Tuesday, 26th May 2020

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವ ಹೊತ್ತಲ್ಲಿ ಸೋಮನಾಥ ಮಂದಿರದ ನೆನಪು!

ಅಂದು ಸರ್ದಾರ್ ಪಟೇಲರು ಮತ್ತು ಮುನ್ಷಿ ಪಟ್ಟಾಗಿ ನಿಂತುಕೊಳ್ಳದಿದ್ದರೆ ಇಂದು ಭವ್ಯ ಸೋಮನಾಥ ಮಂದಿರ ತಲೆಯೆತ್ತಿ ನಿಲ್ಲುತ್ತಿರಲಿಲ್ಲ.

ಇಂಥ ಅದ್ಭುತಗಳು ನಡೆಯುವುದು ನಮ್ಮ ದೇಶದಲ್ಲಿ ಮಾತ್ರ! ಬಹು ಸಂಖ್ಯಾಾತ ಹಿಂದೂಗಳು ತಮ್ಮ ಆರಾಧ್ಯ ದೈವ ಶ್ರೀರಾಮನಿಗೆ ಒಂದು ದೇಗುಲ ನಿರ್ಮಿಸಲು ಇಷ್ಟು ವರ್ಷಗಳ ಕಾಲ ಕೋರ್ಟಿನಲ್ಲಿ ಹೊಡೆದಾಡಬೇಕಾಗಿ ಬಂದಿದ್ದೇ ಒಂದು ದೊಡ್ಡ ದೌರ್ಭಾಗ್ಯ. ಇಂಥ ವೈಚಿತ್ರಗಳು ಜಗತ್ತಿಿನ ಯಾವ ದೇಶದಲ್ಲೂ ನಡೆಯಲಿಕ್ಕಿಿಲ್ಲ. ಅಮೆರಿಕದಲ್ಲೋ, ಲಂಡನ್ನಿಿನಲ್ಲೋ, ಪ್ಯಾಾರಿಸ್ಸಿಿನಲ್ಲೋ ಒಂದು ಚರ್ಚ್ ನಿರ್ಮಿಸಲು ಇಷ್ಟೆೆಲ್ಲಾ ಸೆಣಸುವ ಅಗತ್ಯವಿಲ್ಲ ಅಥವಾ ಕೋರ್ಟ್ ಅನುಮತಿ ಪಡೆಯುವ ದೈನೇಸಿ ಸ್ಥಿಿತಿ ಬರುವುದಿಲ್ಲ. ಆದರೆ ಭಾರತದಲ್ಲಿ ಮಾತ್ರ ಒಂದು ಮಂದಿರ ನಿರ್ಮಾಣಕ್ಕೆೆ ಮುಕ್ಕಾಾಲು ಶತಮಾನ ಕಾಲ ಕಾಯಬೇಕಾದ ಪರಿಸ್ಥಿಿತಿ ಉದ್ಭವವಾಗಿದ್ದು ನಮ್ಮ ಕರ್ಮ. ಇದಕ್ಕೆೆ ಯಾರನ್ನು ದೂಷಿಸಬೇಕೋ ಗೊತ್ತಾಾಗುತ್ತಿಿಲ್ಲ.

ಭಾರತದಲ್ಲಿ ಮಂದಿರಗಳ ಮೇಲಿನ ದಾಳಿ, ಲೂಟಿ ಮತ್ತು ಧ್ವಂಸ ಕಾರ್ಯ ಇಂದು ನಿನ್ನೆೆಯದಲ್ಲ. ಮಂದಿರ ನಿರ್ಮಾಣಕ್ಕೆೆ ತೊಡಕಾದುದು ಅಯೋಧ್ಯೆೆಯಲ್ಲಿ ಮಾತ್ರ ಅಲ್ಲ; ಕಳೆದ ಒಂದು ಸಾವಿರ ವರ್ಷಗಳಿಂದ ನಿರಂತರವಾಗಿ ಮಂದಿರ ವಿರೋಧಿ ಕೃತ್ಯಗಳು ನಮ್ಮ ದೇಶದಲ್ಲಿ ನಡೆದುಕೊಂಡು ಬಂದಿವೆ. ಭಾರತದಲ್ಲಿ ಮಂದಿರಗಳು ಕೇವಲ ಪೂಜಾ ಸ್ಥಳಮಾತ್ರ ಆಗಿರಲಿಲ. ಅವು ಕಲೆ, ಸಂಸ್ಕೃತಿ, ಶಿಕ್ಷಣ, ಜ್ಞಾನದ ಬೀಡಾಗಿದ್ದವು. ಹಿಂದೂ ಧರ್ಮದ ಶ್ರದ್ಧೆೆಯ ಕೇಂದ್ರವಾಗಿದ್ದ ಮಂದಿರಗಳನ್ನೇ ನಾಶ ಮಾಡಿ, ಹಿಂದುಗಳನ್ನು ದುರ್ಬಲರನ್ನಾಾಗಿ ಮಾಡುವುದು ಮುಸಲ್ಮಾಾನರ ಉದ್ದೇಶವಾಗಿತ್ತು. ಹೀಗಾಗಿ ಅಂದಿನಿಂದಲೂ ನಮ್ಮ ಮಂದಿರಗಳ ಮೇಲೆ ನಿರಂತರವಾಗಿ ಆಕ್ರಮಣಗಳು ನಡೆಯುತ್ತಲೇ ಬಂದಿದೆ. ರಾಮ ಜನ್ಮಭೂಮಿ ಈ ಎಲ್ಲ ಹೋರಾಟಗಳ ಶಿಖರಪ್ರಾಾಯವಷ್ಟೇ.

