Saturday, 18th January 2020

ವೇತನ ಪರಿಷ್ಕರಣೆಗೆ ಒತ್ತಾಯಿಸಿ ಪ್ರತಿಭಟನೆ

ಫೆಡರಲ್ ಮೊಘಲ್ ಗೊಯೆಟ್‌ಸ್‌ ನೌಕರರ ಸಂಘದ ಕಾರ್ಮಿಕರ ಪ್ರತಿಭಟನೆಯಲ್ಲಿ ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿದರು. ಬಿಬಿಎಂಪಿ ಸದಸ್ಯರಾದ ನೇತ್ರಪಲ್ಲವಿ, ಎಂ.ಸತೀಶ್, ಬಿಜೆಪಿ ಮುಖಂಡರಾದ ಎ.ಸಿ.ಮುನಿಕೃಷ್ಣಪ್ಪ, ಟಿ ಎಲ್ ಪ್ರೇಮ್‌ಕುಮಾರ್ ಹಾಗೂ ಇನ್ನಿಿತರರಿದ್ದರು.

ಪ್ರತಿ ನಾಲ್ಕು ವರ್ಷಕ್ಕೊೊಮ್ಮೆೆ ಸಂಸ್ಥೆೆಯ ಬೈಲಾದಲ್ಲಿನ ಒಪ್ಪಂದದ ಪ್ರಕಾರ ವೇತನ ಪರಿಷ್ಕರಣೆ ಮಾಡಿ, ವೇತನ ಹೆಚ್ಚಿಿಸಬೇಕೆಂಬ ನಿಯಮವಿದ್ದರೂ, ಕಂಪನಿ ಅದನ್ನು ಮಾನ್ಯ ಮಾಡದೆ ನೌಕರರಿಗೆ ಅನ್ಯಾಾಯವೆಸಗಿದೆ, ಕೂಡಲೇ ಜಾರಿಗೆ ಬರುವಂತೆ ವೇತನ ಹೆಚ್ಚಿಿಸಬೇಕೆಂದು ಒತ್ತಾಾಯಿಸಿ ಫೆಡರಲ್ ಮೊಘಲ್ ಗೊಯೆಟ್‌ಸ್‌ ನೌಕರರ ಸಂಘದ ಸದಸ್ಯರು ಕಂಪನಿಯ ಗೇಟ್ ಬಳಿ ಧರಣಿ ನಡೆಸಿದರು.

ವೇತನ ಹೆಚ್ಚಳಕ್ಕಾಾಗಿ ಕಳೆದ ನಾಲ್ಕು ದಿನಗಳಿಂದಲೂ ಧರಣಿ ನಡೆಸುತ್ತಿಿದ್ದರೂ ಸಹ ಕಂಪನಿಯ ಉನ್ನತ ಹುದ್ದೆೆಯಲ್ಲಿರುವವರು ಕಂಪನಿಯ ಪರವಾಗಿ ತಾಳ ಹಾಕುತ್ತಾಾ, ನಮಗೆ ಅನ್ಯಾಾಯ ವೆಸಗುತ್ತಿಿದ್ದಾಾರೆ ಎಂದು ದೂರಿದರು.
ನೌಕರರ ಶ್ರೇಯೋಭಿವೃದ್ಧಿಿ ಬೆಂಬಲಿಸಿ ಶಾಸಕ ಎಸ್.ಆರ್.ವಿಶ್ವನಾಥ್ ಧರಣಿ ನಿರತ ಸ್ಥಳಕ್ಕೆೆ ಭೇಟಿ ನೀಡಿ ಮಾತನಾಡಿ, ಯಾವುದೇ ಸಂಸ್ಥೆೆ ವಿವಾದಗಳಿಲ್ಲದೆ ನಡೆಯಬೇಕಾದರೆ ಮಾಲೀಕ, ಕಾರ್ಮಿಕ ಮತ್ತು ಗ್ರಾಾಹಕರ ಸಂಬಂಧ ಸರಿಯಾಗಿರಬೇಕು. ನಾನೂ ಸಹ ಎಚ್‌ಎಎಲ್ ಸಂಸ್ಥೆೆಯಲ್ಲಿ ಕಾರ್ಮಿಕ ಮುಖಂಡನಾಗಿ ಕಾರ್ಯ ನಿರ್ವಹಿಸಿ ಇಂತಹವನ್ನೆೆಲ್ಲ ಅನುಭವಿಸಿದ್ದೇನೆ. ಕಾರ್ಮಿಕರ ಕಷ್ಟವೇನು, ಮಾಲೀಕರು ಕಾರ್ಮಿಕರ ಒಗ್ಗಟ್ಟನ್ನು ಹೇಗೆಲ್ಲಾಾ ಒಡೆಯುಲು ಯತ್ನಿಿಸುತ್ತಾಾರೆ, ಎಂಬುದರ ಸಂಪೂರ್ಣ ಅರಿವಿದೆ ಎಂದರು.

