Thursday, 28th January 2021

ಸಿನಿ ನೌಕರರ ಒಕ್ಕೂಟದಿಂದಲೇ ರಾಮ್​ ಗೋಪಾಲ್ ವರ್ಮಾಗೆ ನಿಷೇಧ

ಹೈದರಾಬಾದ್​: ರಾಮ್​ ಗೋಪಾಲ್ ವರ್ಮಾ ರನ್ನು ವೆಸ್ಟರ್ನ್ ಇಂಡಿಯಾ ಸಿನಿ ನೌಕರರ ಒಕ್ಕೂಟದಿಂದಲೇ ಆರ್​ಜಿವಿಯನ್ನು ಬ್ಯಾನ್​ ಮಾಡಲಾಗಿದೆ!

ಸಿನಿಮಾ ಸಲುವಾಗಿ ದುಡಿದ ಕಾರ್ಮಿಕರಿಗೆ ಸಂಬಳ ನೀಡದ ಹಿನ್ನೆಲೆಯಲ್ಲಿ ನಿಷೇಧ ಹೇರಲಾಗಿದೆ. ಆರ್​ಜಿವಿ ಅವರ ಬ್ಯಾನರ್​ನಲ್ಲಿ ಕೆಲಸ ಮಾಡಿದ ಕಲಾವಿದರಿಗೆ, ತಂತ್ರಜ್ಞರಿಗೆ ಸೇರಿ ಸಾಕಷ್ಟು ಮಂದಿಗೆ ಆರ್​ಜಿವಿ ಇನ್ನೂ ಸಂಬಳವನ್ನೇ ನೀಡಿಲ್ಲ. ಬರೋ ಬ್ಬರಿ 1ಕೋಟಿ 25 ಲಕ್ಷ ಮೀರಿದೆ. ಆ ಒಂದು ಕಾರಣಕ್ಕೆ ವೆಸ್ಟರ್ನ್ ಇಂಡಿಯಾ ಸಿನಿ ನೌಕರರ ಒಕ್ಕೂಟ ಸಾಕಷ್ಟು ಬಾರಿ ಈ ಬಗ್ಗೆ ಮನವಿ ಮಾಡಿದರೂ, ಯಾವುದೇ ಪ್ರತಿಕ್ರಿಯೆ ಅವರಿಂದ ಬಂದಿರಲಿಲ್ಲ.

ಒಟ್ಟಾರೆ 32 ಸಿನಿಮಾ ಯೂನಿಯನ್​ಗಳು ಇವರೊಂದಿಗೆ ಮುಂದಿನ ದಿನಗಳಲ್ಲಿ ಕೆಲಸ ಮಾಡುವುದಿಲ್ಲ ಎಂದು ಹೇಳಿ ಕೊಂಡಿದ್ದು, ಒಕ್ಕೂಟದಿಂದ ಆರ್​ಜಿವಿಗೆ ಕಳೆದ ವರ್ಷದ ಸೆಪ್ಟಂಬರ್ 17ರಂದೇ ನೋಟಿಸ್​ ಸಹ ನೀಡಲಾಗಿತ್ತು. ಆದರೆ, ಯಾವುದಕ್ಕೂ ಪ್ರತಿಕ್ರಿಯಿಸದೇ ಕಣ್ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷ ಬಿ.ಎನ್ ತಿವಾರಿ ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *