Tuesday, 26th October 2021

ಮಹಿಳೆಯರು ವೈಯಕ್ತಿಕ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿ

ಜಿಲ್ಲಾ ಎಸ್ ಬಿಎಂ ಸ್ಯಾನಿಟೇಷನ್ ಸಮಾಲೋಚಕಿ ಬಸಮ್ಮ ಹುಡೇದ

ಕೊಪ್ಪಳ: ಮಹಿಳೆಯರು ಋತುಚಕ್ರ ಸಂದರ್ಭದಲ್ಲಿ ವೈಯಕ್ತಿಕ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಜಿಲ್ಲಾ ಎಸ್.ಬಿ.ಎಂ ಸ್ಯಾನಿಟೇಶನ್ ಮತ್ತು ಸಮಾ ಲೋಚಕಿ ಬಸಮ್ಮ ಹುಡೇದ ಸಲಹೆ ನೀಡಿದರು.

ಆಜಾದಿ ಕಾ ಅಮೃತ ಮಹೋತ್ಸವ ಮತ್ತು ಚಿಲುಮೆ ಅಭಿಯಾನದಡಿ ಬಹದ್ದೂರಬಂಡಿ ಗ್ರಾಮ ಪಂಚಾಯತಿ ಯಲ್ಲಿ ನಡೆದ ಮಹಿಳೆಯರಿಗೆ, ಶಾಲಾ ಮಕ್ಕಳಿಗೆ ಮತ್ತು ಮಹಿಳಾ ಕೂಲಿಕಾರರಿಗೆ ಋತುಚಕ್ರ ನಿರ್ವಹಣೆ ಮತ್ತು ವೈಯಕ್ತಿಕ ಶುಚಿತ್ವ ಜಾಗೃತಿ ಕಾರ್ಯಕ್ರಮ ಕುರಿತು ಅವರು ಮಾತನಾಡಿದರು.

ಪ್ರತಿಯೊಬ್ಬ ಮಹಿಳೆಯರು ಋತುಚಕ್ರ ಸಂದರ್ಭದಲ್ಲಿ ಪ್ಯಾಡ್ ಬಳಕೆ ಮಾಡಬೇಕು. ಅಲ್ಲದೇ ಅವುಗಳ ಬಳಕೆಯಾದ ನಂತರ ಸ್ವಚ್ಛವಾಗಿ ತೊಳೆದು ಹಾಕಿ ಬಿಸಿಲಿನಲ್ಲಿ ಒಣ ಹಾಕುವದು.  ಪ್ರತಿ ಗ್ರಾಮ ಪಂಚಾಯತಿ ಯಿ0ದ ಸ್ಯಾನಿಟರಿ ಪ್ಯಾಡ್‌ಗಳನ್ನು ವೈಜ್ಞಾನಿಕ ನಿರ್ವಹಣೆ ಮಾಡಲು ಈಗಾಗಲೇ ಪ್ರತಿ ವಾರಕೊಮ್ಮೆ ವಾಹನ ವನ್ನು ನಿಯೋಜಿಸಲಾಗಿದ್ದು, ಆ ದಿನದಂದು ಮಹಿಳೆಯರು ತಮ್ಮ ಮನೆಯಲ್ಲಿ ಬಳಕೆಯಾದ ಸ್ಯಾನಟರಿ ಪ್ಯಾಡ್‌ಗಳನ್ನು ನೀಡಬೇಕೆಂದರು.

ನಾವು ಆರೋಗ್ಯವಂತರಾಗಿರಬೇಕಾದರೆ ವೈಯಕ್ತಿಕ ಶುಚಿತ್ವಕ್ಕೆ ಹೆಚ್ಚಿನ ಅದ್ಯತೆ ನೀಡಬೇಕು. ಪ್ರತಿ ಮಹಿಳೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಒತ್ತಡಕ್ಕೆ ಒಳಗಾಗಿ ವಿವಿಧ ರೀತಿಯ ತೊಂದರೆಗಳನ್ನು ಅನುಭವಿಸುತ್ತಿದ್ದಾಳೆ. ಇವುಗಳನ್ನು ಮೆಟ್ಟಿ ನಿಲ್ಲಬೇಕಾದರೆ ವೈಯಕ್ತಿಕ ಶುಚಿತ್ವ ಮತ್ತು ಆರೋಗ್ಯಕ್ಕೆ ಅತೀ ಹೆಚ್ಚಿನ ಮಹತ್ವ ನೀಡಬೇಕು.  ಹದಿಹರೆಯದ ಮಹಿಳೆಯರು ಕಡ್ಡಾಯವಾಗಿ ಪ್ಯಾಡ್ ಬಳಕೆ ಮಾಡಬೇಕು.  ಶಾಲಾ ಮಕ್ಕಳು ಇದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ.  ಬಳಕೆಯಾದ ಪ್ಯಾಡ್‌ಗಳನ್ನು ಸರಿಯಾಗಿ ವೈಜ್ಞಾನಿಕ ನಿರ್ವಹಣೆ ಮಾಡದೇ ಇದ್ದರೇ ಪರಿಸರಕ್ಕೆ ಹಾನಿಯಾಗುತ್ತದೆ ಎಂದರು.

