Sunday, 31st May 2020

ರಾಜ್ಯಹಿತಕ್ಕೆ ಮುಳುವಾಗದಿರಲಿ ಅತೃಪ್ತರ ಅಧಿಕಾರದಾಹ

ರಾಂ ಎಲ್ಲಂಗಳ (ಚರ್ಚೆ)
ಅತೃಪ್ತ ಶಾಸಕರ ರಾಜೀನಾಮೆಯಿಂದಾಗಿ ರಾಜ್ಯ ಮೈತ್ರಿಿ ಸರಕಾರ ಪತನಗೊಂಡು ಕರಾಳ ಅಧ್ಯಾಾಯವೊಂದು ಕೊನೆಗೊಂಡ ಹೊತ್ತು. ಪ್ರಹಸನದಿಂದ ಬೇಸತ್ತ ರಾಜ್ಯ ಜನತೆ ಹೊಸ ಸರಕಾರವೊಂದನ್ನು ಎದುರು ನೋಡುತ್ತಿಿತ್ತು. ಬಿಜೆಪಿ ವರಿಷ್ಠ ಯಡಿಯೂರಪ್ಪನವರು ಸರಕಾರ ರಚನೆಗೆ ಮುಂದಾದರು. ಮೋದಿ ಮಾದರಿಯಲ್ಲಿ ರಾಜ್ಯವನ್ನು ಮುನ್ನಡೆಸುವ ಹುಮ್ಮಸ್ಸಿಿನಿಂದ ಹೆಜ್ಜೆೆಯಿಟ್ಟರು. ಆದರೆ ರಾಜ್ಯಜನತೆಯ ದುರದೃಷ್ಟವೋ ಏನೋ. ರಾಜ್ಯದಲ್ಲಿ ಕಂಡೂ ಕೇಳರಿಯದ ಮಹಾಮಳೆ ಸುರಿಯಿತು. ಅಪಾರ ಹಾನಿಯುಂಟು ಮಾಡಿತು. ಅತ್ತ ಆದ್ಯತೆ ಕೊಡಬೇಕಾದ ಅನಿವಾರ್ಯತೆಯಿಂದಾಗಿ ಸಚಿವ ಸಂಪುಟ ವಿಸ್ತರಣೆ ವಿಳಂಬವಾಯಿತು. 25 ದಿನಗಳ ಬಳಿಕ ವಿಸ್ತರಣೆಯೇನೋ ಆಯಿತು.

ಆದರೆ, ಅಂದುಕೊಂಡಷ್ಟು ಸುಲಭವಲ್ಲ ಇಂದು ಸಂಪುಟ ವಿಸ್ತರಣೆ. ಜಾತಿ-ಸಮುದಾಯಗಳಿಗೆ ಪ್ರಾಾತಿನಿಧ್ಯ, ಪ್ರದೇಶವಾರು ಮತ್ತು ಜಿಲ್ಲಾಾವಾರು ಪ್ರಾಾತಿನಿಧ್ಯ, ಅನುಭವ-ಹಿರಿತನಗಳಿಗೆ ಅಗ್ರಮಾನ್ಯ, ಹೊಸಬರಿಗೆ ಅವಕಾಶ, ಜತೆಗೆ ದುಂಬಾಲು ಬೀಳುವ ಸಚಿವ ಸ್ಥಾಾನಾಕಾಂಕ್ಷಿಗಳು-ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡು ಅಳೆದು ಸುರಿದು ಸಂಪುಟ ರಚಿಸುವುದು ಸುಲಭದ ಮಾತಲ್ಲ. ಹಾಗಾಗಿ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರಕಾರ ಅಸ್ತಿಿತ್ವಕ್ಕೆೆ ಬಂದು 25 ದಿನಗಳ ಬಳಿಕ ಸಂಪುಟ ವಿಸ್ತರಣೆಯಾಯಿತು. ಸದ್ಯಕ್ಕೆೆ 