Monday, 9th December 2019

ರೈತರ ಬೃಹತ್ ಪ್ರತಿಭಟನೆ; ವಿಧಾನಸೌಧ ಮುತ್ತಿಗೆ ಯತ್ನಕ್ಕೆ ತಡೆ

ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

ರಾಜ್ಯದ ಪ್ರವಾಹ ಸಂತ್ರಸ್ತ ರೈತರಿಗೆ ಸಮಗ್ರ ಪರಿಹಾರ ನೀಡುವುದು ಸೇರಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ನಗರದಲ್ಲಿ ಗುರುವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ರಾಜ್ಯಾಾಧ್ಯಕ್ಷ ಕೋಡಿಹಳ್ಳಿಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆಯು ಕ್ರಾಾಂತಿವೀರ ಸಂಗೊಳ್ಳಿಿ ರಾಯಣ್ಣ ರೈಲು ನಿಲ್ದಾಾಣದಿಂದ ವಿಧಾನಸೌಧದವರೆಗೆ ಹೊರಟಾಗ ಪೊಲೀಸರು ಮಾರ್ಗ ಮಧ್ಯೆೆ ತಡೆದರು. ರಾಜ್ಯ ವಿವಿಧ ಭಾಗಗಳಿಂದ ಬಂದಿದ್ದ ನೂರಾರು ರೈತರು ನೆರೆ ಬರದಿಂದ ನಷ್ಟ ಅನುಭವಿಸಿದ ರೈತರ ಸಂಕಷ್ಟ ನಿವಾರಿಸಲು ರಾಜ್ಯ ಹಾಗೂ ಕೇಂದ್ರ ಸರಕಾರದ ವಿಳಂಬ ಧೋರಣೆ ಅನುಸರಿಸುತ್ತಿಿದೆ ಎಂದು ಆಕ್ರೋೋಶ ವ್ಯಕ್ತಪಡಿಸಿದರು.

ಕೂಡಲೇ ನೆರವಿಗೆ ಧಾವಿಸಿ
ರಾಜ್ಯ ರೈತರು ಬರಗಾಲ, ಪ್ರವಾಹದಿಂದ ತುಂಬಾ ಸಂಕಷ್ಟಕ್ಕೆೆ ಒಳಗಾಗಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಎದುರಾದ ಪ್ರವಾಹದಿಂದ 4394 ಗ್ರಾಾಮಗಳು ಮುಳುಗಡೆಯಾಗಿವೆ. 14,81,472 ಎಕರೆ ಪ್ರದೇಶದಲ್ಲಿ ಬೆಳೆದ ವಿವಿಧ ಬೆಳೆಗಳು ಜಲಾವೃತವಾಗಿವೆ. ಇದರಿಂದ ಸಾಕಷ್ಟು ರೈತರು ತೊಂದರೆ ಅನುಭವಿಸುತ್ತಿಿದ್ದು, ಕೂಡಲೇ ನೆರವಿಗೆ ಧಾವಿಸುವಂತೆ ಆಗ್ರಹಿಸಿದರು.

ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ 10 ಲಕ್ಷ ರು. ಮೌಲ್ಯದ ಗುಣಮಟ್ಟದ ಮನೆ ನಿರ್ಮಿಸಿಕೊಡಬೇಕು. ಪ್ರಾಾಣ ಕಳೆದುಕೊಂಡ ವ್ಯಕ್ತಿಿಗಳ ಕುಟುಂಬಕ್ಕೆೆ 25 ಲಕ್ಷ ರು. ಪರಿಹಾರ ನೀಡಬೇಕು. ಪ್ರವಾಹದಿಂದ ಜಲಾವೃತವಾದ ಬೆಳೆಗಳಿಗೆ ಸಮರ್ಪಕ ಪರಿಹಾರ ನೀಡಬೇಕು. ಪ್ರತಿ ವರ್ಷ ಪ್ರವಾಹಕ್ಕೆೆ ಒಳಗಾಗುವ ಹಳ್ಳಿಿಗಳನ್ನು ಸ್ಥಳಾಂತರಗೊಳಿಸಿ ಪುನರ್ವಸತಿ ಕಲ್ಪಿಿಸಬೇಕು ಎಂದು ಆಗ್ರಹಿಸಿದರು.

ಜಲಾವೃತದಿಂದ ಹಾಳಾಗಿರುವ ಕೃಷಿ ಭೂಮಿಗೆ ಪರ್ಯಾಯ ಭೂಮಿ ನೀಡಬೇಕು. ರಾಜ್ಯ ನಿರಂತರ ಬರಗಾಲಕ್ಕೆೆ ಗುರಿಯಾಗುತ್ತಿಿದ್ದು, ಒಂದು ಎಕರೆಗೆ 25 ಸಾವಿರ ಬರ ಪರಿಹಾರ ನೀಡಬೇಕು. ರೈತರ ಕೃಷಿ ಉತ್ಪನ್ನಗಳಿಗೆ ನ್ಯಾಾಯಯುತ ಬೆಲೆ ಒದಗಿಸಬೇಕು ಎಂದು ಸರಕಾರಗಳಿಗೆ ಒತ್ತಾಾಯಿಸಿದರು.

Leave a Reply

Your email address will not be published. Required fields are marked *