Friday, 27th May 2022

ಅತ್ಯಾಚಾರ ಪ್ರಕರಣ: ಸೆ.21ರವರೆಗೆ ಆರೋಪಿ ನ್ಯಾಯಾಂಗ ಬಂಧನಕ್ಕೆ

ಮುಂಬೈ : ಮುಂಬೈನ ಸಾಕಿ ನಾಕಾ ಪ್ರದೇಶದಲ್ಲಿ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆ ಶನಿವಾರ ಮೃತಪಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಇದೀಗ ಆರೋಪಿಯನ್ನು ಸೆ.21ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಯನ್ನು ಮೋಹನ್ ಚೌಹಾಣ್ ಎಂದು ಗುರುತಿಸಲಾಗಿದೆ. ಈತ 30 ವರ್ಷದ ಮಹಿಳೆಯನ್ನು ನಿಂತಿದ್ದ ಟೆಂಪೋದೊಳಗೆ ಎಳೆದೊಯ್ದು ಅತ್ಯಾಚಾರವೆಸಗಿದ್ದು, ಅಲ್ಲದೆ ಮಹಿಳೆಯ ಖಾಸಗಿ ಅಂಗಕ್ಕೆ ರಾಡ್ ತುರುಕಿ ವಿಕೃತಿ ಮೆರೆದಿ ದ್ದಾನೆ.

ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮಹಿಳೆ ಮೃತಪಟ್ಟಿದ್ದಾಳೆ. ಮುಂಬೈನ ಸಾಕಿ ನಾಕಾ ಪ್ರದೇಶದಲ್ಲಿ 35 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಬಳಿಕ ದುಷ್ಕರ್ಮಿಗಳು, ಖಾಸಗಿ ಭಾಗಕ್ಕೆ ರಾಡ್ ಹಾಕಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ.