Wednesday, 26th February 2020

ರತನ್ ಟಾಟಾ ಹೇಳಿದ ಬದುಕಿನ ಪಾಠಗಳು

ಮುರುಗೇಶ ಆರ್ ನಿರಾಣಿ, ಶಾಸಕರು
vveditoped@gmail.com

‘ಒಂದು ಉದ್ಯಮವನ್ನೋೋ ಇಲ್ಲವೆ ಹೊಸ ಕಾರ್ಯ ಯೋಜನೆಯನ್ನು ಆರಂಭಿಸಬೇಕು ಎಂದರೆ ಮಾತು ನಿಲ್ಲಿಸಿ ಕೆಲಸ ಶುರು ಮಾಡಿ ಎಂದು ಅಮೆರಿಕದ ನಿರ್ಮಾಪಕ ವಾಲ್‌ಟ್‌ ಸಿಡ್ನಿಿ ಆಗಾಗ ಹೇಳುವ ಮಾತು ನನಗೆ ತುಂಬ ಇಷ್ಟವಾಗುತ್ತದೆ. *ಆ್ಝಜಿ ಡಿ ಜಿಠಿ ಜ್ಞಿಿ ಠಿಠಿ ಡ್ಞಿಿ ಠಿಟ ಚಿಛಿ ್ಝಜಿಛಿ, ಚ್ಠಿಿಠಿ ಠಿಟ ಚಿಛಿ ಟ್ಠ್ಞಜ ಡಿ ಛ್ಟಿಿ ಛಿಛ್ಞಿಿ (ಜೀವಂತವಾಗಿರುವುದೇ ಒಂದು ಆನಂದ, ಆದರೆ ತರುಣನಾಗಿರುವುದು ಅದಕ್ಕಿಿಂತಲೂ ಹಿರಿದಾದುದು) ಎಂದು ಇಂಗ್ಲಿಿಷ್ ಕವಿ ವಿಲಿಯಂ ವರ್ಡ್ಸವರ್ಥ್ ಹೇಳಿದ ಮಾತಿನಂತೆ, ನಾನು ಸದಾ ತರುಣನಾಗಿ ಇರಲು ಬಯಸುತ್ತೇನೆ’. ಹೀಗೆ ಟಿವಿ ಕಾರ್ಯಕ್ರಮ ಒಂದರಲ್ಲಿ ಈಚೆಗೆ ಭಾರತದ ಹಿರಿಯ ಉದ್ಯಮಿ ರತನ್ ಟಾಟಾ ಮಾತನಾಡುತ್ತಿಿದ್ದರು. ಕೈಗಾರಿಕೆ, ಹಣಕಾಸು, ಕಾರ್ಮಿಕ ಕುಶಲತೆ ಅಭಿವೃದ್ಧಿಿ, ಕಾನೂನಿನ ತೊಡಕುಗಳು ಮುಂತಾದ ವಿಷಯಗಳ ಬಗ್ಗೆೆ ನಿರರ್ಗಳವಾಗಿ ಅವರು ಮಾತು ಹರಿಯುತ್ತಿಿತ್ತು.
ನನಗೆ ಬೇರೆ ಕೆಲಸಗಳ ಒತ್ತಡ ಇತ್ತು. ಮುಂಜಾನೆ ಹೊತ್ತಿಿನಲ್ಲಿ ನಾನು ಟಿವಿ ನೋಡುತ್ತಾಾ ಕುಳಿತುಕೊಳ್ಳುವುದಿಲ್ಲ. ಕೆಲಸದ ಧಾವಂತದಲ್ಲಿದ್ದೆೆ. ಆದರೆ ನನ್ನ ಪ್ರೀತಿಯ ರತನ್ ಟಾಟಾ ಮಾತು ಕೇಳುವ ಕುತೂಹಲ ಹುಟ್ಟಿಿತು. ರತನ್ ಟಾಟಾ ಭಾರತ ಕಂಡ ಅಪರೂಪದ ದೇಶಪ್ರೇಮಿ ಉದ್ಯಮಿ. ಭಾರತದಲ್ಲಿ ಕೈಗಾರಿಕೆ ಕ್ರಾಾಂತಿಗೆ ಮುನ್ನಡಿ ಬರೆದವರು. ಇವರ ಮುತ್ತಜ್ಜ ಜೇಮ್‌ಶೇಟ್‌ಜಿ ಟಾಟಾ. ನಾನು ಕೈಗಾರಿಕೆ ಮಂತ್ರಿಿಯಾಗಿದ್ದ 2008-13 ರ ಅವಧಿಯಲ್ಲಿ ರತನ್ ಟಾಟಾ ಅವರನ್ನು ಹಲವು ಬಾರಿ ಭೇಟಿಯಾಗುವ, ಚರ್ಚಿಸುವ ಅವಕಾಶ ದೊರೆತಿತ್ತು. ಅವರು ಹುಬ್ಬಳ್ಳಿಿಯ ಒಂದು ಕಾರ್ಯಕ್ರಮಕ್ಕೆೆ ಬಂದಾಗ ನನ್ನ ಪಕ್ಕದಲ್ಲೇ ಕುಳಿತು ಅನೇಕ ವಿಷಯ ಮಾತನಾಡಿದ್ದರು. ರತನ್‌ಜೀ ನಿಧಾನವಾಗಿ ಆದರೆ ಸ್ಪಷ್ಟವಾಗಿ ಮಾತನಾಡುತ್ತಾಾರೆ. ಅವರ ಮಾತು ಬರಹದ ಭಾಷೆಯಲ್ಲಿ ಇದ್ದಂತೆ ಇರುತ್ತದೆ. ಅಂದೂ ಕೂಡಾ ಅವರು ಅದೇ ಗತ್ತಿಿನಲ್ಲಿ ಟಿವಿಯಲ್ಲಿ ಮಾತನಾಡುತ್ತಿಿದ್ದರು. ‘ಬದುಕಿನಲ್ಲಿ ಯಶಸ್ವಿಿಯಾಗಬೇಕು ಅಂದರೆ ನಿನ್ನ ಕೆಲಸಗಳನ್ನು ಹುಚ್ಚನಂತೆ ಪ್ರೀತಿಸು. ನಿಂತಾಗ, ಕುಳಿತಾಗ, ಊಟ ಮಾಡುವಾಗ, ಹಾಗೆಯೇ ಮಲಗಿದಾಗ ಕೂಡಾ ಅದೇ ಧ್ಯಾಾನ ಇರಲಿ. 70-80 ವರ್ಷ ಅವಧಿಯ ಈ ಬದುಕು ಸಣ್ಣದು. ನಮಗಿರುವುದು ಒಂದೇ ಜನ್ಮ. ಪುನರ್ಜನ್ಮ ಎಂಬುದು ಕೇವಲ ಕಲ್ಪನೆ. ಬದುಕಿರುವ ಅವಧಿಯಲ್ಲಿ ನಾವು ಪ್ರೀತಿಸುವ ಕೆಲಸದಲ್ಲಿ ಮುಳುಗಿ ಹೋಗಬೇಕು. ಅದರಲ್ಲೇ ಸಾಧನೆ ಮಾಡಬೇಕು. ದೊಡ್ಡ ದೊಡ್ಡ ಸಂಶೋಧನೆಗಳನ್ನು ಆವಿಷ್ಕಾಾರಗಳನ್ನು ಮಾಡಿದವರು, ಸಾಹಿತ್ಯ, ಸಂಗೀತ, ಅಭಿನಯದಲ್ಲಿ ಮಹಾನ್ ಎನ್ನುವಂಥದ್ದನ್ನು ಸಾಧಿಸಿದವರೆಲ್ಲ ತಮ್ಮ ತಮ್ಮ ಕೆಲಸಗಳಲ್ಲಿ ಹುಚ್ಚರಂತೆ ಮಗ್ನರಾದವರು’ ಎಂದು ರತನ್‌ಜೀ ಹೇಳಿದರು.
