಿಿದ್ದರು. ಆನೆಯ ಬೆನ್ನಿಿನ ಮೇಲಿಟ್ಟು ಬಿಗಿಯಾಗಿ ಕಟ್ಟಲು ಒಂದು ಗಂಟೆ ಬೇಕಾಗಲಿದ್ದು, ಮುಹೂರ್ತದ ಸಮಯಕ್ಕೆೆ ಸರಿಯಾಗಿ ಅಂಬಾರಿ ಹೊತ್ತ ಆನೆಯನ್ನು ಅತಿಥಿಗಳ ಮುಂದೆ ಕರೆದೊಯ್ಯುವ ಜವಾಬ್ದಾಾರಿ ಅಧಿಕಾರಿಗಳು ಹಾಗೂ ಅರಣ್ಯ ಸಿಬ್ಬಂದಿಗಳ ಮುಂದಿತ್ತು. ಈ ಹಿನ್ನೆೆಲೆಯಲ್ಲಿ ಅಂಬಾರಿ ಕಟ್ಟುವ ಕೆಲಸದಲ್ಲಿ ತಲ್ಲೀನರಾಗಿದ್ದರು. ಈ ವೇಳೆ ಮುಕ್ಕಾಾಲು ಭಾಗ ಅಂಬಾರಿ ಕೆಲಸ ಮುಗಿದಿದ್ದ ಮೂವರ ಎಡವಟ್ಟು, ಮೂವರಿಗೆ ಕಂಟಕವಾಗಿ ಪರಿಣಮಿಸಿದರೂ ದೇವಿಯ ಆಶೀರ್ವಾದದಿಂದ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದರು ಎಂದು ಮೂಲಗಳು ಹೇಳಿವೆ.

ವಿಶ್ವವಿಖ್ಯಾಾತ ಮೈಸೂರು ದಸರಾದಲ್ಲಿ ಗಜಪಡೆ ನಾಯಕ ಅರ್ಜುನ ಅಂಬಾರಿ ಹೊತ್ತು ಜಂಬೂಸವಾರಿ ನಡೆಯುತ್ತಿಿದ್ದ ವೇಳೆ ಅಂಬಾರಿ ಕೊಂಚ ವಾಲಿತ್ತು. ಈ ವೇಳೆ ಅರಮನೆಯಿಂದ ಜಂಬೂಸವಾರಿ ವೀಕ್ಷಿಸಲು ನಿಂತಿದ್ದ ರಾಜಮಾತೆ ಪ್ರಮೋದಾದೇವಿ ಗಜಪಡೆ ಬಳಿ ಇದ್ದ ಸಿಬ್ಬಂದಿಗೆ ಅದನ್ನು ಸರಿ ಕೈಸನ್ನೆೆ ಮಾಡಿದ್ದರು. ಈ ದೃಶ್ಯಾಾವಳಿಗಳು ಕ್ಯಾಾಮೆರಾ ಕಣ್ಣಲ್ಲಿ ಸೆರೆಯಾಗಿದೆ.
ನಂತರ ಹಗ್ಗದ ಸಹಾಯದಿಂದ ಆರಂಭದಿಂದ ಕೊನೆಯವರೆಗೂ ಜಂಬೂಸವಾರಿ ನಡೆದು ಯಶಸ್ವಿಿಯಾಗಿ ಪೂರ್ಣಗೊಂಡಿತು. ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಪುಷ್ಪಾಾರ್ಚನೆ ಮಾಡುತ್ತಿಿದ್ದ ವೇಳೆಯೂ ಅಂಬಾರಿಗೆ ಹಗ್ಗದ ಸಪೋರ್ಟ್ ನೀಡಲಾಗಿತ್ತು. ನಾಡಹಬ್ಬ ದಸರಾದಲ್ಲಿ ನಾಡದೇವತೆ ಚಾಮುಂಡೇಶ್ವರಿಯನ್ನು ಹೊತ್ತು ಸಾಗುವ ಅಂಬಾರಿ ವಾಲಿದರೆ ನಾಡಿಗೆ ಕೆಡಕಾಗುತ್ತಾಾ ಎಂಬ ಆತಂಕ ಇದೀಗ ಶುರುವಾಗಿದೆ.

