Monday, 21st September 2020

ಜೈಲಿಗೆ ಹೋಗಿ ಬಂದವರನ್ನು ಮೆರೆಸುವ ಸಂಸ್ಕೃತಿ ಸಲ್ಲದು

ಹಾರ್ವರ್ಡ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಗಾಂಧೀಜಿ ಸ್ಮರಣೆ ಕಾರ್ಯಕ್ರಮದಲ್ಲಿ ಗಾಂಧೀಜಿ ಅವರ ವೇಷದಲ್ಲಿ ಮಕ್ಕಳು ಕಂಗೊಳಿಸಿದರು. ಲೋಕಾಯುಕ್ತ ನಿವೃತ್ತ ನ್ಯಾಾಯಮೂರ್ತಿ ಸಂತೋಷ್ ಹೆಗ್ಡೆೆ, ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಗೋಪಿನಾಥ್, ನಿವೃತ್ತ ಪ್ರಾಧ್ಯಾಪಕ ರಾಜಶೇಖರಯ್ಯ, ಸಾಮಾಜಿಕ ಕಾರ್ಯಕರ್ತ ನಾಗರಾಜ್ ಇತರರು ಇದ್ದರು.

ಕನ್ನಡ ರಾಜ್ಯೋತ್ಸವ, ಗಾಂಧೀಜಿ ಸ್ಮರಣೆ ಕಾರ್ಯಕ್ರಮದಲ್ಲಿ ಸಂತೋಷ್ ಹೆಗ್ಡೆೆ ಅಭಿಮತ

ಮಕ್ಕಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಬದುಕು, ಬರಹ, ಚಿಂತನೆಗಳ ಬಗ್ಗೆೆ ಅರಿವು ಮೂಡಿಸುವ ಉದ್ದೇಶದಿಂದ ಹಾರ್ವರ್ಡ್ ಗ್ರೂಪ್ ಆಫ್ ಇನ್‌ಸ್ಟಿಿಟ್ಯೂಟ್‌ನಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಗಾಂಧೀಜಿ ಸ್ಮರಣೆ ಕಾರ್ಯಕ್ರಮದಲ್ಲಿ ಗಾಂಧೀಜಿ ಅವರ 150ನೇ ಜನ್ಮ ದಿನವನ್ನು ಅತ್ಯಂತ ಆಚರಿಸಲಾಯಿತು.
ಗಾಂಧೀಜಿ ಅವರ ಭಿನ್ನ-ವಿಭಿನ್ನ 150 ವೇಷ ಮತ್ತು ಪೋಷಾಕಿನಲ್ಲಿ ಮಕ್ಕಳು ಕಂಗೊಳಿಸಿದರು. ಪ್ರತಿಯೊಂದು ಮಗುವೂ ಒಂದೊಂದು ಗಾಂಧಿ ತತ್ತ್ವ ಪ್ರಸ್ತುತಪಡಿಸಿ ಗಮನ ಸೆಳೆಯಿತು.

ಮುಖ್ಯ ಅತಿಥಿಯಾಗಿ ಪಾಲ್ಗೊೊಂಡಿದ್ದ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಮಾತನಾಡಿ, ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ನಡೆದ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ನಿಜವಾದ ಸ್ವಾತಂತ್ರ್ಯ ಪ್ರಜೆಗಳಿಗೆ ಇನ್ನೂ ಲಭಿಸಿಲ್ಲ ಎಂದರು.

ಸಮಾಜದಲ್ಲಿ ಸಾಮಾಜಿಕ ಮೌಲ್ಯಗಳು ಕುಸಿತವಾಗಿದ್ದು, ಪ್ರಜಾಪ್ರಭುತ್ವವನ್ನು ಬದಲಾವಣೆ ಅಗತ್ಯ ಎದುರಾಗಿದೆ. ಜೈಲಿಗೆ ಹೋಗಿ ಬಂದವರನ್ನು ಹಾರ ಹಾಕಿ ಸ್ವಾಾಗತಿಸುವ ಸಂಪ್ರದಾಯದ ಯುಗದಲ್ಲಿ ನಾವಿದ್ದೇವೆ. ಏಕೆ ಹೀಗೆ ಎಂದು ಕೇಳಿದರೆ, ‘ಮಹಾತ್ಮಾಾ ಗಾಂಧೀಜಿ ಸಹ ಜೈಲಿ ಹೋಗಿ ಬಂದಿದ್ದರು’ ಎನ್ನುತ್ತಾರೆ. ಇಂತಹ ಉಡಾಫೆ ಮಾತುಗಳನ್ನು ಸಹಿಸಲು ಸಾಧ್ಯವಿಲ್ಲ. ಇದರಿಂದ ನಾವು ಸಮಾಜಕ್ಕೆೆ ಯಾವ ಸಂದೇಶ ನೀಡುತ್ತೇವೆ ಎಂದು ಪ್ರಶ್ನಿಸಿದರು.

