Monday, 3rd October 2022

ಹಾಸ್ಯನಟ ರಾಜು ಶ್ರೀವಾಸ್ತವ್‌ ಆರೋಗ್ಯದಲ್ಲಿ ಸುಧಾರಣೆ

ನವದೆಹಲಿ: ಹಾಸ್ಯನಟ ರಾಜು ಶ್ರೀವಾಸ್ತವ್‌ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದೆ.

ಬುಧವಾರ ಜಿಮ್‌ ನಲ್ಲಿ ವರ್ಕೌಟ್‌ ಮಾಡುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿತ್ತು. ಹೀಗಾಗಿ ಅವರು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾ ಗಿದ್ದರು. ಆದರೆ ಅವರ ಆರೋಗ್ಯದ ಸ್ಥಿತಿ ಚಿಂತಾಜನಕವಾಗಿತ್ತು.

ಇದೀಗ ವೈದ್ಯರ ಮಾಹಿತಿ ಪ್ರಕಾರ ರಾಜು ಅವರ ಆರೋಗ್ಯ ಸುಧಾರಿಸಿದೆ.

ರಾಜು ಶ್ರೀವಾಸ್ತವ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಹೃದಯಾಘಾತದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ಊಹಾಪೋಹಗಳ ನಡುವೆ, ಹಾಸ್ಯನಟನ ಅತ್ತಿಗೆ, ‘ರಾಜು ಶ್ರೀವಾಸ್ತವ ಅವರ ಆರೋಗ್ಯವು ನಿನ್ನೆಗೆ ಹೋಲಿಸಿದರೆ ಇಂದು ಸ್ವಲ್ಪ ಸುಧಾರಿಸಿದೆ.

ಹಿಂದಿನದಕ್ಕೆ ಹೋಲಿಸಿದರೆ ಇಂದು, ರಾಜು ಭಾಯ್ ಅವರ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದೆ. ಇದೀಗ ಅವರ ಅಭಿಮಾನಿಗಳು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.