750 ಕೆ.ಜಿ ತೂಕದ ಅಂಬಾರಿಯಲ್ಲಿ ಚಾಮುಂಡಿದೇವಿಯನ್ನು ಹೊತ್ತುಕೊಂಡು ನಾಯಕ ಅರ್ಜುನ ಗಜಪಡೆ ಹೆಜ್ಜೆೆ ಹಾಕಿ ದಸರಾವನ್ನು ಯಶಸ್ವಿಿಯಾಗಿಸಿದ್ದಾನೆ. ಅರಮನೆ ಉತ್ತರ ದ್ವಾಾರವಾದ ಬಲರಾಮ ದ್ವಾಾರದಲ್ಲಿ ಮಧ್ಯಾಾಹ್ನ 2.09ಕ್ಕೆೆ ಶುಭ ಮಕರ ಲಗ್ನದಲ್ಲಿ ನಂದಿಧ್ವಜಕ್ಕೆೆ ಪೂಜೆ ಸಲ್ಲಿಸಿ ಸಂಜೆ 4.17ರ ಶುಭ ಕುಂಭ ಲಗ್ನದಲ್ಲಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಯಡಿಯೂರಪ್ಪ ಚಾಲನೆ ನೀಡಿದರು.

ಸಮೃದ್ಧಿ ಸಂಪತ್ತಿಿನ ನಡುವೆ ಹುಲಿಯ ಸಂತೃಪ್ತ ತಾಣಕ್ಕೆೆ ಪ್ರಥಮ ಬಹುಮಾನ
ಲಕ್ಷಾಂತರ ಪ್ರವಾಸಿಗರ ಕಣ್ಮನ ಸೆಳೆದ ಈ ಬಾರಿಯ ಜಂಬೂಸವಾರಿ ಮೆರವಣಿಗೆಯಲ್ಲಿ ಚಾಮರಾಜನಗರ ಜಿಲ್ಲೆೆಯ ಸಂಮೃದ್ಧಿಿ ಸಂಪತ್ತಿಿನ ನಡುವೆ ಹುಲಿಯ ಸಂತೃಪ್ತ ತಾಣ ಸ್ತಬ್ಧಚಿತ್ರಕ್ಕೆೆ ಪ್ರಥಮ ಬಹುಮಾನ ದೊರೆತಿದೆ. ಉತ್ತರಕನ್ನಡ ಜಿಲ್ಲೆೆಯ ಕದಂಬ, ಬನವಾಸಿಯ ಸ್ತಬ್ಧಚಿತ್ರಕ್ಕೆೆ ದ್ವಿಿತೀಯ, ತುಮಕೂರು ಜಿಲ್ಲೆೆಯ ನಡೆದಾಡುವ ದೇವರು ಸ್ತಬ್ಧಚಿತ್ರಕ್ಕೆೆ ಮೂರನೇ ಬಹುಮಾನ ಪಡೆದಿದೆ. ಚಿಕ್ಕಮಗಳೂರು ಜಿಲ್ಲೆೆಯ ಶಿಶಿಲ ಬೆಟ್ಟ ಸ್ತಬ್ಧಚಿತ್ರ, ವಾರ್ತಾ ಇಲಾಖೆಯ ಸರಕಾರದ ಸೌಲಭ್ಯಗಳ ಮಾಹಿತಿ, ಶಿವಮೊಗ್ಗ ಜಿಲ್ಲೆೆಯ ಫಿಟ್ ಇಂಡಿಯಾ ಸ್ತಬ್ಧಚಿತ್ರಗಳಿಗೆ ಸಮಾಧಾನಕರ ಬಹುಮಾನ ಬಂದಿದೆ. ತೀರ್ಪುಗಾರರಾಗಿ ಮೈಸೂರು ಆರ್ಟ್‌ಗ್ಯಾಾಲರಿಯ ಎಲ್.ಶಿವಲಿಂಗಪ್ಪ,ಕಾವಾ ನಿವೃತ್ತ ಬಸವರಾಜ ಮುಸಾವಳಗಿ, ಉಪನ್ಯಾಾಸಕ ಎ.ಪಿ.ಚಂದ್ರಶೇಖರ್ ಪಾಲ್ಗೊೊಂಡಿದ್ದರು.

ಜಂಬೂಸವಾರಿ ಮೆರವಣಿಗೆಗೆ ತೆರೆ:
ಹಲವು ದಿನಗಳಿಂದ ಕಾದು ಕುಳಿತಿದ್ದ ಜಂಬೂಸವಾರಿ ಮೆರವಣಿಗೆ ಮಂಗಳವಾರ ಬಿದ್ದಿದ್ದು, ಆನೆಗಳು ಮತ್ತೆೆ ತಮ್ಮ ಶಿಬಿರಗಳಿಗೆ ಹೋಗುವ ಸಮಯ ಬಂದಿದೆ. ಹೀಗಾಗಿ ಸತತ ತಾಲೀಮು, ಮೆರವಣಿಗೆ ಮೊದಲಾದವುಗಳಿಂದ ದಣಿದಿರುವ ಇವುಗಳಿಗೆ ಮೊದಲು ವಿಶ್ರಾಾಂತಿಯ ಅಗತ್ಯವಿದೆ.

