Wednesday, 26th February 2020

ಪ್ರವಾಹ ಎದುರಿಸಲು ಸಿದ್ಧವಾಗಿದೆ ಬಿಬಿಎಂಪಿ !

ವಿಶೇಷ ಸಂದರ್ಶನ
ಗಂಗಾಂಬಿಕೆ ಮಲ್ಲಿಕಾರ್ಜುನ್, ಬಿಬಿಎಂಪಿ ಮೇಯರ್

ರಾಜ್ಯಾದ್ಯಂತ ಪ್ರವಾಹ ಪರಿಸ್ಥಿಿತಿ ತಲೆದೋರಿದ್ದು ಸುಮಾರು 17 ಜಿಲ್ಲೆೆಗಳು ನೀರಿನಲ್ಲಿ ಮುಳುಗಿವೆ. ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ಸಿಂಚನ ಶುರುವಾಗಿದ್ದು ಮಿ.ಮೀ ಲೆಕ್ಕದಲ್ಲಿ ಮಳೆ ಬಿದ್ದರೆ ಸಾಕು ಮಹಾನಗರದಲ್ಲಿ ಪ್ರವಾಹದ ತೀವ್ರತೆ ಹೆಚ್ಚಲಿದೆ. ಮಳೆಯ ಮುನ್ಸೂಚನೆಯ ಹಿನ್ನೆೆಲೆಯಲ್ಲಿ ಬಿಬಿಎಂಪಿ ಹಲವಾರು ಸಿದ್ಧತೆಗಳನ್ನು ಮಾಡಿಕೊಂಡಿದೆ. ಮಳೆಯಿಂದಾಗುವ ಅನಾಹುತಗಳನ್ನು ತಡೆಯುವ ನಿಟ್ಟಿನಲ್ಲಿ ಬಿಬಿಎಂಪಿ ತೆಗೆದುಕೊಂಡಿರುವ ಮುಂಜಾಗೃತ ಕ್ರಮಗಳ ಬಗ್ಗೆೆ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು ವಿಶ್ವವಾಣಿ ಜತೆಗೆ ಮಾತನ್ನಾಡಿದ್ದಾರೆ.

ರಾಜ್ಯಾದ್ಯಂತ ಮಳೆ ಸುರಿದು ಅನಾಹುತಗಳಾಗಿವೆ. ನಗರಕ್ಕೆೆ ಮಳೆಯ ಭೀತಿ ಇದೆಯೇ?
ಮುಂದಿನ ಒಂದೆರಡು ದಿನಗಳಲ್ಲಿ ಬೆಂಗಳೂರಿನಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ರಾಜ್ಯಾಾದ್ಯಂತ ಭಾರಿ ಪ್ರಮಾಣದ ಮಳೆ ಸುರಿಯುತ್ತಿಿದ್ದು, ನಗರದಲ್ಲಿ ಈಗಾಗಲೇ ಸಣ್ಣ ಪ್ರಮಾಣದಲ್ಲಿ ಮಳೆ ಬೀಳುತ್ತಿಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ ದಿನಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಪ್ರವಾಹ ಪ್ರದೇಶಗಳಲ್ಲಿ ಶೇ.20ರಷ್ಟು ಮಳೆ ನಗರದಲ್ಲಿ ಸುರಿದರೂ ಪ್ರವಾಹ ಪರಿಸ್ಥಿಿತಿ ತಲೆದೋರಲಿದೆ. ಹೀಗಾಗಿ, ಬಿಬಿಎಂಪಿ ಮಳೆಯ ಬಗ್ಗೆೆ ಮುಂಜಾಗೃತಾ ಕ್ರಮಗಳನ್ನು ಈಗಾಗಲೇ ತೆಗೆದುಕೊಂಡು ಅಗತ್ಯ ಸಿದ್ಧತೆಗಳನ್ನು ನಡೆಸುತ್ತಿಿದೆ.

