Thursday, 11th August 2022

ಚಿತ್ರದುರ್ಗದಲ್ಲಿ ಭಾರೀ ಮಳೆ: ವಾಹನ ಸಂಚಾರಕ್ಕೆ ಪರದಾಟ

ಚಿತ್ರದುರ್ಗ: ಜಿಲ್ಲೆಯಲ್ಲಿ ಶುಕ್ರವಾರ ಗುಡುಗು ಸಹಿತ ಮಳೆ ಆರಂಭವಾಗಿದ್ದು, ಕೃಷಿ ಚಟುವಟಿಕೆಗೆ ತೊಂದರೆಯುಂಟಾಗಿದೆ.

ಚಿತ್ರದುರ್ಗದ ಪ್ರಶಾಂತ ನಗರ, ಗುಮಾಸ್ತರ ಕಾಲೊನಿ ಸೇರಿ ಹಲವೆಡೆ ತಗ್ಗು ಪ್ರದೇಶಕ್ಕೆ ನೀರು ನುಗ್ಗಿದೆ. ಚರಂಡಿಗಳು ತುಂಬಿ ರಸ್ತೆ ಮೇಲಿ ನೀರು ಹರಿಯುತ್ತಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ.

ಗುರುವಾರ ಸಂಜೆ ಸುರಿದಿದ್ದ ಮಳೆ ರಾತ್ರಿ ಬಿಡುವು ಕೊಟ್ಟಿತ್ತು. ನಸುಕಿನಲ್ಲಿ ಶುರುವಾದ ಮಳೆ ಬಿರುಸು ಪಡೆಯಿತು. ಚರಂಡಿಗಳು ತುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶದಲ್ಲಿ ನೀರು ನಿಂತಿದೆ.

ತಾಲ್ಲೂಕಿನ ಭರಮಸಾಗರ, ಸಿರಿಗೆರೆ, ಭೀಮಸಮುದ್ರ, ಹಿರಿಯೂರು ತಾಲ್ಲೂಕಿನ ಧರ್ಮಪುರ, ಚಳ್ಳಕೆರೆ ತಾಲ್ಲೂಕಿನ ನಾಯಕನ ಹಟ್ಟಿ, ಪರಶುರಾಂಪುರ, ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರು ಸೇರಿ ಜಿಲ್ಲೆಯ ಹಲವೆಡೆ ಉತ್ತಮ ಮಳೆ ಬಿದ್ದಿದೆ.