Tuesday, 27th October 2020

ಆಕಾಶ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಪ್ರಕಾಶ ಬಾಗೇವಾಡಿ ನಿಧನ

ಮೂಡಲಗಿ :  ಆಕಾಶ ಶಿಕ್ಷಣ ಸಂಸ್ಥೆ ಸಂಸ್ಥಾಪಕ,  ಸಮಾಜ ಸೇವಕ  ಪ್ರಕಾಶ  ಬಾಗೇವಾಡಿ  ನಿಧನರಾದರು.
ಪ್ರಕಾಶ್ ಅವರು, ಪ್ರವಾಹ, ಕೋವಿಡ್ ಸಂದರ್ಭದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದರು.  ಘಟಪ್ರಭಾದ ಸೇವಾದಳ ತರಬೇತಿ ಕೇಂದ್ರದ ಜವಾಬ್ದಾರಿ ವಹಿಸಿಕೊಂಡಿದ್ದರು. ದುರ್ದೈವ ಎಂದರೆ ಕೊನೆಗೆ ಅದೇ  ಕೋವಿಡ್ ಸೋಂಕಿಗೆ ಅವರು, ಬಲಿಯಾಗಿದ್ದಾರೆ.
ಕೋವಿಡ್ ನಿಯಮದಂತೆ ಅಂತ್ಯಕ್ರಿಯೆ: ಪ್ರಕಾಶ ಬಾಗೇವಾಡಿ ಅವರ  ಹುಟ್ಟುರಾದ ಗೋಕಾಕ ತಾಲೂಕಿನ ತುಕಾನಟ್ಟಿಯ ಆಕಾಶ ಶಿಕ್ಷಣ ಸಂಸ್ಥೆ ಆವರಣದಲ್ಲಿ ಕೋವಿಡ್ ನಿಯಮದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

Leave a Reply

Your email address will not be published. Required fields are marked *