Friday, 19th August 2022

ಮಾನನಷ್ಟ ಮೊಕದ್ದಮೆ: ಜುಲೈ 4 ರಂದು ’ಕ್ವೀನ್‌’ ವಿಚಾರಣೆ

ಮುಂಬೈ: ಗೀತೆ ರಚನೆಕಾರ ಜಾವೇದ್ ಅಖ್ತರ್ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ಜುಲೈ 4 ರಂದು ನಗರದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ವಿಚಾರಣೆಗೆ ನಟಿ ಕಂಗನಾ ರಣಾವತ್ ಹಾಜರಾಗ ಲಿದ್ದಾರೆ.

 ಕಂಗನಾ ರಣಾವತ್ ಪರ ವಕೀಲರು ಆಕೆಯ ಹಾಜರಾತಿ ವಿನಾಯಿತಿಯನ್ನು ಬಯಸಿದರು. ತದನಂತರ ಮುಂದಿನ ವಿಚಾರಣೆ ನಡೆಯುವ ಜುಲೈ 4 ರಂದು ಆರೋಪಿ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ರಣಾವತ್ ಪರ ಕಾನೂನು ತಂಡಕ್ಕೆ ನಿರ್ದೇಶನ ನೀಡಿತು.

ಮುಂದಿನ ವಿಚಾರಣೆಯವರೆಗೂ ರಣಾವತ್ ವಿರುದ್ಧ ವಾರೆಂಟ್ ಹೊರಡಿಸುವ ಕುರಿತು ಸಲ್ಲಿಸಲಾದ ಅರ್ಜಿ ವಿಚಾರಣೆಯನ್ನು ಕೋರ್ಟ್ ಕಾಯ್ದಿರಿಸಿದೆ. ಟಿವಿ ಸಂದರ್ಶನವೊಂದರಲ್ಲಿ ತಮ್ಮ ವರ್ಚಸ್ಸಿಗೆ ಧಕ್ಕೆ ತರುವಂತಹ ಮಾನಹಾನಿಕಾರ ಹೇಳಿಕೆಗಳನ್ನು ರಣಾವತ್ ನೀಡಿದ್ದಾರೆ ಎಂದು ಆರೋಪಿಸಿ ಅಖ್ತರ್ ಕೋರ್ಟ್ ನಲ್ಲಿ ದೂರು ದಾಖಲಿಸಿದ್ದರು.