ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಬರುವ ನೌಕರರ ರಾಜ್ಯ ವಿಮಾ ನಿಗಮವು ಡೀನ್ ಡಾ.ಜೀತೇಂದ್ರ ಕುಮಾರ್ ಅವರನ್ನು ವರ್ಗಾವಣೆ ಮಾಡಿ, ಅವರ ಸ್ಥಾನಕ್ಕೆ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ನಿರ್ದೇಶಕಿ, ಪ್ರಾಧ್ಯಾಪಕಿ ಡಾ.ರೇಣುಕಾ ರಾಮಯ್ಯ ಅವರನ್ನು ಪ್ರಭಾರಿ ಡೀನ್ ಆಗಿ ನೇಮಿಸಲಾಗಿದೆ.
ಆಸ್ಪತ್ರೆಯ ನಿರ್ಲಕ್ಷ್ಯದಿಂದಾಗಿ, ಜುಲೈ 2020ರಲ್ಲಿ ನಿಧನರಾಗಿದ್ದ ಇಬ್ಬರು COVID-19 ರೋಗಿಗಳ ಶವಗಳನ್ನು ವಿಲೇವಾರಿ ಮಾಡದೆ ಶವಗಾರದಲ್ಲಿಯೇ ಬಿಡಲಾಗಿದೆ ಎಂದು ವರದಿಯಾಗಿತ್ತು.