ಅಯೋಧ್ಯೆೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆೆ ಎಷ್ಟೆೆಲ್ಲಾ ತೊಂದರೆಗಳು ಎದುರಾದವು ಎಂಬುದು ನಮಗೆಲ್ಲ ಗೊತ್ತಿಿದೆ. ನಾವು ಅದನ್ನೆೆಲ್ಲಾ ನಮ್ಮ ಕಣ್ಣೆೆದುರಲ್ಲೇ ನೋಡಿದ್ದೇವೆ. ಆದರೆ ಅದಕ್ಕಿಿಂತ ಮೊದಲು ಗುಜರಾತಿನ ಸೌರಾಷ್ಟ್ರ ಕರಾವಳಿಯ ಪ್ರಭಾಸ ಪಠಾಣ್ ಪ್ರದೇಶದಲ್ಲಿರುವ ಸೋಮನಾಥ ಮಂದಿರ ಪುನರ್ ನಿರ್ಮಾಣಕ್ಕೂ ಎಷ್ಟೆೆಲ್ಲಾ ತೊಂದರೆಗಳು ಎದುರಾದವು ಮತ್ತು ಅವನ್ನೆೆಲ್ಲ ಹೇಗೆ ಎದುರಿಸಿ ಅಲ್ಲಿ ಮಂದಿರವನ್ನು ಪುನರ್ ಸ್ಥಾಾಪಿಸಲಾಯಿತು ಎಂಬುದು ಅನೇಕರಿಗೆ ಗೊತ್ತಿಿಲ್ಲ. ಸೋಮನಾಥ ದೇಗುಲ ಪುನರ್ ನಿರ್ಮಾಣಕ್ಕೂ ನಮ್ಮ ರಾಜಕಾರಣಿಗಳು ಏನೇನೆಲ್ಲ ತೊಂದರೆಗಳನ್ನು ಕೊಟ್ಟರು ಎಂಬುದು ಸಹ ಹಲವರಿಗೆ ತಿಳಿದಿರಲಿಕ್ಕಿಿಲ್ಲ. ರಾಮ ಮಂದಿರ ನಿರ್ಮಾಣಕ್ಕೆೆ ಮಾರ್ಗ ಸುಗಮವಾದ ಈ ಹೊತ್ತಿಿನಲ್ಲಿ ನಿಮಗೆ ಸೋಮನಾಥ ಮಂದಿರದ ಕಥೆಯನ್ನು ಹೇಳಬೇಕು.

ಅಫ್ಘಾನಿಸ್ತಾನದ ಘಜನಿ ಪ್ರಾಾಂತದ ಮಹಮದ್ ಘಜನಿ 1001 ರಿಂದ 1026 ರವರೆಗೆ ಅಂದರೆ ಇಪ್ಪತ್ತೈದು ವರ್ಷಗಳ ಅವಧಿಯಲ್ಲಿ ಸುಮಾರು ಹದಿನೇಳು ಬಾರಿ ಭಾರತದ ಮೇಲೆ ದಂಡೆತ್ತಿಿ ಬಂದ. ಸೋಮನಾಥ ಮಂದಿರವನ್ನುಲೂಟಿ ಮಾಡಿ ಧ್ವಂಸ ಮಾಡುವುದು ಅವನ ಮುಖ್ಯ ಗುರಿಯಾಗಿತ್ತು. 1024 ರಲ್ಲಿ ಸೋಮನಾಥ ಮಂದಿರವನ್ನು ರಕ್ಷಿಸಲು ಮುಂದಾದ ಸುಮಾರು ಐವತ್ತು ಸಾವಿರ ಹಿಂದುಗಳನ್ನು ಆತ ಸಾಯಿಸಿದ. ಸ್ವತಃ ಘಜನಿ ಮಹಮದ್ ಸೋಮನಾಥ ಮಂದಿರದೊಳಗೆ ಕಾಲಿಟ್ಟು ಅಲ್ಲಿನ ಜ್ಯೋೋತಿರ್ಲಿಂಗವನ್ನು ಪುಡಿಪುಡಿ ಮಾಡಿದ. ದೇವಾಲಯದಲ್ಲಿದ್ದ ವಜ್ರ, ವೈಢೂರ್ಯ, ಬಂಗಾರಗಳನ್ನು ಕೊಳ್ಳೆೆ ಹೊಡೆದು ತನ್ನ ದೇಶಕ್ಕೆೆ ಸಾಗಿಸಿದ.

