Wednesday, 1st February 2023

ನೆನಪಿಡಿ, ಪಂಕ್ಚರ್‌ ಸಾಬಿ ಯಾವತ್ತೂ ಅಪಾಯಕಾರಿಯಲ್ಲ !

ಬುಲೆಟ್ ಪ್ರೂಫ್

ವಿನಯ್ ಖಾನ್

vinaykhan078@gmail.com

ಅದು ಪಾಕಿಸ್ತಾನದ ಮೆಡಿಕಲ್ ಕಾಲೇಜು, ಎಲ್ಲರ ಜತೆ ಓದ್ಕೊಂಡು ಹೊಂದ್ಕೊಂಡು ಕಾಲೇಜು ಕಲಿಯುತ್ತಿದ್ದವಳು, ಎರಡನೆ ವರ್ಷಕ್ಕೆ ಬರುತ್ತಿದ್ದಂತೆಯೇ ಅದು ಹೇಗೋ ಒಂದಷ್ಟು ಮುಸ್ಲಿಮ್ ಮೂಲ ಭೂತವಾದಿಗಳ ಸಂಪರ್ಕಕ್ಕೆ ಬಂದಳು. ಅಷ್ಟರ ನಂತರ ದಿನದಿಂದ ದಿನಕ್ಕೆ ದ್ವೀಪ (Isolating)ವಾಗಲಾರಂಭಿಸಿದಳು.

ಎಲ್ಲರ ಜತೆಗಿನ ಸ್ನೇಹ ಸಂಕೋಲೆಗಳನ್ನೂ ಬಿಡಿಸಿಕೊಂಡು ತನ್ನನ್ನು ತಾನೇ (ಬುರ್ಖಾದಿಂದ ಎಂದು ಪ್ರತ್ಯೇಕ ಹೇಳಬೇಕಿಲ್ಲ) ಮುಚ್ಚಿಕೊಳ್ಳತೊಡಗಿದಳು. ಮುಚ್ಚಿಕೊಳ್ಳುತ್ತಿದ್ದಳೋ, ಬಚ್ಚಿಟ್ಟುಕೊಳ್ಳುತ್ತಿದ್ದಳೋ, ಅಂತೂ ಸುಲಭಕ್ಕೆ ಸಿಗದಾಕೆಯ ಬಗ್ಗೆ ಹಳೆಯ ಸ್ನೇಹಿತರೂ ತಲೆಕೆಡಿಸಿಕೊಳ್ಳಲು ಹೋಗಲಿಲ್ಲ. ಅದೊಂದು ದಿನ ಇದ್ದಕ್ಕಿದ್ದಂತೆ ಆಕೆಯನ್ನು ಅವಳ ಊರಿನಲ್ಲೇ ಪೊಲೀಸರು ಬಂಧಿಸಿದ ಸುದ್ದಿ ಬಂದಿತ್ತು.

ಅದರ ಬೆನ್ನಲ್ಲೇ ಗೊತ್ತಾದದ್ದು, ಆಕೆ ಆತ್ಮಾಹುತು ಬಾಂಬರ್ ತರಬೇತಾ ಗುತ್ತಿದ್ದಳು! ಮಾತ್ರವಲ್ಲ, ಪಶ್ಚಿಮ ದೇಶಗಳ ಪ್ರಮುಖ ಚರ್ಚ್‌ವೊಂದನ್ನು ಸ್ಫೋಟಿಸುವ ‘ಪುಣ್ಯಕಾರ್ಯ’ಕ್ಕೆ ಆಕೆ ನಿಯೋಜಿತಳಾಗಿದ್ದಳು. ಇದು ಕೇವಲ ಪಾಕಿಸ್ತಾನದ ಒಂದು ಕಾಲೇಜಿನ ಸುದ್ದಿ ಅಲ್ಲ. ಪಾಕಿಸ್ತಾನ್, ಅಫ್ಘಾನಿಸ್ತಾನ್, ಇಂಡೋನ್ಯೇಷ್ಯಾ, ಬಾಂಗ್ಲಾದೇಶ… ಹೀಗೆ ನಮ್ಮ ಸುತ್ತಮುತ್ತಲಿನ ಮುಸ್ಲಿಂ ದೇಶಗಳ ಪ್ರತೀ ಕಾಲೇಜುಗಳ ಕಥೆ. ವಿದ್ಯಾರ್ಥಿಗಳು ಉಗ್ರವಾದಕ್ಕಿಳಿ ಯುವುದು ಸಾಮಾನ್ಯ ‘ವೃತ್ತಿಪರ’ ಸಂಗತಿ ಯಾಗಿಬಿಟ್ಟಿದೆ. ಇಂಥ ಉಗ್ರ ಸಂಘಟನೆಗಳು ಬಲಗೊಳ್ಳುತ್ತಿ ರುವುದೇ ವಿದ್ಯಾರ್ಥಿ ಸಂಘಟನೆಗಳು, ಧಾರ್ಮಿಕ ಸಂಸ್ಥೆಗಳ ಕಾರ್ಯಕರ್ತರು ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರುಗಳಿಂದ.

