Monday, 20th January 2020

ಪೊಲೀಸಪ್ಪನ ಮಗನ ಪ್ರೀತಿಯಲ್ಲಿ ಕರಗಿ ಸುಟ್ಟು ಕರಕಲಾದ ಯುವತಿ

ಕಲಬುರಗಿ: ಕಾಲೇಜು ವಿದ್ಯಾಾರ್ಥಿನಿಯನ್ನು ಪ್ರೀತಿಸುವುದಾಗಿ ಆಕೆಯೊಂದಿಗೆ ಸುತ್ತಾಾಡಿದ್ದ ಯುವಕ, ದೈಹಿಕ ಸಂಬಂಧವನ್ನೂ ಬೆಳೆಸಿದ್ದ. ಯುವತಿ ಗರ್ಭಿಣಿ ಎಂದು ಗೊತ್ತಾಾಗುತ್ತಿಿದ್ದಂತೆ ಈ ಯುವಕ ಮನುಷ್ಯತ್ವವನ್ನು ಮರೆತು ಹೀನ ಕೃತ್ಯವೊಂದನ್ನು ಯುವಕನ ಹೀನ ಕೃತ್ಯಕ್ಕೆೆ ಯುವತಿ ಬಲಿಯಾಗಿ ಮೃತಪಟ್ಟಿಿದ್ದಳು. ಈತನ ಬಂಧನದಿಂದ ಈಗ ಯುವತಿಯ ಸಾವಿನ ರಹಸ್ಯ ಬಯಲಾಗಿದೆ.

ಕಲಬುರಗಿಯ ರಾಜಾಪುರದ ರಾಜು ಪೂಜಾರಿ ಎಂಬಾತ ಕಲಬುರಗಿಯ ಕಾಲೇಜೊಂದರ ವಿದ್ಯಾಾರ್ಥಿನಿಯನ್ನು ಪ್ರೀತಿಸುತ್ತಿಿದ್ದ. ಇಬ್ಬರ ನಡುವೆ ಸಲುಗೆ ಹೆಚ್ಚಿಿದ್ದರಿಂದ ಯುವತಿ ಗರ್ಭ ಧರಿಸಿದ್ದಳು. ಈ ವಿಷಯ ತಿಳಿದ ಯುವಕ ಸೆ.4 ರಂದು ಯುವತಿಯನ್ನು ಕಾಲೇಜಿನಿಂದ ಕರೆದುಕೊಂಡು ಬಂದು ಬಲವಂತವಾಗಿ ಹೆವಿ ಡೋಸ್ ಇಂಜೆಕ್ಷನ್ ನೀಡಿ ಅಬಾರ್ಷನ್ ಮಾಡಿಸಿದ್ದ. ಹೆವಿ ಡೋಸ್ ಇಂಜಕ್ಷನ್ ಗರ್ಭಪಾತದ ವೇಳೆ ಯುವತಿ ಮೃತಪಟ್ಟಿಿದ್ದಳು. ನಂತರ ಯುವತಿಯ ಶವವನ್ನು ಕಾರಿನಲ್ಲಿ ಇಟ್ಟುಕೊಂಡು 48 ಗಂಟೆಗಳ ಕಾಲ ಸುತ್ತಾಾಡಿದ್ದ. ಶವ ಕೊಳೆತು ವಾಸನೆ ಬರಲು ಪ್ರಾಾರಂಭವಾದ ಹಿನ್ನೆೆಲೆಯಲ್ಲಿ ತೆಲಂಗಾಣದ ಜಹೀರಾಬಾದ್‌ನ ಪರಗಿ ಪೊಲೀಸ್ ಠಾಣಾ ವ್ಯಾಾಪ್ತಿಿಯಲ್ಲಿ ರಸ್ತೆೆ ಬದಿ ಪೆಟ್ರೋೋಲ್ ಹಾಕಿ ಶವವನ್ನು ಸುಟ್ಟುಹಾಕಿದ್ದ.

ಕಾಲೇಜಿಗೆ ಹೋದ ಯುವತಿ ಸಂಜೆಯಾದರೂ ಮನೆಗೆ ಬಾರದೆ ಇದ್ದಾಗ ಪಾಲಕರು 2 ದಿನಗಳ ಕಾಲ ಹುಡುಕಾಟ ನಡೆಸಿದ್ದರು. ಯುವತಿ ಸಿಗದಿದ್ದಾಗ ನಾಪತ್ತೆೆ ಹಿಂದೆ ರಾಜು ಕೈವಾಡ ಇರುವ ಶಂಕೆ ಹಿನ್ನೆೆಲೆಯಲ್ಲಿ ಸೆ.6 ರಂದು ಬ್ರಹಾಪೂರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ರಾಜು ಪೂಜಾರಿಯನ್ನು ವಶಕ್ಕೆೆ ಪಡೆದು ವಿಚಾರಣೆ ನಡೆಸಿದಾಗ ಯುವತಿಯನ್ನು ಕೊಲೆ ಮಾಡಿ ಸುಟ್ಟು ಹಾಕಿರುವುದಾಗಿ ಬಾಯಿಬಿಟ್ಟಿಿದ್ದ. ಹಂತಕ ನೀಡಿದ ಮಾಹಿತಿಯ ಮೇರೆಗೆ ತೆಲಂಗಾಣದ ಜಹೀರಾಬಾದ್‌ಗೆ ತೆರಳಿ ಪರಿಶೀಲನೆ ನಡೆಸಿದಾಗ, ಯುವತಿಯ ಸುಟ್ಟು ಕರಕಲಾದ ಶವ ಪತ್ತೆೆಯಾಗಿದೆ.

ಪೊಲೀಸರು ಕೊಲೆ ಪ್ರಕರಣದಲ್ಲಿ ಆರೋಪಿಯನ್ನು ವಶಕ್ಕೆೆ ಪಡೆದು ವಿಚಾರಣೆ ನಡೆಸುತ್ತಿಿದ್ದಾರೆ. ಈ ಪ್ರಕರಣದಲ್ಲಿ ಖಾಸಗಿ ಆಸ್ಪತ್ರೆೆಯ ಸಹಕಾರ ನೀಡಿದ್ದಾರೆ ಎಂಬ ಮಾಹಿತಿ ಹಿನ್ನೆೆಲೆಯಲ್ಲಿ ವೈದ್ಯರನ್ನೂ ವಶಕ್ಕೆೆ ಪಡೆದು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾಾರೆ.

Leave a Reply

Your email address will not be published. Required fields are marked *