1951ರಲ್ಲಿ ಜೀಪು ಹಣಗರಣ ಬಯಲಿಗೆ ಬಂದಾಗ ಭ್ರಷ್ಟಾಚಾರದ ಮೊತ್ತ 51 ಸಾವಿರ ರು. ಬಳಿಕ ದಿನದಿಂದ ದಿನಕ್ಕೆೆ ಲಂಚದ ಹೆಚ್ಚಾಾಗುತ್ತಲೇ ಬಂದಿದೆ. ಇತ್ತೀಚಿನ ಕಾಮನ್‌ವೆಲ್‌ತ್‌ ಹಗರಣ 71 ಸಾವಿರ ಕೋಟಿ ರು., 2 ಜಿ ಹಗರಣ 1.76 ಲಕ್ಷ ಕೋಟಿ ರು. ಬಳಿಕ ಕೋಲ್ಗೇಟ್ ಹಗರಣ ನಡೆದಿತ್ತು. ಇಷ್ಟೊೊಂದು ದೊಡ್ಡಪ್ರಮಾಣದಲ್ಲಿ ಹಗರಣ ನಡೆಯುತ್ತಿರುವುದು ತುಂಬಾ ನೋವು ತರಿಸಿದೆ. ಇಂದಿನ ಪರಿಸ್ಥಿತಿಯಲ್ಲಿ ಸಮಾಜದ ಬಗ್ಗೆೆ ಕಳಕಳಿ ಇರುವವರು ರಾಜಕೀಯಕ್ಕೆ ಬರಬೇಕು. ದುರಾಸೆ ತೊರೆದು, ಮಾನವೀಯ ಮೌಲ್ಯವನ್ನು ನೆಲೆಗೊಳಿಸುವವರು ನಮಗೆ ಅಗತ್ಯವಿದ್ದಾರೆ ಎಂದರು.

ಹಾರ್ವರ್ಡ್ ಇನ್‌ಸ್ಟಿಿಟ್ಯೂಟ್ ಅಧ್ಯಕ್ಷ ಡಾ. ಗಂಗಣ್ಣ ಮಾತನಾಡಿ, ಅವರು ಜಗತ್ತಿಗೆ ಸಲ್ಲುವ ಮಹಾನ್ ನಾಯಕ. ಆದರೆ ಇಂತಹ ದೈತ್ಯ ಶಕ್ತಿಿಯನ್ನು ನಾವು ಮರೆಯುತ್ತಿದ್ದೇವೆ. ಮಕ್ಕಳಲ್ಲಿ ಗಾಂಧೀಜಿ ಬಗ್ಗೆೆ ಅರಿವು ಮತ್ತು ಪ್ರಜ್ಞೆ ಮೂಡಿಸುವ ಉದ್ದೇಶದಿಂದ ಮಕ್ಕಳ ಮೂಲಕ ಸಮಾಜಕ್ಕೆೆ ಗಾಂಧೀಜಿ ಸಂದೇಶ ರವಾನಿಸುತ್ತಿದ್ದೇವೆ ಎಂದರು.

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆೆ ಹಾಳಾಗಿದೆ. ಸಂಸತ್ ಕಲಾಪದಲ್ಲಿ ಗಲಾಟೆ, ಸಭಾತ್ಯಾಗಕ್ಕೆ ಮೊದಲ ಆದ್ಯತೆ ದೊರೆಯುತ್ತಿದೆ. ಸದನ ಸೇರುತ್ತಿದ್ದಂತೆ ಗದ್ದಲ ಉಂಟಾಗುತ್ತದೆ. ಒಬ್ಬರು ಮತ್ತೊಬ್ಬರು ಮೇಲೆ ಆರೋಪ-ಪ್ರತ್ಯಾರೋಪ ಮಾಡುತ್ತಾಾರೆ. ಪ್ರತಿದಿನ ನಡೆಸಲು ಹತ್ತು ಕೋಟಿ ರುಪಾಯಿ ವೆಚ್ಚವಾಗುತ್ತದೆ. ಸಾರ್ವಜನಿಕರ ಹಣದ ಕಿಮ್ಮತ್ತು ರಾಜಕಾರಣಿಗಳಿಗೆ ಅರ್ಥವಾಗುತ್ತಿಲ್ಲ.
ಎನ್.ಸಂತೋಷ್ ಹೆಗ್ಡೆ, ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ

Leave a Reply

Your email address will not be published. Required fields are marked *