ಮುಂದುವರಿದು, ‘ಮಾಡುವ ಕೆಲಸದಲ್ಲಿ ಬರೀ ಪ್ರೀತಿ ಬೆಳೆಸಿಕೊಂಡರೆ ಸಾಲದು, ಅದರೊಂದಿಗೆ ಕುಶಲತೆ-ಸ್ಕಿಿಲ್ ಬೆಳೆಸಿಕೊಳ್ಳಬೇಕು. ತಾದಾತ್ಮ್ಯ ಬೆಳೆಸಿಕೊಳ್ಳಬೇಕು. ನನ್ನ ಯುವ ಮಿತ್ರನೊಬ್ಬ ಮುಂಬೈ ನಗರದಲ್ಲಿ ಶುದ್ಧ ಕುಡಿಯುವ ನೀರನ್ನು ಉತ್ಪಾಾದಿಸುತ್ತಿಿದ್ದಾಾನೆ. ಈತನ ಹೆಸರು ಶಾರುಖ ಖಾನ್ ದಿಲಾಲ್. ಆತನಿಗೆ ನೀರು ಬಿಟ್ಟು ಬೇರೆ ಮಾತನಾಡಲು ಬರುವುದಿಲ್ಲ. ನೀರು ವಿಷಯದಲ್ಲಿ ಪಿ.ಎಚ್‌ಡಿ ಮಾಡುವಷ್ಟು ಮಾಹಿತಿ ಆತನಲ್ಲಿದೆ. ನೀರಿನ ವಿಷಯದಲ್ಲಿ ಅಷ್ಟು ತನ್ಮಯತೆ ಆತ ಸಾಧಿಸಿದ್ದಾಾನೆ. ಆ ಧ್ಯಾಾನದಿಂದಲೇ ಅವನ ಶುದ್ಧ ನೀರಿನ ಘಟಕ ಜನಪ್ರಿಿಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮುಂಬೈಗೆ ಭೇಟಿ ನೀಡಿದಾಗ ದಿಲಾಲ್ ಉತ್ಪಾಾದಿಸುವ ನೀರನ್ನು ಕುಡಿಯಲು ಕೊಡಲಾಯಿತು. ಮೋದಿಗೆ ನೀರು ಕೊಟ್ಟ ದಿಲಾಲ್ ಇಂದು ಮುಂಬೈದಲ್ಲಿ ಹೀರೋ ಆಗಿದ್ದಾಾನೆ. ಆತನ ನೀರಿಗೆ ದೊಡ್ಡ ಬೇಡಿಕೆ ಬರ ತೊಡಗಿದೆ. ಆತನನ್ನು ಜನ ‘ನೀರ ಸಾಬ’ ಎಂದು ಪ್ರೀತಿಯಿಂದ ಕರೆಯುತ್ತಾಾರೆ.
ಅಂಥವರಿಗೆ ಉತ್ತಮ ಸಹಯೋಗವೂ ಇರಬೇಕು ಎನ್ನುತ್ತಾಾ, ರತನ್‌ಜೀ ಹೇಳಿದರು, ‘ಉತ್ತಮ ನಾಯಕನಿಗೆ ಟೀಂ ಸರಿ ಇಲ್ಲದಿದ್ದರೆ ಎಲ್ಲ ಬಣ್ಣವನ್ನೂ ಮಸಿ ನುಂಗಿತು ಎನ್ನುವಂತಾಗುತ್ತದೆ. ಉದ್ದಿಮೆಗೆ ಏನೇ ದುರಂತವಾದರೂ ಭರವಸೆ ಕಳೆದುಕೊಳ್ಳಬಾರದು. ನೆಮ್ಮದಿಯಿಂದ ಊಟ, ನಿದ್ರೆೆ ಮಾಡಬೇಕು. ನಿಮ್ಮ ಅಂತರಾತ್ಮ ಮತ್ತು ಉದ್ದೇಶಗಳು ಶುದ್ಧವಾಗಿದ್ದರೆ ಚಮತ್ಕಾಾರಗಳು ಸಂಭವಿಸಬಹುದು. ನೀವು ಕನಸು ಮನಸ್ಸಿಿನಲ್ಲೂ ಯೋಚಿಸದವರು ಸಹಾಯಕ್ಕೆೆ ಧಾವಿಸಬಹುದು. ನಿಮಗೆ ಸಹಾಯ ಮಾಡುತ್ತಾಾರೆ ಎಂದು ನಂಬಿಕೊಂಡವರು ಕೈ ಕೊಡಬಹುದು. ಸೋಲಿಗೆ ಹೆದರಬಾರದು. ಸೋಲಿನ ನಂತರ ನೋವಿನ ಸಮಾಧಿಯೊಳಗೆ ಮಲಗಬಾರದು. ಮತ್ತೆೆ ಮತ್ತೆೆ ನಮಗೆ ಅವಕಾಶಗಳನ್ನು ನೀಡುವುದೇ ಬದುಕಿನ ಚಮತ್ಕಾಾರ. ಇದು ಪ್ರಜಾಭುತ್ವದ ವೈಭವ ಕೂಡ. ಅನಾರೋಗ್ಯ, ವೃದ್ಧಾಾಪ್ಯ ಹಾಗೂ ಸ್ವ ಜನ ಪಕ್ಷಪಾತ, ನಿರ್ಲಕ್ಷ್ಯದಿಂದ ಬಳಲಿ ನಿವೃತ್ತಿಿ ಜೀವನಕ್ಕೆೆ ಸಜ್ಜಾಾಗಿದ್ದ ಪಿ. ವಿ. ನರಸಿಂಹರಾವ್ ಅವರಿಗೆ ಪ್ರಧಾನಿ ಆಗುವ ಅವಕಾಶ ತಾನೇ ಧುತ್ತನೇ ಬಂದಿತು. ಇದು ನಾನು ಕಂಡ ದೊಡ್ಡ ಚಮತ್ಕಾಾರ. ಪ್ರಧಾನಿಯಾಗಿ 80ನೇಯ ವಯಸ್ಸಿಿನಲ್ಲಿ 5 ವರ್ಷ ದೇಶ ಆಳಿದರು. ಅವರು ಹೆಲ್‌ತ್‌ ಕೂಡಾ ಆಗ ಸುಧಾರಿಸಿತು’.
