Monday, 13th July 2020

ರಾಜ್‍ಮೊಮ್ಮಗಳ ಮೊದಲ ಸಿನಿಮಾ ನಿನ್ನ ಸನಿಹಕೆ !

ವರನಟ ಡಾ.ರಾಜ್‍ಕುಮಾರ್ ಮೊಮ್ಮಗಳು ಧನ್ಯಾರಾಮ್‍ಕುಮಾರ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ವೈಟ್ ಅಂಡ್ ಗ್ರೇ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ `ನಿನ್ನ ಸನಿಹಕೆ’ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಚಿತ್ರದ ಬ್ಯಾನರ್ ಹಾಗೂ ಟೈಟಲ್ ಬಿಡುಗಡೆಯಾಗಿದ್ದು, ಟೈಟಲ್ ಮನಸೆಳೆಯುತ್ತಿದೆ. ಇದೇ ತಿಂಗಳ 19ರಿಂದ ಚಿತ್ರೀಕರಣ ಆರಂಭವಾಗಲಿದೆ.

ನಿನ್ನ ಸನಿಹಕೆ’, ಚಿತ್ರದ ಟೈಟಲ್ ಹೇಳುವಂತೆ ಇದೊಂದು ನವಿರಾದ ಪ್ರೇಮಕಥೆ ಹೊಂದಿರುವ ಸಿನಿಮಾ. ಲವ್ ಸ್ಟೋರಿ ಜತೆಗೆ ಕಾಮಿಡಿ, ಆಕ್ಷನ್‍ಗೂ ಒತ್ತು ನೀಡಲಾಗಿದೆಯಂತೆ. ಈ ಹಿಂದೆ `ಸಿಲಿಕಾನ್ ಸಿಟಿ’ ಚಿತ್ರದಲ್ಲಿ ನಟಿಸಿದ್ದ ನಟ ಸೂರಜ್‍ಗೌಡ ಈ ಕಥೆ ಬರೆದಿದ್ದಾರೆ. ಸೂರಜ್‍ಗೆ ಈ ಕಥೆ ಎರಡು ವರ್ಷಗಳ ಕನಸಾಗಿತ್ತಂತೆ. ಅಂತೂ ಅವರು ಅಂದುಕೊಂಡಂತೆ ತಾವು ರಚಿಸಿದ ಕಥೆಯೊಂದು, ಸಿನಿಮಾ ಮೂಲಕ ತೆರೆಗೆ ಬರಲು ಅಣಿಯಾಗುತ್ತಿದೆ. ನಿರ್ದೇಶಕ ಸುಮನ್ ಜಾದೂಗರ್, ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರ ಸಂಗೀತ ಈ ಚಿತ್ರಕ್ಕಿರುವುದು ಮತ್ತೊಂದು ಪ್ಲಸ್‍ಪಾಯಿಂಟ್ ಆಗಿದೆ. ಸೂರಜ್ ಗೌಡ ಅವರ ಸ್ನೇಹಿತರಾದ ಅಕ್ಷಯ್ ರಾಜಶೇಖರ್ ಹಾಗೂ ರಂಗನಾಥ್ ಕುಡ್ಲಿ ಚಿತ್ರ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಸುಧಾ ಬೆಳವಾಡಿ, ಗಿರೀಶ್ ಶಿವಣ್ಣ, ಕರಿಸುಬ್ಬು, ಮಂಜುನಾಥ್ ಹೆಗ್ಡೆ, ಚಿತ್ಕಲಾ ಬಿರಾದರ್ ಮತ್ತಿತರರು ಚಿತ್ರದ ತಾರಾಗಣದಲ್ಲಿದ್ದಾರೆ.

Leave a Reply

Your email address will not be published. Required fields are marked *