ಸೋಮನಾಥ ಮಂದಿರದ ಮೇಲೆ ದಾಳಿ ಮಾಡಿದವ ಘಜನಿ ಮಾತ್ರ ಅಲ್ಲ, ಮೊಘಲ್ ಸಾಮ್ರಾಾಜ್ಯದ ಮಹಮದ್ ಅಜಂ 1706 ರಲ್ಲಿ ಇಂಥದೇ ದುಷ್ಕೃತ್ಯ ಎಸಗಿದ್ದ. ಔರಂಗಜೇಬ್ ಕೂಡ, ‘ಸೋಮನಾಥ ಮಂದಿರ ಇನ್ನೆೆಂದೂ ದುರಸ್ತಿಿ ಮಾಡಲು ಸಾಧ್ಯವಾಗಬಾರದು, ಆ ರೀತಿ ಧ್ವಂಸ ಮಾಡಬೇಕು ಎಂದು ಆದೇಶಿಸಿದ್ದ. ಸೋಮನಾಥ ದೇವಾಲಯ ಸಂಪೂರ್ಣ ಧ್ವಂಸವಾಗಿದ್ದನ್ನು ಔರಂಗಜೇಬ ಸಾರ್ವಜನಿಕವಾಗಿ ಘೋಷಿಸಿದರೂ ಅವನ ನಂತರ ಬಂದ ಮೊಘಲ್ ದೊರೆಗಳು, ಅಲ್ಲಿ ಮತ್ತೇನಾದರೂ ಅವಶೇಷಗಳು ಉಳಿದಿವೆಯೇ ಎಂದು ನೋಡಿ ಹೋಗುತ್ತಿದ್ದರು. ಹಾಗೆ ಬಂದವರು ದೇಗುಲದ ಗರ್ಭಗುಡಿ ಇದ್ದ ಜಾಗದಲ್ಲಿ ಸಂಪತ್ತಿಗಾಗಿ ಅಗೆಯುತ್ತಿದ್ದರು. ಅವರಿಗೆ ಏನಾದರೂ ಸಿಗುತ್ತಿತ್ತು. ಸೋಮನಾಥಕ್ಕೆ ಬಂದವರಾರೂ ಖಾಲಿ ಕೈಯಲ್ಲಿ ಹಿಂದುರುಗಿದ್ದೇ ಇಲ್ಲ. ಈ ರೀತಿ ಬಂದವರೆಲ್ಲ ದೋಚಿ ದೋಚಿ ಮಂದಿರವಿದ್ದ ಜಾಗದಲ್ಲಿ ದೊಡ್ಡ ಹಳ್ಳ (ತಗ್ಗು) ನಿರ್ಮಾಣವಾಗಿತ್ತು. ಭಾರತಕ್ಕೆೆ ಸ್ವಾಾತಂತ್ರ್ಯ ಬರುವ ಹೊತ್ತಿಗೆ ಮಂದಿರವಿದ್ದ ಜಾಗದ ಬಯಲಿನಲ್ಲಿ ಲಿಂಗದಾಕಾರದ ಒಂದು ಮೂರ್ತಿಯನ್ನು ತಂದು, ಅದಕ್ಕೇ ಪೂಜೆ ಮಾಡಲಾಗುತ್ತಿತ್ತು.

ದೇಶಕ್ಕೆೆ ಸ್ವಾಾತಂತ್ರ್ಯ ಬರುತ್ತಲೇ, ಮುಸ್ಲಿಿಂ ಲೀಗ್ ದೇಶ ವಿಭಜನೆಯ ಬೇಡಿಕೆಯನ್ನು ಮುಂದಿಟ್ಟಿತು. ಗುಜರಾತಿನ ಸೌರಾಷ್ಟ್ರದ ಜುನಾಗಢ ರಾಜ್ಯದ ಮೇಲೂ ವಿಭಜನೆಯ ಕಾರ್ಮೋಡ ಆವರಿಸಿತು. ಸೋಮನಾಥ ಮಂದಿರ ಇರುವುದು ಈ ಪ್ರದೇಶದಲ್ಲೇ. ಜುನಾಗಢದಲ್ಲಿ ಶೇ. 80ರಷ್ಟು ಹಿಂದುಗಳಿದ್ದರೂ, ನವಾಬ ಮಾತ್ರ ಮುಸ್ಲಿಿಂ. ಸ್ವಾಾತಂತ್ರ್ಯಲಭಿಸುತ್ತಿದ್ದಂತೆ ತನ್ನ ರಾಜ್ಯವಾದ ಜುನಾಗಢವನ್ನು ಆಗ ತಾನೇ ಉದಯವಾದ ಪಾಕಿಸ್ತಾಾನಕ್ಕೆೆ ಸೇರಿಸುತ್ತಿರುವುದಾಗಿ ಘೋಷಿಸಿಬಿಟ್ಟ. ಸಹಜವಾಗಿ ಈ ನಿರ್ಧಾರದಿಂದ ಅಲ್ಲಿನ ಹಿಂದೂಗಳು ದಂಗೆ ಎದ್ದರು. ಹಿರಿಯ ಕಾಂಗ್ರೆೆಸ್ಸಿಿಗ ಸಾಮಲದಾಸ್ ಗಾಂಧಿ ನೇತೃತ್ವದಲ್ಲಿ ನವಾಬನ ವಿರುದ್ಧ ಪರ್ಯಾಯ ಸರಕಾರ ಅಸ್ತಿಿತ್ವಕ್ಕೆೆ ಬಂದಿತು. ಇದರಿಂದ ಜುನಾಗಢವನ್ನು ಪಾಕಿಸ್ತಾಾನಕ್ಕೆೆ ಸೇರಿಸುವ ನವಾಬನ ಹುನ್ನಾಾರ ವಿಫಲವಾಯಿತು. ಇನ್ನು ತನಗೆ ಉಳಿಗಾಲ ಇಲ್ಲವೆಂದು ನವಾಬ ರಾತ್ರೋೋರಾತ್ರಿ ಪಾಕಿಸ್ತಾನಕ್ಕೆೆ ಓಡಿಹೋದ. ಅನಂತರ ಸಾಮಲದಾಸ್ ಗಾಂಧಿ ಮತ್ತು ಜುನಾಗಢದ ದಿವಾನ ಸರ್ ಶಾ ನವಾಜ್ ಭಟ್ಟೋೋ (ಪಾಕ್ ಪ್ರಧಾನಿಯಾಗಿದ್ದ ಝುಲ್ಫಿಿಕರ್ ಅಲಿ ಭುಟ್ಟೋೋ ತಂದೆ) ಒಂದಾಗಿ ‘ಜುನಾಗಢ ಭಾರತದ ಅವಿಭಾಜ್ಯಅಂಗ’ ಎಂದು ಘೋಷಿಸಿದರು.

