Sunday, 25th September 2022

ಅಗ್ರಸ್ಥಾನಿ ರಾಯಲ್ಸ್ ತಂಡಕ್ಕೆ ಬಲಿಷ್ಠ ಆರ್‌ಸಿಬಿ ಸವಾಲು

#RCBvsRR

ಮುಂಬೈ: ಮ್ಯಾಕ್ಸ್​​ವೆಲ್​​ ಮತ್ತು ಹ್ಯಾಝಲ್​​ವುಡ್​​ ಆಗಮನದಿಂದ ಆರ್​​ಸಿಬಿ ವಿಶ್ವಾಸ ಹೆಚ್ಚಿಸಿದೆ. ಮತ್ತೊಂದು ಕಡೆಯಲ್ಲಿ ಸತತ ಸ್ಥಿರ ಪ್ರದರ್ಶನ ರಾಜಸ್ಥಾನ ರಾಯಲ್ಸ್​​​ ಬಲವನ್ನು ಹೆಚ್ಚಿಸಿದೆ.

ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಶಫೇನ್ ರುದರ್​​ ಫೋರ್ಡ್​ ಜಾಗದಲ್ಲಿ ಗ್ಲೆನ್​​ ಮ್ಯಾಕ್ಸ್​​ವೆಲ್​​ ಆಡಿದರೆ, ಜೋಶ್​ ಹ್ಯಾಜಲ್​​​ ವುಡ್​​ ಡೇವಿಡ್​​ ವಿಲ್ಲಿಯ ಜಾಗದಲ್ಲಿ ಆಡಲಿದ್ದಾರೆ. ನಾಯಕ ಫಾಫ್​​ ಡು ಪ್ಲೆಸಿಸ್​​ ಮತ್ತು ವನಿಂದು ಹಸರಂಗ ಇನ್ನೆರಡು ಫಾರಿನ್​​ ಕೋಟಾದ ಅಟಗಾರರು.

ಫಾಫ್​​ ಡು ಪ್ಲೆಸಿಸ್​​ ಜೊತೆಗೆ ಇನ್ನಿಂಗ್ಸ್​​ ಆರಂಭಿಸುವ ಅನೂಜ್​​ ರಾವತ್​​ ಸ್ಥಿರತೆ ಬಗ್ಗೆ ಪ್ರಶ್ನೆ ಇದೆ. ದಿನೇಶ್​​ ಕಾರ್ತಿಕ್​​ ಮತ್ತು ಶಹಬಾಝ್​​ ನದೀಮ್​​​ ಫಿನಿಷರ್​​ ಕೆಲಸವನ್ನು ಮಾಡಬೇಕಿದೆ. ವನಿಂದು ಹಸರಂಗ ಲೆಗ್​​ ಸ್ಪಿನ್​ ಸ್ಪೆಷಲಿಸ್ಟ್​​. ಇವರಿಗೆ ಈ ಬಾರಿ ಮ್ಯಾಕ್ಸ್​​ವೆಲ್​​ ಆಫ್​​ ಸ್ಪಿನ್​​​​ ಬಲವೂ ಸಿಗಲಿದೆ. ಮೊಹಮ್ಮದ್​​ ಸಿರಾಜ್​​​​ ಜೊತೆ ಹ್ಯಾಝಲ್​​ ವುಡ್​​ ಹೊಸ ಚೆಂಡು ಹಂಚಿಕೊಳ್ಳ ಲಿದ್ದಾರೆ. ಹರ್ಷಲ್ ಪಟೇಲ್​​ ಮತ್ತು ಆಕಾಶ್​​ ದೀಪ್​​ ಇನ್ನಿಬ್ಬರು ಬೌಲರ್​​ಗಳು.

ರಾಜಸ್ಥಾನ ರಾಯಲ್ಸ್​​ ಟೂರ್ನಿಯಲ್ಲಿ ಬ್ಯಾಲೆನ್ಸ್​​​ ಆಗಿರುವ ತಂಡದಂತೆ ಕಾಣುತ್ತಿದೆ. ಜೋಸ್​​ ಬಟ್ಲರ್​​, ಯಶಸ್ವಿ ಜೈಸ್ವಾಲ್​​, ದೇವದತ್​​ ಪಡಿಕಲ್​​ ಮತ್ತು ಸಂಜು ಸ್ಯಾಮ್ಸನ್​​ ಬ್ಯಾಟಿಂಗ್​​ ಬಲ ಎದುರಾಳಿ ಬೌಲರ್​ಗಳ ಎದುರಾಳಿಗಳ ಎದೆ ಬಡಿತ ಹೆಚ್ಚಿಸಿದೆ. ಶಿಮ್ರನ್​​ ಹೆಟ್ಮಾಯರ್​​​​ ಬ್ಯಾಟಿಂಗ್​​ನ ಫಿನಿಷಿಂಗ್​​ ಟಚ್​​ ಸಿಕ್ಕಿದೆ. ರಿಯಾನ್​​ ಪರಾಗ್​ ಆಲ್​​ರೌಂಡರ್​​ ಕೋಟಾ ಭರ್ತಿ ಮಾಡಿದ್ದಾರೆ. ಅಶ್ವಿನ್​​ ಮತ್ತು ಯಜ್ವೆಂದರ್​​ ಚಹಲ್​​ ಎದುರಾಳಿಗಳಿಗೆ ಬಿಡಿಸಲಾಗದ ಕಗ್ಗಂಟು. ಟ್ರೆಂಟ್​​ಬೋಲ್ಟ್​​ ಮತ್ತು ಪ್ರಸಿಧ್​​ ಕೃಷ್ಣ ವೇಗ ಮತ್ತು ಸ್ವಿಂಗ್​​​​ ಎದುರಾಳಿಗೆ ಆರಂಭದಲ್ಲೇ ಚಾಲೆಂಜ್​​.