ಸ್ನಾನಕ್ಕೆೆ ರೆಡಿಯಾದ ಅರ್ಜುನ:


ಸ್ನಾಾನಕ್ಕೆೆ ರೆಡಿಯಾದ ಅರ್ಜುನ, ಅಭಿಮನ್ಯು ಮೊದಲಾದ ಆನೆಗಳನ್ನು ಮಾವುತರು, ಕಾವಾಡಿಗಳು ನೀರಿನ ಪೈಪ್ ಮೂಲಕ ತೊಳೆಯುತ್ತಿಿದ್ದರೆ, ಹಲವು ಮಕ್ಕಳನ್ನು ಸವಾರಿ ಮಾಡಿಸುತ್ತ ಆಟವಾಡಿಸುತ್ತಿಿದ್ದವು.

ಗಜಪಡೆ ಸ್ನಾನಕ್ಕೆೆ ರಾಸಾಯನಿಕ ಪದಾರ್ಥಗಳ ಬಳಕೆ ಇಲ್ಲ:
ಆನೆಗಳಿಗೆ ಸ್ನಾಾನ ಮಾಡಿಸುವ ಕೆಲಸದ ವೇಳೆ ಅವುಗಳ ವೈದ್ಯ ಡಾ. ನಾಗರಾಜ್ ಖುದ್ದು ಹಾಜರಿದ್ದು ಎಲ್ಲವನ್ನ ನೋಡಿಕೊಂಡರು. ಆನೆಗಳಿಗೆ ಸ್ನಾಾನ ಮಾಡಿಸುವಾಗ ಸೋಪ್, ಇನ್ನಿಿತರ ರಾಸಾಯನಿಕ ಪದಾರ್ಥ ಬಳಸುವುದಿಲ್ಲ. ಅವುಗಳ ಚರ್ಮಕ್ಕೆೆ ಅವು ಒಗ್ಗುವುದಿಲ್ಲ. ಅಲರ್ಜಿ ಆಗಬಹುದು. ಆದ್ದರಿಂದ ಬರೀ ನೀರಿನಲ್ಲಿಯೇ ಸ್ನಾಾನ ಮಾಡಿಸುತ್ತೇವೆ. ಬಟ್ಟೆೆ ಒಗೆಯುವ ಬ್ರಷ್ ಮಾತ್ರ ಬಳಸುತ್ತೇವೆ ಎಂದರು. ಇದೇ ಅವುಗಳ ಮೈಮೇಲೆ ಚಿತ್ರವಿಚಿತ್ರ ಚಿತ್ತಾಾರ ಬಿಡಿಸಲು ಕೃತಕ ಬಣ್ಣ ಬಳಸದಿರುವುದರಿಂದ ಇದು ಸುಲಭದ ಕೆಲಸದಂತೆಯೂ ಕಂಡಿತು.

                                                                      ದಸರಾ ಆನೆಗಳಿಗೆ ತಣ್ಣನೆಯ ಸ್ನಾನ

ದೇಶ-ವಿದೇಶದ ಲಕ್ಷಾಂತರ ಪ್ರವಾಸಿಗರ ಮನಸೂರೆಗೊಳಿಸಿ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿ ಆಯಾಸಗೊಂಡಿರುವ ಅರ್ಜುನ ನೇತೃತ್ವದ ಗಜಪಡೆಯ ಆನೆಗಳು ಅಕ್ಷರಶಃ ವಿಶ್ರಾಾಂತಿಯ ಮೂಡ್‌ನಲ್ಲಿದ್ದವು. ಅರಮನೆ ಆವರಣದಲ್ಲಿ ಕೆಲವು ಆನೆಗಳು ಮಾವುತರು, ಕಾವಾಡಿಗಳ ಮಕ್ಕಳಿಗೆ ಆಟದ ಪ್ರಾಾಣಿಗಳಾಗಿ ಅವರನ್ನು ಸವಾರಿ ಮಾಡಿಸುತ್ತಿಿದ್ದರೆ, ಮತ್ತೆೆ ಹಲವು ಹಸುಗಳಿಗಿಂತಲೂ ಮುಗ್ಧವಾಗಿ ಬಳಿದ್ದಿದ್ದ ಚಿತ್ತಾಾರದ ಬಣ್ಣಗಳನ್ನು ತೊಳಸಿಕೊಳ್ಳುತ್ತಿಿದ್ದವು. ನಾಡಹಬ್ಬ ದಸರಾ ಮಹೋತ್ಸವ ಮುಗಿದ ಬಳಿಕ ಅರಮನೆ ಆವರಣದ ಕೋಡಿಸೋಮೇಶ್ವರ ದೇವಸ್ಥಾಾನದ ನೀರಿನ ತೊಟ್ಟಿಿ ಬಳಿ ಕಂಡು ಬಂದ ದೃಶ್ಯವಿದು.

 

 

Leave a Reply

Your email address will not be published. Required fields are marked *