Tuesday, 27th October 2020

ಸಂಸತ್ ನಲ್ಲಿ ಗಲಾಟೆ: ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಅಮಾನತು

ಬಳ್ಳಾರಿ: ಕೃಷಿ ಮಸೂದೆಗಳ ಅಂಗೀಕಾರದ ವೇಳೆ ಅಶಿಸ್ತಿನ ವರ್ತನೆಯ ಕಾರಣಕ್ಕೆ ಕರ್ನಾಟಕದಿಂದ ಆಯ್ಕೆಯಾಗಿದ್ದ ಕಾಂಗ್ರೆಸ್​ ಸದಸ್ಯ ಸೈಯದ್ ನಾಸಿರ್ ಹುಸೇನ್ ಅಮಾನತುಗೊಂಡಿದ್ದಾರೆ.

ಕಾಂಗ್ರೆಸ್ ನಾಯಕರಾಗಿರುವ ಇವರು, 2018ರ ಮಾರ್ಚ್​ನಲ್ಲಿ ನಡೆದಿದ್ದ ರಾಜ್ಯಸಭಾ ಚುನಾವಣೆಯಲ್ಲಿ 42 ಮತಗಳನ್ನು ಪಡೆದು ಮೇಲ್ಮನೆಗೆ ಆಯ್ಕೆಯಾಗಿದ್ದರು. ಮೂಲತಃ ಬಳ್ಳಾರಿ ಜಿಲ್ಲೆಯವರಾದ ಸೈಯದ್ ನಾಸಿರ್ ಹುಸೇನ್ 2018 ಏಪ್ರಿಲ್ 3ರಿಂದ ರಾಜ್ಯಸಭಾ ಸ್ಥಾನ ಅಲಂಕರಿಸಿದ್ದಾರೆ.

ರಾಜ್ಯಸಭೆಯಲ್ಲಿ ಕೃಷಿ ಮಸೂದೆಗಳ ಬಗ್ಗೆ ಚರ್ಚೆ ವೇಳೆ ಗದ್ದಲ ಸೃಷ್ಟಿಸಿದ 8 ಮಂದಿ ಪ್ರತಿಪಕ್ಷದ ಸದಸ್ಯರನ್ನು ಅಮಾನತು ಮಾಡಿ ರಾಜ್ಯಸಭಾಧ್ಯಕ್ಷ ವೆಂಕಯ್ಯ ನಾಯ್ಡು ಆದೇಶ ಹೊರಡಿಸಿದ್ದು, ಎಂಟು ಮಂದಿಯಲ್ಲಿ ಕರ್ನಾಟಕದ ನಾಸೀರ್ ಹುಸೇನ್ ಕೂಡಾ ಒಬ್ಬರಾಗಿದ್ದಾರೆ.

Leave a Reply

Your email address will not be published. Required fields are marked *