Tuesday, 7th July 2020

ಪ್ರೇಮಬರಹ ಕೋಟಿ ತರಹ….

* ಶೀತಲ್
‘ಎಷ್ಟೋೋ ಹುಡುಗೀರ ನೋಡಿದೆ ನಾ ನಿನ್ನಲ್ಲೇನು ಹೊಸ ಸೆಳೆತ’ ನಿನ್ನ ನೋಡಿದ ಮೇಲೆ ಈ ಸಾಲು ಪದೇ ಪದೇ ಗುನುಗಬೇಕೆನಿಸುತ್ತದೆ. ಹೌದು ಕಾಲೇಜಿನಲ್ಲಿ ನೂರಾರು ಹುಡುಗಿಯರಿದ್ದರು ಅದೇಕೊ ಈ ಮನಸ್ಸು ನಿನ್ನನ್ನೇ ಬಯಸುತ್ತದೆ. ಹಾಗೆ ಯಾರ ಮೇಲು ನನಗೆ ಸುಖಾಸುಮ್ಮನೆ ಪ್ರೀತಿಯಾಗುವುದಿಲ್ಲ. ಹೃದಯದಲ್ಲಿ ಮಿಂಚೊಂದು ಹರಿದಾಡಬೇಕು. ಲಬ್ ಡಬ್ ಎಂದು ಬಡಿದುಕೊಳ್ಳಬೇಕು ಆಗಲೇ ನಿಜವಾದ ಪ್ರೇಮ ಭಾಷೆ ಬರೆದಂತಾಗೋದು. ಈ ಬಿಸಿಲನಾಡಿನ ಬಿರುಬಿರು ಬೇಸಿಗೆಯ ಬಸ್ ನಿಲ್ದಾಾಣದಲ್ಲಿ ಬಸ್ಸಿಿಗೆ ಕಾಯುತ್ತಾಾ ನೀನು ಕೂತಿರುವಾಗ ನಿನ್ನ ಒಂದೇ ಸಮನೆ ನೋಡುತ್ತಾಾ ನಿಂತೆ.

ಎದೆ ದಡಬಡ ಎಂದು ಹೊಡೆದುಕೊಳ್ಳಲು ಶುರುಮಾಡಿತು. ನನ್ನ ಬಾಳ ಸಂಗಾತಿಯಾಗುವ ನನ್ನ ಮನದನ್ನೆೆ ಹೇಗಿರಬೇಕೆಂದು ಕನಸು ಕಂಡಿದ್ದೇನೊ ಹಾಗೆಯೇ ತಿದ್ದಿ ತೀಡಿ ದೇವರು ನನಗಾಗಿಯೇ ನಿನ್ನನ್ನು ಸೃಷ್ಟಿಿಸಿದ್ದಾನೆನೋ ಅನ್ನುವಷ್ಟು ಸುಂದರವಾಗಿದ್ದೆ. ಆ ಪರವಶತೆಯಲ್ಲಿ ನನ್ನ ಊರಿನ ಬಸ್ಸು ಮುಂದೆಯೇ ಹಾದು ಹೋದರು ನನ್ನ ಗಮನಕ್ಕೆೆ ಬರಲಿಲ್ಲ. ಸಾಂಪ್ರಾಾದಾಯಿಕ ಉಡುಗೆ ತೊಟ್ಟು ಮೂಲೆಯಲ್ಲಿ ನೀನು ಆಸೀನವಾಗಿದ್ದರೆ ನನ್ನ ಕಣ್ಣೋೋಟ ನಿನ್ನ ಬಿಟ್ಟು ಕದಲಲಿಲ್ಲ. ಕೆಜಿಕೆಜಿ ಮೇಕಪ್ ಮೆತ್ತಿಿಕೊಂಡು ನಿನ್ನ ಪಕ್ಕ ಕುಳಿತ ಗೆಳತಿಯರ ಮೊಗದ ಬಣ್ಣ ಕರಗಿ ಆಗಲೇ ಸೋತು ಹೋಗಿತ್ತು. ಆದರೆ ನಿನ್ನ ಮುಖದಲ್ಲಿ ಮಾತ್ರ ಅದೇ ನಗುವಿನ ಆಭರಣ.

