Saturday, 8th August 2020

ಎರಡನೇ ಅವಧಿಗೂ ರವಿಶಾಸ್ತ್ರಿ ಫಿಕ್‌ಸ್‌

2021ರವರೆಗೂ ಭಾರತದ ಮುಖ್ಯ ಕೋಚ್ ಆಗಿ ಮಾಜಿ ಆಲ್‌ರೌಂಡರ್ ಮುಂದುವರಿಕೆ :ಕ್ರಿಕೆಟ್ ಸಲಹಾ ಸಮಿತಿಯಿಂದ ನಿರ್ಧಾರ

ಮುಂಬೈ:
ಹಲವು ದಿನಗಳಿಂದ ಕ್ರಿಿಕೆಟ್ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಭಾರತ ಕ್ರಿಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆೆಯ ಆಯ್ಕೆೆಯ ಕಸರತ್ತು ಶುಕ್ರವಾರ ಅಂತಿಮಗೊಂಡಿತು. ಎರಡನೇ ಅವಧಿಗೂ ಟೀಮ್ ಇಂಡಿಯಾದ ಮುಖ್ಯ ತರಬೇತುದಾರರಾಗಿ ರವಿಶಾಸ್ತ್ರಿಿ ಅವರನ್ನು ಕಪಿಲ್‌ದೇವ್ ನೇತೃತ್ವದ ಕ್ರಿಿಕೆಟ್ ಸಲಹಾ ಸಮಿತಿ ನೇಮಕ ಮಾಡಿ ಪ್ರಕಟಿಸಿದೆ.
2021ರಲ್ಲಿ ಭಾರತದಲ್ಲಿ ನಡೆಯುವ ಐಸಿಸಿ ಟಿ-20 ವಿಶ್ವಕಪ್‌ವರೆಗೂ ರವಿಶಾಸ್ತ್ರಿಿ ಅವರು ಗುತ್ತಿಿಗೆ ಅವಧಿ ಮುಂದುವರಿಯಲಿದೆ. ಇದರೊಂದಿಗೆ ಟೀಮ್ ಇಂಡಿಯಾದಲ್ಲಿ ನಾಲ್ಕನೇ ಅವಧಿಗೆ ಹುದ್ದೆೆಯೊಂದನ್ನು ರವಿಶಾಸ್ತ್ರಿಿ ನಿರ್ವಹಿಸಿದ್ದಂತಾಯಿತು. 2007ರಲ್ಲಿ ಬಾಂಗ್ಲಾಾದೇಶ ಪ್ರವಾಸಕ್ಕೆೆ ಕ್ರಿಿಕೆಟ್ ವ್ಯವಸ್ಥಾಾಪಕ ಹುದ್ದೆೆ, 2014 ರಿಂದ 2016ರವರೆಗೆ ತಂಡದ ನಿರ್ದೇಶಕ ಹುದ್ದೆೆ ಹಾಗೂ 2017-19ರ ಅವಧಿಯಲ್ಲಿ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಿದ್ದಾಾರೆ.

ಟೀಮ್ ಇಂಡಿಯಾ ರೇಸ್‌ನಲ್ಲಿ ಮೊದಲನೇದಾಗಿ ರವಿಶಾಸ್ತ್ರಿ, ಎರಡನೇಯದಾಗಿ ಮೈಕ್ ಹೆಸ್ಸನ್ ಹಾಗೂ ಮೂರನೇ ಸ್ಥಾನದಲ್ಲಿ ಟಾಮ್ ಮೋಡಿ ಇದ್ದರು. ಈ ಮೂವರಲ್ಲಿ ಸ್ಪರ್ಧೆ ಏರ್ಪಟ್ಟಿತ್ತು ಎಂದು ಕಪಿಲ್‌ದೇವ್ ಸುದ್ದಿಗೋಷ್ಠಿಿಯಲ್ಲಿ ಬಹಿರಂಗಪಡಿಸಿದ್ದರು.

ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ಉತ್ತಮ ಬಾಂಧವ್ಯ ಹಾಗೂ ಭಾರತ ತಂಡದ ಎಲ್ಲ ಆಟಗಾರರು ಶಾಸ್ತ್ರಿಿ ಅವರನ್ನೇ ಮುಂದುವರಿಸುವಂತೆ ಆಶಿಸಿತ್ತು. 2017ರಲ್ಲಿ ಐಸಿಸಿ ಚಾಂಪಿಯನ್‌ಸ್‌ ಟ್ರೋೋಫಿ ಫೈನಲ್ ನಲ್ಲಿ ಭಾರತ ಸೋಲು ಅನುಭವಿಸಿದ ಬಳಿಕ ಅನಿಲ್ ಕುಂಬ್ಳೆೆ ಹಾಗೂ ನಾಯಕ ವಿರಾಟ್ ಕೊಹ್ಲಿಿ ಅವರೊಂದಿಗೆ ಮನಸ್ತಾಾಪದಿಂದ ಟೀಮ್ ಇಂಡಿಯಾ ಮುಖ್ಯ ಕೋಚ್ ಸ್ಥಾಾನದಿಂದ ಸ್ಪಿಿನ್ ದಂತಕತೆ ಕೆಳಗೆ ಇಳಿದಿದ್ದರು. ನಂತರ, ರವಿಶಾಸ್ತ್ರಿಿ ತಂಡದ ಸಾರಥ್ಯವನ್ನು ವಹಿಸಿಕೊಂಡಿದ್ದರು.
2017 ರಿಂದ ಇಲ್ಲಿಯವರೆಗೂ ರವಿಶಾಸ್ತ್ರಿಿ ನೇತೃತ್ವದ ಭಾರತ ತಂಡ ಗಮನಾರ್ಹ ಪ್ರದರ್ಶನ ನೀಡಿದೆ. ಆಸ್ಟ್ರೇಲಿಯಾ ನೆಲದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ನೆಲದಲ್ಲೇ ಟೆಸ್‌ಟ್‌ ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಜತೆಗೆ, ಕಳೆದ ವರ್ಷ ಆಫ್ರಿಿಕಾ ನೆಲದಲ್ಲಿ 5-1 ಅಂತರದಲ್ಲಿ ಏಕದಿನ ಸರಣಿ ಗೆದ್ದಿತ್ತು.

ಇದುವರೆಗೂ ರವಿಶಾಸ್ತ್ರಿಿ ನೇತೃತ್ವದಲ್ಲಿ ಭಾರತ 21 ಟೆಸ್‌ಟ್‌ ಪಂದ್ಯಗಳಾಡಡಿದ್ದು, 13ರಲ್ಲಿ ಜಯ ಸಾಧಿಸಿದೆ. 60 ಏಕದಿನ ಪಂದ್ಯಗಳಲ್ಲಿ 43ರಲ್ಲಿ ಗೆಲುವು ಪಡೆದಿದೆ ಹಾಗೂ 36 ಟಿ-20 ಪಂದ್ಯಗಳಲ್ಲಿ 25ರಲ್ಲಿ ವಿಜಯ ಪತಾಕೆ ಹಾರಿಸಿದೆ. ಐಸಿಸಿ ವಿಶ್ವಕಪ್ ಸೆಮಿಫೈನಲ್ ಸೋತು ನಿರಾಸೆ ಒಳಗಾಗಿದ್ದ ಭಾರತ ತಂಡ ಕೆರಿಬಿಯನ್ ನಾಡಿನಲ್ಲಿ ಟಿ-20, ಏಕದಿನ ಸರಣೀ ಗೆದ್ದು ಮತ್ತೇ ಗೆಲುವಿನ ಲಯಕ್ಕೆೆ ಬಂದಿದೆ.

ಮುಖ್ಯ ರೇಸ್‌ನಲ್ಲಿ ಇದ್ದವರು ಯಾರು?

1. ರವಿಶಾಸ್ತ್ರಿ
2.ಮೈಕ್ ಹೆಸ್ಸನ್
3. ಟಾಮ್ ಮೋಡಿ
4.ಲಾಲ್‌ಚಂದ್ ರಜಪೂತ್
5.ರಾಬಿನ್ ಸಿಂಗ್
6.ಫಿಲ್ ಸಿಮೋನ್‌ಸ್‌

