Saturday, 10th April 2021

ಪೆಟ್ರೋಲ್ ಬಾಂಬ್ ಸಿಡಿದು ನಟ ರಿಷಭ್ ಶೆಟ್ಟಿಗೆ ಗಾಯ

ಹಾಸನ : ಚಿತ್ರದ ಚಿತ್ರೀಕರಣದ ವೇಳೆ ಪೆಟ್ರೋಲ್ ಬಾಂಬ್ ಸಿಡಿದು ನಟ ರಿಷಭ್ ಶೆಟ್ಟಿ ಗಾಯಗೊಂಡಿರುವ ಘಟನೆ ನಡೆದಿದೆ.

ಕೆಲ ದಿನಗಳ ಹಿಂದೆಯಷ್ಟೇ ಬೇಲೂರಿನಲ್ಲಿ ಚಿತ್ರದ ಸಾಹಸ ದೃಶ್ಯಗಳ ಚಿತ್ರೀ ಕರಣದ ವೇಳೆ ಈ ಅವಘಡ ನಡೆದಿದೆ. ಪೆಟ್ರೋಲ್ ಬಾಂಬ್ ಸಿಡಿಯುತ್ತಲೇ ನಟಿ ಗಾನಾವಿ ಲಕ್ಷ್ಮಣ ಹಾಗೂ ನಟ ರಿಷಭ್ ಶೆಟ್ಟಿ ಅಲ್ಲಿಂದ ಪಾರಾಗಲು ಯತ್ನಿಸಿ ದ್ದರು. ಈ ವೇಳೆ ರಿಷಭ್ ತಲೆ ಹಾಗೂ ಬೆನ್ನಿಗೆ ಬೆಂಕಿ ತಗುಲಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿಕೊಂಡಿರುವ ಹೀರೋ ಚಿತ್ರ ಮಾರ್ಚ್(2021) 5ರಂದು ಬಿಡುಗಡೆ ಯಾಗುತ್ತಿದೆ. ಬೆಲ್ ಬಾಟಂ ನಂತರ ರಿಷಭ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಎರಡನೇ ಸಿನಿಮಾ ಹೀರೋ.

Leave a Reply

Your email address will not be published. Required fields are marked *