Friday, 9th December 2022

ಹಿಂದಿ ದಿವಸ್ ಆಚರಣೆ ವಿರೋಧಿಸಿ ಪ್ರತಿಭಟನೆ: ವಿನೋದರೆಡ್ಡಿ

ರಾಯಚೂರು: ಕೇಂದ್ರ ಸರಕಾರ ಒತ್ತಾಯಪರ‍್ವಕ ಹಿಂದಿ ದಿವಸ್ ಆಚರಣೆ ವಿರೋಧಿಸಿ ರ‍್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸೆ. ೧೪ ರಂದು ಬೆಳಿಗ್ಗೆ ೧೧ ಗಂಟೆಗೆ ರಾಯಚೂರು ನಗರದ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ರಕ್ಷಣಾ ವೇದಿಕೆಯ ನಗರ, ತಾಲ್ಲೂಕು, ಹೋಬಳಿಯ ಪದಾಧಿಕಾರಿಗಳು,ಕರ‍್ಯರ‍್ತರು, ಕನ್ನಡಾ ಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ಎಂ.ವಿನೋದರೆಡ್ಡಿ ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.

ರ‍್ನಾಟಕ ರಕ್ಷಣಾ ವೇದಿಕೆಯು ಕಳೆದ ೨೫ ರ‍್ಷದಿಂದ ಕನ್ನಡ ? ಕನ್ನಡಿಗ ರ‍್ನಾಟಕದ ಪರವಾಗಿ ಹೋರಾಟ ನಡೆಸುತ್ತಾ ಬಂದಿದ್ದು, ಕೇಂದ್ರ ರ‍್ಕಾರದ ಒತ್ತಾಯಪರ‍್ವಕ ಹಿಂದಿ ಹೇರಿಕೆ ವಿರುದ್ಧ ಹೋರಾಟ ನಡೆಸಿಕೊಂಡು ಬಂದಿದ್ದೇವೆ.

ನಮ್ಮ ಭಾರತ ದೇಶವು ಭಾಷಾ ವೈವಿಧ್ಯತೆಯಿಂದ ಕೂಡಿದ ರಾಜ್ಯಗಳ ಒಕ್ಕೂಟ ದೇಶವಾಗಿದ್ದು,ನಮ್ಮ ಎಲ್ಲಾ ಭಾಷೆಗಳಿಗೆ ಸಮಾನ ಗೌರವ ಸಿಕ್ಕಾಗ ಮಾತ್ರ ಭಾರತದ ವೈವಿಧ್ಯತೆ ಉಳಿಯಲು ಮತ್ತು ಒಕ್ಕೂಟದ ಒಗ್ಗಟ್ಟು ಗಟ್ಟಿ ಗೊಳ್ಳಲು ಸಾಧ್ಯ.

ಆದರೆ ಕೇಂದ್ರ ರ‍್ಕಾರವು ಮೊದಲಿನಿಂದಲೂ ಹಿಂದಿ ಭಾಷೆಗೆ ವಿಶೇಷವಾದ ಸ್ಥಾನಮಾನ ನೀಡುವ ಮೂಲಕ ಭಾರತದ ಭಾಷಾ ವೈವಿಧ್ಯತೆಗೆ ಧಕ್ಕೆ ಮಾಡುವ ಕೆಲಸವನ್ನು ಮಾಡುತ್ತಲೇ ಬಂದಿದೆ .ಈ ಮೂಲಕ ಕನ್ನಡಿಗರ ಮೇಲೆ ಹಿಂದಿ ಭಾಷೆಯ ದಬ್ಬಾಳಿಕೆ ಎಲ್ಲ ಹಂತಗಳಲ್ಲೂ ನಡೆಯುತ್ತಿದೆ. ಸಂವಿಧಾನದ ೮ ನೇ ಪರಿಚ್ಛೇದದಲ್ಲಿರುವ ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಿಗೂ ಸಮಾನ ಗೌರವ ನೀಡುವಂತೆ ಆಗ್ರಹಿಸಲಾಗುತ್ತದೆ ಎಂದರು.