ರತನ್‌ಜೀ ಪ್ರಕಾರ, ‘ಪ್ರಯತ್ನ ನಿಲ್ಲಿಸುವುದೇ ಮರಣ. ಬದುಕಿನಲ್ಲಿ ನಂಬಿಕೆ, ಉತ್ಸಾಾಹಗಳೇ ನಮ್ಮ ಶಕ್ತಿಿ. ಮತ್ತೆೆ ಮತ್ತೆೆ ಪ್ರಯತ್ನ ಮಾಡುತ್ತಲೇ ಇರಬೇಕು ಫಲ ಸಿಕ್ಕೇ ಸಿಗುತ್ತದೆ. ಒಮ್ಮೊೊಮ್ಮೆೆ ತಡವಾಗಬಹುದು ಅಷ್ಟೇ. ಉದ್ದಿಮೆ ರಂಗ ವಿಚಿತ್ರವಾದದ್ದು. ಯಾವ ಕಾರ್ಖಾನೆಯೂ ಮುಚ್ಚಬಾರದು. ಉರುಳುತ್ತಲೇ ಇರಬೇಕು ಚಕ್ರ, ಹೊಸ ನೀರು ಹರಿಯುತ್ತಲೇ ಇರಬೇಕು. ಅಂದರೆ ಪ್ರವಾಹಕ್ಕೆೆ ಜೀವ ರಮ್ಯತೆ ಬರುತ್ತದೆ. ಸೂಕ್ತ ಬದಲಾವಣೆ ಮಾಡಿಕೊಂಡರೆ ಉದ್ದಿಮೆ ಹೊಸ ಆಯಾಮ ಪಡೆಯುತ್ತವೆ. ಅಪರಿಮಿತ ದುಡ್ಡು ಮತ್ತು ಅಧಿಕಾರದಿಂದ ಬರುವ ಅಹಂಕಾರವನ್ನು ತನಗೆ ತಾನೇ ದಮನ ಮಾಡಿಕೊಳ್ಳಬೇಕು. ನಾನು ನನ್ನೊೊಳಗಿನ ಅಹಂಕಾರ ದಮನ ಮಾಡಿಕೊಳ್ಳವುದನ್ನು ಕಲಿತದ್ದು ಸಮಾಜ ಸೇವೆಯಿಂದ’ ಈ ಮಾತುಗಳನ್ನು ಅವರ ಸೌಮ್ಯ ಧ್ವನಿಯಲ್ಲಿ ಕೇಳುವಾಗ ಸಂತನಂತೆ ಪರಿಪೂರ್ಣ ಜಂಟಲಮನ್‌ನಂತೆ ನನಗೆ ಕಂಡರು.
‘ಫಿಯರ್ ಅಂದರೆ ಹೆದರಿಕೆ. ಇದು ನೆಮ್ಮಲ್ಲರ ದೊಡ್ಡ ಶತ್ರು. ಮಾಡಬೇಕು ಎಂದು ನಿರ್ಧರಿಸಿದ ಕೆಲಸಗಳನ್ನು ಧೈರ್ಯವಾಗಿ ಮಾಡಬೇಕು. ನೀವು ಭಯದ ಕೋಣೆಯಲ್ಲಿ ಗಟ್ಟಿಿಯಾಗಿ ಬಾಗಿಲು ಮುಚ್ಚಿಿ ಕುಳಿತರೆ ಹೊರಗೆ ಬರಲಾರಿರಿ. ಆದರೆ ಜಗತ್ತು ಹೊರಗಿದೆ. ಅದು ವಿಶಾಲ ಬಯಲಲ್ಲಿದೆ. ಇದು ದೊಡ್ಡ ಮೈದಾನ. ನಿರ್ಭಯವಾಗಿ ಓಡಾಡಬೇಕು. ಓಡುತ್ತಲೇ ಇರಬೇಕು’.
