ಪಿಲಿಕುಳ ಜೈವಿಕ ಉದ್ಯಾನವನದ ಒಂಭತ್ತು ವರ್ಷ ಪ್ರಾಯದ ಒಲಿವರ್ ಹುಲಿ ದಿಢೀರ್ ಮೃತಪಟ್ಟಿದ್ದು, ಈ ಹುಲಿಯ ಜನನ ಪಿಲಿಕುಳದಲ್ಲೇ ಆಗಿದ್ದು, ಪಿಲಿಕುಳದ ವಿಕ್ರಮ ಮತ್ತು ಶಾಂಭವಿ ಎಂಬ ಹುಲಿಗೆ ಜನಿಸಿದ ಎರಡು ಮರಿಗಳಲ್ಲಿ ಒಂದಾಗಿದೆ. ಕಳೆದ ಒಂಭತ್ತು ವರ್ಷಗಳಿಂದ ಇತರ ಹುಲಿಗಳೊಡೆನೆ ಈ ಒಲಿವರ್ ಎಂಬ ಹುಲಿಯೂ ಬೆರೆತಿತ್ತು.
ಸದ್ಯ 12 ಹುಲಿಗಳಿದ್ದು, ಒಲಿವರ್ ಹುಲಿಯ ಸಾವು ಉದ್ಯಾನವನ ಸಿಬ್ಬಂದಿಗಳಲ್ಲಿ ದಿಗ್ಭ್ರಮೆ ಮೂಡಿಸಿದೆ. ಹುಲಿಯ ಕೋವಿಡ್ ಪರೀಕ್ಷೆಗಾಗಿ ಭೋಪಾಲದ NHSAD ಪ್ರಯೋಗಾಲಕ್ಕೆ ಕಳುಹಿಸಲಾಗಿದೆ.
ಒಲಿವರ್ ಹುಲಿಯ ದಿಢೀರ್ ಸಾವು ಹಿನ್ನಲೆಯಲ್ಲಿ ಅನುಮಾನಸ್ಪದ ರೋಗ ಹರಡದಂತೆ ಪಿಲಿಕುಳ ಜೈವಿಕ ಉದ್ಯಾನವನದ ಪ್ರತೀ ಪ್ರಾಣಿಗಳ ಬೆರೆಕ್ಗಳಿಗೆ ರೋಗ ನಿರೋಧಕ ದ್ರಾವಣ ಸಿಂಪಡಣೆ ಮಾಡಲಾಗಿದೆ.
ಒಲಿವರ್ ಹುಲಿ ಸಾವಿನ ಕುರಿತು ಪ್ರತಿಕ್ರಿಯೆ ನೀಡಿರುವ ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಎಚ್. ಜಯಪ್ರಕಾಶ್ ಭಂಡಾರಿ, ಒಲಿವರ್ ಹುಲಿ ದಿಢೀರ್ ಸಾವು ಕಂಡಿದೆ. ತಕ್ಷಣ ಹುಲಿಯ ಸಾವಿನ ಬಗ್ಗೆ ತನಿಖೆ ಮಾಡಲಿದ್ದೇವೆ. ಹುಲಿಯ ಅಂಗಾಂಗ ಮಾದರಿಯನ್ನು ಪರೀಕ್ಷೆಗೆ ಉನ್ನತ ಲ್ಯಾಬ್ಗಳಿಗೆ ಕಳುಹಿಸಲಾಗಿದೆ. ಎರಡು ದಿನಗಳಲ್ಲಿ ಹುಲಿ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ ಎಂದು ಹೇಳಿದ್ದಾರೆ.