ಇದಾಗಿ ನಾಲ್ಕು ದಿನಗಳ ಬಳಿಕ (ನವೆಂಬರ್ 9, 1947) ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭ ಭಾಯಿ ಪಟೇಲ್ ಸೌರಾಷ್ಟ್ರಕ್ಕೆೆ ಭೇಟಿ ನೀಡಿದ್ದರು. ಅವರ ಜತೆ ಲೋಕೋಪಯೋಗಿ ಮತ್ತು ನಿರಾಶ್ರಿಿತರ ಪುನರ್ವಸತಿ ಸಚಿವ ಎನ್.ವಿ.ಗಾಡ್ಗೀಳ್ ಸಹ ಇದ್ದರು. ಜುನಾಗಢದಲ್ಲಿ ಇವರಿಬ್ಬರಿಗೂ ಭವ್ಯಸ್ವಾಾಗತ ಕೋರಲಾಯಿತು. ಅಲ್ಲದೇ ಸಾಯಂಕಾಲ ಸಾರ್ವಜನಿಕ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಸರ್ದಾರ್ ಪಟೇಲ್, ‘ಯಾವ ಜಾಗದಲ್ಲಿ ಧ್ವಂಸ ಮಾಡಲಾಗಿದೆಯೋ ಅದೇ ಜಾಗದಲ್ಲಿ ಸೋಮನಾಥ ಮಂದಿರವನ್ನು ಭಾರತ ಸರಕಾರವೇ ಪುನರ್ ನಿರ್ಮಿಸುತ್ತದೆ. ಮೊದಲಿನ ಪಾವಿತ್ರ್ಯವನ್ನು ಕಾಪಾಡಿಕೊಂಡು ಅದಕ್ಕಿಿಂತ ಭವ್ಯವಾದ ಮಂದಿರವನ್ನು ನಾವು ನಿರ್ಮಿಸುತ್ತೇವೆ. ಅಲ್ಲದೇ ಮಂದಿರದಲ್ಲಿ ಜ್ಯೋೋತಿರ್ಲಿಂಗವನ್ನೂ ಸ್ಥಾಾಪಿಸುತ್ತೇವೆ’ ಎಂದು ಐತಿಹಾಸಿಕ ಘೋಷಣೆ ಮಾಡಿದರು.

ಶುರುವಾಯ್ತು ನೋಡಿ ವಿವಾದ. ನೆಹರು ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದ ಮೌಲಾನಾ ಅಬ್ದುಲ್ ಕಲಾಂ ಅಜಾದ್ ಅವರು ಪಟೇಲರ ಹೇಳಿಕೆಯನ್ನು ಬಹಿರಂಗವಾಗಿ ವಿರೋಧಿಸಿದರು. ಪಟೇಲರ ಈ ನಿಲುವನ್ನು ಖಂಡಿಸುತ್ತಿಿರುವುದಾಗಿ ಹೇಳಿದರು. ಪಟೇಲರಿಗೆ ಈ ಹೇಳಿಕೆ ನೀಡಲು ಅನುಮತಿ ಕೊಟ್ಟವರಾರು, ಅವರು ಪ್ರಧಾನಿ ಅವರಿಗೆ ತಿಳಿಸಿ ಈ ಹೇಳಿಕೆ ನೀಡಿದ್ದಾರಾ, ಪಟೇಲರು ಈ ಹೇಳಿಕೆಯನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು. ಸೋಮನಾಥ ಮಂದಿರವನ್ನುಪುರಾತತ್ವ ಇಲಾಖೆಗೆ ಒಪ್ಪಿಿಸಿ, ಅದನ್ನು ಒಂದು ಸ್ಮಾಾರಕವನ್ನಾಾಗಿ ಮಾಡಿ, ಬೇಡ ಎನ್ನುವುದಿಲ್ಲ, ಅಷ್ಟಕ್ಕೂ ಅಲ್ಲಿ ಈಗ ಮಂದಿರ ಇಲ್ಲ ಎಂದು ಮೌಲಾನಾ ಹೇಳಿದರು.