ರವಿಶಾಸ್ತ್ರಿ ಮುಂದುವರಿಸಲು ಕಾರಣಗಳಿವು

-ಟೀಮ್ ಇಂಡಿಯಾ ನಾಯಕ ಹಾಗೂ ತಂಡದ ಆಟಗಾರರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿರುವುದು
-ಶಾಸ್ತ್ರಿ ನಾಯಕತ್ವದಲ್ಲಿ ಭಾರತ ತಂಡ ಟೆಸ್‌ಟ್‌, ಏಕದಿನ ಹಾಗೂ ಟಿ-20 ಎಲ್ಲ ಮಾದರಿಯಲ್ಲಿ ಗಮನಾರ್ಹ ಪ್ರದರ್ಶನ ತೋರಿರುವುದು
-ರವಿಶಾಸ್ತ್ರಿಿ ಗೆ ಸರಿಸಮನಾಗಿ ಮುಖ್ಯ ಕೋಚ್ ರೇಸ್‌ನಲ್ಲಿ ಯಾರೂ ಇಲ್ಲದೆ ಇರುವುದು
-ಕಾಂಗೂರು ನಾಡಿನಲ್ಲಿ ಕೊಹ್ಲಿಿ ಪಡೆ ಆಸ್ಟ್ರೇಲಿಯಾ ವಿರುದ್ಧ ಟೆಸ್‌ಟ್‌ ಸರಣಿ ಗೆದ್ದು ಐತಿಹಾಸಿಕ ದಾಖಲೆ ಮಾಡಿತ್ತು.
-ನೂತನ ಕೋಚ್ ನೇಮಕ ಮಾಡುವುದರಿಂದ ತಂಡ ಹೊಂದಿಕೊಳ್ಳಲು ಹೆಚ್ಚು ಸಮಯ ಅಗತ್ಯ.

ಶಾಸ್ತ್ರಿ ಎರಡು ವರ್ಷಗಳ ಸಾಧನೆ

ಮಾದರಿ     ಒಟ್ಟು ಪಂದ್ಯಗಳು ಜಯ  ಶೇ.
ಟೆಸ್‌ಟ್‌  21 13 52.38
ಏಕದಿನ 60 43 71.67
ಟಿ-20 36 25 69.44

ರವಿಶಾಸ್ತ್ರಿ ಮುಂದುವರಿಕೆಗೆ ನೆಟ್ಟಿಗರ ಆಕ್ರೋಶ
ಎರಡನೇ ಅವಧಿಗೂ ರವಿಶಾಸ್ತ್ರಿ ಅವರನ್ನೂ ಟೀಮ್ ಇಂಡಿಯಾಗೆ ಮುಖ್ಯ ಕೋಚ್ ಆಗಿ ಆಯ್ಕೆೆ ಮಾಡಿರುವುದಕ್ಕೆೆ ನೆಟ್ಟಿಿಗರು ಕಿಡಿಕಾರಿದ್ದಾಾರೆ. ಹಲವು ಕ್ರಿಕೆಟ್ ಪ್ರತಿಭೆಗಳನ್ನು ಬೆಳಕಿಗೆ ತಂದಿದ್ದು, ರಾಹುಲ್ ದ್ರಾಾವಿಡ್. ಆದರೆ, ಪ್ರತಿಭೆಗಳಿಂದ ಫಸಲನ್ನು ಪಡೆಯುತ್ತಿಿರುವುದು ರವಿಶಾಸ್ತ್ರಿಿ. ರವಿಶಾಸ್ತ್ರಿಿ ಮರು ನೇಮಕ ಮಾಡಿರುವುದು ರಾಜಕೀಯ ಪ್ರೇರಿತ. ಐಸಿಸಿ ವಿಶ್ವಕಪ್ ಗೆಲ್ಲುವಲ್ಲಿ ಭಾರತ ತಂಡ ಶಾಸ್ತ್ರಿಿ ಅವರ ಸಾರಥ್ಯದಲ್ಲಿ ವಿಫಲವಾಗಿದೆ. ಆಗಿದ್ದರೂ ಅವರನ್ನೇ ಮತ್ತೆೆ ಆಯ್ಕೆೆ ಮಾಡಲಾಗಿದೆ. ಇನ್ನೂ ಮಧ್ಯಮ ಕ್ರಮಾಂಕದ ಬ್ಯಾಾಟಿಂಗ್ ಸರಿಯಾಗಿಲ್ಲ. ರವಿಶಾಸ್ತ್ರಿ ಅವರನ್ನು ತೆಗೆದುಹಾಕಿ ಎಂದು ಕೆಲವರು ಟ್ವೀಟ್ ಮಾಡಿದ್ದಾಾರೆ. ಇದೇ ರೀತಿ ಹಲವು ರವಿಶಾಸ್ತ್ರಿಿಆಯ್ಕೆ ವಿರುದ್ಧ ಕಿಡಿಕಾರಿದ್ದಾರೆ.

Leave a Reply

Your email address will not be published. Required fields are marked *