Wednesday, 24th April 2024

ಅನಂತ ವರಗಳ ಕರುಣಿಸುವ ಪದ್ಮನಾಭ..

* ಕಾವೇರಿ ಭಾರದ್ವಾಜ್
ಆರೋಗ್ಯ, ಅಭಿವೃದ್ಧಿಿ ಮತ್ತು ಸಕಲ ಐಶ್ವರ್ಯಗಳನ್ನು ಅನಿಯಮಿತವಾಗಿ ನೀಡುವ ಅನಂತ ಪದ್ಮನಾಭನನ್ನು ಪೂಜಿಸುವ ಹಬ್ಬ ಅನಂತನ ಚತುರ್ದಶಿ. ಯಮುನೆಯ ಪೂಜಿಸಿ ಆಚರಿಸುವ ಈ ವ್ರತದಲ್ಲಿ, ಸಂತಾನ ದೇವತೆಯಾದ ಹಾವನ್ನು ಪೂಜಿಸುವ ಆಶಯವೂ ಇದೆ. ಇಂದು ಎಲ್ಲಡೆ ಅನಂತನ ಹಬ್ಬವನ್ನು ಆಚರಿಸಲಾಗುತ್ತಿಿದೆ.

ಅನಂತನ ಹಬ್ಬ, ಅನಂತನ ವ್ರತ ಅಥವಾ ಅನಂತನ ಚತುರ್ದಶಿ ಎಂದು ಕರೆಯುವ ಈ ಹಬ್ಬ ರಾಜ್ಯದ ಕರಾವಳಿ ಭಾಗ ಹಾಗೂ ಹಳೇ ಮೈಸೂರು ಪ್ರಾಾಂತ್ಯಗಳಲ್ಲಿ ಹೆಚ್ಚು ಪ್ರಚಲಿತವಾಗಿದೆ. ಈ ವ್ರತವನ್ನು ಭಾದ್ರಪದ ಮಾಸದ ಹದಿನಾಲ್ಕನೇ ದಿನ (ಚತುರ್ದಶಿ) ಆಚರಿಸಲಾಗುತ್ತದೆ. ಕ್ಷೀರಸಾಗರದಲ್ಲಿ ಏಳು ಹೆಡೆಗಳ ಆದಿಶೇಷನ ಮೇಲೆ ವಿಷ್ಣುವನ್ನು ಆರಾಧಿಸುವ ಹಬ್ಬ. ಅನಂತ ಎಂದರೆ ಅನಿಯಮಿತ, ಪದ್ಮನಾಭ ಎಂದರೆ ನಾಭಿಯಲ್ಲಿ ಕಮಲವನ್ನು ಹೊಂದಿದವನು ನಾರಾಯಣ ಅಥವಾ ವಿಷ್ಣು ಎಂಬ ಅರ್ಥ ಬರುತ್ತದೆ. ಇದು ವಿಷ್ಣುವನ್ನು ಪೂಜಿಸುವ ವ್ರತ.

ಈ ದಿನ ವಿಷ್ಣುವು, ಅನಂತ ಪದ್ಮನಾಭನ ರೂಪದಲ್ಲಿ ಭೂಮಿಗೆ ಅವತರಿಸಿದ ಎಂದು ಒಂದು ನಂಬಿಕೆ. ಅನಂತನ ಚತುರ್ದಶಿ ಆಚರಿಸುವವರಿಗೆ ನೆಮ್ಮದಿ, ಸಮೃದ್ಧಿಿ, ಪುತ್ರ ಸಂತಾನ ಪ್ರಾಾಪ್ತಿಿಯಾಗುತ್ತದೆ ಎಂಬುದು ಇನ್ನೊೊಂದು ನಂಬಿಕೆ. ಪುರಾತನ ಕಾಲದ ಕೌಂಡಿಲ್ಯ ಮುನಿಯು ಮದುವೆಯಾದ ಸಮಯದಲ್ಲಿ, ಸಮೇತ ಹೊರಟಾಗ, ಕೆಲವು ಮಹಿಳೆಯರು ವ್ರತ ಮಾಡುತ್ತಿಿದ್ದುದನ್ನು ಕಂಡು, ಏನೆಂದು ವಿಚಾರಿಸಲಾಗಿ, ಆ ಮಹಿಳೆಯರು ಅನಂತನ ವ್ರತ ಆಚರಿಸುತ್ತಿಿದ್ದೇವೆ ಎಂದರಂತೆ. ಈ ಐತಿಹ್ಯವನ್ನು ಗಮನಿಸಿದರೆ, ಅನಂತನ ವ್ರತದ ಆಚರಣೆಯು ಇತಿಹಾಸ ಪೂರ್ವ ಕಾಲದಲ್ಲೂ ಇತ್ತು ಎನ್ನಬಹುದು. ಕೌರವರ ಕಪಟ ಜೂಜಿಗೆ ಬಲಿಯಾದ ಪಾಂಡವರು, ವನವಾಸವನ್ನು ಮಾಡಬೇಕಾಯಿತು. ಅವರು ರಾಜ್ಯವನ್ನು ಮರಳಿ ಪಡೆಯಲು, ಅಂದು ನಡೆಸಿದ ಅನಂತನ ವ್ರತವೇ ಕಾರಣ ಎಂಬ ಕಥೆಯೂ ಇದೆ.

                             ವಿಶಿಷ್ಟ ವ್ರತ
ಭಾದ್ರಪದ ಚತುರ್ದಶಿಯ ಆಚರಿಸುವ ಈ ವ್ರತದ ಆಚರಣೆ ತುಸು ವಿಶಿಷ್ಟ. ಇದರಲ್ಲಿ ನೇಮ ನಿಷ್ಠೆೆಗಳು ಹೆಚ್ಚು. ಮದುವೆಯಾದ ಮೊದಲ ವರ್ಷ ಈ ವ್ರತವನ್ನು ಗಂಡ ಹೆಂಡತಿ ಪ್ರಾಾರಂಭಿಸುತ್ತಾಾರೆ. ಇದನ್ನು ವ್ರತ ಹಿಡಿಯುವುದು ಎಂದು ಕರೆಯಲಾಗುವುದು. ದಂಪತಿಗಳಿಬ್ಬರೂ ಶ್ರದ್ಧಾಾ ಭಕ್ತಿಿಯಿಂದ ನೆರವೇರಿಸುವ ಈ ಪೂಜೆಯಲ್ಲಿ ಮೊದಲಿಗೆ ಯಮುನಾ ಪೂಜೆ ಮಾಡಲಾಗುತ್ತದೆ. ಬೆಳಗ್ಗೆೆಯೇ ಸ್ನಾಾನಾದಿ ಕರ್ಮಗಳನ್ನು ಪೂರೈಸಿ ದಂಪತಿಗಳಿಬ್ಬರೂ ಮಡಿಯಲ್ಲಿ ನೀರನ್ನು ತಂದು (ಯಮುನೆ ನೀರು) ಎರಡು ಪಾತ್ರೆೆಗಳಿಗೆ ಸುಣ್ಣ ಹಚ್ಚಿಿ ಅದಕ್ಕೆೆ ಚಂದನದಲ್ಲಿ ಮತ್ತು ಚಕ್ರಗಳನ್ನು ಬರೆದು ತಂದ ಯಮುನೆಯನ್ನು ಆ ಕಳಶದಲ್ಲಿ ಹಾಕಿ ಅದಕ್ಕೆೆ ನಾಣ್ಯ, ಅರಿಶಿನ, ಕುಂಕುಮ, ಅಕ್ಷತೆ ಮತ್ತು ಮಾವಿನ ಎಲೆಗಳನ್ನು ಹಾಕಿ ಅದರ ಮೇಲೆ ತೆಂಗಿನಕಾಯಿ ಇರಿಸಿ ಕಳಶ ಸ್ಥಾಾಪಿಸಲಾಗುತ್ತದೆ.