ಆದರೆ ಪಟೇಲರು ಜಗ್ಗಲಿಲ್ಲ. ತಾವು ಯಾವುದೇ ಕಾರಣಕ್ಕೂ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯುವ ಪ್ರಶ್ನೆೆಯೇ ಇಲ್ಲ, ಈ ದೇಶದ ಕೋಟ್ಯಂತರ ಜನರ ಆಶೋತ್ತರದಂತೆ ಅಲ್ಲಿ ಮಂದಿರ ಮರುಸ್ಥಾಾಪನೆ ಆಗಲೇಬೇಕು. ಮಂದಿರವನ್ನು ಪುನಃ ಸ್ಥಾಾಪಿಸಿ ಜ್ಯೋೋತಿರ್ಲಿಂಗವನ್ನು ಪ್ರತಿಷ್ಠಾಾಪಿಸುವುದೊಂದೇ ಹಿಂದೂಗಳ ಭಾವನೆಯನ್ನು ಗೌರವಿಸಲು ನಮಗಿರುವ ಏಕೈಕ ಮಾರ್ಗ ಎಂದು ತಿರುಗೇಟು ಕೊಟ್ಟರು. ಅಷ್ಟೇ ಅಲ್ಲ, ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಾಪಿಸಿದ ಪಟೇಲ್, ‘ಸೋಮನಾಥ ಮಂದಿರ ಮರು ಸ್ಥಾಾಪನೆಯಿಂದ ಹಿಂದೆ ಸರಿಯ ಕೂಡದು. ಇದು ನಮ್ಮ ಅಸ್ಮಿಿತೆಯ ಪ್ರಶ್ನೆೆ’ ಎಂದು ತಮ್ಮ ವಾದವನ್ನು ಪ್ರಬಲವಾಗಿ ಮಂಡಿಸಿದರು. ಪಟೇಲರ ವಾದ ಹೇಗಿತ್ತೆೆಂದರೆ, ಅದನ್ನು ತಳ್ಳಿಿಹಾಕುವಂತಿರಲಿಲ್ಲ. ಇಡೀ ಸಚಿವ ಸಂಪುಟ ಅವರ ವಾದವನ್ನು ಒಪ್ಪಿಿಕೊಂಡಿತು. ಮಂದಿರ ಪುನರ್ ಸ್ಥಾಾಪನೆಗೆ ನೆಹರು ಅಸ್ತು ಅಂದರು. ಸಂಪುಟದ ತೀರ್ಮಾನವನ್ನು ಮಹಾತ್ಮಾಾ ಗಾಂಧಿ ಅವರೂ ಸ್ವಾಾಗತಿಸಿದರು.

ಆದರೆ ಗಾಂಧಿ ಒಂದು ಸಣ್ಣ ಅಡ್ಡ ಬಡಿಗೆ ಬೀಸಿದರು. ಮಂದಿರ ಮರು ನಿರ್ಮಾಣ ಸಾರ್ವಜನಿಕ ಹಣದಿಂದ ಆಗಲಿ, ಇದಕ್ಕಾಾಗಿ ಸರಕಾರದ ಹಣ ವಿನಿಯೋಗ ಆಗುವುದು ಬೇಡ ಎಂದರು. ಇದರಿಂದ ಆರಂಭದಲ್ಲಿ ಅಡ್ಡರಾಗ ತೆಗೆದ ಕೆಲವು ಮುಸ್ಲಿಿಂ ನಾಯಕರು ಸುಮ್ಮನಾದರು. ಆದರೆ ನೆಹರು ಅವರ ಮುಂದೆ ಹೋಗಿ ಹೇಗಾದರೂ ಮಾಡಿ ಈ ಮಂದಿರ ಮರು ಸ್ಥಾಾಪನೆ ಆಗಕೂಡದು ಎಂದು ಒತ್ತಡ ಹೇರಲಾರಂಭಿಸಿದರು. ಒಂದು ವೇಳೆ ಮಂದಿರ ಮರುಸ್ಥಾಾಪನೆಯಾದರೆ ಅದರಿಂದ ಮುಸ್ಲಿಿಮರ ಆಕ್ರೋೋಶಕ್ಕೆೆ ಕಾರಣರಾಗಬೇಕಾಗುತ್ತದೆ ಎಂದು ನೆಹರು ಅವರನ್ನು ಬೆದರಿಸುವ ತಂತ್ರ ಹೂಡಲಾರಂಭಿಸಿದರು. ಆರಂಭದಲ್ಲಿ ಪಟೇಲರನ್ನು ಬೆಂಬಲಿಸಿದ ನೆಹರು ಕ್ರಮೇಣ ತಟಸ್ಥರಾಗತೊಡಗಿದರು.