ಅಂದು ರಾತ್ರಿಿಯೆಲ್ಲಾ ಕಣ್ಣ ಪೂರ್ತಿ ನಿನ್ನದೇ ಚಿತ್ರ. ಪುಸ್ತಕ ಓದಲು ಕೂತರೆ ಮದುವೆ ಅಲ್ಬಮ್ ನಂತೆ ಪ್ರತಿ ಪುಟಕ್ಕೂ ನಿನ್ನ ಫೊಟೊಗಳೇ ಎದುರಾದ ಭಾವ. ಮತ್ತದೇ ಬೆಳಗ್ಗೆೆ ನಿಲ್ದಾಾಣದಲ್ಲಿ ನಿನಗಾಗಿಯೇ ಜಾತಕ ಪಕ್ಷಿಯಂತೆ ಕಾಯುತ್ತಾಾ ಕೂತೆ. ಆದರೆ ಅಲ್ಲಿ ನಿನ್ನ ಸುಳಿವಿಲ್ಲ. ನನ್ನೊೊಳಗೆ ಚಡಪಡಿಕೆ. ಆದರೆ ನಾನು ತಾಳ್ಮೆೆ ಕಳೆದುಕೊಳ್ಳಲಿಲ್ಲ. ನಿನ್ನದೇ ಧ್ಯಾಾನ ಮಾಡುತ್ತಾಾ ಕೂತೆ. ಕೊನೆಗೂ ಆ ದೇವರು ಕೈ ಹಿಡಿದ. ಮತ್ತೆೆ ನಮ್ಮ ದಿನನಿತ್ಯದ ಭೇಟಿಗೆ ಸೇತುವೆಯಾದ ಅದೇ ಬಸ್ ನಿಲ್ದಾಾಣದಲ್ಲಿ ನಿನ್ನ ಹೆಸರಿಡಿದು ಯಾರೋ ಕೂಗಿದಂತಾಯಿತು ಅಷ್ಟು ಸಾಕಾಗಿತ್ತು ನೋಡು ಈ ಮನಕ್ಕೆೆ. ನಿನ್ನ ಮುದ್ದಾದ ಹೆಸರನ್ನು ಫೇಸ್ಬುಕ್ ನಲ್ಲಿ ತಲಾಷ್ ಮಾಡಿದಾಗ ನಿನ್ನ ಅದೆಷ್ಟು ಚಂದ ಚಂದದ ಫೊಟೊಗಳು ನೋಡಿ ಮನ ಪುಳಕವಾಯಿತು. ನಿನ್ನ ಇಡೀ ಪರಿಚಯ ಆಗಿದ್ದು ಅಲ್ಲಿಯೇ.

ನಮ್ಮದೇ ಕ್ಯಾಾಂಪಸ್ ಆದರೂ ನಿನ್ನದು ಬೇರೆ ಕಾಲೇಜು. ಇಷ್ಟಾಾದ ಮೇಲೆ ಫ್ರೆೆಂಡ್ ರೀಕ್ವೆೆಸ್‌ಟ್‌
ಕಳಿಸಿ ನಿನ್ನ ಒಪ್ಪಿಿಗೆಗಾಗಿ ಕಾದು ಕುಳಿತೆ. ದಿನ,ವಾರ,ತಿಂಗಳೆಗಳೇ ಕಳೆದರು ನಿನ್ನಿಿಂದ ಪ್ರತಿಕ್ರಿಿಯೆ ಮಾತ್ರ ಶೂನ್ಯ. ಒಂದು ಸಲ ನನ್ನ ಮನದರಸಿಯಾಗಿ ಅಚ್ಚೊೊತ್ತಿಿದರೆ ಮುಗಿಯಿತು ಬದಲಾಗಿ ವಿಶ್ವಸುಂದರಿಯೇ ನಮ್ಮ ಎದುರಿಗೆ ನಿಂತರು ಅಪದ್ಯವಾಗಿಬಿಡುತ್ತಾಾಳೆ.

ಪ್ರತಿ ಕ್ಷಣವು ಈ ಹೃದಯ ನಿನಗಾಗಿ ಹಂಬಲಿಸುತ್ತದೆ. ಕಾದು ಕಾದು ಸುಸ್ತಾಾದೆ ಈಗಲಾದರು ನನ್ನ ಒಪ್ಪಿಿಕೋ ದಯವಿಟ್ಟು.

ಇಂತಿ ನಿನ್ನ ಭಾವಿ ಎಟಿಎಂ

Leave a Reply

Your email address will not be published. Required fields are marked *