Wednesday, 30th September 2020

ರಾಜ್ಯದ ವಿವಿಧೆಡೆ ಪ್ರತಿಭಟನೆ, ಬಿಜೆಪಿ ವಿರುದ್ಧ ಆಕ್ರೋಶ…

ಕಾಂಗ್ರೆಸ್ ಹಿರಿಯ ನಾಯಕ ಡಿ.ಕೆ. ಶಿವಕುಮಾರ್ ಬಂಧನ ಸುದ್ದಿ ಬಿತ್ತರವಾಗುತ್ತಿದ್ದಂತೆ, ಹಳೇ ಮೈಸೂರು ಭಾಗದಲ್ಲಿ ಭಾರಿ ಪ್ರತಿಭಟನೆ ವ್ಯಕ್ತವಾಗಿದೆ. ಇದೇ ವೇಳೆ ವಿಶೇಷ ನ್ಯಾಯಾಲಯ ಡಿಕೆಶಿಯವರನ್ನು 10ದಿನ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿದೆ.
ಮಂಗಳವಾರ ರಾತ್ರಿಿ ಡಿ.ಕೆ. ಶಿವಕುಮಾರ್ ಬಂಧನವಾಗುತ್ತಿಿದ್ದಂತೆ, ರಾಮನಗರ, ಕನಕಪುರ ಭಾಗದಲ್ಲಿ ರಾತ್ರಿಿಯಿಂದಲೇ ಪ್ರತಿಭಟನೆ ಕಾವು ಪಡೆಯಿತು. ಬುಧವಾರ ಬೆಳಗ್ಗೆೆ ಈ ಪ್ರತಿಭಟನೆಯ ಬಿಸಿ ಮಂಡ್ಯ, ಬೆಂಗಳೂರು ನಗರ, ಗ್ರಾಾಮಾಂತರ ಸೇರಿದಂತೆ ರಾಜ್ಯದ ನಾನಾಕಡೆ ವ್ಯಾಾಪಿಸಿತು. ಕಾಂಗ್ರೆೆಸ್ ಕಾರ್ಯಕರ್ತರು ಟೈರ್‌ಗೆ ಬೆಂಕಿ ಹಚ್ಚಿಿ, 18ಕ್ಕೂ ಹೆಚ್ಚು ಕೆಎಸ್‌ಆರ್‌ಸಿಟಿ ಬಸ್‌ಗಳಿಗೆ ಬೆಂಕಿ ಹಚ್ಚಿಿ ಬಿಜೆಪಿ ಸರಕಾರದ ವಿರುದ್ಧ ಆಕ್ರೋೋಶ ವ್ಯಕ್ತಪಡಿಸಿದರು. 18 ಬಸ್‌ಗಳ ಪೈಕಿ ಎರಡು ಬಸ್‌ಗಳು ಸಂಪೂರ್ಣ ಭಸ್ಮವಾಗಿವೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ರಾಜ್ಯಾಾದ್ಯಂತ ಪ್ರತಿಭಟನೆ ನಡೆಸಬೇಕು ಎಂದು ಜಿಲ್ಲಾಾಧ್ಯಕ್ಷರಿಗೆ ಸೂಚನೆ ನೀಡಿದ್ದರು. ಆದರೆ ಹಳೇ ಮೈಸೂರು ಹೊರತು ಪಡಿಸಿ, ಇನ್ನುಳಿದ ಭಾಗದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗಿದೆ.

ರಾಜ್ಯಾದ್ಯಂತ ಪ್ರತಿಭಟನೆ
ಡಿಕೆಶಿ ಬಂಧನ ಖಂಡಿಸಿ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು, ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಭಟನೆಯಲ್ಲಿ ಭಾಗವಹಿಸಿ ಸರಕಾರದ ಧೋರಣೆ ವಿರುದ್ಧ ವಾಗ್ದಾಾಳಿ ನಡೆಸಿದರು. ಮಂಗಳೂರಿನಲ್ಲಿ ಕಾಂಗ್ರೆೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸುರಿಯುತ್ತಿಿರುವ ಮಳೆಯಲ್ಲೇ ಪ್ರತಿಭಟನೆ ನಡೆಸಿ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದರು.
ಹಾಸನದಲ್ಲಿ ಕಾಂಗ್ರೆೆಸ್ ಮತ್ತು ಜೆಡಿಎಸ್ ಒಟ್ಟಾಾಗಿ ಪ್ರತಿಭಟನೆ ನಡೆಸಿದ್ದು, ತುಮಕೂರಿನಲ್ಲಿರಸ್ತೆೆ ತಡೆದು ಪ್ರತಿಭಟನೆ ನಡೆಸಲಾಯಿತು. ನೂರಾರು ಕಾರ್ಯಕರ್ತರು ರಸ್ತೆೆಯಲ್ಲಿ ಟೈರ್ ಸುಟ್ಟು ತಮ್ಮ ಆಕ್ರೋೋಶ ವ್ಯಕ್ತಪಡಿಸಿದ್ದಾಾರೆ. ಶಿವಮೊಗ್ಗ, ಕೋಲಾರ, ಮಂಡ್ಯ, ಬಳ್ಳಾಾರಿ, ಹುಬ್ಬಳ್ಳಿಿ, ದೊಡ್ಡಬಳ್ಳಾಾಪುರ ಸೇರಿದಂತೆ ರಾಜ್ಯಾಾದ್ಯಂತ ಪ್ರತಿಭಟನೆ ನಡೆಸಲಾಗಿದೆ.