ಈ ಮಧ್ಯೆೆ ಖ್ಯಾಾತ ಇತಿಹಾಸಕಾರ ಮತ್ತು ನೆಹರು ಸಂಪುಟದಲ್ಲಿ ಆಹಾರ ಮತ್ತು ಕೃಷಿ ಸಚಿವರಾದ ಕೆ.ಎಂ.ಮುನ್ಷಿಿ ನೇತೃತ್ವದಲ್ಲಿ ಮಂದಿರ ಮರು ನಿರ್ಮಾಣ ಉಸ್ತುವಾರಿ ಸಮಿತಿ ರಚನೆಯಾಯಿತು. ಅವರು ಇನ್ನೇನು ಕೆಲಸ ಆರಂಭಿಸಬೇಕು ಎನ್ನುವಷ್ಟರಲ್ಲಿ ಸರ್ದಾರ್ ಪಟೇಲರು ನಿಧನರಾದರು. ಯಾರು ಮಂದಿರ ಮರು ಸ್ಥಾಾಪನೆ ಆಗಬೇಕು ಎಂದು ಪ್ರಬಲವಾಗಿ ಪ್ರತಿಪಾದಿಸುತ್ತಿಿದ್ದರೋ ಅವರೇ ಇಲ್ಲವೆಂದ ಮೇಲೆ ಈ ಯೋಜನೆಯನ್ನು ಹಳ್ಳಹಿಡಿಸುವುದು ಕಷ್ಟವಲ್ಲ ಎಂದು ಮುಸ್ಲಿಿಂ ನಾಯಕರಿಗೆ, ಎಡಪಂಥೀಯರಿಗೆ, ವಿಚಾರವಾದಿಗಳಿಗೆ ಅನಿಸಿತು. ನೆಹರು ಮೇಲೆ ಇನ್ನಿಿಲ್ಲದ ಒತ್ತಡ ಹೇರಲಾರಂಭಿಸಿದರು. ಕೇಂದ್ರ ಸರಕಾರವೇ ಮುಂದೆ ನಿಂತು ಈ ಕೆಲಸ ಮಾಡುವುದು ಸರಿ ಅಲ್ಲವೆಂದು ಅವರೆಲ್ಲ ನೆಹರು ಕಿವಿ ಕಚ್ಚಲಾರಂಭಿಸಿದರು.

ಆರಂಭದಲ್ಲಿ ಈ ಯೋಜನೆ ಬಗ್ಗೆೆ ಸಕಾರಾತ್ಮಕವಾಗಿದ್ದ ನೆಹರು ಕ್ರಮೇಣ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ವರ್ತಿಸಲಾರಂಭಿಸಿದರು. ಅಲ್ಲಲ್ಲಿ ಆಪ್ತರ ಮುಂದೆ ಈ ಯೋಜನೆ ವಿರುದ್ಧ ಅಪಸ್ವರ ಎತ್ತಲಾರಂಭಿಸಿದರು. ಬರಬರುತ್ತ ನೆಹರು ನಿಜ ಬಣ್ಣ ಬಯಲಾಗತೊಡಗಿತು. ಅವರು ಈ ಯೋಜನೆ ವಿರುದ್ಧ ಬಹಿರಂಗವಾಗಿಯೇ ಹೇಳಿಕೆ ನೀಡಲಾರಂಭಿಸಿದರು. ಅಷ್ಟೇ ಅಲ್ಲ, ಮುಸ್ಲಿಿಂ ನಾಯಕರನ್ನು ಎತ್ತಿಿ ಕಟ್ಟಿಿ ಅವರಿಂದಲೂ ಹೇಳಿಕೆ ಕೊಡಿಸಲಾರಂಭಿಸಿದರು. ಈ ವಿಚಾರದಲ್ಲಿ ಮುನ್ಷಿಿ ಏಕಾಂಗಿ ಆದರು. ಮಂದಿರ ಮರುಸ್ಥಾಾಪನೆ ಆಗಲೇ ಬೇಕು ಎಂದು ಹೇಳುತ್ತಿಿದ್ದ ಸಚಿವ ಸಂಪುಟ ಸದಸ್ಯರು ಮತ್ತು ಗಣ್ಯರು ನೆಹರು ಮುಂದೆ ಅವರನ್ನು ಎದುರಿಸಲಾಗದೇ ಸುಮ್ಮನಿರುತ್ತಿಿದ್ದರು, ಇಲ್ಲವೇ ಅವರನ್ನು ಖುಷಿಪಡಿಸಲು ಈ ಯೋಜನೆಯ ವಿರುದ್ಧ ಮಾತಾಡುತ್ತಿಿದ್ದರು. ಆದರೆ ಯೋಜನೆ ಪರವಾಗಿ ಸಾರ್ವಜನಿಕವಾಗಿ ಮಾತಾಡುತ್ತಿಿರಲಿಲ್ಲ.

ಒಮ್ಮೆೆ ಸಂಪುಟ ಸಭೆಯ ನಂತರ, ನೆಹರು ಅವರು ಮುನ್ಷಿಿ ಅವರನ್ನು ಕರೆದು, ‘ನೀವು ಸೋಮನಾಥ ಮಂದಿರ ಪುನರುಜ್ಜೀವನಗೊಳಿಸಲು ಕೆಲಸ ಮಾಡುತ್ತಿಿರುವುದು ನನಗೆ ಸಮಂಜಸವಾಗಿ ಕಾಣುತ್ತಿಿಲ್ಲ. ಇದು ಹಿಂದೂಗಳ ಭಾವನಾತ್ಮಕ ವಿಷಯ. ಇದರಿಂದ ಮುಸಲ್ಮಾಾನರ ಅವಕೃಪೆಗೆ ಪಾತ್ರರಾಗಬೇಕು ಎಂಬ ಕಲ್ಪನೆ ನಿಮಗಿದೆಯಾ? ಮಂದಿರ ಪಾಳುಬಿದ್ದು ನೂರಾರು ವರ್ಷಗಳಾಗಿವೆ. ಮಂದಿರ ನಿರ್ಮಿಸುವುದು ಸರಕಾರದ ಕೆಲಸವಲ್ಲ. ನಾವು ಈ ಸೂಕ್ಷ್ಮ ವಿಷಯವನ್ನು ನಮ್ಮ ಮೇಲೆ ತೆಗೆದುಕೊಳ್ಳುವುದು ಬೇಡ. ನಾನು ಸಾಕಷ್ಟು ಯೋಚಿಸಿ ಈ ಮಾತನ್ನು ಹೇಳುತ್ತಿಿದ್ದೇನೆ’ ಎಂದುಬಿಟ್ಟರು.

ಇಂಥ ಇಕ್ಕಟ್ಟಿಿನ ಸಮಯದಲ್ಲಿ ಬೇರೆ ಯಾರೇ ಇದ್ದರೂ ತೆಪ್ಪಗಾಗಿಬಿಡುತ್ತಿಿದ್ದರು. ಇಲ್ಲವೇ ರಾಜೀನಾಮೆ ಕೊಟ್ಟು ಹೊರಬಂದು ಬಿಡುತ್ತಿಿದ್ದರು. ಆದರೆ ಮುನ್ಷಿಿ ತಮ್ಮ ಪಟ್ಟು ಬಿಡಲಿಲ್ಲ. ತಮ್ಮ ನಿರ್ಧಾರದಿಂದ ಹಿಂದೆ ಸರಿಯಬಾರದೆಂದು ನಿರ್ಧರಿಸಿಬಿಟ್ಟರು. ಸಂಪುಟದಲ್ಲಿರಲಿ, ಇಲ್ಲದಿರಲಿ, ಸೋಮನಾಥ ಮಂದಿರ ಪುನರುಜ್ಜೀವನಗೊಳಿಸದೇ ಬಿಡುವುದಿಲ್ಲ ಎಂದು ಮುನ್ಶಿಿ ಶಪಥಗೈದರು. ಸೋಮನಾಥ ಮಂದಿರವನ್ನು ನಾವು ಯಾಕೆ ಮರುಸ್ಥಾಾಪನೆ ಮಾಡಬೇಕು, ನಾನೇಕೆ ಈ ಕೆಲಸವನ್ನು ಬಿಡುವುದಿಲ್ಲ, ನೀವು ಸಹ ಏಕೆ ಬೆಂಬಲಿಸಬೇಕು ಎಂಬ ಬಗ್ಗೆೆ ಮುನ್ಷಿಿ ಅವರು ನೆಹರು ಅವರಿಗೆ ಸುದೀರ್ಘ ಪತ್ರ ಬರೆದರು. ಇದನ್ನು ನೋಡಿ ನೆಹರು ಸುಮ್ಮನಾದರು. ಮುನ್ಷಿಿ ಅವರ ವಾದವನ್ನು ಒಪ್ಪದೇ ಬೇರೆ ಮಾರ್ಗವೇ ಇರಲಿಲ್ಲ.

ಸೋಜಿಗವೆಂಬಂತೆ, ಅಂತೂ ಸೋಮನಾಥ ಮಂದಿರ ತಲೆಯೆತ್ತಿ ನಿಂತಿತು. ಇದರ ಉದ್ಘಾಾಟನೆಗೆ ಮುನ್ಷಿ ಅವರು ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ ಅವರನ್ನು ಆಮಂತ್ರಿಸಲು ನಿರ್ಧರಿಸಿದರು. ನೆಹರು ಅವರ ನಿಲುವು ಗೊತ್ತಿದ್ದ ರಾಷ್ಟ್ರಪತಿಗಳು ಬರಲಿಕ್ಕಿಿಲ್ಲ ಎಂದು ಮುನ್ಷಿ ಅಂದುಕೊಂಡಿದ್ದರು. ಆದರೆ ರಾಷ್ಟ್ರಪತಿಗಳು ಒಪ್ಪಿಗೆ ಸೂಚಿಸಿದರು. ಆಗ ನೆಹರು ಅಪಸ್ವರ ಎತ್ತಿದರು. ಸಂವಿಧಾನ ರಕ್ಷಕ ಸ್ಥಾಾನದಲ್ಲಿರುವವರು ಮಂದಿರ ಉದ್ಘಾಾಟನೆಗೆ ಹೋಗುವುದು ಸರಿ ಅಲ್ಲ ಎಂದು ಹೇಳಿದರು. ಅಷ್ಟೇ ಅಲ್ಲ, ಅಧಿಕಾರಿಗಳ ಮೂಲಕ ಕಾರ್ಯಕ್ರಮಕ್ಕೆ ಹೋಗದಂತೆ ಒತ್ತಡ ತಂದರು. ಆದರೆ ಅಷ್ಟರೊಳಗೆ ರಾಷ್ಟ್ರಪತಿ ಮಂದಿರ ಉದ್ಘಾಾಟನೆಗೆ ಬರುವುದು ಪ್ರಚಾರವಾಗಿಬಿಟ್ಟಿತ್ತು. ಬರುತ್ತೇನೆಂದು ಮಾತು ಕೊಟ್ಟು ಕೊನೆ ಕ್ಷಣದಲ್ಲಿ ಹೋಗದಿದ್ದರೆ ತಪ್ಪುು ಸಂದೇಶ ರವಾನೆಯಾಗುವುದೆಂದು ಡಾ.ಪ್ರಸಾದ ತಮ್ಮ ನಿರ್ಧಾರವನ್ನು ಬದಲಿಸಲಿಲ್ಲ.