17 ಸಚಿವರನ್ನೊೊಳಗೊಂಡ ಅರ್ಧ ಸಂಪುಟವಷ್ಟೇ ರಚನೆಯಾಯಿತು. ಆದರೇನು ಮಾಡೋಣ? ಶಾಸಕರಲ್ಲಿ ಅತೃಪ್ತಿಿ ಹೆಡೆಯೆತ್ತಿಿತು. ಆಕ್ರೋೋಶ ಭುಗಿಲೆದ್ದಿತು. ಅನೇಕ ಶಾಸಕರಿಗೆ ಅಸಮಾಧಾನವಾಯಿತು. ಐದು ಬಾರಿ ಗೆದ್ದ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಸಚಿವ ಸ್ಥಾಾನ ಸಿಗಲಿಲ್ಲ. ಅವರೇನೋ ಪಕ್ಷದ ತೀರ್ಮಾನವನ್ನು ಬಹಿರಂಗವಾಗಿ ಪ್ರಶ್ನಿಿಸುವುದಿಲ್ಲ ಅಂತ ತುಸು ತಾಳ್ಮೆೆಯಿಂದ ಪ್ರತಿಕ್ರಿಿಯಿಸಿದರು. ಆರು ಬಾರಿ ಗೆದ್ದ ಸುಳ್ಯ ಶಾಸಕ ಎಸ್. ಅಂಗಾರ ತಾವು ಅಧಿಕಾರಾಕಾಂಕ್ಷಿ ಅಲ್ಲ ಅಂತ ಹೇಳಿದರೂ ಆರು ಬಾರಿ ಗೆಲ್ಲಿಸಿದ ಕ್ಷೇತ್ರದ ಜನತೆಗೆ ಅನ್ಯಾಾಯವಾಗಿದೆ. ಕಾರ್ಯಕರ್ತರ ಅಭಿಪ್ರಾಾಯ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿಕೆ ನೀಡುವ ಮೂಲಕ ಅತೃಪ್ತಿಿಯ ಸುಳಿವು ನೀಡಿದ್ದಾಾರೆ. ಒಂದೊಮ್ಮೆೆ ಶಾಸಕರು ಸುಮ್ಮನಿದ್ದರೂ ಅವರ ಅನುಯಾಯಿಗಳು ಸುಮ್ಮನಿರಬೇಕಲ್ಲ!

ಅತೃಪ್ತಿಿ ಹೊಸದೇನೂ ಅಲ್ಲ. ಹಿಂದಣ ಮೈತ್ರಿಿ ಸರಕಾರ ಪತನಕ್ಕೂ ಅತೃಪ್ತಿಿಯೇ ಕಾರಣ. ಅತೃಪ್ತ ಶಾಸಕರನ್ನು ಅನರ್ಹಗೊಳಿಸಲಾಯಿತು. ಆದರೆ ಅತೃಪ್ತ ಆತ್ಮಗಳಿಗೆ ಮೋಕ್ಷ ಪ್ರಾಾಪ್ತಿಿಯಾಗುವ ಮುನ್ನವೇ ಮತ್ತೊೊಂದು ಸರಕಾರ ಅಸ್ತಿಿತ್ವಕ್ಕೆೆ ಬಂತು. ಪರಿಣಾಮವಾಗಿ ನೂತನ ಸರಕಾರಕ್ಕೆೆ ಆರಂಭದಲ್ಲೇ ಬಾಧೆ ತಟ್ಟಿಿತು. ಅದೇನೋ ಬಾಲ ಪೀಡೆ ವಕ್ಕರಿಸಿತು ಅಂತಾರಲ್ಲಾಾ ಹಾಗಾಯಿತು. ಅತೃಪ್ತಿಿ ಆರಂಭದಲ್ಲೇ ಅಲ್ಲಾಾಡಿಸತೊಡಗಿತು. ತಿಂಗಳೊಳಗೆ ಇನ್ನರ್ಧ ಸಂಪುಟ ಭರ್ತಿಗೊಳಿಸಲಾಗುವುದು. ಆಗ ಎಲ್ಲವೂ ಸರಿಯಾಗುವುದು ಎಂಬುದಾಗಿ ಯಡಿಯೂರಪ್ಪನವರು ಹೇಳಿಕೊಂಡರೂ ಎಲ್ಲರಿಗೂ ಅಧಿಕಾರ ಬೇಕು. ಆಕಾಂಕ್ಷಿಗಳ ಪಟ್ಟಿಿ ಸಾಕಷ್ಟು ಉದ್ದವಿರುವುದರಿಂದ ಅತೃಪ್ತಿಿ ಕೊನೆಗೊಳ್ಳುವ ಭರವಸೆಯಿದ್ದಂತಿಲ್ಲ. ಖಾತೆ ಹಂಚಿಕೆ ವೇಳೆಯೂ ಮತ್ತೆೆ ಅತೃಪ್ತಿಿ-ಅಸಮಾಧಾನ ಭುಗಿಲೆದ್ದರೆ ಅಚ್ಚರಿಯಿಲ್ಲ. ಇಷ್ಟರಲ್ಲೇ ಕೆಲವರು ತಮಗೆ ಇಂಥದ್ದೇ ಖಾತೆ ಬೇಕೆಂದು ಪಟ್ಟುಹಿಡಿದಿದ್ದಾಾರೆ. ಕೊನೆಗೆ ಅತೃಪ್ತರನ್ನು ನಿಗಮ-ಮಂಡಲಿಗಳ ಅಧ್ಯಕ್ಷ ಪೀಠದಲ್ಲಿ ಪ್ರತಿಷ್ಠಿಿಸಿದರೂ ಅಷ್ಟೇ. ಸರಕಾರಕ್ಕೆೆ ಅತೃಪ್ತ ಶಾಸಕರೇ ದೊಡ್ಡ ತಲೆನೋವು. ಮುಲಾಮು ಹಚ್ಚುವುದರಲ್ಲೇ ಸರಕಾರದ ಅವಧಿ ಮುಗಿದುಹೋಗುತ್ತದೆ. ಮಾನ್ಯ ಯಡಿಯೂರಪ್ಪನವರಿಗೋ ಉತ್ತಮ ಆಡಳಿತ ಕೊಡುವ ಬಯಕೆ ಇದೆ.

ಅತೃಪ್ತಿಿಯೆಂಬುದು ಉರಿವ ಬೆಂಕಿ. ತುಪ್ಪ ಸುರಿಯುವವರಿದ್ದರೆ ಅದು ಆರುವುದೇ ಇಲ್ಲ. ಪ್ರಸ್ತುತ ಸಚಿವ ಸ್ಥಾಾನ ವಂಚಿತರಲ್ಲೊೊಬ್ಬರು ರಮೇಶ್ ಜಾರಕಿಹೊಳಿ. ಇಷ್ಟರಲ್ಲಿಯೇ ಅವರ ನಿವಾಸದಲ್ಲಿ ಈ ಹಿಂದಣ ಸರಕಾರಾವಧಿಯ ಅನರ್ಹ ಶಾಸಕರ ಸಭೆ ಸೇರಿದೆ. ಚರ್ಚೆ ನಡೆದಿದೆ. ಅತೃಪ್ತ ಶಾಸಕರತ್ತ ನಿಗಾ ಇಡಲಾಗಿದೆ. ಅವರ ಮುಂದಿನ ನಡೆ ನಿಗೂಢವಾಗಿದೆ. ನೂತನ ಸರಕಾರ ಪಾಲಿಗೊಂದು ಬಾಧೆಯಾಗಲಿದೆ. ಜತೆಗೆ ನೀವು ಹೇಗೆ ಸರಕಾರ ನಡೆಸುತ್ತೀರಾ ನೋಡೋಣವೆಂದು ಈ ಹಿಂದೆ ಸವಾಲು ಹಾಕಿದವರೂ ಸುಮ್ಮನಿರುವರಲ್ಲ. ಅವರ ಬೆಂಬಲವಂತೂ ಅತೃಪ್ತರಿಗೆ ಇದ್ದೇ ಇರುತ್ತದೆ. ಯಾಕೆಂದರೆ ಸುಸ್ಥಿಿರ ಸರಕಾರ ಯಾರಿಗೆ ಬೇಕು? ಸರಕಾರವನ್ನು ಆಗಿಂದಾಗ್ಗೆೆ ಅಲ್ಲಾಾಡಿಸದಿದ್ದರೆ ಹೇಗೆ? ವಿಪಕ್ಷವಂತೂ ಕಾಲೆಳೆಯಲು ಕಾತರಿಸುತ್ತಿಿದೆ. ನಾನೊಮ್ಮೆೆ-ನೀನೊಮ್ಮೆೆಗೆ ಅವಕಾಶವಿರಬೇಕಲ್ಲ! ಇವೆಲ್ಲವನ್ನೂ ಗಮನಿಸಿದರೆ ಅತೃಪ್ತರ ಕಾಟದಿಂದಾಗಿ ನೂತನ ರಾಜ್ಯ ಸರಕಾರ ಅಸ್ಥಿಿರತೆಯ ಅಪಾಯವನ್ನು ಬೆನ್ನಿಿಗೆ ಕಟ್ಟಿಿಕೊಂಡೇ ಅಧಿಕಾರಕ್ಕೆೆ ಬಂದಂತಿದೆ. ಯಾವುದೇ ಕ್ಷಣದಲ್ಲಿ ಚುನಾವಣೆ ಎದುರಿಸಬೇಕಾಗಬಹುದು. ಯಾವುದಕ್ಕೂ ಸಿದ್ಧರಾಗಿರಿ ಅಂತ ಇತ್ತೀಚಿಗೆ ದಳಪತಿಗಳು ತಮ್ಮ ಕಾರ್ಯಕರ್ತರಿಗೆ ಎಚ್ಚರಿಸಿದ್ದು ನಿಜವಾಗಿ ಹೋದರೂ ಅಚ್ಚರಿಯಿಲ್ಲ.

ಸರಕಾರವೊಂದರ ಪತನಕ್ಕೆೆ ಬೇರೇನೂ ಬೇಕಿಲ್ಲ. ಸ್ವಪಕ್ಷ ಶಾಸಕರ ಅತೃಪ್ತಿಿಯೇ ಸಾಕು ಎಂಬುದಕ್ಕೆೆ ರಾಜ್ಯ ಮೈತ್ರಿಿ ಸರಕಾರ ಪತನವೇ ಸಾಕ್ಷಿ. ಮತ್ತೆೆ ಅತೃಪ್ತ ಶಾಸಕರಿಂದಾಗಿ ವಿಶ್ವಾಾಸಮತ ಯಾತನೆ ಪ್ರಸಂಗ ಬಂದೊದಗಿ, ರೆಸಾರ್ಟ್ ರಾಜಕೀಯಾದಿ ಪ್ರಹಸನ ನಡೆದು ನಿಕಟಪೂರ್ವ ಮೈತ್ರಿಿ ಸರಕಾರದ ಕೊನೆಯ ಅಧ್ಯಾಾಯ ಮರುಕಳಿಸಿ ರಾಜ್ಯ ಮತ್ತೊೊಂದು ಬಾರಿ ವಿಶ್ವದ ಗಮನ ಸೆಳೆಯುವ ಪರಿಸ್ಥಿಿತಿ ನಿರ್ಮಾಣವಾದರೂ ವಿಶೇಷವಿಲ್ಲ. ಸರಕಾರ ಕಟ್ಟುವ-ಬೀಳಿಸುವ ಕೆಲಸ ನಮ್ಮವರಿಗೆ ರೂಢಿಯಾಗಿರುವಾಗ ಇಲ್ಲಿ ಯಾವುದೂ ಅಸಂಭವವಲ್ಲ. ಚುನಾವಣಾ ಟಿಕೆಟ್ ಹಂಚಿಕೆ ಮೊದಲ್ಗೊೊಂಡು ಖಾತೆ ಹಂಚಿಕೆವರೆಗೆ ಪ್ರತಿಹಂತವೂ ಅತೃಪ್ತಿಿ ಹುಟ್ಟುಹಾಕುವ ಸಂದರ್ಭವಿಲ್ಲದೆ ಇಲ್ಲ. ಮೊನ್ನೆೆ 17 ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸುವುದರೊಳಗಾಗಿ ಅವರಿಗೆ ಓಡಾಡಲು ಹೊಸ ಕಾರು ಸಿದ್ಧವಾಗಿದೆ. ಸಚಿವ ಸ್ಥಾಾನಕ್ಕಾಾಗಿ ಜಾತಕ ಪಕ್ಷಿಯಂತೆ ಹಾತೊರೆದು ಸಿಗದೆ ನಿರಾಶರಾದ ಶಾಸಕರ ಹೊಟ್ಟೆೆ ಉರಿಸಲು ಇನ್ನೇನು ಬೇಕು? ಅತೃಪ್ತಿಿ ಹೊಗೆಯಾಡಲು ಇಷ್ಟು ಸಾಲದೆ? ಆದರೆ ಹೊಸ ಕಾರಿಗೆ ಹೂಡುವ ಕಾಸನ್ನು ನೆರೆ ಹಾವಳಿಯಿಂದ ಮನೆ-ಮಠ ಕಳೆದುಕೊಂಡ ಸಂತ್ರಸ್ತರ ಪರಿಹಾರ ಕ್ರಮಕ್ಕೆೆ ಸದ್ವಿಿನಿಯೋಗವಾಗಲಿ ಅಂತ ಸೌಜನ್ಯಕ್ಕಾಾದರೂ ಒಬ್ಬನೇ ಒಬ್ಬ ಶಾಸಕ ಹೇಳಿರುತ್ತಿಿದ್ದರೆ ಈ ರಾಜ್ಯ ಧನ್ಯವಾಗುತ್ತಿಿತ್ತು. ಬಿಡಿ. ಇನ್ನಿಿನ್ನು ಅಂಥದ್ದನ್ನೆೆಲ್ಲಾಾ ನಿರೀಕ್ಷಿಸಬಾರದು.

ಒಂದೆಡೆ ಬರಗಾಲ. ಮಗದೊಂದೆಡೆ ನೆರೆಹಾವಳಿ. ರಾಜ್ಯದ 22 ಜಿಲ್ಲೆೆಗಳು ಕಂಡೂ ಕೇಳರಿಯದ ಪ್ರವಾಹದಲ್ಲಿ ಸಿಲುಕಿ ತತ್ತರಿಸಿವೆ. ಅಪಾರ ಜೀವಹಾನಿ ಸಂಭವಿಸಿದೆ. ಅನೇಕರು ಮನೆ-ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾಾರೆ. ಅವರಿಗೆ ಬದುಕು ಕಟ್ಟಿಿಕೊಡುವ ಜರೂರು ಕೆಲಸ ಆಗಬೇಕಿದೆ. ಕೊನೆಗೂ ಸಚಿವ ಸಂಪುಟ ವಿಸ್ತರಣೆ ಆಯಿತಲ್ಲಾಾ ಅಂತ ಸಮಾಧಾನದ ನಿಟ್ಟುಸಿರು ಬಿಟ್ಟರೆ ಅಷ್ಟರಲ್ಲೇ ನೂತನ ಸರಕಾರಕ್ಕೆೆ ಅತೃಪ್ತಾಾತ್ಮರ ಬಾಧೆ ತಟ್ಟುವುದೇ! ಬೇರೂರುವ ಮುನ್ನವೇ ಸರಕಾರವನ್ನು ಅಲ್ಲಾಾಡಿಸತೊಡಗಿದೆ. ಮುಂದೇನು ಗ್ರಹಚಾರ ಕಾದಿದೆಯೋ ಎಂಬ ಆತಂಕ ಕಾಡಿದೆ. ಆಶ್ಚರ್ಯವೆಂದರೆ ಪ್ರಧಾನಿ ಮೋದಿಯಂಥವರು ದೇಶಕಟ್ಟುವ ಕಾರ್ಯಕ್ಕಾಾಗಿ ಅಹರ್ನಿಶಿ ದುಡಿಯುತ್ತಿಿದ್ದಾಾರೆ. ನೆರೆ ಹಾವಳಿಯಿಂದ ಬದುಕು-ಭಾಗ್ಯ ಕಳಕೊಂಡವರು ಬದುಕು ಕಟ್ಟಿಿಕೊಳ್ಳಲು ಹವಣಿಸುತ್ತಿಿದ್ದಾಾರೆ. ಇಂತಹ ಸಂದಿಗ್ಧ ಪರಿಸ್ಥಿಿತಿಯಲ್ಲೂ ಅತೃಪ್ತ ಶಾಸಕರು ಅಧಿಕಾರಕ್ಕಾಾಗಿ ಹಪಾಹಪಿಸುತ್ತಿಿದ್ದಾಾರೆ. ಇದು ಅಕ್ಷಮ್ಯ.

ಅಧಿಕಾರದಾಹವೆಂಬುದು ಇರುವಷ್ಟು ಕಾಲ ಅತೃಪ್ತಿಿಯೂ ತಪ್ಪಿಿದ್ದಲ್ಲ. ಹಿಂದಿನ ಮೈತ್ರಿಿ ಸರಕಾರಾವಧಿಯ ಅತೃಪ್ತರೊಂದಿಗೆ ಇಂದಿನ ಹೊಸ ಅತೃಪ್ತರೂ ಸೇರಿದ್ದಾಾರೆ. ಮುಂದೆ ಖಾತೆ ಹಂಚಿಕೆ ವೇಳೆ ಮತ್ತಷ್ಟು ಅತೃಪ್ತರು ಹುಟ್ಟಿಿಕೊಂಡರೂ ಅಚ್ಚರಿಯಿಲ್ಲ. ಮೈತ್ರಿಿ ವೇಳೆ ಹಾದಿತಪ್ಪಿಿದ ರಾಜ್ಯವನ್ನು ಹಳಿಗೆ ತರಬೇಕೆಂಬ ಹುಮ್ಮಸ್ಸಿಿನಿಂದ ಸಿಎಂ ಯಡಿಯೂರಪ್ಪನವರೇನೋ ಹಠಯೋಗಿಯಂತೆ ದಿಟ್ಟ ಹೆಜ್ಜೆೆಯಿಟ್ಟಿಿದ್ದಾಾರೆ. ಸಚಿವ ಸಂಪುಟ ಅವರೊಂದಿಗೆ ಹೆಗಲು ಕೊಟ್ಟು ನಿಲ್ಲಬೇಕಿದೆ. ಪಕ್ಷದ ಶಾಸಕರೂ ಸಹಕರಿಸಬೇಕಿದೆ. ಆದರೆ ಕೆಲ ಶಾಸಕರಿಗೋ ರಾಜ್ಯಹಿತಕ್ಕಿಿಂತಲೂ ಸ್ವ-ಹಿತ ಮುಖ್ಯವಾಗಿ ಹೋದಂತಿದೆ. ಅವರಿಗೆ ಅಧಿಕಾರವೇ ಮುಖ್ಯವೆನಿಸಿದೆ. ಸಚಿವ ಸ್ಥಾಾನವಿರದೆ ಜನಸೇವೆಗೆ ಅವಕಾಶವಿಲ್ಲವೇನೋ! ಅವರ ಅಧಿಕಾರ ದಾಹ ರಾಜ್ಯಹಿತಕ್ಕೆೆ ಮುಳುವಾಗದಿರಲಿ. ಮತ್ತೆೆ ಸರಕಾರ ಪತನಕ್ಕೆೆಡೆಗೊಡದಿರಲಿ. ಹಾಗೇನಾದರೂ ಆದಲ್ಲಿ ಅದರಿಂದ ಪಕ್ಷಕ್ಕೆೆ ಹಿನ್ನಡೆಯಾಗುವುದು. ಮತ್ತೆೆ ಅಸ್ಥಿಿರ ಸರಕಾರ ಬಂದೀತು. ನೆನಪಿರಲಿ.

Leave a Reply

Your email address will not be published. Required fields are marked *