ಒಂದು ರೀತಿಯಲ್ಲಿ ಇವುಗಳೆಲ್ಲ ‘ಯುವ ಉಗ್ರ’ರೆಂಬ ಅದಿರಿನ ಗಣಿ. ಒಂದು ಅಧ್ಯಯನದ ಪ್ರಕಾರ ‘ಇಸ್ಲಾಮೀ ಜಾಮಿಯಾ ತಾಲಿಬಾ’ ಅನ್ನುವ ಒಂದು ಸಂಘಟನೆಯಲ್ಲೇ 40 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಗ್ರರಾಗಿ ಬದಲಾಗುತ್ತಿದ್ದಾರೆ. ಇನ್ನೂ ವಿಶೇಷವೆಂದರೆ ಪಾಕಿಸ್ತಾನದ ಹಲವು ಕಾಲೇಜುಗಳ ಶೌಚಾಲಯಗಳಿಂದ ಹಿಡಿದು ಪ್ರವೇಶ ಪ್ರಕ್ರಿಯೆಯವರೆಗೆ ಎಲ್ಲದರ ಮೇಲೂ ಹಿಡಿತ ಇಟ್ಟುಕೊಂಡಿದ್ದಾರೆ. ಇಂಥ ಕಾಲೇಜುಗಳಲ್ಲಿ ಯಾವ ವಿದ್ಯಾರ್ಥಿಯೂ ಆಧುನಿಕತೆ ಒಗ್ಗದಂತೆ ಸಂಗೀತ ನೃತ್ಯಗಳಿಗೆ ಅವಕಾಶ ನೀಡದಂತೆ ಎಚ್ಚರ ವಹಿಸುತ್ತಿದ್ದಾರೆ.

ಒಂದು ವೇಳೆ ಯಾರಾದರೂ ಅದನ್ನು ಮೀರಿದರೆ ಹದ್ದುಬಸ್ತಿನಲ್ಲಿಟ್ಟು, ತಮ್ಮದೇ ಆದ ನಿಯಮಗಳಿಂದ ಬೇರೆ ವಿದ್ಯಾರ್ಥಿಗಳಿಗೆ
ಎಚ್ಚರಿಕೆಯನ್ನು ರವಾನಿಸಲಾಗುತ್ತದೆ. ಸುತ್ತಮುತ್ತಲ ಗದ್ದೆಗಳಲ್ಲಿ ಬೆಳೆದ ಕಳೆಯ ಬೀಜ ನಮ್ಮ ಹೊಲಕ್ಕೆ ಬಿದ್ದು ಹುಟ್ಟದಿರುತ್ತದೆಯೇ? ಸಹಜವಾಗಿ ಭಾರತದಲ್ಲಿ, ‘ತೇವಾಂಶ’ ಹೆಚ್ಚಿರುವ ಕಡೆ ಈ ಕಳೆ ಹುಲುಸಾಗಿ ಬೆಳೆಯುತ್ತಿದೆ. ಕೇರಳದ 26 ವರ್ಷದ ನಷಿದುಲ್ ಹಮ್‌ಜಾಫರ್ ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನಲ್ಲೇ ಬಿಬಿಎ ಮುಗಿಸಿದ್ದ. ಒಳ್ಳೆಯ ಕೆಲಸ ಸಿಗುವ ಸಂಭವನಿಯತೆಯೂ ಇತ್ತು. ಅಷ್ಟರಲ್ಲಿ ಯಾರೋ ಸ್ನೇಹಿತರ ಮುಖಾಂತರ ಉಗ್ರ ಸಂಘಟನೆಯ ಸಂಪರ್ಕಕ್ಕೆ
ಬಂದ. ಒಂದಷ್ಟು ಹಣ ಗೊತ್ತಿಲ್ಲದಂತೆ ಕೈ ಸೇರತೊಡಗಿತ್ತು.

ಬಯಸಿದ ವಿಲಾಸಿ ಜೀವನಕ್ಕೆ ಇಷ್ಟು ಸಾಕಾಗಿತ್ತು. ಓದು ಮರೆತು ಹೋಯಿತು. ಗುರಿ ಬದಲಾಯಿತು. ಐಸಿಸ್‌ಗೆ ಸೇರಲು ಇಲ್ಲಿಂದ ಇರಾನ್‌ಗೆ ಹೋಗಿ ಅಲ್ಲಿಂದ ಅಫ್ಘಾನಿಸ್ತಾನಕ್ಕೆ ಹೋಗುವ ಹಾದಿಯಲ್ಲಿ ಆಗ ಅಮೆರಿಕದ ಕಂಟ್ರೋಲ್‌ನಲ್ಲಿದ್ದ ಅಫ್ಘಾನಿ ಸ್ತಾನದ ಪೊಲೀಸರಿಗೆ ಸಿಕ್ಕಿಬಿದ್ದ. ಅಲ್ಲಿಂದ ಅವನ ಜೀವನ ಜೈಲಲ್ಲಿಯೇ. ಈಗ ಅವನು ಬದುಕಿದ್ದಾನೋ ಸತ್ತಿದ್ದಾನೋ ಸುಳಿವಿಲ್ಲ. ದಾರಲ್-ಉಲುಮ್-ಹಕ್ಕಾನಿಯಾ!

ಇದು ಯುನಿವರ್ಸಿಟಿ ಆಫ್ ಜಿಹಾದ್! ತಾನೇ ಹೇಳಿಕೊಳ್ಳುವ ಹಾಗೆ ಇದರಲ್ಲಿ ಓದಿದ ಶೇ.95 ವಿದ್ಯಾರ್ಥಿಗಳು ಈಗ ತಾಲಿಬಾನ್‌ನ ನಾಯಕರು! ಅಷ್ಟೇ ಯಾಕೆ, ಪ್ರಪಂಚದ ಎಲ್ಲ ಉಗ್ರರ ಪಟ್ಟಿಯನ್ನು ನೋಡಿದರೆ, ಐವರಲ್ಲಿ ಒಬ್ಬ ಉಗ್ರ ಮಾಸ್ಟರ್ ಡಿಗ್ರಿ ಕಲಿತವನೇ. ಪ್ರಪಂಚದ ಅತೀ ಭಯಾನಕ ಉಗ್ರನೂ ಚೆನ್ನಾಗಿ ಓದಿಕೊಂಡವನೆ. ಪಿಎಚ್ .ಡಿ. ಓದಿದ ಅಬು- ಬಕ್ರ್- ಅಲ್-ಬಗ್ದಾದಿ, ಸಿವಿಲ್ ಎಂಜಿನಿಯರಿಂಗ್ ಓದಿದ ಒಸಾಮಾ ಬಿನ್ ಲಾಡೆನ್, ಎಮ್ ಬಿಎ ಓದಿಕೊಂಡ ಅಲ್‌ಖೈದಾ ನಾಯಕ ಅಯಾನ್ ಅಲ್ -ಝವಾಲಿಯರ್, ಭಾರತದಲ್ಲಿರೋ ಎಷ್ಟೋ ಜನರ ‘ಆರಾಧ್ಯ ಗುರು’ ಅಫ್ಜಲ್ ಗುರು ಕೂಡ ಎಂಬಿಬಿಎಸ್ ಅನ್ನು ಅರ್ಧಕ್ಕೆ ಮೊಟಕುಗೊಳಿಸಿದವ.

ಇದು ಬರೀ ‘ಕೆಲವರ’ ಹೆಸರಿನ ಪಟ್ಟಿ ಅಷ್ಟೇ ಆಯಿತು. ಎಷ್ಟೋ ಉಗ್ರರು ಅಂತಾರಾಷ್ಟ್ರೀಯ ಯುನಿವರ್ಸಿಟಿಗಳಲ್ಲೂ ವ್ಯಾಸಂಗ
ಕೈಗೊಂಡವರು. ಪಾಕಿಸ್ತಾನದ 35 ಸಾವಿರಕ್ಕೂ ಹೆಚ್ಚು ಮದರಸಾಗಳಲ್ಲಿ ಪ್ರತಿದಿನ ‘ಹುಟ್ಟುತ್ತಿರುವುದು’ ಉಗ್ರರೇ. ಶ್ರೀಲಂಕ ದಲ್ಲಿ ಈಸ್ಟರ್ ಸಂಡೇ ದಿನ ಬಾಂಬ್ ಸ್ಫೋ ಆದಾಗ, ಲಂಕಾದ ಆಗಿನ ರಾಜ್ಯ ಖಾತೆಯ ಮಂತ್ರಿ ರುವಾನ್ ವಿಜಯವರ್ದನೆ ‘ಹಲವು ಉಗ್ರರು ಒಳ್ಳೆಯ ಶಿಕ್ಷಣ ಪಡೆದು, ಆರ್ಥಿಕವಾಗಿ ಬಲಿಷ್ಠವಾದಂತಹ ಕುಟುಂಬದಿಂದ ಬಂದವರು.

ಅದರಲ್ಲಿ ಕೆಲವರು ವಿದೇಶಗಳಲ್ಲೂ ಶಿಕ್ಷಣ ಪಡೆದವರು. ಒಬ್ಬ ಆರೋಪಿ ಆಸ್ಟ್ರೇಲಿಯದಿಂದ ಕಾನೂನು ಪದವಿ ಪಡೆದಿದ್ದಾನೆ’ ಎಂದು ವಿವರ ನೀಡಿದ್ದರು. With Guns you can Kill a Terrorist, With Education you can Kill Terrorism ಅಂತ ನೋಬೆಲ್ ‘ಶಾಂತಿ’ ಪುರಸ್ಕೃತೆ ಮಲಾಲ ಯುಸುಫಾಜಿ ಹೇಳಿದ್ದಾಳೆ. ಇಲ್ಲಿ ಹುಟ್ಟುವ ಒಂದೇ ಪ್ರಶ್ನೆ ಒಂದೇ, ಹಾಗಿದ್ದರೆ ಮಾಸ್ಟರ‍್ಸ್ ವರೆಗೂ ಶಿಕ್ಷಣ ಪಡೆದುಕೊಂಡವರು ಎಷ್ಟೋ ಮಂದಿ ಯಾಕೆ ಉಗ್ರರಾದರು? ಜಗತ್ತಿನ ಹಲವು ಬುದ್ಧಿ ಜೀವಿಗಳು, ಹಿರಿಯ ಇಸ್ಲಾಮಿಕ್ ಪಂಡಿತರು ಯಾರಿಗೆ ಕೇಳಿದರೂ ಹೇಳುವುದೊಂದೆ.

ಅದು ‘ಬಡತನ, ರಾಜಕೀಯ ಬೆಳವಣಿಗೆ, ಶಿಕ್ಷಣ ಇಲ್ಲದಿರುವುದು, ಮೂಲ ಸೌಕರ್ಯದ ಕೊರೆತೆ, ಕೊಳಗೇರಿಯ ಜೀವನ, ಸಾಮಾಜಿಕ ಅಸ್ಥಿರತೆ, ಅಲ್ಪಸಂಖ್ಯಾತರೆಂಬ ಕೀಳರಿಮೆ… ಹಾಗೆ, ಹೀಗೆ’ ಎಲ್ಲದನ್ನೂ ಸೇರಿಸಿಕೊಂಡು ಪಟ್ಟಿಮಾಡಿ,
ಇದರಿಂದಲೇ ಯುವಕರು ಉಗ್ರರಾಗುತ್ತಿದ್ದಾರೆ ಅಂತ ಕೊನೆಗೆ ಟಿಪ್ಪಣಿ ಮಾಡುತ್ತಾರೆ, ಭಾಷಣ ಬಿಗಿಯುತ್ತಿದ್ದಾರೆ. ಉಗ್ರರನ್ನೂ ‘ಸಂಭಾವಿತರು’ ಎಂದು ಹೇಳುವವರೆಗೂ ಹೋಗಿ ಮುಟ್ಟಿರುವುದನ್ನು ನೋಡುತ್ತಿದ್ದೇವೆ.

ಉಗ್ರರನ್ನು ‘ಉಗ್ರ ಸಂಘಟನೆಗಳ, ಸಮಯದ ಬಲಿಪಶು’ ಎಂದೂ ವ್ಯಾಖ್ಯಾನಿಸುತ್ತಾರೆ. ಇಂಥ ಉಗ್ರರ ಕುರಿತು ಬ್ರಿಟನ್
ಸಂಸ್ಥೆಯೊಂದು ನಡೆಸಿದ ಸರ್ವೇಯಿಂದ ಹೊರ ಬಿದ್ದ ಸಂಗತಿ, ಮೂಲಭೂತವಾದಿಗಳ ಕಣ್ಣಲ್ಲಿ ‘ಹೀರೋ’ ಎನಿಸಿಕೊಳ್ಳುತ್ತಿರುವ ಬಹುತೇಕರು ಒಳ್ಳೆಯ ಶಿಕ್ಷಣ ಪಡೆದವರೇ!

ವಿಶ್ವ ಸಂಸ್ಥೆಯೇ ಹೇಳುವ ಹಾಗೆ ಈ ಪೈಕಿ ಶೇ.69ಕ್ಕಿಂತ ಹೆಚ್ಚಿನ ಮಂದಿ ಸೆಕಂಡರಿ ಎಜುಕೇಶನ್ ಮುಗಿಸಿದವರೇ.
ಒಳ್ಳೊಳ್ಳೆ ಕೆಲಸದಲ್ಲಿ ರುವವರು, ಲಾಭದಾಯಕ ವ್ಯಾಪಾರದಲ್ಲಿದ್ದವರೇ. ಎಷ್ಟೋ ರಾಜಕಾರಣಿಗಳ ಮಕ್ಕಳೂ ಉಗ್ರ
ಚಟುವಟಿಕೆಗಳಲ್ಲಿ ನಿರತರಾಗಿದ್ದ ಉದಾಹರಣೆಗಳೂ ಇವೆ. ದೊಡ್ಡ ದೊಡ್ಡ ಎಂಎನ್‌ಸಿಗಳಲ್ಲಿ ಕೆಲಸ ಮಾಡುತ್ತಿರುವವರೂ ಉಗ್ರ ರಾಗುತ್ತಿದ್ದಾರೆ. ಇನ್ನು ಬಡವರು, ಅವಿದ್ಯಾವಂತರು, ದಿನಗೂಲಿ ಮಾಡುತ್ತಿರುವ ಮುಸ್ಲಿಮರು ಕೆಲ ಘಟನೆಗಳ ಸನ್ನಿವೇಶದ ‘ವೀರಾವೇಶ’ ತೋರುತ್ತಿದ್ದಾರೆಯೇ ವಿನಃ ಅದನ್ನು ಮೀರಿ ‘ಉಗ್ರ’ರಾಗುವ ಬಗ್ಗೆ ಕೆಡಿಸಿಕೊಳ್ಳಲ್ಲ. ತಮ್ಮ ದೈನಂದಿನ ಹೊಟ್ಟೆಪಾಡಿಗೆ ಪಂಕ್ಚರ್ ಅಂಗಡಿಯಲ್ಲೋ, ವೆಲ್ಡಿಂಗ್‌ಶಾಪ್‌ನಲ್ಲೋ, ಮೆಕ್ಯಾನಿಕ್ ಆಗಿಯೋ ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.

ಕೆಲವೊಮ್ಮೆ ಅವರ ‘ನಾಯಕ’ರ ಮಾತಿಗೆ ಮರುಳಾಗಿ ಕಲ್ಲು ಹೊಡೆಯುವುದನ್ನು ಬಿಟ್ಟರೆ. ಭಯೋತ್ಪಾದಕನಾಗಿ ಜನರನ್ನು ಕೊಲೆ ಮಾಡುವ ಕೃತ್ಯಕ್ಕೆ ಹೋಗಿದ್ದಂತಹ ಉದಾಹರಣೆಗಳು ವಿರಳ. “every muslim should be a terrrist”ಈ ಮಾತನ್ನು ಹೇಳಿದ್ದು ಝಾಕಿರ್ ನಾಯಕ್. ಮೊನ್ನೆ ಮೊನ್ನೆ ತಾನೇ ಮಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಸಿಕ್ಕಿಬಿದ್ದ ಉಗ್ರನ ‘ಆರಾಧ್ಯ ದೈವ’. ಅಂದರೆ ಅವನಿಗೆ ಉಗ್ರನಾಗಲು ಸ್ಫೂರ್ತಿ ನೀಡಿದವನು. ಬರೀ ಅವನಲ್ಲ ಈಗಿನ ಕಾಲದ ಹಲವು ಉಗ್ರರಿಗೂ ಇವನೇ ಸ್ಫೂರ್ತಿ.

ಭಾರತ ಮತ್ತು ಇನ್ನಿತರ ದೇಶಗಳಲ್ಲೂ ಬ್ಯಾನ್ ಆಗಿದ್ದವನು. ಹಾಗಿದ್ದರೆ, ಇವನ ಮಾತಿನ ಮೇಲೆ, ಇವನ ಕೃತ್ಯಗಳ ಮೇಲೆ
ಹಿರಿಯ ಇಸ್ಲಾಂ ಪಂಡಿತರು ಹಿಡಿತವನ್ನೇಕೆ ಹೊಂದಿಲ್ಲ? ಅವರೇ ಹೇಳಿಕೊಳ್ಳುವ ಹಾಗೆ, ಇಸ್ಲಾಂನಲ್ಲಿ ಉಗ್ರ ಕೃತ್ಯಗಳಿಗೆ
ಮಾನ್ಯತೆಯಿಲ್ಲ. ಇಸ್ಲಾಂ ಏನಿದ್ದರೂ ಶಾಂತಿ ಬಯಸುವ ಧರ್ಮ. ಹಾಗಿದ್ದರೆ, ಅವನ ವಿರುದ್ಧ ಫತ್ವಾ ಜಾರಿ ಮಾಡಿ ಅವನ ಮಾತಿಗೆ ನಿಗಾ ಏಕೆ ಇಡಬಾರದಿತ್ತು? ಇಸ್ಲಾಂಮಿನ ಲೋಪದೋಷಗಳನ್ನು ಎತ್ತಿಹಿಡಿದ ಕಾರಣಕ್ಕೆ ಹೆಸರಾಂತ ಲೇಖಕ ತಾರಕ್ -ತೇಹ್ ಮತ್ತು ಸಲ್ಮಾನ್ ರಷ್ದೀ ವಿರುದ್ಧ ಫತ್ವಾ ಜಾರಿಮಾಡಿದ್ದಾರಲ್ಲಾ? ಸಲ್ಮಾನ್ ರಷ್ದೀ ಕೊಲೆಯತ್ನವೂ ಆಯಿತು. ಹಾಗಾದರೆ ಯುವಜನರ ತಲೆ ಕೆಡಸಿ ಧರ್ಮದ ಅಫೀಮು ಬೆರೆಸಿ, ಅವರ ಜೀವನವನ್ನೇ ಹಾಳು ಮಾಡುತ್ತಿರುವ ಝಾಕೀರ ನಾಯಕ್, ಮುಫ್ತಿ ಮೈನಕ್, ನೋರಾನ್ ಅಲಿಖಾನ್ ಮತ್ತು ಬಿಲಾಲ್ ಫಿಲಿಪ್ ರಂಥವರ ಮಾತಿಗೆ ಮುಸಲ್ಮಾನ್ ಧಾರ್ಮಿಕ ಸಂಘಟನೆಗಳು ಮತ್ತು ನಾಯಕರು ಬೀಗ ಏಕೆ ಜಡಿಯುತ್ತಿಲ್ಲ? ಕೆಲವು ಮಾಹಿತಿಗಳ ಪ್ರಕಾರ ಹಲವಾರು ಉಗ್ರರು
ಮದರಸಾ ಗಳಲ್ಲಿ ಕಲಿತವರು ಅಥವಾ ಅದರ ಜತೆ ತಮ್ಮ ನಂಟನ್ನು ಹೊಂದಿದವರು.

