Monday, 13th July 2020

ಸದಾ ಮೇಲ್ಮುಖವಿರಲಿ ನೋಟ ಎನ್ನುತ್ತಿದೆ ಶ್ರೀಹರಿ ಕೋಟಾ!

ಚಕ್ರವ್ಯೂಹ

90ರ ದಶಕದಲ್ಲಿ ಸ್ಕೂಲು ಹುಡುಗರಾಗಿದ್ದ ನಮಗೆ ಪರೀಕ್ಷೆಗಳಲ್ಲಿ ತಪ್ಪದೆ ಕಾಣಿಸಿಕೊಳ್ಳುತ್ತಿಿದ್ದ ಒಂದು ಪ್ರಶ್ನೆೆ ಎಂದರೆ ವಿಶ್ವಸಂಸ್ಥೆೆಯ ಮಹಾಕಾರ್ಯದರ್ಶಿ ಯಾರು ಎಂಬುದು. ನಾವು ಬರೆಯಬೇಕಿದ್ದ ಉತ್ತರ ಬುಟ್ರೊೊಸ್ ಬುಟ್ರೊೊಸ್ ಘಾಲಿ. ಅದಕ್ಕೆೆ ಒಂದಂಕ! ಆ ಮನುಷ್ಯಯಾರು, ಯಾವ ಯಾಕೆ ಹೆಸರಲ್ಲಿ ಎರಡು ಬುಟ್ರೊೊಸ್ ಇಟ್ಟುಕೊಂಡಿದ್ದಾಾರೆ ಎಂಬುದು ನಮಗೆ ಆಗ ದೊಡ್ಡ ಚಿದಂಬರ ರಹಸ್ಯ. ಆ ಪ್ರಶ್ನೆೆಗಳನ್ನು ಮೇಷ್ಟ್ರುಗಳಿಗೆ ಕೇಳಿದರೆ ಅದೆಲ್ಲ ನಿಮಗೆ ಯಾಕೆ, ಒಂದು ಮಾರ್ಕಿನ ಪ್ರಶ್ನೆೆಗೆ ಅಷ್ಟೆೆಲ್ಲ ತಲೆಕೆಡಿಸಿಕೊಳ್ಳುವುದು ಬೇಕಾ ಎಂದು ನಮ್ಮನ್ನು ಗದರಿಬಿಡುತ್ತಿಿದ್ದರೇನೋ. ಸ್ವಲ್ಪ ಹೆಚ್ಚು ಬುದ್ಧಿಿವಂತರಿಗೆ, ವಿಶ್ವಸಂಸ್ಥೆೆಗೆ ಕಾರ್ಯದರ್ಶಿ ಆಗಿರುವವರ ಹೆಸರನ್ನು ನಾವು ಯಾಕೆ ಅಷ್ಟೊೊಂದು ಮಹತ್ವ ಕೊಟ್ಟು ಕಲಿಯಬೇಕು? ಕಾರ್ಯದರ್ಶಿಗಿಂತ ಮೇಲಿನ ಹುದ್ದೆೆ ಅಧ್ಯಕ್ಷರದಲ್ಲವಾ? ವಿಶ್ವಸಂಸ್ಥೆೆಯ ಅಧ್ಯಕ್ಷರ ಬಗ್ಗೆೆ ಇವರ್ಯಾಾರೂ ತಲೆಕೆಡಿಸಿಕೊಳ್ಳುತ್ತಿಿಲ್ಲ ಎಂಬ ಗುಂಗಿಹುಳವೂ ತಲೆ ಕೊರೆಯುತ್ತಿಿತ್ತು.

ಇದೇ ರೀತಿಯಲ್ಲಿ, ನಮ್ಮ ನಂತರ ಬಂದ ಜೂನಿಯರುಗಳಿಗೆ ಪರೀಕ್ಷೆಯಲ್ಲಿ ಸದಾ ಕೇಳುತ್ತಿಿದ್ದ ಒಂದು ಪ್ರಶ್ನೆೆ ಎಂದರೆ, ರಾಕೆಟ್‌ಗಳನ್ನು ಹಾರಿಸುವ ಲಾಂಚಿಂಗ್ ಪ್ಯಾಾಡ್ ಭಾರತದಲ್ಲಿ ಎಲ್ಲಿದೆ ಎಂಬುದು. ಇದಕ್ಕೆೆ ವಿದ್ಯಾಾರ್ಥಿಗಳು ಬರೆಯಬೇಕಿದ್ದ ಉತ್ತರ: ಶ್ರೀಹರಿಕೋಟಾ. ಆ ಪ್ರಶ್ನೆೆ, ಆ ಉತ್ತರ ಅಂದಿನಿಂದ ಇಂದಿನವರೆಗೂ ಬದಲಾಗಿಲ್ಲ. ಬುಟ್ರೋೋಸ್ ಬುಟ್ರೋೋಸ್ ಘಾಲಿಯವರ ಬಗ್ಗೆೆ ನಮಗೆ ಇದ್ದ ಕುತೂಹಲದಂತೆಯೇ ಈ ಶ್ರೀಹರಿಕೋಟಾ ಬಗ್ಗೆೆಯೂ ಅಷ್ಟಿಿಷ್ಟು ಕುತೂಹಲ ಇರುವ ವಿದ್ಯಾಾರ್ಥಿಗಳು ಇದ್ದಾಾರು. ಯಾಕೆ ಅದರ ಹೆಸರು ಶ್ರೀಹರಿಕೋಟಾ ಎಂದಿದೆ? ಹರಿನಾರಾಯಣನಿಗೂ ಈ ಸ್ಥಳಕ್ಕೂ ಏನು ಸಂಬಂಧ? ಎಲ್ಲಿದೆ ಆ ಊರು? ಯಾಕೆ ಅಲ್ಲಿಂದಲೇ ರಾಕೆಟ್ ಹಾರಿಸಬೇಕು? ಬೇರೆ ಕಡೆ ಹಾರಿಸಿದರೆ ರಾಕೆಟ್ ಮೇಲೆ ಹೋಗೋಲ್ಲವಾ? ದೇಶ ಇಷ್ಟೆೆಲ್ಲ ಮುಂದುವರಿದಿದೆಯಂತೆ, ಇನ್ನೂ ಒಂದೇ ಲಾಂಚಿಂಗ್ ಪ್ಯಾಾಡ್‌ನಲ್ಲೇ ರಾಕೆಟ್ ಹಾರಿಸುತ್ತಿಿದ್ದೇವಾ? ಇಸ್ರೋೋದಲ್ಲಿ ನಿರ್ಮಿಸಿದ ಉಪಗ್ರಹವನ್ನು ಬೆಂಗಳೂರಿಂದಲೇ ಹಾರಿಸಿಬಿಟ್ಟರೆ ಕೆಲಸ ಸುಲಭ ಅಲ್ಲವೆ? ಎಂಬೆಲ್ಲ ಪ್ರಶ್ನೆೆಗಳು ಯಾರಿಗಾದರೂ ಶಾಲಾಮಟ್ಟದಲ್ಲಿರುವಾಗಲೇ ಬಂದಿದ್ದರೆ ಅವರನ್ನು ಖಂಡಿತ ಬುದ್ಧಿಿವಂತರು ಅಂಥವರು ವಿಜ್ಞಾಾನದಲ್ಲಿ ನಿಜಕ್ಕೂ ಆಸಕ್ತರಾಗಿ, ಗಂಭೀರ ಅಧ್ಯಯನದಲ್ಲಿ ತೊಡಗಿ, ