ಶಿರಸಿ : ಮುಂಬರುವ ದಿನಗಳಲ್ಲಿ ಎಲ್ಲಾ ಸನ್ನಿವೇಶಗಳಿಗೂ ಸನ್ನದ್ಧರಾಗಬೇಕು ಎನ್ನುವ ಕಾರಣಕ್ಕಾಗಿ ಶಿರಸಿ ವೃತ್ತದ 4 ಠಾಣೆಗಳ 150 ಕ್ಕೂ ಅಧಿಕ ಸಿಬ್ಬಂದಿಗಳು ಗುರುವಾರ ಬಂದೂಕು ಗುರಿ ತಾಲೀಮು ನಡೆಸಿದರು.
ತಾಲೂಕಿನ ಲಂಕನಹಳ್ಳಿಯ ಪೊಲೀಸ್ ಬಂದೂಕು ತರಬೇತಿ ಎರಿಯಾದಲ್ಲಿ ಶಿರಸಿ ನಗರ, ಮಾರುಕಟ್ಟೆ, ಗ್ರಾಮೀಣ ಹಾಗೂ ಬನವಾಸಿ ಠಾಣೆಯ 150 ಪೋಲಿಸ್ ಪುರುಷ/ಮಹಿಳಾ ಸಿಬ್ಬಂದಿಗಳು ಹಾಗೂ ಸಿಪಿಐ ಮತ್ತು 6 ಪಿಎಸ್ಐ ಅರ್ಧ ವಾರ್ಷಿಕ ಬಂದೂಕು ಗುರಿ ಅಭ್ಯಾಸ ಪಡೆದರು.
ಮುಂದಿನ ದಿನಗಳಲ್ಲಿ ಬರುವ ಎಲ್ಲಾ ಸನ್ನಿವೇಶಗಳಿಗೆ ಸನ್ನದ್ಧರಾಗಲು ತರಬೇತಿ ನೀಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ವಿಶೇಷ ವಾಗಿ ಬಂದುಕು ಗುರಿ ತಾಲೀಮು ನೀಡಿ, ಪೊಲೀಸ್ ಸಿಬ್ಬಂದಿಗಳನ್ನು ತಯಾರು ಮಾಡಲಾಗುತ್ತಿದೆ.