ಹಸಿ ದರ್ಭೆಯನ್ನು ಹೆಣೆದು ಅದನ್ನು ಕಳಶದ ಮೇಲೆ ಇಡಲಾಗುತ್ತದೆ. ಇದನ್ನು ‘ಫಣಿ’ ಎಂದು ಕರೆಯುತ್ತಾಾರೆ. ಫಣಿ ಎಂದರೆ ಸರ್ಪ, ಅನಂತ ಪದ್ಮನಾಭ ಶೇಷಶಯನನಾಗಿರುವ ಕಾರಣ ಈ ಪದ್ಧತಿ ಅನುಸರಿಸಲಾಗುತ್ತದೆ.ಇದನ್ನೇ ಅನಂತ ಪದ್ಮನಾಭನೆಂದು ಆರಾಧಿಸಲಾಗುತ್ತದೆ. ಮೊದಲಿಗೆ ಗಣಪತಿ ಮಾಡಿ ತದನಂತರ ಕಳಶಕ್ಕೆೆ ಉಪವೀತವನ್ನು ಹಾಕಿ, ವಿವಿಧ ನಾಮಾವಳಿ ಅರ್ಚನೆಗಳೊಂದಿಗೆ ಹೂವು ಮತ್ತು ಪತ್ರೆೆಗಳಿಂದ ಅನಂತ ಪದ್ಮನಾಭನನ್ನು ಪೂಜಿಸಲಾಗುವುದು. ಮನೆದೇವರನ್ನು ಪೂಜಿಸಿ ವ್ರತ ಮಾಡುವ ದಂಪತಿಗಳಿಬ್ಬರೂ ಕಳೆದ ವರ್ಷದ ದೋರ ಅಥವಾ ದಾರವನ್ನು ಧರಿಸಿ ಪೂಜೆ ಪ್ರಾಾರಂಭಿಸುತ್ತಾಾರೆ. ಹೊಸ ದಾರವನ್ನು ಇಟ್ಟು ಪೂಜಿಸುತ್ತಾಾರೆ. ಈ ವ್ರತದಲ್ಲಿ ಕಮಲದ ಹೂವು ಶ್ರೇಷ್ಠ.

ಅನಂತನ ಸಂಖ್ಯೆೆ 14 ಈ ಕಾರಣದಿಂದಲೇ ಚತುರ್ದಶಿಯ ದಿನದಂದು ಈ ವ್ರತವನ್ನು ಆಚರಿಸಲಾಗುವುದು. ಹದಿನಾಲ್ಕು ಎಳೆ ಮತ್ತು ಹಿಡಿಯ ಹತ್ತಿಿಯ ಹಾರವನ್ನು ಅನಂತನ ಎಳೆ ಎಂದು ಕಳಶಕ್ಕೆೆ ಅರ್ಪಿಸಲಾಗುತ್ತದೆ. ಇದೇ ವೇಳೆ ಗೆಜ್ಜೆೆ ವಸ್ತ್ರ, ಪತ್ರೆೆಗಳು, ಧೂಪ ಮತ್ತು ದೀಪ, ಹೂವು, ಗಂಧ, ಅಕ್ಷತೆಗಳನ್ನು ಕಳಶಕ್ಕೆೆ ಪೂಜಿಸುತ್ತಾಾರೆ.

ಈ ದಿನ ಅನಂತನ ಗಂಟು ಎಂದು ವಿಶೇಷವಾದ ಚುಕ್ಕಿಿ ರಂಗೋಲಿಯನ್ನೂ ಒಂದು ತಟ್ಟೆೆಯ ಮೇಲೆ, ಚಂದನದಲ್ಲಿ ಬರೆದು ಅದರಲ್ಲಿ ತುಪ್ಪದ ದೀಪವನ್ನಿಿಟ್ಟು ಮಂಗಳಾರತಿ ಮಾಡಲಾಗುತ್ತದೆ. ಪೂಜಾ ವಿಧಿವಿಧಾನಗಳೆಲ್ಲ ಮುಗಿದ ನಂತರ ಅಡುಗೆಗಳನ್ನು ನೈವೇದ್ಯ ಮಾಡಿ ಮಂಗಳಾರತಿ ಮಾಡಲಾಗುತ್ತದೆ.

ಕೊನೆಯಲ್ಲಿ ತೆಂಗಿನಕಾಯಿ ಮತ್ತು ಹಣ್ಣುಗಳನ್ನು ಇಟ್ಟು ಉಪಾಯನದಾನವನ್ನು ಋತ್ವಿಿಕರಿಗೆ ನೀಡಲಾಗುವುದು. ಈ ಸಂದರ್ಭದಲ್ಲಿ ವ್ರತ ಮಾಡಿದ ದಂಪತಿಗಳು ಧರಿಸಿದ್ದ ಹಳೆಯ ದೋರ ಅಥವಾ ದಾರಗಳನ್ನು ತೆಗೆದು ವ್ರತ ಮಾಡಿಸಿದ ಋತ್ವಿಿಕರಿಂದ, ಇಟ್ಟು ಪೂಜಿಸಿದ ಹೊಸ ದಾರವನ್ನು ದಂಪತಿಗಳಿಬ್ಬರೂ ಕಟ್ಟಿಿಸಿಕೊಳ್ಳುತ್ತಾಾರೆ. ಈ ದಿನ ಹೋಳಿಗೆ ಕಡುಬುಗಳು ಅನಂತನಿಗೆ ವಿಶೇಷ ನೈವೇದ್ಯ.

ಸಂಜೆ ಪುನಃಪೂಜೆ ಮಾಡಿ ಆವಾಹನೆಯಾದ ಅನಂತ ಪದ್ಮನಾಭಸ್ವಾಾಮಿಯನ್ನು ಮಂಗಳಾರತಿ ಮಾಡಿ ವ್ರತದ ಮಹಿಮೆಯ ಕಥೆಯನ್ನು ಓದಿ ವಿಸರ್ಜನೆ ಮಾಡಲಾಗುತ್ತದೆ. ಬಳಿಕ ಧರಿಸಿದ ದಾರವನ್ನು ತೆಗೆಯಬಹುದು. ಕೆಲವೆಡೆ ಮರುದಿನ ಅಂದರೆ ಹುಣ್ಣಿಿಮೆಯ ದಿನದಂದು ಸತ್ಯನಾರಾಯಣ ಪೂಜೆ ಮಾಡಿ ವಿಸರ್ಜಿಸುವ ಪರಿಪಾಠ ಇದೆ.

ಅನಂತನಿಗೆ ಗೋಧಿ ಇಷ್ಟ

ಈ ವ್ರತದಲ್ಲಿ ಗೋಧಿಯ ಖಾದ್ಯಗಳನ್ನು ಅನಂತನಿಗೆ ನೈವೇದ್ಯ ಮಾಡುವುದು ವಿಶೇಷ. ಗೋಧಿಯ ಹುಗ್ಗಿಿ, ಪಾಯಸ ಮತ್ತು ಇನ್ನಿಿತರ ಅಡುಗೆಗಳನ್ನುಮಾಡಿ ಪೂಜಿಸುತ್ತಾಾರೆ. ವ್ರತ ಪೂರ್ಣವಾದ ನಂತರ ಉಪಾಯನ ದಾನವನ್ನು ಗೋಧಿಯ ಮೂಲಕವೇ ದಾನ ಕೊಡಲಾಗುವುದು. 14 ವರ್ಷಗಳ ಕಾಲ ವ್ರತ ಮಾಡಿದ ನಂತರ ಉದ್ಯಾಾಪನೆಯನ್ನು ಮಾಡಲಾಗುತ್ತದೆ. ಈ ವೇಳೆ ಹೋಮ ಹವನಗಳನ್ನು ನಡೆಸಿ, ಋತ್ವಿಿಕರಿಂದ ನಾಲ್ಕು ಜಾವನ ಪೂಜೆ ನಡೆಸಿ, ದಂಪತಿ ಪೂಜೆ, ಕನ್ನಿಿಕಾ ಪೂಜೆಗಳನ್ನು ನೆರವೇರಿಸಲಾಗುವುದು. ಮುತ್ತೈದೆಯರಿಗೆ ಮೊರದ ಬಾಗಿನವನ್ನು ನೀಡುವ ಪದ್ಧತಿ ಇದೆ.

Leave a Reply

Your email address will not be published. Required fields are marked *

error: Content is protected !!