ಪ್ರತಿ ಬಾರಿ ನಗರದಲ್ಲಿ ಮಳೆ ಬಂದಾಗಲೂ ನೆರೆ ತಪ್ಪುವುದಿಲ್ಲವಲ್ಲಾ?
ನಗರದಲ್ಲಿ ಕೆಲ ಬಡಾವಣೆ ನಿರ್ಮಾಣದಲ್ಲಿ ಲೋಪದೋಷಗಳಾಗಿವೆ. ರಾಜಕಾಲುವೆ ಒತ್ತುವರಿ ಮಾಡಿಕೊಳ್ಳಲಾಗಿದೆ. ನಗರದ ಸ್ಥಿಿತಿಗತಿಗೆ ಅನುಗುಣವಾಗಿ ಮಳೆಯ ಪ್ರಮಾಣ ಹೆಚ್ಚಾಾದಂತೆ ಅವಾಂತರ ಸೃಷ್ಟಿಿಯಾಗುತ್ತದೆ. ಇದನ್ನು ತಡೆಯಲು ರಾಜಕಾಲುವೆ ಒತ್ತುವರಿ ತೆರವಿಗೆ ಇತ್ತೀಚೆಗೆ ಆಧ್ಯತೆ ನೀಡಲಾಗಿದೆ. ರಾಜಕಾಲುವೆಗಳ ಮರುನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ರಸ್ತೆೆಗಳಲ್ಲಿ ನೀರು ನಿಲ್ಲುವ ಕಡೆಗಳಲ್ಲಿ ನೀರು ಸರಾಗವಾಗಿ ಹರಿಯುವ ವ್ಯವಸ್ಥೆೆ ಮಾಡಲಾಗಿದೆ. ಟೆಂಡರ್ ಶ್ಯೂರ್ ಕಾಮಗಾರಿಗಳ ಮೂಲಕ ನೀರು ಹರಿಯುವಿಕೆಗೆ ವ್ಯವಸ್ಥೆೆ ಕಲ್ಪಿಿಸಲಾಗಿದೆ. ವೈಟ್ ಟಾಪಿಂಗ್ ಕಾಮಗಾರಿ ನಡೆಯುವ ಸ್ಥಳದಲ್ಲಿಯೂ ಮಳೆ ನೀರಿನ ಹರಿಯುವಿಕೆಗೆ ಸೂಕ್ತ ವ್ಯವಸ್ಥೆೆ ಕಲ್ಪಿಿಸಲಾಗಿದೆ. ಕೆರೆ ಒತ್ತುವರಿ ತೆರವು ಮಾಡುವ ಮೂಲಕ ನೀರು ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಿಸಲಾಗಿದೆ. ಹೀಗಾಗಿ, ಕಳೆದ ಬಾರಿಗಿಂತ ಈ ಬಾರಿ ಮಳೆಯ ಅವಾಂತರ ಕಡಿಮೆಯಾಗುವ ಭರವಸೆಯಿದೆ.

ಪ್ರವಾಹ ಹೆಚ್ಚಾಗದಂತೆ ಏನು ಕ್ರಮ ತೆಗೆದುಕೊಂಡಿದ್ದೀರಿ?
ನಗರದಲ್ಲಿ 182 ತೀವ್ರ ಮಳೆ ಹಾನಿಗೆ ಒಳಗಾಗುವ ಪ್ರದೇಶಗಳನ್ನು ಗುರುತಿಸಲಾಗಿದೆ. 28 ಅತಿ ಸೂಕ್ಷ್ಮ ಜಾಗಗಳನ್ನು ಗುರುತಿಸಲಾಗಿದೆ. ಸೋಲಾರ್ ಸೆನ್ಸಾಾರ್ ಅಳವಡಿಕೆ ಮಾಡಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಯಂತ್ರಣ ಕೇಂದ್ರದ ಮೂಲಕ ಮಾಹಿತಿ ಪಡೆದುಕೊಳ್ಳಲಾಗುತ್ತಿಿದೆ. 70 ರಿಂದ 120 ಮಿ.ಮೀ ಮಳೆ ಆದರೆ ಅದನ್ನು ನಿಭಾಯಿಸುವ ಸಾಮರ್ಥ್ಯ ನಗರದ ರಾಜಕಾಲುವೆ ಮತ್ತು ಚರಂಡಿ ವ್ಯವಸ್ಥೆೆಗಿದೆ. ಮಳೆಯ ಪ್ರಮಾಣ ಅದಕ್ಕಿಿಂತ ಹೆಚ್ಚಾಾದರೆ, ಅಲ್ಲಲ್ಲಿ ಸಮಸ್ಯೆೆಗಳಾಗಬಹುದು. ಅಂತಹ ಸಂದರ್ಭದಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಒಂಬತ್ತು ಕಂಟ್ರೋೋಲ್ ರೂಮ್‌ಗಳು ಕಾರ್ಯನಿರ್ವಹಿಸುತ್ತಿಿದ್ದು, ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿಿವೆ. ಜತೆಗೆ 63 ಉಪವಿಭಾಗಗಳಲ್ಲಿಯೂ ಕಂಟ್ರೋೋಲ್ ರೂಮ್ ಆರಂಭಿಸಲು ಚಿಂತಿಸಲಾಗಿದೆ. ಆಯಾ ವಿಭಾಗದಲ್ಲಿ ಮೋಟಾರ್ ವ್ಯವಸ್ಥೆೆ ಮಾಡಲಾಗಿದೆ. 24 ರಕ್ಷಣಾ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಒಂದು ತಂಡದಲ್ಲಿ 8ರಿಂದ 9 ಜನ ಕಾರ್ಯನಿರ್ವಹಿಸುತ್ತಾಾರೆ.

