Friday, 27th May 2022

ಕೋಟೆಗಳ ನಾಡಲ್ಲಿ ರಾಷ್ಟ್ರೀಯ ಮಟ್ಟದ ಹಿಂದೂಪರ ಸಂಘಟನೆಗಳ ಮಹಾ ಒಕ್ಕೂಟದ ರಚನಾ ಸಭೆ

ಚಿತ್ರದುರ್ಗ: ದೇಶದಲ್ಲಿಯೇ ಪ್ರಥಮವಾಗಿ ರಾಷ್ಟ್ರೀಯ ಹಿಂದೂಪರ ಸಂಘಟನೆಗಳ ಮಹಾ ಒಕ್ಕೂಟದ ರಚನೆಯ ಕುರಿತು ಚಿತ್ರದುರ್ಗದಲ್ಲಿ ಜು.30 ರಂದು ಪೂರ್ವಭಾವಿ ಸಭೆ ನಡೆಯಲಿದೆ ಎಂದು ಸಭೆಯ ಉಸ್ತುವಾರಿ ಹೊತ್ತಿ ರುವ ಡಿ.ಎಸ್.ಸುರೇಶ್ ಬಾಬು (ಸೈಟ್ ಬಾಬಣ್ಣ) ಹೇಳಿದ್ದಾರೆ.

ರಾಜ್ಯದ ಮತ್ತು ವಿವಿಧ ಭಾಗಗಳ 60 ಕ್ಕೂ ಹೆಚ್ಚು ಹಿಂದೂಪರ ಸಂಘಟನೆಗಳ ಅಧ್ಯಕ್ಷರು/ ಮುಖ್ಯಸ್ಥರು ಆಗಮಿಸ ಲಿದ್ದಾರೆ.

ಚಿತ್ರದುರ್ಗ ನಗರದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಜು.30 ರ ಬೆಳಗ್ಗೆ 10.30 ಗಂಟೆಗೆ ಸಭೆ ನಡೆಯ ಲಿದ್ದು ಅದಕ್ಕಿಂತ ಮುನ್ನ ಶ್ರೀ ನೀಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪೂಜೆ ಮಾಡಿಸಿ ಪ್ರಮುಖರು ಪಾದಯಾತ್ರೆ ಮಾಡುವರು. ಕನಕದಾಸ, ಸಂಗೊಳ್ಳಿ ರಾಯಣ್ಣ, ಬಿ.ಆರ್. ಅಂಬೇಡ್ಕರ್, ಮದಕರಿನಾಯಕರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಾಗುವುದು.

ನಂತರ ಪಾದಯಾತ್ರೆ ಮೂಲಕ ಪಂಚಾಚಾರ್ಯ ಕಲ್ಯಾಣ ಮಂಟಪಕ್ಕೆ ಆಗಮಿಸಲಿದ್ದು ಅಲ್ಲಿ ಸೇರುವ ಎಲ್ಲಾ ಮುಖಂಡರು ವಿವಿಧ ವಿಷಯಗಳನ್ನು ಚರ್ಚಿಸಲಿದ್ದು ಹಿಂದೂಪರ ಸಂಘಟನೆಗಳ ಒಕ್ಕೂಟದ ರಚನೆಯಾಗಲಿದೆ ಎಂದು ಸುರೇಶ್ ಬಾಬು ಅವರು ತಿಳಿಸಿದ್ದಾರೆ.