Monday, 16th December 2019

ಕೆನಾಡದಿಂದ ಬಂದು ಲುಂಗಿ ತೊಟ್ಟ ಪ್ರಣವ್ !

ಸದ್ಯ ಸ್ಯಾಾಂಡಲ್‌ವುಡ್‌ನಲ್ಲಿ ಈಗ ನವ ಕಲಾವಿದರು ಗಮನಸೆಳೆಯುತ್ತಿಿದ್ದಾಾರೆ. ವಿಭಿನ್ನ ಕಥೆ, ಶೀರ್ಷಿಕೆಯ ಮೂಕಲವೇ ಸದ್ದು ಮಾಡುತ್ತಿಿದ್ದಾಾರೆ. ಕೆಲವರು ಈಗಾಗಲೇ ಚಿತ್ರಗಳನ್ನು ನಿರ್ಮಿಸಿ, ಚಿತ್ರಗಳನ್ನು ಗೆಲ್ಲಿಸಿಕೊಟ್ಟಿಿದ್ದು, ಹೀಗೂ ಚಿತ್ರ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿಿದ್ದಾಾರೆ. ಅದೇ ರೀತಿ ಇದೇ ಸಾಲಿನಲ್ಲಿ ನಿಲ್ಲಬಹುದು ಎಂಬ ನಿರೀಕ್ಷೆೆಯನ್ನು ಹುಟ್ಟಿಿಸಿರುವ ಚಿತ್ರ ‘ಲುಂಗಿ’. ಚಿತ್ರದ ಹೆಸರು ಕೇಳಿದಾಕ್ಷಣ ಇದೇನಪ್ಪ ಅಂತ ಅಚ್ಚರಿಯನ್ನೂ ಪಡಬಹುದು. ಬಿಡುಗಡೆಯಾಗಿರುವ ಟ್ರೇಲರ್ ನೋಡಿದರೆ ನಗಲೂಬಹುದು. ನಾವು ಉಡುವ, ಸಂಸ್ಕೃತಿಯ ಪ್ರತಿರೂಪವಾಗಿರುವ ‘ಲುಂಗಿ’ಯನ್ನೇ ಆಧಾರವಾಗಿಟ್ಟುಕೊಂಡು ಚಿತ್ರ ಮೂಡಿಬಂದಿದೆ. ನವ ನಟ ಪ್ರಣವ್ ಈ ಚಿತ್ರದ ಮೂಲಕವೇ ನಾಯಕನಾಗಿ ಸ್ಯಾಾಂಡಲ್‌ವುಡ್‌ಗೆ ಎಂಟ್ರಿಿಕೊಟ್ಟಿಿದ್ದಾಾರೆ.

