Tuesday, 27th October 2020

ಡ್ರಗ್ಗಿಣಿಯರಿಗೆ ಇಂದಿನಿಂದ ಜೈಲೂಟ ಫಿಕ್ಸ್: ಸಾಮಾನ್ಯ ಖೈದಿಗಳ ಸೆಲ್’ಗೆ ಶಿಫ್ಟ್

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾಣಿಯವರಿಗೆ ಜಾಮೀನು ನಿರಾಕರಣೆಯಾದ ಹಿನ್ನೆಲೆಯಲ್ಲಿ ಜೈಲೂಟವೇ ಫಿಕ್ಸ್ ಆಗಿದೆ. ಸಾಮಾನ್ಯ ಖೈದಿಗಳ ಸೆಲ್ ಗೆ ಅವರನ್ನು ಶಿಫ್ಟ್ ಮಾಡಲಾಗಿದೆ.

ರಾಗಿಣಿ ಹಾಗೂ ಸಂಜನಾ ಅವರಿಗೆ ಎನ್.ಡಿ.ಪಿ.ಎಸ್ ಕೋರ್ಟ್’ನಲ್ಲಿ ಜಾಮೀನು ಸಿಗದ ಹಿನ್ನೆಲೆಯಲ್ಲಿ ನಟಿಯರ ಜೈಲಿನ ಕ್ವಾರಂಟೈನ್ ಅವಧಿ ಮುಗಿದಿದೆ. ಹೀಗಾಗಿ, ಅವರನ್ನು ಸಾಮಾನ್ಯ ಖೈದಿಗಳ ಸೆಲ್ ಗೆ ಶಿಫ್ಟ್ ಮಾಡಲಾಗಿದೆ. ಇಂದಿನಿಂದ ನಟಿಯ ರಿಬ್ಬರೂ ಸಾಮಾನ್ಯ ಖೈದಿಗಳಾಗಿದ್ದು, ಇತರ ಖೈದಿಗಳ ಜೊತೆ ಸರತಿ ಸಾಲಿನಲ್ಲಿ ನಿಂತು ಊಟ, ಉಪಹಾರವನ್ನು ತೆಗೆದುಕೊಳ್ಳ ಬೇಕಿದೆ.

ಕಳೆದ 14 ದಿನಗಳಿಂದ ನಟಿಯರಿಬ್ಬರೂ ಪರಪ್ಪನ ಅಗ್ರಹಾರ ಜೈಲಿನ ಕ್ವಾರಂಟೈನ್ ನಲ್ಲಿದ್ದರು. ಹೀಗಾಗಿ ಪ್ರತಿದಿನ ನಟಿಯರಿಗೆ ಊಪಹಾರ, ಊಟ, ಬಟ್ಟೆ ಎಲ್ಲವೂ ಪೂರೈಕೆಯಾಗುತ್ತಿತ್ತು. ಆದರೆ ಇಂದಿನಿಂದ ಸಾಮಾನ್ಯ ಖೈದಿಗಳಂತೆ ಕಾಲ ಕಳೆಯಬೇಕಾದ ಸ್ಥಿತಿ ಬಂದಿದೆ.

Leave a Reply

Your email address will not be published. Required fields are marked *