Sunday, 31st May 2020

ರಾಜ್ಯದಲ್ಲಿ ನೆರೆ ನೆರೆ ರಾಜ್ಯದಲ್ಲಿ ಚುನಾವಣೆ ಪ್ರಚಾರ

ರಾಜ್ಯದಲ್ಲಿ ನೆರೆಯಿರುವಾಗ ಮಹಾರಾಷ್ಟ್ರ ಚುನಾವಣಾ ಪ್ರಚಾರಕ್ಕೆೆ ತೆರಳಿರುವುದಕ್ಕೆೆ ಅಕ್ಷೇಪ

ಒಂದೆಡೆ ಕರ್ನಾಟಕದಲ್ಲಿ ನೆರೆ, ಪ್ರವಾಹಕ್ಕೆೆ ಸಿಲುಕಿದ ಜನ ಜೀವನ ಅತಂತ್ರ ಪರಿಸ್ಥಿಿತಿಯಲ್ಲಿದ್ದರೆ, ಇನ್ನೊೊಂದೆಡೆ ನಾಡದೊರೆ ನೆರೆ ರಾಜ್ಯದ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾಾರೆ.

ಮುಂದಿನ ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆೆಯಲ್ಲಿ, ಗಡಿ ಭಾಗದ ಕ್ಷೇತ್ರಗಳನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾಾರಿಯನ್ನು ಬಿಜೆಪಿ ವರಿಷ್ಠರು ಕರ್ನಾಟಕ ನಾಯಕರ ಮೇಲೆ ಹಾಕಿದ್ದಾಾರೆ. ಆದ್ದರಿಂದ ಮುಖ್ಯಮಂತ್ರಿಿ ಯಡಿಯೂರಪ್ಪ, ಉಪಮುಖ್ಯಮಂತ್ರಿಿಗಳಾದ ಲಕ್ಷ್ಮಣ ಸವದಿ ಪೂರ್ಣ ಪ್ರಮಾಣದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾಾರೆ. ಈ ನಡೆಯನ್ನು ಅನೇಕರು ಟೀಕಿಸಿದ್ದಾಾರೆ.

ಅಥಣಿ ಭಾಗದ ಲಕ್ಷ್ಮಣ ಸವದಿ ಅವರಿಗೆ ಮಹಾರಾಷ್ಟ್ರದ ಕೆಲ ಜಿಲ್ಲೆೆಗಳ ಮೇಲೆ ಹಿಡಿತವಿದೆ. ಮಹಾರಾಷ್ಟ್ರ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡೇ, ಚುನಾವಣೆಯಲ್ಲಿ ಸೋತಿದ್ದರೂ, ಬಿಜೆಪಿ ಸರಕಾರದಲ್ಲಿ ಅವರಿಗೆ ಉಪಮುಖ್ಯಮಂತ್ರಿಿ ಸ್ಥಾಾನ ನೀಡಲಾಗಿತ್ತು. ಇದೀಗ ಮಹಾರಾಷ್ಟ್ರ ಚುನಾವಣೆ ಮುಗಿಯುವ ತನಕ, ಮಹಾರಾಷ್ಟ್ರದಲ್ಲಿ ಅವರು ಠಿಕಾಣಿ ಹೂಡಲಿದ್ದಾಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ನೆರೆಯಿಂದ ಜನ ಜೀವನ ತತ್ತರಿಸಿದ್ದು, ಇದನ್ನು ಸರಿಪಡಿಸುವ ಮಹತ್ತರ ಜವಾಬ್ದಾಾರಿ ಸರಕಾರದ ಮೇಲಿದೆ. ಆದರೆ, ಸರಕಾರವನ್ನು ನಡೆಸಬೇಕಾದ ಮುಖ್ಯಮಂತ್ರಿಿ ಯಡಿಯೂರಪ್ಪ ಸೇರಿದಂತೆ ಗಡಿ ಭಾಗದ ಸಚಿವರು ಮಹಾರಾಷ್ಟ್ರ ಬಿಜೆಪಿ ಪರ ಪ್ರಚಾರ ಮಾಡುತ್ತಿಿದ್ದಾಾರೆ. ಇದರಿಂದ ರಾಜ್ಯ ಸರಕಾರದ ಅಭಿವೃದ್ಧಿಿ ಯೋಜನೆಗಳು ಕುಂಠಿತಗೊಳ್ಳುತ್ತವೆ ಎನ್ನುವ ಆರೋಪ ಕೇಳಿ ಬಂದಿದೆ.

