Wednesday, 30th September 2020

ರಾಹುಲ್, ಪಾಂಡೆ ಅಬ್ಬರ: ಕರ್ನಾಟಕಕ್ಕೆ

ಸೂರತ್:
ಕೆ.ಎಲ್ ರಾಹುಲ್ (ಔಟಾಗದೆ 69 ರನ್) ಹಾಗೂ ನಾಯಕ ಮನೀಷ್ ಪಾಂಡೆ (ಔಟಾಗದೆ 52 ರನ್) ಅವರ ಸ್ಫೋೋಟಕ ಅರ್ಧ ಶತಕಗಳ ಬಲದಿಂದ ಕರ್ನಾಟಕ ತಂಡ ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿ ಸೂಪರ್ ಲೀಗ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

ಮೊದಲು ಬ್ಯಾಾಟಿಂಗ್ ಮಾಡಿದ ತಮಿಳುನಾಡು ತಂಡ ನಿಗದಿತ 20 ಗಳಿಗೆ ಏಳು ವಿಕೆಟ್ ನಷ್ಟಕ್ಕೆೆ 158 ರನ್ ಗಳಿಸಿತು. ಬಳಿಕ ಗುರಿ ಹಿಂಬಾಲಿಸಿದ ಕರ್ನಾಟಕ 16.2 ಓವರ್ ಗಳಿಗೆ ಒಂದು ವಿಕೆಟ್ ನಷ್ಟಕ್ಕೆೆ 161 ರನ್ ಗಳಿಸಿ ಜಯ ಗಳಿಸಿತು.

ಗುರಿ ಹಿಂಬಾಲಿಸಿದ ಕರ್ನಾಟಕ ಪರ ಅಮೋಘ ಬ್ಯಾಾಟಿಂಗ್ ಪ್ರದರ್ಶನ ತೋರಿದ ರಾಹುಲ್ 46 ಎಸೆತಗಳಿಗೆ ಎರಡು ಸಿಕ್ಸರ್ ಹಾಗೂ ಆರು ಬೌಂಡರಿಗಳೊಂದಿಗೆ 69 ರನ್ ಹಾಗೂ ನಾಯಕ ಮನೀಷ್ ಪಾಂಡೆ 33 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ಬೌಂಡರಿಯೊಂದಿಗೆ 52 ರನ್ ಗಳಿಸಿದರು. ದೇವದತ್ತ ಪಡಿಕ್ಕಲ್ 36 ರನ್ ಗಳಿಸಿದ್ದರು.

ಇದಕ್ಕೂ ಮುನ್ನ ಮೊದಲು ಬ್ಯಾಾಟಿಂಗ್ ಮಾಡಿದ್ದ ತಮಿಳುನಾಡು ತಂಡ ಮೊದಲನೇ ವಿಕೆಟ್ ಬೇಗ ಕಳೆದುಕೊಂಡಿತ್ತು. ಆರಂಭಿಕ ಬಾಬಾ ಅಪರಿಜಿತ್ ಕೇವಲ 10 ರನ್ ಗಳಿಸಿ ರೋನಿತ್ ಮೋರೆಗೆ ವಿಕೆಟ್ ಒಪ್ಪಿಿಸಿದರು. ಹರಿ ನಿಶಾಂತ್ 15 ರನ್ ಗಳಿಗೆ ರನೌಟ್ ಆದರು.

ಮೂರನೇ ವಿಕೆಟ್ ಗೆ ಅತ್ಯುತ್ತಮ ಬ್ಯಾಾಟಿಂಗ್ ಮಾಡಿದ ದಿನೇಶ್ ಕಾರ್ತಿಕ್ ಹಾಗೂ ವಾಷಿಂಗ್ಟನ್ ಸುಂದರ್ ತಂಡದ ಮೊತ್ತವನ್ನು 100ರ ಗಡಿ ದಾಟಿಸಿತು.
ದಿನೇಶ್ ಕಾರ್ತಿಕ್ 29 ಎಸೆತಗಳಲ್ಲಿ 43 ರನ್ ಹಾಗೂ ವಾಷಿಂಗ್ಟನ್ ಸುಂದರ್ 25 ಎಸೆತಗಳಲ್ಲಿ 39 ರನ್ ಗಳಿಸಿದರು. ವಿಜಯ್ ಶಂಕರ್ 25 ರನ್ ಗಳಿಸಿ ತಂಡಕ್ಕೆೆ ಕಾಣಿಕೆ ನೀಡಿದರು. ಕರ್ನಾಟಕ ಪರ ವಿ.ಕೌಶಿಕ್ ಹಾಗೂ ರೋನಿತ್ ಮೋರೆ ತಲಾ ಎರಡು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್
ತಮಿಳುನಾಡು: 20 ಓವರ್ ಗಳಿಗೆ 158/7 (ದಿನೇಶ್ ಕಾರ್ತಿಕ್ 43, ವಾಷಿಂಗ್ಟನ್ 39, ವಿಜಯ್ ಶಂಕರ್ 25; ವಿ.ಕೌಶಿಕ್ 23 ಕ್ಕೆೆ 2, ರೋನಿತ್ ಮೋರೆ 25 ಕ್ಕೆೆ 2, ಜಗದೀಶ್ ಸುಚಿತ್ 25 ಕ್ಕೆೆ 1, ಶ್ರೇಯಸ್ ಗೋಪಾಲ್ 32 ಕ್ಕೆೆ 1)
ಕರ್ನಾಟಕ: 16.2 ಓವರ್ ಗಳಿಗೆ 161/1 (ಕೆ.ಎಲ್ ರಾಹುಲ್ ಔಟಾಗದೆ 69, ಮನೀಷ್ ಪಾಂಡೆ ಔಟಾಗದೆ 52, ದೇವದತ್ತ ಪಡಿಕ್ಕಲ್ 36; ಮುರುಗನ್ ಅಶ್ವಿಿನ್ 27 ಕ್ಕೆೆ 1)
===

Leave a Reply

Your email address will not be published. Required fields are marked *