ನಾವು ಬರಿಯ ಕಾರ್ಮಿಕರ ಪರವಾಗಿಯೇ ನಿಲ್ಲುತ್ತೇವೆ ಎಂಬ ತಪ್ಪುು ಕಲ್ಪನೆಗಳು ಬೇಡ, ಅನ್ಯಾಾಯಕ್ಕೆೆ ಒಳಗಾದವರನ್ನು ಬೆಂಬಲಿಸುವುದು ನಮ್ಮ ಧ್ಯೇಯವಾಗಿದೆ. ಕಂಪನಿ ಕಾರ್ಮಿಕರ ವೇತನ ಒಪ್ಪಂದವನ್ನು ಸಮರ್ಪಕವಾಗಿ ಈಡೇರಿಸಿದರೆ ಕಾರ್ಮಿಕರು ಧನ್ಯತಾ ಭಾವದಿಂದ ಸಂಸ್ಥೆೆಯ ಶ್ರೇಯೋಭಿವೃದ್ಧಿಿಗಾಗಿ ಇನ್ನೂ ಹೆಚ್ಚು ಶ್ರಮಿಸುತ್ತಾಾರೆ. ಕಾರ್ಮಿಕರಿಂದ ಸಂಸ್ಥೆೆ ಹೆಚ್ಚು ದುಡಿಸಿಕೊಳ್ಳಲಿ, ಅದರ ಬಗ್ಗೆೆ ನಮ್ಮ ಅಭ್ಯಂತರವಿಲ್ಲ, ಆದರೆ ಕಾರ್ಮಿಕರಿಗೆ ಸಿಗಬೇಕಾದ ವೇತನ, ಭತ್ಯೆೆ ಹಾಗೂ ಇನ್ನಿಿತರ ಸೌಲಭ್ಯಗಳನ್ನು ಪ್ರಾಾಮಾಣಿಕವಾಗಿ ದೊರಕಿಸಿಕೊಡಬೇಕು ಎಂದ ಅವರು ಕಾರ್ಮಿಕರಿಗೆ ನ್ಯಾಾಯ ದೊರಕಿಸಿ ಕೊಡುತ್ತಾಾರೆ ಎಂಬ ವಿಶ್ವಾಾಸವಿದೆ, ಇಲ್ಲದಿದ್ದರೆ ಕಾರ್ಮಿಕ ಮುಖಂಡನಾಗಿ ನ್ಯಾಾಯ ದೊರೆಯುವವರೆಗೂ ಕಾರ್ಮಿಕರ ಪರ ನಿಂತು, ಅವರ ಹೋರಾಟಕ್ಕೆೆ ಬೆಂಬಲಿಸುತ್ತೇನೆ ಎಂದರು.

ಫೆಡರಲ್ ಮೊಘಲ್ ಗೊಯೆಟ್‌ಸ್‌ ನೌಕರರ ಸಂಘದ ಕಾರ್ಮಿಕರ ಪ್ರತಿಭಟನೆಯಲ್ಲಿ ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿದರು. ಬಿಬಿಎಂಪಿ ಸದಸ್ಯರಾದ ನೇತ್ರಪಲ್ಲವಿ, ಎಂ.ಸತೀಶ್, ಬಿಜೆಪಿ ಮುಖಂಡರಾದ ಎ.ಸಿ.ಮುನಿಕೃಷ್ಣಪ್ಪ, ಟಿ ಎಲ್ ಪ್ರೇಮ್‌ಕುಮಾರ್ ಹಾಗೂ ಇನ್ನಿಿತರರಿದ್ದರು.

Leave a Reply

Your email address will not be published. Required fields are marked *