ರಸ್ತೆೆ ಗುಂಡಿಗಳನ್ನು ಮುಚ್ಚುವಲ್ಲಿ ಬಿಬಿಎಂಪಿ ಏನು ಕ್ರಮ ತೆಗೆದುಕೊಂಡಿದೆ?
ರಸ್ತೆೆ ಗುಂಡಿಗಳನ್ನು ಮುಚ್ಚುವ ಸಲುವಾಗಿ 140 ಕೋಟಿ ರು. ಅನುದಾನ ನೀಡಲಾಗಿದೆ. ಪ್ರತಿ ಹಳೇ ವಾರ್ಡ್‌ಗೆ 40 ಲಕ್ಷ ಮತ್ತು ಹೊಸ ವಾರ್ಡ್‌ಗೆ 20 ಲಕ್ಷ ರು. ಅನುದಾನ ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಸ್ತೆೆ ಗುಂಡಿಗಳನ್ನು ಮುಚ್ಚಿಿಸಲು ಶೀರ್ಘವೇ ಕ್ರಮ ತೆಗೆದುಕೊಳ್ಳುವಂತೆ ಆಯಾ ವಾರ್ಡ್ ಅಧಿಕಾರಿಗಳಿಗೆ ಹೊಣೆಗಾರಿಕೆ ನೀಡಲಾಗಿದೆ. ರಸ್ತೆೆ ಗುಂಡಿ ಬಿದ್ದಿರುವ ಕಡೆಗಳಲ್ಲಿ ಸಾರ್ವಜನಿಕರ ಮಾಹಿತಿಗೆ ಬ್ಯಾಾರಿಕೇಡ್ ಅಳವಡಿಕೆ ಮಾಡಬೇಕು. ಮಾಹಿತಿ ಫಲಕಗಳನ್ನು ಹಾಕಬೇಕು ಎಂದು ಸೂಚನೆ ನೀಡಲಾಗಿದೆ. ಒಂದು ವೇಳೆ ರಸ್ತೆೆ ಗುಂಡಿಗಳನ್ನು ಮುಚ್ಚಿಿಸದೆ ಅವಾಂತರಗಳಾದರೆ ಅದಕ್ಕೆೆ ಆಯಾ ವಾರ್ಡ್ ವ್ಯಾಾಪ್ತಿಿಯ ಸಹಾಯಕ ಎಂಜಿನಿಯರ್‌ಗಳನ್ನು ಹೊಣೆಯನ್ನಾಾಗಿ ಮಾಡಲು ತೀರ್ಮಾನಿಸಲಾಗಿದೆ.
ಪ್ರಗತಿಯಲ್ಲಿರುವ ಕಾಮಗಾರಿಗಳ ಸ್ಥಿತಿಗತಿಯೇನು?

ಬಹುತೇಕ ಕಾಮಗಾರಿಗಳನ್ನು ಮಳೆಗಾಲ ಆರಂಭವಾಗುವುದರ ಒಳಗೆ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿತ್ತು. ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಮಳೆಯಿಂದ ತೊಂದರೆಯಾಗದಂತೆ ಕಾರ್ಯನಿರ್ವಹಿಸಲು ಸೂಚನೆ ನೀಡಲಾಗಿದೆ. ನಗರದಲ್ಲಿ ನಿರಂತರವಾಗಿ ಅಭಿವೃದ್ಧಿಿ ಕಾಮಗಾರಿಗಳು ನಡೆಯುತ್ತಿದ್ದು, ಮಳೆಯಿಂದ ಕೆಲ ಕಾಮಗಾರಿಗಳಿಗೆ ಮಾತ್ರವೇ ತೊಡಕಾಗುತ್ತದೆ. ಇನ್ನುಳಿದ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ. ಇತ್ತೀಚೆಗೆ ಗುತ್ತಿಗೆದಾರರಿಗೆ ಕಾಮಗಾರಿ ಪೂರ್ಣಗೊಳಿಸುವ ಕುರಿತು ಗಡುವು ನೀಡಿಯೇ ಗುತ್ತಿಗೆ ನೀಡಲಾಗುತ್ತಿಿದೆ. ಹೀಗಾಗಿ, ಬಹುತೇಕ ಕಾಮಗಾರಿಗಳು ವಿಳಂಭವಾಗದೇ ಪೂರ್ಣವಾಗುತ್ತಿವೆ. ಪೂರ್ಣವಾಗದೆ ಉಳಿದಿರುವ ಕಾಮಗಾರಿಗಳನ್ನು ಶೀರ್ಘವೇ ಪೂರ್ಣಗೊಳಿಸವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ.

