Friday, 9th December 2022

ಹಿಟ್‌ ಅಂಡ್​ ರನ್‌ಗೆ ಯುವ ಬೈಕ್ ಸವಾರ ಬಲಿ

ಬೆಂಗಳೂರು: ಕೋವಿಡ್ ನಿಯಂಯ್ರಣ ನೈಟ್ ಕರ್ಫ್ಯೂ ನಡುವೆಯೇ ಬೆಂಗಳೂರಿನ ಲಾಲ್‌ಬಾಗ್ ವೆಸ್ಟ್​ ಗೇಟ್ ಬಳಿ ಆರ್ ವಿ ರಸ್ತೆಯಲ್ಲಿ ತಡರಾತ್ರಿ ಹಿಟ್‌ ಅಂಡ್​ ರನ್‌ಗೆ ಯುವ ಬೈಕ್ ಸವಾರ ಬಲಿಯಾಗಿದ್ದಾರೆ.

ಲಾಲ್‌ಬಾಗ್ ಪಶ್ಚಿಮ ಗೇಟ್ ಬಳಿ ಬೈಕ್‌ಗೆ ಡಿಕ್ಕಿ ಹೊಡೆದು ಇನೋವಾ ಕ್ರಿಸ್ಟಾ ಕಾರು ಚಾಲಕ ಪರಾರಿಯಾಗಿದ್ದಾನೆ. ಬೈಕ್ ಸವಾರ ಸುರೇಶ್ ನಾಯ್ಕ್ (36) ಗೆ ಗಂಭೀರ ಗಾಯಗಳಾಗಿ, ಆಸ್ಪತ್ರೆಗೆ ಸಾಗಿಸುವ ವೇಳೆ ದುರ್ಮರಣಕ್ಕೀಡಾಗಿದ್ದಾರೆ.

ಮೃತ ಉತ್ತರ ಕನ್ನಡ ಜಿಲ್ಲೆ ಶಿರಸಿ ಮೂಲದವರು. ಕೋರಮಂಗಲದ ಬಾರ್ ಆಯಂಡ್ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡ್ತಿದ್ದರು. ಬಸವನಗುಡಿ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.