Wednesday, 26th February 2020

ಸಾಂಕ್ರಾಮಿಕಗಳ ತಡೆಗೆ ಕ್ರಮ…

ರಾಜ್ಯದಲ್ಲಿ ಕಳೆದ ಹದಿನೈದು ದಿನದಲ್ಲಿ ಸುರಿದ ಮಹಾಮಳೆಗೆ ಇಡೀ ರಾಜ್ಯವೇ ತತ್ತರಿಸಿದೆ. ಮೂರು ಮಳೆರಾಯ ಸ್ವಲ್ಪ ಬಿಡುವು ನೀಡಿದ್ದಾಾನೆ. ಪ್ರವಾಹದ ಅಬ್ಬರ ತಗ್ಗಿಿದೆ. ನೆರೆ ಪರಿಸ್ಥಿಿತಿ ಎದುರಿಸಿದ್ದ ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಧಾರವಾಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಸೇರಿದಂತೆ ಇತರ ಜಿಲ್ಲೆೆಗಳಲ್ಲಿ ಪ್ರವಾಹಕ್ಕೆೆ ಸಿಲುಕಿ 60ಕ್ಕೂ ಹೆಚ್ಚು ಜನರು ಪ್ರಾಾಣ ಕಳೆದುಕೊಂಡಿದ್ದಾಾರೆ. ಸಾವಿರಾರು ಜಾನುವಾರು ಮೃತಪಟ್ಟಿಿವೆ. ಮಲೆನಾಡು ಪ್ರದೇಶದಲ್ಲಿ ಭೂಕುಸಿತ ಉಂಟಾಗಿ ಅದೆಷ್ಟೋೋ ಪ್ರಾಾಣಿಗಳು ಅವಶೇಷಗಳಡಿ ಸಿಲುಕಿ ಪ್ರಾಾಣಬಿಟ್ಟಿಿವೆ. ಸಾವಿರಾರು ಗ್ರಾಾಮಗಳಲ್ಲಿ ಪ್ರವಾಹದ ನೀರು ನಿಂತು ಕೊಳೆಯಲಾರಂಭಿಸಿದೆ. ಸ್ಥಳಗಳಲ್ಲಿ ಸಾಂಕ್ರಾಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಾಾಗಿದೆ.

 

ಈಗಾಗಲೇ ರಾಜ್ಯದ ಕರಾವಳಿ ಭಾಗ ಸೇರಿದಂತೆ ಎಲ್ಲೆೆಡೆ ಡೆಂಘೀ, ಚಿಕೂನ್‌ಗುನ್ಯದಂತಹ ಮಹಾಮಾರಿ ಆವರಿಸಿರುವ ಈ ಸಂದರ್ಭದಲ್ಲಿ ಪ್ರವಾಹದ ನೀರು ಜಮಾವಣೆಗೊಂಡಿರುವ ಸ್ಥಳಗಳಲ್ಲಿ ಸಾಂಕ್ರಾಾಮಿಕ ರೋಗ ಹರಡದಂತೆ ಸರಕಾರ ಮುನ್ನೆೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಪ್ರವಾಹದಲ್ಲಿ ತೇಲಿ ಬಂದಿರುವ ತ್ಯಾಾಜ್ಯ ಗ್ರಾಾಮಗಳಲ್ಲಿ ಶೇಖರಣೆಗೊಂಡು ಶುಚಿತ್ವದ ಕೊರತೆಯಿಂದ ರೋಗ ಹರಡಲು ಆರಂಭವಾಗುತ್ತದೆ. ಸತ್ತ ಪ್ರಾಾಣಿಗಳು, ಕೊಳೆತ ವಸ್ತುಗಳು ಹಾಗೂ ಕಲ್ಮಷದಿಂದ ಸೋಂಕು ಉಂಟಾಗುತ್ತದೆ. ಇದರಿಂದ ಉತ್ಪತ್ತಿಿ ಹೆಚ್ಚಾಾಗುತ್ತದೆ. ಹಲವಾರು ದಿನ ನೀರು ಶೇಖರಣೆಯಾಗುವುದರಿಂದಲೇ ಸೊಳ್ಳೆೆ ಉತ್ಪತ್ತಿಿಯಾಗುತ್ತವೆ. ಶುಚಿತ್ವ ಕಾಪಾಡುವ ಬಗ್ಗೆೆ ಅರಿವು ಮೂಡಿಸಬೇಕು. ಗ್ರಾಾಮಗಳಲ್ಲಿ ಸೊಳ್ಳೆೆಗಳ ನಿಯಂತ್ರಣಕ್ಕೆೆ ಫಾಗಿಂಗ್, ಡಿಟಿಟಿ ಪೌಡರ್, ಬ್ಲೀಚಿಂಗ್ ಪೌಡರ್ ಸಿಂಪಡಣೆಗೆ ಜಿಲ್ಲಾಾಡಳಿತ ಎಚ್ಚರ ವಹಿಬೇಕು.

ನೆರೆ ಪೀಡಿತ ಗ್ರಾಾಮಗಳಲ್ಲಿ ಇಂದಿಗೂ ಕುಡಿಯುವ ನೀರಿನ ಸಮಸ್ಯೆೆ ಇದೆ. ಇಂತಹ ಗ್ರಾಾಮಗಳಲ್ಲಿ ಜನರು ನದಿ ನೀರನ್ನು ಕುಡಿದರೆ ಆರೋಗ್ಯ ಕೆಡಬಹುದು. ಮಕ್ಕಳು, ವೃದ್ಧರು, ಅನಾರೋಗ್ಯ ಪೀಡಿತರು, ಬಾಣಂತಿಯರು ಅನಾರೋಗ್ಯಕ್ಕೆೆ ತುತ್ತಾಾಗಬಹುದು. ಜಿಲ್ಲಾಾಡಳಿತ ಕುಡಿಯುವ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಬೇಕು. ಆರೋಗ್ಯ ಇಲಾಖೆ ಈಗಲೇ ಎಚ್ಚೆೆತ್ತುಕೊಂಡು, ಪ್ರವಾಹದಿಂದ ಉಂಟಾದ ಪ್ರಾಾಣಹಾನಿಗಿಂತ ನಂತರದಲ್ಲಿ ಸಾಂಕ್ರಾಾಮಿಕ ರೋಗದಿಂದ ಉಂಟಾಗುವ ಪ್ರಾಾಣಹಾನಿ ಹೆಚ್ಚಾಾಗದಂತೆ ಆರಂಭದಲ್ಲೇ ತಡೆಗಟ್ಟಬೇಕು.

ಇದೀಗ ಎಲ್ಲೆೆಡೆ ಸಾರಿಗೆ ಸಂಪರ್ಕ ಆರಂಭವಾಗಿದ್ದು ನೆರೆ ಪೀಡಿತ ಗ್ರಾಾಮಗಳಿಗೆ ಔಷಧ ಸರಬರಾಜು ಚುರುಕಾಗಬೇಕಿದೆ. ಔಷಧಗಳನ್ನುದಾಸ್ತಾಾನು ಮಾಡಲು ನಿಗಾ ವಹಿಸಿ ನಿರಾಶ್ರಿಿತ ಕೇಂದ್ರದಿಂದ ಮರಳುತ್ತಿಿರುವ ಬಾಣಂತಿಯರು, ಎಳೆಮಕ್ಕಳು, ಗರ್ಭಿಣಿಯರು, ವೃದ್ಧರು, ಅನಾರೋಗ್ಯ ಪೀಡಿತರ ಆರೋಗ್ಯ ತಪಾಸಣೆ ಮಾಡಿ ಸೂಕ್ತ ಔಷಧವನ್ನು ಆರೋಗ್ಯ ಇಲಾಖೆ ನೀಡಬೇಕು. ಇದೆಲ್ಲದರ ಜತೆಗೆ ನೊಂದ ಸಂತ್ರಸ್ತರೊಂದಿಗೆ ಆರೋಗ್ಯ ಇಲಾಖೆ, ಇತರ ಪರಿಹಾರ ನೀಡುವ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಸೌಜನ್ಯದಿಂದ ವರ್ತಿಸುವುದು ಬಹಳ ಮುಖ್ಯ.

Leave a Reply

Your email address will not be published. Required fields are marked *