Monday, 26th October 2020

ಆರ್‌.ಆರ್‌.ನಗರ ಉಪ ಚುನಾವಣೆ: ಜೆಡಿಎಸ್ ಆರ್ ಪ್ರಕಾಶ್’ಗೆ ಟಿಕೆಟ್ ?

ಬೆಂಗಳೂರು : ಮುನಿರತ್ನ ಅನರ್ಹತೆಯಿಂದ ತೆರವಾದಂತ ರಾಜರಾಜೇಶ್ವರಿನಗರ ವಿಧಾನ ಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿದೆ. ರಾಜರಾಜೇಶ್ವರಿ ನಗರದ ಉಪ ಚುನಾವಣೆಗೆ ಜೆಡಿಎಸ್ ನಿಂದ ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ಆರ್ ಪ್ರಕಾಶ್ ಅವರಿಗೆ ಟಿಕೆಟ್ ನೀಡಲಾಗುತ್ತದೆನ್ನಲಾಗಿದೆ.

ರಾಜರಾಜೇಶ್ವರಿ ನಗರ ಉಪ ಚುನಾವಣೆಗೆ ಅಕ್ಟೋಬರ್ 3ರಂದು ಉಪ ಚುನಾವಣೆ ಘೋಷಣೆ ಯಾಗಿದೆ. ಈ ಕ್ಷೇತ್ರಕ್ಕೆ ಬಿಜೆಪಿ ಯಿಂದ ಮುನಿರತ್ನಗೆ ಟಿಕೆಟ್ ಫೈನಲ್ ಆಗಿದ್ದರೂ, ತುಳಸಿ ಮುನಿರಾಜು ಮತ್ತು ಮುನಿರತ್ನ ನಡುವೆ ಟಿಕೆಟ್ ಫೈಟ್ ನಡೆಯುತ್ತಿದೆ. ಕಾಂಗ್ರೆಸ್ ನಿಂದ ಯಾರಿಗೆ ಟಿಕೆಟ್ ನೀಡಲಾಗುವ ಕುರಿತು ಯಾವುದೇ ಸುಳಿವು ಮಾತ್ರ ಹೊರ ಬಂದಿಲ್ಲ.

ಇದರ ಮಧ್ಯೆ ಜೆಡಿಎಸ್’ನಿಂದ ರಾಜರಾಜೇಶ್ವರಿ ನಗರ ಉಪ ಚುನಾವಣೆಗೆ ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ಆರ್ ಪ್ರಕಾಶ್ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಪಕ್ಷದ ನಿರಂತರ ಕೆಲಸದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ಶ್ರಮಿಸುತ್ತಿರುವಂತ ಆರ್ ಪ್ರಕಾಶ್ ಗೆ ಜೆಡಿಎಸ್ ಪಕ್ಷದ ವರಿಷ್ಠರಾದಂತ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ನೀಡಲು ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *