Friday, 2nd June 2023

ಕಿಚ್ಚ ಈಗ ಅಶ್ವತ್ಥಾಮ

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ತೆರೆಗೆ ಬರಲು ಸಜ್ಜಾಗಿದೆ. ಫೆಬ್ರವರಿ ೨೪ ರಂದು ಚಿತ್ರ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ. ಆದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಬಿಡುಗಡೆಯ ದಿನಾಂಕ ನಿರ್ಧಾರವಾಗಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಈ ನಡುವೆಯೇ ಕಿಚ್ಚನ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿತ್ತು. ಅದಕ್ಕೆ ಉತ್ತರವೂ ಸಿಕ್ಕಿದ್ದು, ಕಾಲಿವುಡ್ ನಿರ್ದೇಶಕ ವೆಂಕಟ್ ಪ್ರಭು ನಿರ್ದೇಶನದಲ್ಲಿ ಮೂಡಿ ಬರಲಿರುವ ಚಿತ್ರದಲ್ಲಿ ಸುದೀಪ್ ಅಭಿನಯಿಸಲಿದ್ದಾರೆ. ಈ ಬಗ್ಗೆ ನಿರ್ದೇಶಕ ವೆಂಕಟ್ ಪ್ರಭು ಅವರೇ ಸ್ಪಷ್ಟಪಡಿಸಿದ್ದಾರೆ. ಆ ಬಳಿಕ ಸಾಹೋ
ನಿರ್ದೇಶಕ ಸುಜಿತ್ ನಿರ್ದೇಶನದಲ್ಲಿ ಮೂಡಿಬರಲಿರುವ ಸಿನಿಮಾದಲ್ಲಿಯೂ ಕಿಚ್ಚ ನಟಿಸಲಿದ್ದಾರೆ ಎನ್ನಲಾಗು ತ್ತಿದೆ. ಆದರೆ ಆ ಬಗ್ಗೆ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ.

ಹೀಗಿರುವಾಗಲೇ ಸುದೀಪ್, ಅಶ್ವತ್ಥಾಮ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ಧಿಯೂ ಸಖತ್ ಸದ್ಧು ಮಾಡು ತ್ತಿದೆ. ಇದಕ್ಕೆ ಪೂರಕವೆಂಬಂತೆ ಸೋಷಿಯಲ್ ಮೀಡಿಯಾದಲ್ಲಿ ಅಶ್ವತ್ಥಾಮ ಚಿತ್ರದ ಪೋಸ್ಟರ್ ವೈರಲ್ ಆಗಿದೆ. ವಿಕ್ರಾಂತ್ ರೋಣ ಚಿತ್ರವನ್ನು ನಿರ್ದೇಶಿಸಿರುವ ಅನೂಪ್ ಭಂಡಾರಿ ಅವರೇ ಸುದೀಪ್ ಅವರ ಮುಂದಿನ ಚಿತ್ರಕ್ಕೂ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬುದು ಪೋಸ್ಟರ್‌ನಲ್ಲಿ ಉಲ್ಲೇಖಿಸಲಾಗಿದೆ. ಅನೂಪ್ ಭಂಡಾರಿ ಹಾಗೂ ಸುದೀಪ್ ಅವರ ಕಾಂಬಿನೇಷನ್‌ನಲ್ಲಿ ಅಶ್ವತ್ಥಾಮ ಶೀರ್ಷಿಕೆಯಲ್ಲಿ ಸಿನಿಮಾ ಸೆಟ್ಟೇರಲಿದೆ ಎಂದು ಈ ಹಿಂದೆಯೇ ಹೇಳಲಾಗಿತ್ತು. ಚಿತ್ರದ ಪೋಸ್ಟರ್ ಕೂಡ ರಿಲೀಸ್ ಆಗಿತ್ತು. ಈಗ ಅಶ್ವತ್ಥಾಮ ಚಿತ್ರದ ಹೊಸ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ರಾರಾಜಿಸು ತ್ತಿದೆ. ಕೈಯಲ್ಲಿ ಬಿಲ್ಲು ಹಿಡಿದು, ಅಶ್ವದ ಪಕ್ಕ ನಿಂತಿರುವ ಅಶ್ವತ್ಥಾಮನ ಪೋಸ್ಟರ್ ಗಮನಸೆಳೆಯುತ್ತಿದೆ.

ಪೌರಾಣಿಕ ಕಥೆಯಲ್ಲಿ ಕಿಚ್ಚ
ಬಾಹುಬಲಿ, ಸೈರ ನರಸಿಂಹ ರೆಡ್ಡಿ ಅಂತಹ ಐತಿಹಾಸಿಕ ಚಿತ್ರಗಳಲ್ಲಿ ನಟಿಸಿರುವ ಸುದೀಪ್ ಪೌರಾಣಿಕ ಕಥೆಯ ಚಿತ್ರಗಳಲ್ಲಿ ನಟಿಸಿಲ್ಲ. ಹಾಗಾಗಿ ತಮ್ಮ ನೆಚ್ಚಿನ ನಟನನ್ನು ಪೌರಾಣಿಕ ಹಿನ್ನೆಲೆಯುಳ್ಳ ಚಿತ್ರದಲ್ಲಿ ಕಣ್ತುಂಬಿಕೊಳ್ಳಬೇಕು ಎಂಬುದು ಅಭಿಮಾನಿಗಳ ಆಸೆಯಾಗಿದೆ. ಅಭಿಮಾನಿಗಳ ಆಸೆ ಈಡೇರಿಸುವ ನಿಟ್ಟಿನಲ್ಲಿ ಸುದೀಪ್, ಅಶ್ವತ್ಥಾಮ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಅಶ್ವತ್ಥಾಮ, ಎರಡು ಕಾಲ ಘಟ್ಟದ ಕಥೆಯನ್ನು ಒಳಗೊಂಡಿರುವ ಸಿನಿಮಾವಾಗಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಪೋಸ್ಟರ್ ಅದಕ್ಕೆ ಪುಷ್ಠಿ ನೀಡಿದೆ. ಏನೇ ಆದರೂ ವಿಕ್ರಾಂತ್ ರೋಣ ಚಿತ್ರ ತೆರೆಗೆ ಬಂದ ಬಳಿಕ ಸುದೀಪ್ ಅವರ ಹೊಸ ಚಿತ್ರದ ಬಗ್ಗೆ ಅಽಕೃತ ಮಾಹಿತಿ ಸಿಗಲಿದೆ ಅಲ್ಲಿಯವರೆಗೆ ಕಾಯಲೇಬೇಕಾಗಿದೆ.

error: Content is protected !!