ಕೇರಳದ ಎಷ್ಟೋ ಮದರಸಾಗಳು ಭಯೋತ್ಪಾದಕ ಸಂಸ್ಥೆಗಳ ಜತೆ ನಂಟನ್ನು ಹೊಂದಿವೆ. ಒಬ್ಬ ಪಂಕ್ಚರ್‌ ಶಾಪ್‌ನವನೂ ಮದರಸಾದಲ್ಲಿ ೨ನೇ ತರಗತಿಗಿಂತ ಮುಂದೆ ಹೋಗಿಲ್ಲ. ಒಬ್ಬ ಮೆಕ್ಯಾನಿಕ್ ಸಹ ೭ನೇ ತರಗತಿ ಪಾಸಾಗಿಲ್ಲ; ಬೇರೆಯಲ್ಲ ಬಿಡಿ, ಎಷ್ಟೋ ಮುಸಲ್ಮಾನ್ ದೇಶಗಳೇ ಉಗ್ರ ಕೃತ್ಯಕ್ಕೆ ಬಲಿಯಾಗುತ್ತಿದ್ದಾವೆ? ಝಾಕೀರನ ಕತೆ ಹೋಗಲಿ. ಪ್ರಪಂಚಾದ್ಯಂತ ಇರುವ ಉಗ್ರ ಸಂಘಟನೆಗಳಿಗೆ ಕಡಿವಾಣ ಹಾಕುವ ಕೆಲಸ ಮುಸಲ್ಮಾನರಿಂದ ಇನ್ನೂ ಏಕೆ ಆಗುತ್ತಿಲ್ಲ? ಧರ್ಮ ಉಳಿಯಲೇ ಬೇಕಿದ್ದರೆ ಜಿಹಾದ್ ಆಗಲೇಬೇಕಾ? ಧರ್ಮ ಉಳಿಸಲು ಯುವಕರು ಉಗ್ರರಾಗಲೇ ಬೇಕಾ? ಲವ್ ಜಿಹಾದ್‌ಗೆ ಬಲಿಯಾದ ಎಷ್ಟೋ ಹುಡುಗಿಯರು ಉಗ್ರರಾಗುತ್ತಿದ್ದಾರೆ ಅವರ ಮೇಲೆಯೂ ಇವರ ನಿಯಂತ್ರಣವೇ ಇಲ್ಲವಾ? ಭಾರತೀಯ ಮುಸಲ್ಮಾನರು ಹಲವಾರು ಜನರ ಮಾತನ್ನು ಕೇಳಿ ಉಗ್ರರಾಗುತ್ತಿದ್ದಾರೆ ಅಂತಲೇ ಇಟ್ಟುಕೊಳ್ಳೊಣ, ಆದರೆ ಅಂಥವರು
ಅಬ್ದುಲ್ ಕಲಾಂರಂಥವರನ್ನು ನೋಡಿ ವಿಜ್ಞಾನಿ ಆಗುತ್ತಿಲ್ಲ ಏಕೆ? ರಾಹತ್ ಫತೇಹ್ ಅಲಿ ಖಾನ್ ತರಹ ಸಂಗೀತಗಾರ ರಾಗುತ್ತಿಲ್ಲ ಏಕೆ? ಬೇರೆ ಬೇರೆ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ ಹಲವಾರು ಮುಸಲ್ಮಾನರೂ ಇದ್ದಾರೆ.

ಅವರನ್ನು ಇವರೇಕೆ ಸೂರ್ತಿಯಾಗಿ ಪಡೆದು ಯಾವುದೋ ಕ್ಷೇತ್ರದಲ್ಲಿ ಬೆಳೆಯಬಾರದು? ಭಯ ಇದ್ದಲ್ಲಿ ಶಾಂತಿ ಎಲ್ಲಿರುತ್ತೆ ಸ್ವಾಮಿ? ಭಯೋತ್ಪಾದಕರು ಶಾಂತಿಯನ್ನು ಹೇಗೆ ತಾನೇ ಹರಡಲು ಸಾಧ್ಯ? ಈ ಎಲ್ಲವನ್ನೂ ನೋಡಿದ ಮೇಲೆ ಒಳ್ಳೆಯ ಶಿಕ್ಷಣ ಪಡೆದು, ಒಳ್ಳೆಯ ಕಂಪನಿಗಳಲ್ಲಿ ಕೆಲಸ ಸಿಕ್ಕವರೂ ಉಗ್ರಚಟುವಟಿಕೆಗಳಲ್ಲಿ ತೊಡಗಸಿಕೊಂಡವರಿಗಿಂತ, ರೋಡ್
ಸೈಡ್‌ನಲ್ಲಿ ಹಣ್ಣುಗಳನ್ನು ಮಾರಿಕೊಂಡು, ಟ್ಯೂಬ್ ಟೈರ್‌ಗಳ ಪಂಕ್ಚರ್ ತಿದ್ದಿಕೊಂಡು ಜೀವನ ಮಾಡುತ್ತಿರುವ ಮುಸಲ್ಮಾನರೇ ಮೇಲಲ್ಲವೇ?

error: Content is protected !!