ಆ ಕಾರ್ಯಕ್ರಮದಲ್ಲಿ ಡಾ. ಪ್ರಸಾದ ಮಾಡಿದ ಭಾಷಣ ಇಂದಿಗೂ ಪ್ರಸ್ತುತ. ‘ಸೋಮನಾಥ ಮಂದಿರ ರಾಷ್ಟ್ರೀಯ ನಂಬಿಕೆಯ ಸಂಕೇತ. ಈ ಮಂದಿರ ಬೂದಿಯಿಂದ ಮೇಲಕ್ಕೆೆದ್ದು ನಿಂತಿದೆ. ಜನರ ಹೃದಯದಲ್ಲಿ ಶಾಶ್ವತ ಸ್ಥಾಾನ ಪಡೆದಿರುವ ಸೀಮಾತೀತ ನಂಬಿಕೆಯ ಸಂಕೇತವನ್ನು ವಿಶ್ವದ ಯಾವುದೇ ವ್ಯಕ್ತಿಿ, ಶಕ್ತಿಿ ಅಥವಾ ಅಧಿಕಾರದಿಂದ ನಾಶಪಡಿಸಲಾಗದು ಎಂಬುದನ್ನು ಈ ಮಂದಿರ ಜಗತ್ತಿಿಗೆ ಸಾರಿದೆ. ಇತಿಹಾಸವನ್ನು ಯಾರೂ ಬದಲಿಸಲಾರರು. ಈ ಮಂದಿರ ನಮ್ಮ ಧಾರ್ಮಿಕ ನಂಬಿಕೆ ಮತ್ತು ಮೌಲ್ಯವನ್ನು ಮರುಸ್ಥಾಾಪಿಸಬಲ್ಲುದು ಎಂದು’ ಅವರು ಮಾತಾಡಿದರು.

ಸೋಮನಾಥ ಮಂದಿರ ಉದ್ಘಾಾಟನೆ ಆಗುತ್ತಿದ್ದಂತೆ ಪಾಕಿಸ್ತಾಾನದೆಲ್ಲೆಡೆ ಪ್ರತಿಭಟನೆಗಳು ಭುಗಿಲೆದ್ದವು. ಕರಾಚಿಯಲ್ಲಂತೂ ಬೃಹತ್ ಸಾರ್ವಜನಿಕ ಸಭೆ ಏರ್ಪಡಿಸಲಾಯಿತು. ಅಲ್ಲಿ ಭಾರತ ಸರಕಾರದ ನಿಲುವನ್ನುಖಂಡಿಸಲಾಯಿತು. ಗುಜರಾತಿನ ಕೆಲವೆಡೆ ಅಲ್ಲಲ್ಲಿ ಕೋಮು ಗಲಭೆಗಳಾದವು. ಒಂದು ತಿಂಗಳ ನಂತರ ಎಲ್ಲವೂ ಸ್ತಬ್ಧವಾಯಿತು. ಅಂದು ಸರ್ದಾರ್ ಪಟೇಲರು ಮತ್ತು ಮುನ್ಷಿಿ ಪಟ್ಟಾಾಗಿ ನಿಂತುಕೊಳ್ಳದಿದ್ದರೆ ಇಂದು ಭವ್ಯ ಸೋಮನಾಥ ಮಂದಿರ ತಲೆಯೆತ್ತಿ ನಿಲ್ಲುತ್ತಿರಲಿಲ್ಲ.
ಶ್ರೀರಾಮ ಮಂದಿರ ನಿರ್ಮಾಣವಾಗುವ ಕನಸು ನನಸಾದ ಈ ಸಂದರ್ಭದಲ್ಲಿ ಈ ಎಲ್ಲಾ ಸಂಗತಿಗಳನ್ನು ತಿಳಿದಿರಬೇಕು.

One thought on “ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವ ಹೊತ್ತಲ್ಲಿ ಸೋಮನಾಥ ಮಂದಿರದ ನೆನಪು!

Leave a Reply

Your email address will not be published. Required fields are marked *