Thursday, 23rd March 2023

ಅಕ್ಟೋಬರ್ 6ರಿಂದ ರಾಷ್ಟ್ರಪತಿ ಕೋವಿಂದ್ ಕರ್ನಾಟಕ ಪ್ರವಾಸ

ಮಂಗಳೂರು: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅಕ್ಟೋಬರ್ 6ರಿಂದ ಅ.9ರವರೆಗೆ ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಸಂದರ್ಭ  ಬೆಂಗಳೂರು, ಮೈಸೂರು, ಚಾಮರಾಜನಗರ, ಶೃಂಗೇರಿ ಹಾಗೂ ಮಂಗಳೂರಿಗೆ ಭೇಟಿ ನೀಡಲಿದ್ದಾರೆ.

ಅಕ್ಟೋಬರ್ 6ರಂದು ರಾಷ್ಟ್ರಪತಿ ಭವನದಿಂದ ಬೆಂಗಳೂರಿಗೆ ಆಗಮಿಸಿ ಸಂಜೆ ಬೆಂಗಳೂರು ರಾಜಭವನದಲ್ಲಿ ಹೈಕೋರ್ಟ್ ನ್ಯಾಯಾಧೀಶರ ಜತೆ ಚಹಾಕೂಟ ದಲ್ಲಿ ಭಾಗವಹಿಸಲಿದ್ದು, ಅ.7ರಂದು ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವರು.

ಸಂಜೆ 3:30ಕ್ಕೆ ಚಾಮರಾಜನಗರದಲ್ಲಿ 450 ಬೆಡ್‌ಗಳ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸ್ (ಸಿಐಎಂಎಸ್) ಸರಕಾರಿ ಬೋಧನಾ ಆಸ್ಪತ್ರೆಯ ಉದ್ಘಾಟನೆ ನೆರವೇರಿಸಲಿದ್ದಾರೆ. ಅಲ್ಲಿಂದ ಮಂಗಳೂರಿಗೆ ಆಗಮಿಸುವರು. ಅ.8ರಂದು ಶೃಂಗೇರಿ ಕ್ಷೇತ್ರಕ್ಕೆ ಭೇಟಿ ನೀಡಿ ಹಿಂದಿರುಗಿ ಮಂಗಳೂರಿನಲ್ಲಿ ವಾಸ್ತವ್ಯವಿದ್ದು, ಅ.9ರಂದು ರಾಷ್ಟ್ರಪತಿ ಭವನಕ್ಕೆ ಮರಳಲಿದ್ದಾರೆ. ಎಂದು ಪ್ರಕಟನೆ ತಿಳಿಸಿದೆ.

 

 

error: Content is protected !!