Sunday, 31st May 2020

ಮೂರು ಸಾವಿರ ಥಿಯೇಟರ್‌ಗಳಲ್ಲಿ ಪೈಲ್ವಾನ್ ಎಂಟ್ರಿ !

ಪೈಲ್ವಾನ್’ ಭರ್ಜರಿಯಾಗೆ ಎಂಟ್ರಿ ಕೊಡಲು ರೆಡಿಯಾಗಿದೆ. ಪಂಚಭಾಷೆಗಳಲ್ಲಿ ತಯಾರಾಗಿರುವ ‘ಪೈಲ್ವಾಾನ್’ ಬರೋಬ್ಬರಿ 3 ಸಾವಿರ ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ. ಮೊದಲ ಬಾರಿಗೆ ಕಿಚ್ಚ ಸುದೀಪ್ ಸಿನಿಮಾ 3 ಸಾವಿರಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆ ಆಗುತ್ತಿಿದೆ. ಕನ್ನಡ ಚಿತ್ರರಂಗದಲ್ಲೂ ’ಪೈಲ್ವಾಾನ್’ ಹೊಸ ದಾಖಲೆ ಬರೆಯಲಿದೆ. ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿಯಲಿದೆ. ಕನ್ನಡದಲ್ಲಿ ’ಕೆ.ಜಿ.ಎಫ್’ ಒಟ್ಟು 2500 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು.
ಹಿಂದಿಯಲ್ಲಿ ’ಪೈಲ್ವಾಾನ್’ ವಿತರಣೆಯ ಹಕ್ಕುಗಳನ್ನು ಝೀ ಸ್ಟುಡಿಯೋಸ್ ತೆಗೆದುಕೊಂಡಿದ್ದು, 1500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ತರಲಿದೆ. ಹಿಂದಿಯಲ್ಲಿ ’ಪೈಲ್ವಾಾನ್’ ಗೆ ಬೇಡಿಕೆ ಹೆಚ್ಚಲು ಕಾರಣ ಬಾಲಿವುಡ್ ಸ್ಟಾಾರ್ ಸುನೀಲ್ ಶೆಟ್ಟಿಿ. ಪೈಲ್ವಾಾನ್ ಚಿತ್ರದ ಮೂಲಕ ಸುನೀಲ್ ಶೆಟ್ಟಿಿ ಸ್ಯಾಾಂಡಲ್‌ವುಡ್‌ಗೆ ಕಾಲಿಟ್ಟಿಿದ್ದಾರೆ. ಬಾಲಿವುಡ್ ಬೆಡಗಿ ಆಕಾಂಕ್ಷಾ ಸಿಂಗ್ ಕಿಚ್ಚನಿಗೆ ಜೋಡಿಯಾಗಿದ್ದಾರೆ.
ಕರ್ನಾಟಕದಾದ್ಯಂತ ಕೆಆರ್‌ಜಿ ಸ್ಟುಡಿಯೋಸ್ ’ಪೈಲ್ವಾಾನ್’ ವಿತರಣಾ ಹಕ್ಕನ್ನು ಪಡೆದಿದೆ. ರಾಜ್ಯಾಾದ್ಯಂತ 500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಪೈಲ್ವಾಾನ್’ ಅಬ್ಬರಿಸಲಿದೆ.

Leave a Reply

Your email address will not be published. Required fields are marked *