Friday, 9th December 2022

ಹಿಂದಿ ದಿವಸ್ ಅಚರಣೆ ಖಂಡಿಸಿ ಜೆಡಿಎಸ್ ಪ್ರತಿಭಟನೆ

ರಾಯಚೂರು: ರಾಜ್ಯ ಸರ್ಕಾರ ಹಿಂದಿ ದಿವಸ್ ಬಲವಂತಾಗಿ ಹೇರುವುದನ್ನು ವಿರೋಧಿಸಿ ಜೆಡಿಎಸ್ ಜಿಲ್ಲಾ ಘಟಕ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆದಿದ್ದರು.

ಹಿಂದಿನಿ0ದಲೂ ಭಾರತ ಒಕ್ಕೂಟ ಸರ್ಕಾರ ಕುತಂತ್ರದಿ0ದ ಸೆಪ್ಟಂಬರ್ ೧೪ರಂದು ಹಿಂದಿ ದಿವಸ್ ಆಚರಣೆ ಸೃಷ್ಟಿಸಿ ದೇಶದ ಪ್ರಾದೇಶಿಕ ಭಾಷೆಗಳಿಗೆ ಮೋಸ ಮಾಡಲಾಗುತ್ತಿದೆ. ಕೇವಲ ೪೦೦ ವರ್ಷವಿರುವ ಹಿಂದಿ ಭಾಷೆಗೆ ಹಬ್ಬ ಮಾಡುವ ಸರ್ಕಾರಕ್ಕೆ ೨೫೦೦ ವರ್ಷಗಳ ಇತಿಹಾಸ ವಿರುವ ಕನ್ನಡ ಭಾಷೆ ಕೊಂಕಣಿ, ತುಳು, ಕೊಡವ ಸೇರಿ ಹತ್ತಾರು ಭಾಷೆಗಳ ತವರೂರು. ವೈ ವಿದ್ಯಮಯ ಸಂಸ್ಕೃತಿ ಹೊಂದಿರುವ ರಾಜ್ಯವೇ ಒಂದು ಅದ್ಭುತ ಪ್ರಪಂಚ. ಕನ್ನಡಿಗರಿಗೆ ಸಂಬ0ಧವೇ ಇಲ್ಲದ ಹಿಂದಿ ಭಾಷೆ ಆಚರಣೆ ಮಾಡುವುದು ಸ್ವಾಭಿಮಾನಕ್ಕೆ ಧಕ್ಕೆ ತರುವ ಹಾಗೂ ಘೋರ ಆನ್ಯಾಯವಾಗಿದೆ.

ಹಿಂದಿ ಭಾಷಿಕರ ರಾಜ್ಯಗಳಿಗೆ ಸೀಮಿತವಾಗಿರಲಿ, ಕರ್ನಾಟಕ್ಕೆ ಅವಶ್ಯಕತೆಯಿಲ್ಲ. ಬಲವಂತ ವಾಗಿ ಹೇರಿದರೆ ಕನ್ನಡಿಗರು ಆಚರಣೆ ಯಲ್ಲಿ ಭಾಗವಹಿಸುವುದಿಲ್ಲ. ರಾಜ್ಯ ಸರ್ಕಾರಕ್ಕೆ ಕನ್ನಡ ಭಾಷೆಯ ಮೇಲೆ ಪ್ರೀತಿ, ಗೌರವ ವಿದ್ದರೆ ಕೂಡಲೇ ಹಿಂದಿ ದಿವಸ್ ಆಚರಣೆ ಹಿಂಪಡೆಯಲಿ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ವಿರುಪಾಕ್ಷಿ, ರಾಜ್ಯುಪಾಧ್ಯಕ್ಷ ಮಹಂತೇಶ ಪಾಟೀಲ್ ಅತ್ತನೂರು, ವಿಶ್ವನಾಥ ಪಟ್ಟಿ, ಅಮ್ಮದ್ ಹುಸೇನ್, ಶಿವಶಂಕರ ವಕೀಲ, ಯುಸೂಫ್ ಖಾನ್, ನರಸಪ್ಪ ಆಶಾಪೂರ, ಆಲಂಬಾಬು, ನರಸಿಂಹಲು, ಅಮರೇಶ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.