ಸಿಎಂ ಪ್ರಚಾರ
ಬೆಳಗಾವಿ ಗಡಿ ಸೇರಿದಂತೆ ಮಹಾರಾಷ್ಟ್ರದ ಹಲವು ಭಾಗದಲ್ಲಿ ನೆಲೆಸಿರುವ ಲಿಂಗಾಯತ ಹಾಗೂ ಯಡಿಯೂರಪ್ಪ ಅವರ ಬೆಂಬಲಿಗರ ವೋಟುಗಳನ್ನು ಬಿಜೆಪಿಯತ್ತ ತಿರುಗುವಂತೆ ಮಾಡಲು, ಮುಖ್ಯಮಂತ್ರಿಿ ಬಿ.ಎಸ್. ಯಡಿಯೂರಪ್ಪ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಳ್ಳಲಿದ್ದಾರೆ. ಮುಂದಿನ 2-3ದಿನಗಳಲ್ಲಿ ಪಕ್ಷದ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿ ಮತದಾರರನ್ನು ಸೆಳೆಯಲಿದ್ದಾರೆ. ಬುಧವಾರ ಅವರು ಸಾಂಗ್ಲಿಿ, ಸೋಲಾಪುರ, ಅಕ್ಕೋೋಲಕೊಟ್, ಚಾಕೂರು, ಲಾತೂರು ಎಂಬಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮುಖ್ಯಮಂತ್ರಿಿಯವರ ಕಚೇರಿ ತಿಳಿಸಿದೆ.

ಮಹಾರಾಷ್ಟ್ರದಲ್ಲಿರುವ ಕನ್ನಡಿಗರು ಮತ್ತು ಲಿಂಗಾಯತರನ್ನು ಸೆಳೆಯಲು ಪ್ರಯತ್ನಿಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೇವಲ ಯಡಿಯೂರಪ್ಪ ಅವರಲ್ಲದೇ, ಉಪ ಮುಖ್ಯಮಂತ್ರಿಿಗಳಾದ ಲಕ್ಷ್ಣಣ್ ಸವದಿ ಅವರನ್ನೂ ಕಳುಹಿಸಲಿದೆ. ಮುಂದಿನ ದಿನದಲ್ಲಿ ಉಪ ಮುಖ್ಯಮಂತ್ರಿಿ ಸಿ.ಎನ್. ಅಶ್ವಥ್ ನಾರಾಯಣ್ ಹಾಗೂ ದಲಿತ ಮತಗಳನ್ನು ಸೆಳೆಯುವ ನಿಟ್ಟಿಿನಲ್ಲಿ ಗೋವಿಂದ ಕಾರಜೋಳರನ್ನು ಪ್ರಚಾರದಲ್ಲಿ ಬಳಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಇಲಾಖಾ ಪ್ರಗತಿ ಕ್ಷೀಣಿಸಲಿದೆ
ಪ್ರಸಕ್ತ ವರ್ಷ ಸಂಭವಿಸಿದ ಭಾರಿ ನೆರೆಯಿಂದ, ಜನ ಜೀವನ ಅಸ್ತವ್ಯಸ್ಥವಾಗಿದೆ. ಆದ್ದರಿಂದ ಇಡೀ ಸರಕಾರ ರಾಜ್ಯದಲ್ಲಿಯೇ ಉಳಿದು ಕೆಲಸ ಮಾಡಿಸಬೇಕು. ಒಂದು ವೇಳೆ ರಾಜ್ಯದಲ್ಲಿ ಪುನಃ ನೀತಿ ಸಂಹಿತೆ ಘೋಷಣೆಯಾದರೆ, ಅಭಿವೃದ್ಧಿಿ ಕಾರ್ಯಗಳಿಗೆ ತೊಂದರೆಯಾಗಲಿದೆ. ಆದರೆ, ಮುಖ್ಯಮಂತ್ರಿಿ ಸೇರಿದಂತೆ ಉಪಮುಖ್ಯಮಂತ್ರಿಿ ಹಾಗೂ ಪ್ರಮುಖ ಸಚಿವರು ಇನ್ನೊೊಂದು ರಾಜ್ಯದ ಪ್ರಚಾರದಲ್ಲಿ ತೊಡಗಿದರೆ, ನಮ್ಮ ರಾಜ್ಯದ ಅಭಿವೃದ್ಧಿಿ ಕುಂಟಿತವಾಗಲಿದೆ. ಇದರೊಂದಿಗೆ ಮುಖ್ಯಮಂತ್ರಿಿ ಹಾಗೂ ಡಿಸಿಎಂ ಪ್ರಚಾರದಲ್ಲಿ ತೊಡಗಿದರೆ, ಅವರ ಸುಪರ್ದಿಯಲ್ಲಿರುವ ಇಲಾಖೆಯ ಪ್ರಗತಿಯೂ ಕ್ಷೀಣಿಸಲಿದೆ ಎನ್ನುವ ಆರೋಪ ಕೇಳಿಬಂದಿದೆ.

Leave a Reply

Your email address will not be published. Required fields are marked *