ರಾಜಕಾಲುವೆ ದುರಸ್ಥಿತಿಗೆ ತೆಗೆದುಕೊಂಡಿರುವ ಕ್ರಮಗಳೇನು?
ರಾಜಕಾಲುವೆ ತೆರವು ಕಾರ್ಯಾಚರಣೆ ಬಹುತೇಕ ಪೂರ್ಣವಾಗಿದೆ. ನ್ಯಾಾಯಾಲಯದ ತಡೆಯಾಜ್ಞೆೆ ಇರುವ ಕಡೆಗಳಲ್ಲಿ ಮಾತ್ರ ತೆರವು ಕಾರ್ಯ ಬಾಕಿ ಉಳಿದಿದೆ. ತೆರವುಗೊಳಿಸಿದ ಸ್ಥಳಗಳಲ್ಲಿ ರಾಜಕಾಲುವೆ ನಿರ್ಮಾಣ ಕಾಮಗಾರಿ ನಡೆದಿದೆ. ಯಾವ ಸ್ಥಳಗಳಲ್ಲಿ ಕಾಮಗಾರಿ ಪೂರ್ಣವಾಗಿಲ್ಲ ಎಂಬ ಬಗ್ಗೆೆ ಮಾಹಿತಿ ಸಿಕ್ಕರೆ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ. ಇನ್ನು ಉಳಿದಂತೆ ನಗರದಲ್ಲಿರುವ ಎಲ್ಲ ರಾಜಕಾಲುವೆ ಸ್ವಚ್ಛತೆಗೆ ಒನ್ ಟೈಮ್ ಕ್ಲೀನಿಂಗ್ ವ್ಯವಸ್ಥೆೆ ಮಾಡಲಾಗಿದೆ. ವಾರ್ಷಿಕ ನಿರ್ವಹಣೆ ಮಾಡುವಂತೆ ಗುತ್ತಿಿಗೆದಾರರಿಗೆ ತಾಕೀತು ಮಾಡಲಾಗಿದೆ. ಒಂದು ವೇಳೆ ಸ್ವಚ್ಛತೆ ಆಗದಿರುವ ಬಗ್ಗೆೆ ಗಮನಕ್ಕೆೆ ಬಂದರೆ ಗುತ್ತಿಿಗೆದಾರರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕೆಲಸ ವಿಳಂಭವಾಗಿರುವ ಕಡೆಗಳಲ್ಲಿ ಶೀರ್ಘವಾಗಿ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ.

ಮರ ಉರುಳಿ ಬೀಳುವ ಅಪಾಯ ತಪ್ಪುವುದಿಲ್ಲವಲ್ಲ?
ಅಪಾಯದಂಚಿನಲ್ಲಿರುವ ಮರಗಳನ್ನು ಗುರುತಿಸಿ ತೆರವುಗೊಳಿಸುವ ಕಾರ್ಯವನ್ನು ಈಗಾಗಲೇ ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳು ಮಾಡಿದ್ದಾಾರೆ. ಒಂದು ವೇಳೆಯಿಂದ ಮಳೆಯ ಸಂದರ್ಭದಲ್ಲಿ ಮರಗಳು ಬಿದ್ದರೆ ಅದನ್ನು ತೆರವುಗೊಳಿಸಲು 21 ತಂಡಗಳನ್ನು ರಚನೆ ಮಾಡಲಾಗಿದೆ. ಹೆಚ್ಚುವರಿಯಾಗಿ ಕಾರ್ಮಿಕರ ಅಗತ್ಯವಿದ್ದರೆ ತೆಗೆದುಕೊಳ್ಳುವಂತೆ ಸೂಚಿಸಲಾಗಿತ್ತು. ಹೀಗಾಗಿ, ಏಳು ಪ್ರತ್ಯೇಕ ತಂಡಗಳನ್ನು ಅರಣ್ಯ ವಿಭಾಗ ರಚನೆ ಮಾಡಿಕೊಂಡಿದೆ. ಜತೆಗೆ ಮಳೆಗಾಲದಲ್ಲಿ ಸಾರ್ವಜನಿಕರು ಮರಗಳ ಬಳಿ ನಿಲ್ಲುವಾಗ ಸ್ವಲ್ಪ ಜಾಗರೂಕತೆ ವಹಿಸಿದರೆ ಒಳ್ಳೆೆಯದು. ಹೀಗಾಗಿ, ಮಳೆಯ ವೇಳೆ ತಮ್ಮ ವಾಹನಗಳನ್ನು ಮರಗಳ ಕೆಳಗೆ ನಿಲ್ಲಸಿವುದಾಗಲೀ, ತಾವು ಮರಗಳ ಕೆಳಗೆ ಆಶ್ರಯ ಪಡೆಯುವುದಾಗಲೀ ಮಾಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ಮರಗಳ ಬಿದ್ದರೆ ತೆರವುಗೊಳಿಸಲು ನಾವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ.

Leave a Reply

Your email address will not be published. Required fields are marked *