ಅವರು ಅತ್ಯಂತ ಸೊಗಸಾದ ಮಾತುಗಳನ್ನು ಹೇಳುವಾಗ ಟಿವಿ ಜಾಹೀರಾತು ಕಿರಿಕಿರಿ ಆರಂಭವಾಯಿತು. ಟಿವಿ ಮತ್ತು ಪತ್ರಿಿಕಾ ಮಾಧ್ಯಮಕ್ಕೆೆ ಜಾಹೀರಾತು ರಕ್ತ ಇದ್ದ ಹಾಗೆ. ಜಾಹೀರಾತು ಇಲ್ಲದೆ ಮಾಧ್ಯಮ ಜಗತ್ತು ಬದುಕಲಾರದ ಸ್ಥಿಿತಿ ನಿರ್ಮಾಣವಾಗುತ್ತಿಿದೆ. ನಾನು ‘ಸಮಯ ಟಿವಿ’ ಮಾಲೀಕನಾಗಿ ಈ ಕುರಿತು ಬಹಳಷ್ಟು ಕಲಿತು ಕೊಂಡಿದ್ದೇನೆ. ಈ ಉದ್ದಿಮೆಯ ಅಂತರಂಗ- ಬಹಿರಂಗ ಚೆನ್ನಾಾಗಿ ಗೊತ್ತು. ಆದರೂ ಕಿರಿಕಿರಿಯಾಯಿತು.
ಜಾಹೀರಾತಿನ ನಂತರ, ‘ನಿಮಗೆ ಶಿಸ್ತಿಿನ ಬಗ್ಗೆೆ ಹೇಳುತ್ತೇನೆ’ ಎಂದು ಅವರ ಮಾತು ಆರಂಭಿಸಿದರು. ‘ಅಶಿಸ್ತು ಕೂಡ ಒಂದು ರೀತಿಯ ಶಿಸ್ತು. ಹೀಗೆ ಹೇಳುವುದನ್ನು ಕೇಳಿ ನೀವು ಗೊಂದಲ ಮಾಡಿಕೊಳ್ಳಬೇಡಿ. ಅಶಿಸ್ತಿಿನ ಬಗ್ಗೆೆ ಬಹಳ ಚಿಂತಿಸುವುದು ಸರಿಯಲ್ಲ. ಯೋಜಿಸಿದ ಪ್ಲಾಾನ್ ಆರಂಭ ಮಾಡಿ. ಗೊಂದಲಗಳಿದ್ದರೆ ಅವು ತಾವಾಗಿಯೇ ಪರಿಹಾರವಾಗುತ್ತವೆ. ಎಲ್ಲ ಗೊಂದಲಗಳನ್ನು ಪರಿಹರಿಸಿ ಕೆಲಸ ಆರಂಭಿಸಬೇಕು ಎಂದು ಅನೇಕರು ಹೇಳುತ್ತಾಾರೆ. ಆಗ ಗೊಂದಲಗಳನ್ನು ಪರಿಹರಿಸುವುದರಲ್ಲಿಯೇ ಸಮಯ ಕಳೆದು ಹೋಗುತ್ತದೆ. ದಿನ ಕಳೆದಂತೆ ಮತ್ತೊೊಂದು ಸಮಸ್ಯೆೆ ಬಂದು ನಿಲ್ಲುತ್ತದೆ. ಇದೊಂದು ರೀತಿ ‘ಮದುವೆಯಾಗದೆ ಹುಚ್ಚು ಬಿಡದು, ಹುಚ್ಚು ಬಿಡದೆ ಮದುವೆಯಾಗದು’ ಎನ್ನುವ ರೀತಿ. ಸ್ಪಷ್ಟತೆಯ ಝಲಕ್ ಗೊಂದಲದಲ್ಲಿಯೇ ಗೋಚರಿಸುತ್ತದೆ. ಉದ್ದಿಮೆಯಲ್ಲಿ ಲಾಭ-ಹಾನಿ ಇದ್ದದ್ದೇ. ಸೇಫ್ ಆಗಿರಬೇಕು ಎಂದರೆ ಸರಕಾರಿ ಕಚೇರಿಯಲ್ಲಿ ಕ್ಲಾಾರ್ಕ್ ಆಗಿ ಕುಳಿತು ಕೊಳ್ಳಬಹುದು’.
