Monday, 13th July 2020

ಆರ್‌ಎಸ್‌ಎಸ್‌ನಿಂದ ನೆರೆ ಮಂದಿಗೆ ನೆರವು…

– ಪ್ರವಾಹ ಪೀಡಿತ ಪ್ರದೇಶದಲ್ಲಿ ಸಂಘದ ಕಾರ್ಯಕರ್ತರಿಂದ ಕೆಲಸ
– ನೆರೆ ಸಂತ್ರಸ್ತರಿಗೆ ಔಷಧೋಪಚಾರ ವಿತರಣೆ
– 1500ಕ್ಕೂ ಹೆಚ್ಚು ಸ್ವಯಂ ಸೇವಕರಿಂದ ಕಾರ್ಯ

ಉತ್ತರ ಕರ್ನಾಟಕದಲ್ಲಿ ಸಂಭವಿಸಿರುವ ಭಾರಿ ಪ್ರವಾಹದಿಂದ ನಲುಗಿರುವ ಸಂತ್ರಸ್ತರ ನೆರವಿಗೆ, ರಾಷ್ಟ್ರೀಯ ಸೇವಾ ಸಂಘ ಧಾವಿಸಿದೆ. ಹಲವು ಜಿಲ್ಲೆೆಗಳಲ್ಲಿ ಸಾವಿರಾರು ಸ್ವಯಂ ಸೇವಾ ಕಾರ್ಯಕರ್ತರು ಜನರನ್ನು ರಕ್ಷಿಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾಾರೆ.
ಬಾಗಲಕೋಟೆ, ಬೆಳಗಾವಿ, ಹುಬ್ಬಳ್ಳಿಿ -ಧಾರವಾಡ ಸೇರಿದಂತೆ ಹಲವು ಜಿಲ್ಲೆೆಗಳು ಪ್ರವಾಹದಿಂದ ತತ್ತರಿಸುತ್ತಿಿದ್ದಂತೆ, ಸ್ವಯಂ ಸೇವಕರು ಗುಂಪು ಗುಂಪಾಗಿ ಪ್ರತಿ ಜಿಲ್ಲೆೆಗೆ ತೆರಳಿದ್ದಾಾರೆ. ಕಳೆದುಕೊಂಡು, ಗಂಜೀ ಕೇಂದ್ರ ಅಥವಾ ಬಯಲಿನಲ್ಲಿ ಜೀವ ಸಾಗಿಸುತ್ತಿಿರುವ ಸಾವಿರಾರು ಜನರಿಗೆ ಆಹಾರ, ಔಷಧ ಹಾಗೂ ಬಟ್ಟೆೆಗಳನ್ನು ಒದಗಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾಾರೆ.
ಉತ್ತರ ಕರ್ನಾಟಕದ ನಾಲ್ಕೈದು ಜಿಲ್ಲೆೆಗಳಲ್ಲಿ ಭಾರಿ ಪ್ರವಾಹ ಉಂಟಾಗಿದ್ದು, ಈ ಸ್ಥಳಗಳಲ್ಲಿಯೇ ಇರುವ ಸಂಘ ಪರಿವಾರದ ಸಾವಿರಾರು ಕಾರ್ಯಕರ್ತರು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾಾರೆ. ಮೊದಲ ದಿನದಿಂದಲೇ 1500ಕ್ಕೂ ಹೆಚ್ಚು ಕಾರ್ಯಕರ್ತರು ಪರಿಹಾರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾಾರೆ ಎಂದು ಆರ್‌ಎಸ್‌ಎಸ್ ಪ್ರಮುಖ್ ಒಬ್ಬರು ‘ವಿಶ್ವವಾಣಿ’ಗೆ ತಿಳಿಸಿದ್ದಾಾರೆ.


ಪ್ರವಾಹ ಪೀಡಿತ ಪ್ರದೇಶದಲ್ಲಿ ಎನ್‌ಡಿಆರ್‌ಎಫ್ ಹಾಗೂ ಸೇನೆ ತಲುಪುವ ಮೊದಲೇ, ಆರ್‌ಎಸ್‌ಎಸ್ ಕಾರ್ಯಕರ್ತರು ತಲುಪಿ ನೂರಾರು ಜನರನ್ನು ರಕ್ಷಿಿಸಿದ್ದಾಾರೆ. ಇನ್ನು ಕೆಲ ಭಾಗದಲ್ಲಿ ತಲುಪಲು ಸಾಧ್ಯವಾಗಿಲ್ಲ. ಈ ಪ್ರದೇಶಗಳಿಗೆ ರಕ್ಷಣಾ ಸಿಬ್ಬಂದಿಯೊಂದಿಗೆ ತೆರಳಿ ಕಾರ್ಯನಿರ್ವಹಿಸಿದ್ದಾಾರೆ.
ರಕ್ಷಣಾ ಕಾರ್ಯದಲ್ಲಿಯೂ ಸಕ್ರಿಿಯ
ಕೇವಲ ಸಂತ್ರಸ್ತರಿಗೆ ಔಷಧೋಪಚಾರ ಮಾತ್ರವಲ್ಲದೇ, ಮುಳುಗಡೆಯಾಗಿರುವ ಹಲವು ಗ್ರಾಾಮ ಹಾಗೂ ಮನೆಗಳಿಗೆ ರಕ್ಷಣಾ ಸಿಬ್ಬಂದಿಯೊಂದಿಗೆ ತೆರಳಿ ಅಲ್ಲಿರುವವರನ್ನು ಸುರಕ್ಷಿಿತಾ ಪ್ರದೇಶಕ್ಕೆೆ ಸ್ಥಳಾಂತರಿಸುವ ಕೆಲಸದಲ್ಲಿಯೂ ಸ್ವಯಂ ಸೇವಕರು ತೊಡಗಿಸಿಕೊಂಡಿದ್ದಾಾರೆ.
ಇನ್ನು ಈಗಾಗಲೇ ಸರಕಾರದಿಂದ ಪ್ರಮಾಣದಲ್ಲಿ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆೆಯಲ್ಲಿ ಪರಿಹಾರ ಕಾರ್ಯಾಚರಣೆ ಆರಂಭವಾಗಿದೆ. ಆದರೆ ಈ ಪರಿಹಾರ ಕಾರ್ಯಾಚರಣೆಗೆ ಸೂಕ್ತ ಪ್ರಮಾಣದಲ್ಲಿ ಸಿಬ್ಬಂದಿ ಕೊರತೆಯಿದೆ. ಆದ್ದರಿಂದ ಮಾನವ ಸಂಪನ್ಮೂಲ ಕೊರತೆ ನೀಗಿಸುವಲ್ಲಿ ಸ್ವಯಂ ಸೇವಕರು ಪ್ರಮುಖ ಪಾತ್ರ ನಿರ್ವಹಿಸುತ್ತಿಿದ್ದಾಾರೆ. ಸಿಬ್ಬಂದಿ ಜತೆ ಜತೆಗೆ ಕಾರ್ಯಕರ್ತರು ಜನ-ಜಾನುವಾರುಗಳನ್ನು ರಕ್ಷಿಿಸುವ ಕೆಲಸ ಮಾಡುತ್ತಿಿದ್ದಾಾರೆ ಎನ್ನುವ ಮಾತನ್ನು ಎನ್‌ಡಿಆರ್‌ಎಫ್ ಸಿಬ್ಬಂದಿಯೊಬ್ಬರು ತಿಳಿಸಿದ್ದಾಾರೆ.

ಹಲವು ಭಾಗದಿಂದ ಆಗಮನ
ಇನ್ನು ಪ್ರವಾಹ ಪರಿಸ್ಥಿಿತಿಯ ಬಗ್ಗೆೆ ಮಾಹಿತಿ ಪ್ರಕಟವಾಗುತ್ತಿಿದ್ದಂತೆ, ಮೂಲೆ ಮೂಲೆಯಿಂದ ಸಾವಿರಾರು ಆರ್‌ಎಸ್‌ಎಸ್ ಕಾರ್ಯಕರ್ತರು ಆಗಮಿಸುತ್ತಿಿದ್ದಾಾರೆ. ಎಲ್ಲ ಕಾರ್ಯಕರ್ತರು ಬೆಳಗಾವಿಗೆ ಆಗಮಿಸಿ, ಇಲ್ಲಿಂದ ವಿವಿಧ ಭಾಗಗಳಿಗೆ ತೆರಳಲಿದ್ದಾಾರೆ. ಇದರೊಂದಿಗೆ ರಾಜ್ಯದ ಹಲವು ಭಾಗದಿಂದ ಸಂತ್ರಸ್ತರಿಗೆ ಔಷಧ, ಆಹಾರಗಳನ್ನು ಆರ್‌ಎಸ್‌ಎಸ್ ಕಾರ್ಯಕರ್ತರು ರವಾನಿಸುತ್ತಿಿದ್ದಾಾರೆ ಎಂದು ತಿಳಿದುಬಂದಿದೆ.

ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸಹಾಯವಾಣಿ
ಧಾರವಾಡ
ಕಲ್ಲನಗೌಡ : 94488622748
ಅಶ್ವಿಿನ್ : 94482311518

ಗದಗ
ನರಸಿಂಹ : 9036552058
ವಿಠ್ಠಲ : 7026245708

ಹಾವೇರಿ
ಶಿವಾನಂದ 9448888117
ಗುರುರಾಜ್ : 9986202706

ಹುಬ್ಬಳ್ಳಿಿ ನಗರ
ವಿಶ್ವನಾಥ : 9739899259
ಸುಧಾಕರ : 9535353553
ಬಸವರಾಜ : 9449762322

Leave a Reply

Your email address will not be published. Required fields are marked *