Friday, 19th August 2022

ಕಂದಾಯ ದಿನ ನಿಮಿತ್ತ 101 ಸಸಿ ನೆಡುವ ಕಾರ್ಯ

ಶಹಾಪುರ : ಕಂದಾಯ ದಿನಾಚರಣೆಯ ನಿಮಿತ್ತ  ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಕೇಂದ್ರ ಸಂಘ ದಾವಣಗೇರಿ ತಾಲೂಕು ಘಟಕ ಶಹಾಪುರ ಹಾಗೂ ಶಹಾಪುರ ತಾಲೂಕು ಕಂದಾಯ ಇಲಾಖೆಯ ನೌಕರರ ವತಿಯಿಂದ “ವಸುಂದರೆಗೊಂದು ದಿನ” ಶೀರ್ಷಿಕೆ ಅಡಿ ತಹಸೀಲ್ದಾರ ಕಚೇರಿ ಯಲ್ಲಿ 101- ಗಿಡಗಳನ್ನು ನೆಡಲಾಯಿತು.
ತಹಸೀಲ್ದಾರರಾದ ಮಧುರಾಜ ಕೂಡಲಗಿ, ಅಧ್ಯಕ್ಷ ಗುಂಜಲಪ್ಪ ನಾಯಕ, ಉಪಾಧ್ಯಕ್ಷರಾದ ರಮೇಶ ರಾಠೋಡ, ವಿಜಯ ರಾಠೋಡ, ಖಜಾಂಚಿ ತಾನಾಜಿ , ವೆಂಕಟೇಶ ಮತ್ತು ಎಲ್ಲಾ ಸಿಬ್ಬಂದಿ ಹಾಜರಿದ್ದರು.