ಫೋನ್ ಕರೆಗಳು ಬರುತ್ತಲೇ ಇದ್ದವು. ತಕ್ಷಣ ನನ್ನ ಎರಡೂ ಫೋನಗಳನ್ನು ಸೈಲೆಂಟ್ ಮಾಡಿ ಇಟ್ಟೆೆ. ರತನ್ ಟಾಟಾ ಮಾತುಗಳನ್ನು ಪೂರ್ಣ ಆಲಿಸಿ, ನನ್ನದಾಗಿಸಿಕೊಳ್ಳಬೇಕು ಎಂಬ ಉತ್ಸಾಾಹದ ಮೂಡ್ ನನ್ನಲ್ಲಿ ಬಂದು ಬಿಟ್ಟಿಿತ್ತು.
ರತನ್ ಜೀ ಮಾತು ಮುಂದುವರಿಸಿದರು, ‘ನನಗೆ ಮಹಾತ್ಮ ಗಾಂಧಿ ಅವರ ಆರ್ಥಿಕ ವಿಚಾರಗಳ ಬಗ್ಗೆೆ ಬಹಳ ಗೌರವವಿದೆ. ಸ್ವಾಾತಂತ್ರ್ಯ ಪೂರ್ವದ ಆ ದಿನಗಳಲ್ಲಿ ಭಾರತದ ಜನಕ್ಕೆೆ ಏನು ಕೊಡಬೇಕು ಎಂಬುದು ಅವರಿಗೆ ಚೆನ್ನಾಾಗಿ ತಿಳಿದಿತ್ತು. ‘ಚರಕ’ ಎಂಬ ಒಂದು ಸಣ್ಣ ಯಂತ್ರವನ್ನು ಜನರ ಕೈಗೆ ಗಾಂಧೀಜಿ ಕೊಟ್ಟರು. ಗಂಡಸರು, ಮಹಿಳೆಯರು, ಮಕ್ಕಳು, ವೃದ್ಧರು ನೂಲತೊಡಗಿದರು. ಆ ಚರಕ ದೊಡ್ಡ ಜಾದೂ ಮಾಡಿತು. ಭಾರತದ ಬಡ ಜನರಿಗೆ ಉದ್ಯೋೋಗ ಮತ್ತು ಆಸರೆ ಒದಗಿಸಿತು’.
ಗಾಂಧೀಜಿ 1933ರಲ್ಲಿ ಸ್ವದೇಶಿ ಉಪ್ಪುು ತಯಾರಿಕೆಗೆ ಕರೆ ನೀಡಿದರು. ಸ್ವದೇಶಿ ಉಪ್ಪುು ತಯಾರಿಸಿದ್ದಕ್ಕೆೆ ಗಾಂಧೀಜಿಯೂ ಸೇರಿದಂತೆ ಅನೇಕರು ಜೈಲಿಗೆ ಕೂಡ ಹೋದರು. ನೂಲುವುದು ಮತ್ತು ಉಪ್ಪುು ತಯಾರಿಸುವುದನ್ನು ಬ್ರಿಿಟಿಷ್ ಸರಕಾರ ಪ್ರತಿಬಂಧಿಸಿದ್ದಕ್ಕೆೆ, ಜಗತ್ತಿಿನ ಆರ್ಥಿಕ ತಜ್ಞರು ಮತ್ತು ಮುತ್ಸದ್ದಿಗಳು ಬ್ರಿಿಟಿಷ್ ಸರಕಾರವನ್ನು ಕಟುವಾಗಿ ಟೀಕಿಸತೊಡಗಿದರು. ಭಾರತೀಯರು ತಮ್ಮ ಸಮುದ್ರದ ನೀರಿನಿಂದ ಉಪ್ಪುು ತಯಾರಿಸಿ ತಿನ್ನುತ್ತಾಾರೆ. ತಾವೇ ಬೆಳೆದ ಹತ್ತಿಿಯಿಂದ ತಮ್ಮ ಬಟ್ಟೆೆ ತಾವೇ ಮಾಡಿಕೊಳ್ಳುತ್ತಾಾರೆ. ಉಪ್ಪುು ತಯಾರಿಸುವುದು, ನೂಲುವುದು ತಪ್ಪೆೆಂದು ಬ್ರಿಿಟಿಷ್ ಸರಕಾರ ಹೇಳುವುದು ದಬ್ಬಾಾಳಿಕೆಯ ಪರಮಾವಧಿಯಾಗುತ್ತದೆ ಎಂದು ಜಗತ್ತು ಖಂಡಿಸತೊಡಗಿತು. ಇದರಿಂದ ಬ್ರಿಿಟಿಷರ ಶಕ್ತಿಿ ಕುಂದತೊಡಗಿತು. ಅದುವೇ ಭಾರತದ ಸ್ವಾಾತಂತ್ರ್ಯಕ್ಕೆೆ ನಾಂದಿ ಸಹ ಆಯಿತು.
‘ಉದ್ದಿಮೆ ರಂಗದಲ್ಲಿರುವ ಗೆಳೆಯರೇ, ಒಂದು ಮಾತು ನೀವು ಮರೆಯಬಾರದು. ಕೈಗಾರಿಕೆ ನಡೆಸುವಾಗ ಒಮ್ಮೊೊಮ್ಮೆೆ ಭಾರೀ ಆಘಾತಗಳು ಸಂಭವಿಸುತ್ತವೆ. ಎದೆಗುಂದಬೇಡಿ. ಯಾರ ಮೇಲೂ ಕೂಗಾಡಬೇಡಿ. ಧೈರ್ಯವಾಗಿ ಎದುರಿಸಿ. ಗಾಯ ಗುಣವಾಗಲು ಸ್ವಲ್ಪ ಕಾಲಬೇಕು. ಕಾಲ ಎಲ್ಲವನ್ನು ಎಲ್ಲರನ್ನೂ ಸರಿಪಡಿಸುತ್ತದೆ. *ಜಿಞಛಿ ಜಿ ್ಛ್ಚಠಿಟ್ಟ ಠಿಠಿ ಛ್ಝಿ ಟ ಞ್ಞ ್ಟಟಚ್ಝಿಿಛಿಞ. ಈ ಪ್ರಪಂಚವನ್ನು ನೀವೊಬ್ಬರೇ ನಡೆಸುತ್ತಿಿಲ್ಲ. ಎಲ್ಲರೂ ತಮಗೆ ಶಕ್ತಿಿಯಿರುವಷ್ಟು ನಡೆಸುತ್ತಾಾರೆ ಜನರು ಟೀಕಿಸುತ್ತಾಾರೆ. ಅವರ ಟೀಕೆ ಒಮ್ಮೊೊಮ್ಮೆೆ ಸರಿಯಾಗಿದ್ದಿರಬಹುದು. ತಿದ್ದಿಕೊಳ್ಳವುದು ಅವಶ್ಯವೆನಿಸಿದರೆ ತೆರೆದ ಮನಸ್ಸಿಿನಿಂದ ತಪ್ಪೊೊಪ್ಪಿಿಕೊಂಡು ಬದಲಾಗಿ ಬಿಡಿ!’
‘ಕೈಗಾರಿಕರಣಗೊಳ್ಳದಿದ್ದರೆ ನಾಶವೇ ಗತಿ *(ಐ್ಞ್ಠಠ್ಟಿಿಜ್ಝಿಜ್ಢಿಿಛಿ ಟ್ಟ ಛ್ಟಿಿಜಿ) ಎಂದು ಜವಾಹರಲಾಲ್ ನೆಹರು ಹೇಳುತ್ತಿಿದ್ದರು. ಅವರಿಗೆ ದೇಶದ ಮುನ್ನೋೋಟ ಚೆನ್ನಾಾಗಿ ತಿಳಿದಿತ್ತು. ಕೈಗಾರಿಕೆಗಳು ಜನರ ಆಶೋತ್ತರಕ್ಕೆೆ ಸ್ಪಂದಿಸಬೇಕು. ಕೃಷಿ ಆಧರಿತ ಉದ್ದಿಮೆಗೆ ಹೆಚ್ಚು ಒತ್ತುಕೊಡಬೇಕು. ಭಾರತ ಕೃಷಿ ಪ್ರಧಾನ ದೇಶ. ರೈತರಿಗೆ ನೆರವಾಗುವ ರೀತಿಯಲ್ಲಿ ಕೈಗಾರಿಕೆಗಳು ಬೆಳೆಯಬೇಕು.’
ಮುಂಬೈ ಕೊಲಾಬಾದಲ್ಲಿ ವಾಸವಾಗಿರುವ ರತನ್‌ಜೀ ಜನಿಸಿದ್ದು 28 ಡಿಸೆಂಬರ್ 1937ರಂದು. ಕಾರ್ನೆಲ್ ಮತ್ತು ಹಾರ್ವರ್ಡ್ ವಿಶ್ವವಿದ್ಯಾಾಯಗಳಲ್ಲಿ ಓದಿದ್ದಾಾರೆ. ಅವರಿಗೆ ಭಾರತ ಸರಕಾರದ ಪದ್ಮ ಭೂಷಣ ಮತ್ತು ಪದ್ಮ ವಿಭೂಷಣ ಪ್ರಶಸ್ತಿಿಗಳು ಬಂದಿವೆ. ಜಗತ್ತಿಿನಾದ್ಯಂತ 37 ವಿಶ್ವವಿದ್ಯಾಾಲಯಗಳು ಗೌರವ ಡಾಕ್ಟರೇಟ್ ಪದವಿ ನೀಡಿವೆ. ಇಷ್ಟು ಗೌರವ ಡಾಕ್ಟರೇಟ್ ಪಡೆದ ಇನ್ನೊೊಬ್ಬ ಭಾರತೀಯ ಬಹುಶಃ ಇರಲಿಕ್ಕಿಿಲ್ಲ.