ರಾಜಕೀಯ ಮೈಲೇಜ್‌ಗೆ ಕೈ ಸಿದ್ಧತೆ
ಇನ್ನು ಕೆಲ ದಿನಗಳ ಹಿಂದೆ ಕಾಂಗ್ರೆೆಸ್ ಹಿರಿಯ ನಾಯಕ ಪಿ.ಚಿದಂಬರಂ ಹಾಗೂ ಇದೀಗ ಡಿಕೆ ಶಿವಕುಮಾರ್ ಅವರನ್ನು ಬಂಧಿಸಿರುವುದನ್ನು ಬಳಸಿಕೊಂಡು ರಾಷ್ಟ್ರಮಟ್ಟದಲ್ಲಿ ಕಾಂಗ್ರೆೆಸ್ ಮೈಲೇಜ್ ಪಡೆಯಲು ಸಿದ್ಧತೆ ನಡೆಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಸ್ವಾಾಯತ್ತ ಸಂಸ್ಥೆೆಗಳನ್ನು ಬಳಸಿಕೊಂಡು ಬಿಜೆಪಿ ವಿರೋಧ ಪಕ್ಷಗಳ ನಾಯಕರನ್ನು ಬಂಧಿಸುವ ಹುನ್ನಾಾರ ನಡೆಸಿವೆ ಎಂದು ಪ್ರತಿಭಟನೆ ನಡೆಸುವಂತೆ, ಪ್ರದೇಶ ಕಾಂಗ್ರೆೆಸ್ ಅಧ್ಯಕ್ಷರಿಗೆ ಪಕ್ಷದ ವರಿಷ್ಠರು ಸೂಚನೆ ನೀಡಿದ್ದಾಾರೆ.
ಇದೇ ವಿಚಾರವನ್ನಿಿಟ್ಟುಕೊಂಡು ಮುಂದಿನ ದಿನದಲ್ಲಿ ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರುದ್ಧ ಪ್ರತಿಭಟನೆ ಹಾಗೂ ಹೋರಾಟ ನಡೆಸಲು ಪಕ್ಷದ ವರಿಷ್ಠೆೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ತೀರ್ಮಾನಿಸಿದ್ದಾಾರೆ.
ಈ ಮಧ್ಯೆೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಸದಾಶಿವ ನಗರದಲ್ಲಿರುವ ಡಿಕೆಶಿವಕುಮಾರ್ ಅವರ ನಿವಾಸಕ್ಕೆೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಧೈರ್ಯ ನೀಡಿದರು.

ಪ್ರತಿಕ್ರಿಯಿಸದಂತೆ ಸೂಚನೆ
ಇಡಿ ವಿಚಾರಣೆಗೆ ಹೋಗಿದ್ದ ಡಿಕೆಶಿ ವಿರುದ್ಧ ಕೆಲ ಬಿಜೆಪಿ ನಾಯಕರು ಟೀಕಿಸಿದ್ದರು. ಇದರಿಂದ ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆೆ ಮುಜುಗರವಾಗುವುದನ್ನು ಗಮನಿಸಿರುವ ಬಿಜೆಪಿ ವರಿಷ್ಠರು, ಮುಂದಿನ ದಿನದಲ್ಲಿ ಯಾವುದೇ ಹೇಳಿಕೆಗಳನ್ನು ನೀಡಬೇಡಿ ಎಂದು ಖಡಕ್ ಸೂಚನೆ ನೀಡಿದ್ದಾಾರೆ ಎನ್ನಲಾಗಿದೆ.

ಈ ಸಂಬಂಧ ಈಗಾಗಲೇ ಮುಖ್ಯಮಂತ್ರಿಿ ಯಡಿಯೂರಪ್ಪ ಸೇರಿದಂತೆ ರಾಜ್ಯ ನಾಯಕರೊಂದಿಗೆ ದೆಹಲಿ ನಾಯಕರು ಚರ್ಚಿಸಿದ್ದು, ಕಾನೂನು ಸುವ್ಯವಸ್ಥೆೆ ಬಗ್ಗೆೆ ಮಾಧ್ಯಮಗಳಿಗೆ ಪ್ರತಿಕ್ರಿಿಯಿಸಿ. ಡಿಕೆಶಿ ಪರ-ವಿರೋಧ ಚರ್ಚೆಯಲ್ಲಿ ಪ್ರತಿಕ್ರಿಿಯಿಸಬೇಡಿ ಎಂದು ಸ್ಪಷ್ಟಪಡಿಸಿದ್ದಾಾರೆ ಎನ್ನಲಾಗಿದೆ.

