Wednesday, 26th February 2020

ರಾಜ್ಯದಲ್ಲಿ ಫೋನ್ ಟ್ಯಾಪ್ ನದ್ದೇ ಸದ್ದು

– ರಾಜಕಾರಣಿ, ಪೊಲೀಸ್ ಅಧಿಕಾರಿಗಳ ಫೋನ್ ಕದ್ದಾಲಿಕೆ?
– ಬಂಡಾಯ ಶಾಸಕರ ಫೋನ್‌ಗಳು ಕದ್ದಾಲಿಕೆಯಾಗಿದ್ದವು : ವಿಶ್ವನಾಥ್
– ಫೋನ್ ಕದ್ದಾಲಿಕೆ ಆರೋಪದ ಬಗ್ಗೆೆ ಸಿಎಸ್ ಜತೆ ಚರ್ಚಿಸಿ ಕ್ರಮ : ಬಿಎಸ್‌ವೈ

ವಾರದ ಹಿಂದೆ ಬೆಂಗಳೂರು ಆಯುಕ್ತ ಭಾಸ್ಕರ್ ರಾವ್ ಅವರ ಆಡಿಯೊ ವೈರಲ್ ಆದ ಬೆನ್ನಲ್ಲೇ ಫೋನ್ ಕದ್ದಾಾಲಿಕೆ ಪ್ರಕರಣ ಭಾರಿ ಸದ್ದು ಮಾಡುತ್ತಿದ್ದು, ಈ ಎಲ್ಲ ಪ್ರಕರಣದ ಸೂತ್ರದಾರಿ ಕುಮಾರಸ್ವಾಮಿ ಎನ್ನುವ ಆರೋಪಗಳು ಜೋರಾಗಿ ಕೇಳಿಬರುತ್ತಿದೆ.

ಭಾಸ್ಕರ್ ರಾವ್ ಅವರ ಫೋನ್ ಟ್ಯಾಪಿಂಗ್ ಪ್ರಕರಣಕ್ಕೆೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ವರದಿಯಲ್ಲಿ, ಹಲವು ಅಧಿಕಾರಿ ಹಾಗೂ ರಾಜಕಾರಣಿಗಳ ಮಾತನ್ನು ಕುಮಾರಸ್ವಾಾಮಿ ಅವರು ಮುಖ್ಯಮಂತ್ರಿಯಾಗಿದ್ದಾಾಗ, ಅವರ ಸೂಚನೆ ಮೇರೆಗೆ ಕೆಲವರು ಕದ್ದು ಆಲಿಸಿದ್ದಾಾರೆ ಎನ್ನುತ್ತಿದ್ದಂತೆ ಬಿಜೆಪಿ ನಾಯಕರು, ಕುಮಾರಸ್ವಾಾಮಿ ವಿರುದ್ಧ ಮುಗಿಬಿದ್ದಿದ್ದಾರೆ.
ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಪೊಲೀಸ್ ಡಿಜಿ ನೀಲಮಣಿ ರಾಜು ಅವರಿಗೆ ಸಲ್ಲಿಸಿರುವ ಪ್ರಾಾಥಮಿಕ ವರದಿಯಲ್ಲಿ, 34 ಜಿಬಿಯಷ್ಟು ಆಡಿಯೋ ರೆಕಾರ್ಡ್ ಆಗಿರುವುದು ಬೆಳಕಿಗೆ ಬಂದಿದೆ. ಕುಮಾರಸ್ವಾಾಮಿ ಅವರ ಆಡಳಿತ ಅವಧಿಯಲ್ಲಿ ಈ ಘಟನೆ ನಡೆದಿದ್ದು, ಈ ಪ್ರಕರಣವನ್ನು ಸಿಐಡಿಗೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಸದ್ಯದ ಮಾಹಿತಿ ಪ್ರಕಾರ ಆರು ಸಾವಿರ ಕರೆಗಳನ್ನು ಕದ್ದಾಲಿಕೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಕಾಂಗ್ರೆೆಸ್-ಜೆಡಿಎಸ್ ಮೈತ್ರಿ ಸರಕಾರ ಪತನ ಸಂದರ್ಭದಲ್ಲಿ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಅವರ ಕರೆಗಳನ್ನು ಕದ್ದಾಲಿಸಲಾಗಿದೆ ಎನ್ನುವ ಗಂಭೀರ ಆರೋಪ ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಾಮಿ ವಿರುದ್ಧ ಕೇಳಿಬಂದಿದೆ.
ರಾಜಕಾರಣಿ, ಪೊಲೀಸ್ ಫೋನ್ ಕದ್ದಾಲಿಕೆ
ಇದೇ ವಿಚಾರವಾಗಿ ಮಾಜಿ ಉಪಮುಖ್ಯಮಂತ್ರಿಿ ಆರ್. ಅಶೋಕ್, ಮುಖ್ಯಮಂತ್ರಿಿ ಯಡಿಯೂರಪ್ಪ ಅವರಿಗೆ ದೂರು ಸಲ್ಲಿಸಿದ್ದು, ಫೋನ್ ಟ್ಯಾಾಪಿಂಗ್ ಸಂಬಂಧ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾಾರೆ. ಕುಮಾರಸ್ವಾಾಮಿ ಅವರು ತಮ್ಮ ವಿರೋಧಿಗಳ ಹಾಗೂ ಅಧಿಕಾರಿಗಳ ದೂರವಾಣಿಯನ್ನು ಕದ್ದಾಾಲಿಸಿದ್ದಾಾರೆ. ಇದೊಂದು ಗಂಭೀರ ಪ್ರಕರಣವಾಗಿದ್ದು, ಸಮಗ್ರ ತನಿಖೆಯಾಗಬೇಕು ಎನ್ನುವ ಮಾತನ್ನು ಹೇಳಿದ್ದಾಾರೆ.

ಕೇವಲ ರಾಜಕಾರಣಿಗಳು ಮಾತ್ರವಲ್ಲದೇ, ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳು, ಕೆಲ ಪ್ರಮುಖ ಪತ್ರಕರ್ತರ ಫೋನ್‌ಗಳನ್ನು ಕದ್ದಾಾಲಿಸಲಾಗಿದೆ. ಈ ರೀತಿ ಫೋನ್ ಟ್ಯಾಾಪ್ ಮಾಡುವಾಗ ಗೃಹ ಇಲಾಖೆಯ ಒಪ್ಪಿಿಗೆ ಪಡೆಯಬೇಕು. ಆದರೆ, ಕಾನೂನು ಬಾಹಿರವಾಗಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಫೋನ್ ಕದ್ದಾಲಿಕೆ ಬಗ್ಗೆೆ ಕ್ರಮ
ಇದೇ ವಿಚಾರಕ್ಕೆೆ ಸಂಬಂಧಿಸಿದಂತೆ ಬುಧವಾರ ಪ್ರತಿಕ್ರಿಿಯಿಸಿರುವ ಮುಖ್ಯಮಂತ್ರಿಿ ಯಡಿಯೂರಪ್ಪ ಅವರು, ಈಗಾಗಲೇ ಫೋನ್ ಟ್ಯಾಾಪಿಂಗ್ ಸಂಬಂಧ ಹಲವು ದೂರುಗಳು ಕೇಳಿಬಂದಿವೆ. ಆದ್ದರಿಂದ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇದೊಂದು ಸೂಕ್ಷ್ಮ ವಿಷಯವಾಗಿರುವುದರಿಂದ, ಈ ಬಗ್ಗೆೆ ಸರಕಾರ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ತನಿಖೆ ಮಾಡಿಸುವುದು ಅವಶ್ಯವಿದ್ದರೆ, ಅದನ್ನು ಪಾರದರ್ಶಕವಾಗಿ ನಡೆಸಲು ಸರಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ತಮ್ಮ ದೂರವಾಣಿ ಕದ್ದಾಲಿಕೆ ಮಾಡುತ್ತಿಿರುವ ಬಗ್ಗೆೆ ಕಳೆದ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿಯೇ ತಮ್ಮ ಗಮನಕ್ಕೆೆ ಬಂದಿತ್ತು. ಇದು ಗೊತ್ತಾಾದ ಬಳಿಕ ಸಾಕಷ್ಟು ಮುನ್ನೆೆಚ್ಚರಿಕೆ ತೆಗೆದುಕೊಂಡೆ. ಆದರೂ ನನ್ನ ವೈಯಕ್ತಿಿಕ ಜೀವನಕ್ಕೆೆ ಹಾನಿ ಮಾಡಲು ಪ್ರಯತ್ನಿಿಸಲಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಮಗಿರುವ ಮಾಹಿತಿ ಪ್ರಕಾರ ಐದು ಸಾವಿರ ಫೋನ್ ಕದ್ದಾಲಿಕೆ ಮಾಡಲಾಗಿದೆ. ತಂತ್ರಜ್ಞಾನ ಇಷ್ಟೊೊಂದು ಮುಂದುವರಿದಿದೆಯಾದರೂ ಫೋನ್ ಕದ್ದಾಲಿಕೆ ಮೂರ್ಖತನದ ಪರಮಾವಧಿ ಎಂದು ಟೀಕಿಸಿದರು.

