Monday, 30th January 2023

ಭಾರತ್ ಜೋಡೋ ಯಾತ್ರೆಯಲ್ಲಿ ರಮ್ಯಾ ಹೆಜ್ಜೆ

ರಾಯಚೂರು: ನಟಿ ರಮ್ಯಾ ಕಾಂಗ್ರೆಸ್ ಪಕ್ಷದಿಂದ ಅಂತರ ಕಾಯ್ದುಕೊಳ್ಳು ತ್ತಿದ್ದಾರೆ ಎಂಬ ಊಹಾಪೋಹಗಳ ಮಧ್ಯೆ ಭಾರತ್ ಜೋಡೋ ಯಾತ್ರೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ರಾಯಚೂರಿನಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ರಮ್ಯಾ ಹೆಜ್ಜೆ ಹಾಕಿದ್ದಾರೆ.

 

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯು ರಾಜ್ಯದಲ್ಲಿ ಶನಿವಾರ ಕೊನೆಯಾಗಲಿದೆ. ಅಂತಿಮ ದಿನ ಈ ಯಾತ್ರೆಯು ರಾಯಚೂರಿನಲ್ಲಿ ಸಖತ್ ಸದ್ದು ಮಾಡಿತ್ತು. ಅದಕ್ಕೆ ಕಾರಣವಾಗಿದ್ದೇ ಮೋಹಕ ತಾರೆ ರಮ್ಯಾ.

ರಾಯಚೂರು ಮಂತ್ರಾಲಯ ಮಾರ್ಗದ ಐಬಿ ಕಾಲೋನಿಯಿಂದ ಸಾರ್ವಜನಿಕ ಸಭೆಯನ್ನು ಆಯೋಜಿಸಿದ್ದ ವಾಲ್ಕಟ್ ಮೈದಾನದವರೆಗೂ ರಾಹುಲ್ ಗಾಂಧಿ ಜೊತೆಗೆ ನಟಿ ರಮ್ಯಾ ಹೆಜ್ಜೆ ಹಾಕಿದರು. ರಾಹುಲ್ ಗಾಂಧಿಯೊಂದಿಗೆ ಮಾತನಾಡುತ್ತಲೇ ಹೆಜ್ಜೆ ಹಾಕುತ್ತಿದ್ದರೆ, ಮೋಹಕ ತಾರೆಯನ್ನು ನೋಡುವು ದಕ್ಕೆ ಜನರ ಗುಂಪು ಸೇರುತ್ತಿತ್ತು.

ಇನ್ನೊಂದು ಮಗ್ಗಲಿನಲ್ಲಿ ರಸ್ತೆಯ ಎಡಭಾಗಕ್ಕೆ ಎಂದಿನಂತೆ ಹೆಜ್ಜೆ ಹಾಕಿದ ರಾಹುಲ್ ಗಾಂಧಿ, ನೆರೆದಿದ್ದ ಜನರ ಕಡೆಗೆ ಕೈ ಬೀಸುತ್ತಾ ನಡೆದರು.

error: Content is protected !!