ಬಿಗಿ ಭದ್ರತೆ
ಶಾಂತಿನಗರದ ಇ.ಡಿ ಕಚೇರಿ ಮತ್ತು ಮಲ್ಲೇಶ್ವರದ ಬಿಜೆಪಿ ಕಚೇರಿಗಳಿಗೆ ಹೆಚ್ಚಿಿನ ಭದ್ರತೆ ಒದಗಿಸಲಾಗಿದೆ. ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ನೇತೃತ್ವದಲ್ಲಿ ಮಲ್ಲೇಶ್ವರದಲ್ಲಿರುವ ಬಿಜೆಪಿ ಮುಖ್ಯ ಕಚೇರಿಗೆ ಇಬ್ಬರು ಎಸಿಪಿ, 5 ಇನ್‌ಸ್‌‌ಪೆಕ್ಟರ್‌ಗಳು, 15 ಎಸ್‌ಐ, 200 ಪೊಲೀಸ್ ಸಿಬ್ಬಂದಿ, ಎರಡು ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಲಾಗಿದೆ. ಒಂದು ಅಗ್ನಿಿಶಾಮಕ ದಳ ವಾಹನ ಸ್ಥಳದಲ್ಲೇ ಮೊಕ್ಕಾಾಂ ಹೂಡಿದೆ. ಬ್ಯಾಾರೀಕೇಡ್ ಅಳವಡಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರಿಂದ ಬಿಗಿ ಬಂದೋಬಸ್‌ತ್‌ ಒದಗಿಸಲಾಗಿದೆ. ಅಲ್ಲದೇ ಮುಖ್ಯಮಂತ್ರಿಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆೆ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ನಿವಾಸಕ್ಕೂ ಹೆಚ್ಚಿಿನ ಭದ್ರತೆ ಒದಗಿಸಲಾಗಿದೆ.

ಐಟಿ ಮತ್ತು ಇಡಿ ಬಳಿ ಸಾಕ್ಷ್ಯಗಳಿದ್ದರೆ ಎಫ್‌ಐಆರ್ ದಾಖಲಿಸಿ, ಚಾರ್ಜ್ ಶೀಟ್ ಹಾಕಿ ನ್ಯಾಾಯಾಲಯದ ಮುಂದೆ ಹಾಜರುಪಡಿಸಲಿ. ಅದನ್ನು ಬಿಟ್ಟು ವಿಚಾರಣೆಗೆ ಹಾಜರಾಗಿದ್ದರೂ, ಈ ರೀತಿ ಬಂಧಿಸುವುದು ಸರಿಯಲ್ಲ.
– ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

ಜಾರಿ ನಿರ್ದೇಶನಾಲಯ ವಿಚಾರಣೆಗೆ ಕರೆದಾಗಲೆಲ್ಲ ಡಿಕೆಶಿ ಹಾಜರಾಗಿದ್ದಾರೆ. ಆದರೂ ಬಂಧಿಸಿರುವುದು ಸರಿಯಲ್ಲ. ಕೇಂದ್ರ ಸರಕಾರದ ಸ್ವಾಾಯತ್ತ ಸಂಸ್ಥೆೆಗಳನ್ನು ಬಳಸಿಕೊಂಡು ವಿರೋಧ ಪಕ್ಷದ ನಾಯಕರಿಗೆ ಕಿರುಕುಳ ನೀಡುತ್ತಿಿದೆ.
ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಡಿಕೆಶಿ ಬಂಧನ ಕೇಂದ್ರ ಸರಕಾರದ ದ್ವೇಷದ ರಾಜಕಾರಣಕ್ಕೆೆ ಮತ್ತೊೊಂದು ಉತ್ತಮ ಉದಾಹರಣೆ. ಸ್ವಾಾಯತ್ತ ಸಂಸ್ಥೆೆಗಳನ್ನು ಬಳಸಿಕೊಂಡು ಪ್ರತಿಪಕ್ಷದ ನಾಯಕರನ್ನು ಮಟ್ಟಹಾಕಲು ಪ್ರಯತ್ನಿಿಸುತ್ತಿಿದೆ.
ರಾಹುಲ್ ಗಾಂಧಿ, ಎಐಸಿಸಿ ಮಾಜಿ ಅಧ್ಯಕ್ಷ

ನ್ಯಾಾಯಾಲಯದ ಆದೇಶ ಗೌರವಿಸುತ್ತೇವೆ. ಶಿವಕುಮಾರ್ ಭೇಟಿ ಮಾಡಲು ಯಾರೂ ಬರುವುದು ಬೇಡ. ನಾವು ಅಪರಾಧ ಮಾಡಿಲ್ಲ. ಕಾನೂನು ಹೋರಾಟದಲ್ಲಿ ನಾವು ಗೆಲ್ಲುತ್ತೇವೆ.
ಡಿ.ಕೆ ಸುರೇಶ್, ಸಂಸದ

Leave a Reply

Your email address will not be published. Required fields are marked *