ತುಳು ಚಿತ್ರರಂಗದಲ್ಲಿ ಸಕ್ರೀಯರಾಗಿದ್ದ, ಲೂಯೀಸ್ ಅಕ್ಷಿಿತ್ ಹೆಗಡೆ ಪ್ರಸಿದ್ಧ ಚಿತ್ರಗಳನ್ನು ನೀಡಿ ಮನೆಮಾತಾದವರು. ಈ ವೇಳೆ ಅವರಿಗೆ ‘ಲುಂಗಿ’ಯ ಬಗ್ಗೆೆ ಕಥೆಯೊಂದು ಮೂಡಿದೆ. ಅದನ್ನೇ ಆಧರಿಸಿ ಡಿಫರೆಂಟ್ ಜಾನರ್‌ನ ಕಥೆಯೊಂದನ್ನು ಸಿದ್ಧಪಡಿಸಿಕೊಂಡು, ನಿರ್ಮಾಪಕ ಮುಖೇಶ್ ಹೆಗಡೆ ಅವರಿಗೆ ಅರುಹಿದ್ದಾಾರೆ. ಕಥೆ ಕೇಳಿ ಮೆಚ್ಚಿಿಕೊಂಡ ಮುಖೇಶ್ ಹೆಗಡೆ ಕಥೆಯನ್ನು ಚಿತ್ರವನ್ನಾಾಗಿ ತೆರೆಗೆ ತರಲು ಒಪ್ಪಿಿದ್ದಾಾರೆ. ಈ ನಡುವೆ ಚಿತ್ರದ ಅಭಿನಯಿಸುವ ನಾಯಕ ಯಾರು ಎಂಬ ಪ್ರಶ್ನೆೆಯೂ ಕಾಡಿದೆ. ಇದೇ ಸಂದರ್ಭದಲ್ಲಿ ಮುಖೇಶ್ ಹೆಗಡೆ ಪುತ್ರ ಪ್ರಣವ್ ಉನ್ನತ ವ್ಯಾಾಸಾಂಗ ಮುಗಿಸಿ ಮನೆ ಹಿಂತಿರುಗಿದ್ದರು. ಈ ಕಥೆಗೆ ತನ್ನ ಮಗನನ್ನೇ ಯಾಕೆ ನಾಯಕನನ್ನಾಾಗಿ ಸಿನಿಮಾ ಮಾಡಬಾರದು ಎಂದು ಅಂದುಕೊಂಡಿದ್ದಾಾರೆ ಮುಖೇಶ್. ಇದಕ್ಕೆೆ ಪ್ರಣವ್ ಕೂಡ ಸಂತಸದಿಂದಲೇ ಒಪ್ಪಿಿದ್ದಾಾರೆ.

ನಟನೆಯ ಬಗ್ಗೆೆ ಒಲವಿದ್ದ ಪ್ರಣವ್ ಅಭಿನಯದ ಬಗ್ಗೆೆ ತರಬೇತಿ ಪಡೆಯಲು ಒಂದು ಮೊಟ್ಟೆೆಯ ಕಥೆ ಖ್ಯಾಾತಿಯ ರಾಜ್ ಬಿ ಶೆಟ್ಟಿಿ ಅವರಲ್ಲಿಗೆ ತೆರಳಿದ್ದಾಾರೆ. ಅವರಿಂದ ತರಬೇತಿ ಪಡೆದು ಕ್ಯಾಾಮೆರಾ ಮುಂದೆ ಬಂದು ನಿಂತಿದ್ದಾಾರೆ. ನಿರ್ದೇಶಕರು ಹೇಳಿದಂತೆ ಕಥೆಗೆ ಪೂರಕವಾಗಿಯೇ ನಟಿಸಿದ್ದಾಾರೆ. ‘ಲುಂಗಿ’ ತೊಟ್ಟ ಹುಡುಗನೊಬ್ಬ ನಗರದ ಮಾಲ್‌ಗಳಿಗೆ ಹೊದರೆ ಅಲ್ಲಿ ಆತನನ್ನು ನೋಡುವ ದೃಷ್ಟಿಿ ಹೇಗಿರುತ್ತದೆ ಎಂಬುದೇ ಚಿತ್ರದ ಒನ್‌ಲೈನ್ ಸ್ಟೋೋರಿ. ಇದರ ಜತೆಗೆ ಇಲ್ಲಿ, ಲವ್, ಕಾಮಿಡಿ, ಸೆಂಟಿಮೆಂಟ್ ಕಥೆಯೂ ಇದೆಯಂತೆ. ಬಣ್ಣ ಬಣ್ಣದ ಬಟ್ಟೆೆ ತೊಟ್ಟು ವಿದೇಶ ಸುತ್ತಿಿದ್ದ ಪ್ರಣವ್‌ಗೆ ಲುಂಗಿ ತೊಡುವುದು ಇಷ್ಟವಂತೆ. ಅದು ನಮ್ಮ ಸಂಸ್ಕೃತಿಯೂ ಹೌದು ಎನ್ನುತ್ತಾಾರೆ ಪ್ರಣವ್.

Leave a Reply

Your email address will not be published. Required fields are marked *