ತಾಲೂಕ ಪಂಚಾಯತಿಯ ನರೇಗಾ ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿ, ಕಳೆದ 15 ವರ್ಷಗಳಿಂದ ಜಾರಿಗೆ ಬಂದ ನರೇಗಾ ಯೋಜನೆಯು ಕೇವಲ ಪುರುಷರು ಮಾತ್ರ ಭಾಗವಹಿಸುತ್ತಿದ್ದರು. ಶೇ.50 ಕ್ಕಿಂತ ಕಡಿಮೆ ಮಹಿಳಾ ಭಾಗವಹಿಸುವಿಕೆ ಇರುವ ಗ್ರಾಮ ಪಂಚಾಯತಿಗಳಲ್ಲಿ ಬಹದ್ದೂರಬಂಡಿ ಗ್ರಾಮ ಪಂಚಾಯತಿಯು ಒಂದಾಗಿತ್ತು.  ಈ ಹಿಂದೆ ನರೇಗಾ ಯೋಜನೆಯ ಲಾಭ ಮಹಿಳೆಯರಿಗೆ ತಲುಪುತ್ತಿರಲಿಲ್ಲ. ಮಹಿಳಾ ಭಾಗವಹಿಸುವಿಕೆ ಕನಿಷ್ಠ 50 ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿರಬೇಕೆಂಬ ಉದ್ದೇಶದಿಂದ ಮಹಿಳಾ ಕಾಯಕೋತ್ಸವ ವಿನೂತನ ಕಾರ್ಯಕ್ರಮ ಜಾರಿಗೆ ತರಲಾಗಿದೆ ಎಂದು ಹೇಳಿದರು.

ಯೋಜನೆಯಲ್ಲಿ ಪುರುಷ-ಮಹಿಳೆಯರಿಗೆ ಸಮಾನ ಕೆಲಸ ಸಮಾನ ಕೂಲಿ ಎಂಬ ಶೀರ್ಷಿಕೆ ಹೊತ್ತು ಬಂದ ಯೋಜನೆಯಲ್ಲಿ ಮಹಿಳೆರು ಉದ್ಯೋಗ ಚೀಟಿ ಪಡೆದು ವೈಯಕ್ತಿಕ ಕಾಮಗಾರಿಗಳಾದ ಬದು ನಿರ್ಮಾಣ, ಕೃಷಿಹೊಂಡ, ತೋಟಗಾರಿಕೆ, ಅರಣ್ಯೀಕರಣ ಸಸಿ ನೆಡುವದು, ದನದದೊಡ್ಡಿ, ಕುರಿದೊಡ್ಡಿ, ಮೆಕೆಶೆಡ್ ಮತ್ತು ಸಾಮುದಾಯಿಕ ಕಾಮಗಾರಿಗಳಾದ ಕೆರೆ ಹೂಳೆತ್ತುವದು, ನಾಲಾ ಹೂಳೆತ್ತುವದು, ಚೆಕ್ ಡ್ಯಾಂ ಹೂಳೆತ್ತುವದು, ಕಾಲುವೆ ಹೂಳೆತ್ತುವದು ಇತ್ಯಾದಿ ಕಾಮಗಾರಿ ಗಳಲ್ಲಿ ಕೂಲಿ ಕೆಲಸ ನಿರ್ವಹಿಸಿ ಪ್ರತಿ ದಿನಕ್ಕೆ ರೂ. 289 ಕೂಲಿ ಮತ್ತು ಸಲಕರಣೆ ವೆಚ್ಚ ಪ್ರತಿ ದಿನಕ್ಕೆ ರೂ.10 ಒಟ್ಟು ರೂ.299 ಅಳತೆಗೆ ತಕ್ಕಂತೆ ಕೂಲಿ ಕೆಲಸ ನಿರ್ವಹಿಸಿ ಆರ್ಥಿಕ ಸಬಲರಾಗುವಂತೆ ಕರೆ ನೀಡಿದರು.

ಬಹದ್ದೂರಬಂಡಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜ್ಯೋತಿ ರಡ್ಡೇರ ಮಾತನಾಡಿ, ಈಗಾಗಲೇ ಮಹಿಳೆಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಕೂಲಿ ಕೆಲಸ ನೀಡಲಾಗಿದ್ದು, ಬೇಡಿಕೆ ಬಂದ ಎಲ್ಲಾ ಮಹಿಳೆಯರಿಗೆ ಕೆಲಸ ನೀಡಲಾಗುವದು.  ಮಹಿಳೆಯರು ನರೇಗಾದಲ್ಲಿ ಭಾಗವಹಿಸಿ ಆರ್ಥಿಕ ಸದೃಡರಾಗಬೇಕೆಂದು ಹೇಳಿದರು.

ಜಿಲ್ಲಾ ಎಸ್‌ಬಿಎಂ ಐಇಸಿ ಸಂಯೋಜಕ ಮಾರುತಿ ನಾಯಕರ ವೈಯಕ್ತಿಕ ಶೌಚಾಲಯಗಳ ಸದ್ಬಳಕೆ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪಾರ್ವತೆಮ್ಮ ಫಕೀರಸ್ವಾಮಿ ಕುರಿ, ಗ್ರಾ.ಪಂ. ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಚಂದ್ರಪ್ಪ ರಾಠೋಡ, ಮಹಿಳಾ ಕೂಲಿಕಾರರು, ಆಶಾ ಕಾರ್ಯಕರ್ತೆಯರು, ಶಾಲಾ ಮಕ್ಕಳು, ಮಹಿಳಾ ಕಾಯಕ ಬಂಧುಗಳು ಹಾಜರಿದ್ದರು.

Leave a Reply

Your email address will not be published. Required fields are marked *