ರತನ್‌ಜೀ ಅವರ ಎತ್ತರದ ನಿಲುವು, ಚೆನ್ನಾಾಗಿ ಬಾಚಿದ ಉದ್ದ ಕೂದಲು, ಅಹಂಕಾರ ಇಲ್ಲದ ಶಾಂತ ಮುಖ ನನ್ನನ್ನು ಬಹಳ ಸೆಳೆದಿವೆ. ಅವರು ತಮ್ಮ ಕೈಗಾರಿಕೆಯಲ್ಲಿ ದುಡಿಯುವ ಸಿಬ್ಬಂದಿ ಬಗ್ಗೆೆ ಬಹಳ ಪ್ರೀತಿಯನ್ನು ಹೊಂದಿದ್ದಾಾರೆ. ಇದನ್ನೆೆಲ್ಲ ನಾನು ಪ್ರತ್ಯಕ್ಷವಾಗಿ ಕಂಡಿದ್ದೇನೆ. ಉದ್ದಿಮೆ ಹೊರತುಪಡಿಸಿ ಅವರ ವ್ಯಕ್ತಿಿತ್ವವನ್ನು ಪ್ರತ್ಯೇಕಿಸಿದರೆ ನಿಜವಾದ ರತನ್ ಟಾಟಾ ಕಾಣಿಸುವುದೇ ಇಲ್ಲ. ಉದ್ದಿಮೆಯೊಂದಿಗೆ ಅವರ ಬದುಕು ಹಾಗೆ ಬೆಸೆದುಕೊಂಡಿದೆ.
ಈ ಸಂದರ್ಭದಲ್ಲಿ ಇನ್ಫೋೋಸಿಸ್ ಸುಧಾಮೂರ್ತಿ ತಮ್ಮ ಆತ್ಮಕಥೆಯಲ್ಲಿ ದಾಖಲಿಸಿದ ಘಟನೆ ನೆನಪಾಗುತ್ತಿಿದೆ. ಸುಧಾಮೂರ್ತಿ ಆರಂಭದಲ್ಲಿ, ಟಾಟಾ ಸಂಸ್ಥೆೆಯ ಪೂನಾ ಘಟಕದಲ್ಲಿ ಎಂಜಿನಿಯರ್ ಆಗಿದ್ದರು. ಅವರು ಒಂದು ದಿನ ತಡರಾತ್ರಿಿ ರಸ್ತೆೆಯಲ್ಲಿ ಸಿಟಿ ಬಸ್ಸಿಿಗಾಗಿ ಕಾಯುತ್ತಿಿದ್ದರು. ಅದೇ ಮಾರ್ಗವಾಗಿ ಹೋಗುತ್ತಿಿದ್ದ ರತನ್ ಟಾಟಾ ತಮ್ಮ ಸಂಸ್ಥೆೆಯ ಉದ್ಯೋೋಗಿ ಸುಧಾಮೂರ್ತಿ ನಿಂತಿರುವುದನ್ನು ಗಮನಿಸಿ ಗಾಡಿ ನಿಲ್ಲಿಸಿದರು. ತಮ್ಮ ವಾಹನದಲ್ಲಿ ಕರೆದುಕೊಂಡು ಅವರನ್ನು ಮನೆತನಕ ಬಿಟ್ಟುಬಂದರು. ಇದು ರತನ್ ಅವರು ತಮ್ಮ ಉದ್ಯೋೋಗಿಗಳ ಬಗ್ಗೆೆ ಹೊಂದಿದ ಕಾಳಜಿಗೆ ಸಾಕ್ಷಿ.
==

One thought on “ರತನ್ ಟಾಟಾ ಹೇಳಿದ ಬದುಕಿನ ಪಾಠಗಳು

  1. Tumbaa sogasada lekhana , tilidukaolla bekada visayagalu lekhanadalli eve. …………….kannadadalli bareyuva hage tantravnsa abhivrudhhi padasi sir.

Leave a Reply

Your email address will not be published. Required fields are marked *