ಅನರ್ಹ ಶಾಸಕರ ಫೋನ್‌ಗಳು ಕದ್ದಾಲಿಕೆ ಆಗಿವೆ : ವಿಶ್ವನಾಥ

ಮೈಸೂರು: ಮಾಜಿ ಮುಖ್ಯಮಂತ್ರಿಿ ಕುಮಾರಸ್ವಾಾಮಿ ಅವರ ಆದೇಶದ ಮೇರೆಗೆ ಅಧಿಕಾರಿಗಳು ರಾಜೀನಾಮೆ ನೀಡಿದ 17 ಶಾಸಕರ ದೂರವಾಣಿ ಕದ್ದಾಾಲಿಕೆಯಾಗಿದೆ ಎಂದು ಮಾಜಿ ಶಾಸಕ ಎಚ್. ವಿಶ್ವನಾಥ ಗಂಭೀರ ಆರೋಪ ಮಾಡಿದ್ದಾಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಾಮಿ ಅವರ ಕಚೇರಿಯಿಂದಲೇ ನಮ್ಮೆೆಲ್ಲರ ದೂರವಾಣಿ ಸಂಭಾಷಣೆಯನ್ನು ಕದ್ದಾಾಲಿಸಲಾಗಿದೆ. ದೂರವಾಣಿ ಕದ್ದಾಾಲಿಕೆ ನಂತರ ರೆಬಲ್ ಶಾಸಕರಿಗೆ ಕರೆ ಮಾಡಿ, ನಿಮ್ಮ ಹಗರಣ ಬಯಲು ಮಾಡುವುದಾಗಿ ಬ್ಲ್ಯಾಾಕ್‌ಮೇಲ್ ಮಾಡುತ್ತಿಿದ್ದರು ಎಂದು ಆರೋಪಿಸಿದ್ದಾಾರೆ.
ಫೋನ್ ಕದ್ದಾಾಲಿಕೆ ಬಗ್ಗೆೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಜೆಡಿಎಸ್‌ನ ಮುಖ್ಯಮಂತ್ರಿಿಯೇ ತಮ್ಮ ಪಕ್ಷದ ರಾಜ್ಯಾಾಧ್ಯಕ್ಷನ ದೂರವಾಣಿಯನ್ನೇ ಕದ್ದಾಾಲಿಸುತ್ತಾಾರೆಂದರೆ, ನಮ್ಮ ಮೇಲೆ ಅವರಿಗೆ ವಿಶ್ವಾಾಸವಿರಲಿಲ್ಲ ಎಂದಾಯಿತು. ರಾಜೀನಾಮೆಗೆ ಇದು ಕಾರಣ ಎಂದಿದ್ದಾಾರೆ.

ಯಾವ ಸಮಯದಲ್ಲಿ ಕದ್ದಾಲಿಸಬಹುದು?
1885ರ ಇಂಡಿಯನ್ ಟೆಲಿಗ್ರಾಾಫ್ ಕಾಯಿದೆಯಲ್ಲಿ ಕೆಲ ನಿಬಂಧಣೆಗಳೊಂದಿಗೆ, ಫೋನ್ ಕರೆಗಳ ಮಾಹಿತಿ ಪಡೆಯುವುದಕ್ಕೆೆ ಹಾಗೂ ಆಲಿಸುವುದಕ್ಕೆೆ ಅವಕಾಶವಿದೆ. ರಾಷ್ಟ್ರ ಹಿತಾಸಕ್ತಿಿಗೆ ವಿರುದ್ಧವಾಗಿ, ಭದ್ರತೆಗೆ ತೊಂದರೆಯಾಗುವ ವಿಚಾರಗಳಲ್ಲಿ ಫೋನ್ ಕದ್ದಾಲಿಕೆಗೆ ಅವಕಾಶವಿದ್ದು, ಸಂಸದೀಯ ಕಾರ್ಯದರ್ಶಿ, ಕಾನೂನು ಕಾರ್ಯದರ್ಶಿ ಈ ಬಗ್ಗೆೆ ನಿರ್ಧಾರ ಕೈಗೊಂಡು, ಗೃಹ ಇಲಾಖೆಗೆ ಮಾಹಿತಿ ನೀಡಬೇಕು. ಗೃಹ ಇಲಾಖೆ ಎರಡು ತಿಂಗಳೊಳಗೆ ಒಪ್ಪಿಿಗೆ ನೀಡಿದರೆ ಮಾತ್ರ ಕದ್ದಾಾಲಿಸಲು ಅವಕಾಶವಿದೆ.
ಒಂದು ಬಾರಿ ಅನುಮತಿ ನೀಡಿದರೆ ಆರು ತಿಂಗಳ ಅವಧಿಯದ್ದಾಗಿರುತ್ತದೆ. ಕದ್ದಾಲಿಕೆ ವೇಳೆ ಪಡೆದ ಮಾಹಿತಿಗಳನ್ನು ಬಳಸಿ ಎರಡು ತಿಂಗಳೊಳಗೆ ನಾಶಪಡಿಸಬೇಕು. ಇದು ಹೊರತಾಗಿ ಕೋರ್ಟ್ ನಿರ್ದೇಶನದ ಮೇರೆಗೆ ಫೋನ್ ಕದ್ದಾಲಿಕೆಗೆ ಅವಕಾಶವಿದೆ.

ಯಾರ್ಯಾರು ಮಾಡಬಹುದು?
ಕೇಂದ್ರ ಗೃಹ ಇಲಾಖೆಯ ಒಪ್ಪಿಿಗೆಯೊಂದಿಗೆ ಸಿಬಿಐ, ಗುಪ್ತಚರ ಇಲಾಖೆ, ಕಂದಾಯ ಗುಪ್ತಚರ, ಮಾದಕವಸ್ತು ನಿಯಂತ್ರಣ ದಳ, ಆದಾಯ ತೆರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆ ಕದ್ದಾಲಿಕೆಯನ್ನು ಕಾನೂನಿನ ಪ್ರಕಾರ ಮಾಡಬಹುದು. ಇದಕ್ಕೆೆ ಉಪಗ್ರಹ ಆಧಾರಿತ ವ್ಯವಸ್ಥೆೆಗಳು, ಟೆಲಿಫೋನ್ ಎಕ್‌ಸ್‌‌ಚೇಂಜ್‌ನ ನೆರವಿನೊಂದಿಗೆ ಪ್ರತ್ಯೇಕ ಎಲೆಕ್ಟ್ರಾಾನಿಕ್ ವ್ಯವಸ್ಥೆೆಗಳ ಮೂಲಕ ಕದ್ದಾಲಿಕೆ ಮಾಡಲಾಗುತ್ತದೆ.

    ಆರ್. ಅಶೋಕ್, ಮಾಜಿ ಉಪಮುಖ್ಯಮಂತ್ರ

ಆರು ತಿಂಗಳ ಹಿಂದೆಯೇ ಫೋನ್ ಕದ್ದಾಾಲಿಕೆಯಾಗಿದೆ ಎಂದಿದ್ದೆೆ. ರಾಜಕಾರಣಿಗಳು, ಪತ್ರಕರ್ತರು, ಪೊಲೀಸರು ಸೇರಿ ಅನೇಕರ ಫೋನ್ ಕದ್ದಾಲಿಕೆಯಾಗಿದೆ. ಫೋನ್ ಕದ್ದಾಲಿಸುವುದು ದೊಡ್ಡ ಅಪರಾಧ. ಈ ಬಗ್ಗೆೆ ಮುಖ್ಯಮಂತ್ರಿಿ ಯಡಿಯೂರಪ್ಪ ಅವರಿಗೆ ದೂರು ಸಲ್ಲಿಸಲಾಗಿದೆ. ಫೋನ್ ಕದ್ದಾಲಿಕೆ ಮಾಡಿದ ಸರಕಾರ ಈಗಿಲ್ಲ. ಈ ಬಗ್ಗೆೆ ಸಮಗ್ರ ತನಿಖೆಯಾಗಬೇಕು

ಮುಖ್ಯಮಂತ್ರಿಿ ಅಧಿಕಾರ ಶಾಶ್ವತವಲ್ಲ ಎಂದು ಪದೆ ಪದೇ ಹೇಳುತ್ತಿಿದ್ದವನು ನಾನು. ಈ ಕುರ್ಚಿಗಾಗಿ ಟೆಲಿಫೋನ್ ಕದ್ದಾಾಲಿಕೆ ಮಾಡಿ ಅಧಿಕಾರ ಉಳಿಸಿಕೊಳ್ಳುವ ಅವಶ್ಯಕತೆ ನನಗಿರಲಿಲ್ಲ. ಈ ವಿಚಾರದಲ್ಲಿ ಕೆಲವರು ನನ್ನ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆೆ ದೂರವಾದದ್ದು. ಈ ರೀತಿಯ ನೀಚ ಕೆಲಸಕ್ಕೆೆ ನಾನು ಇಳಿಯುವುದಿಲ್ಲ.

 

ಎಚ್.ಡಿ ಕುಮಾರಸ್ವಾಾಮಿ, ಮಾಜಿ ಮುಖ್ಯಮಂತ್ರಿ

Leave a Reply

Your email address will not be published. Required fields are marked *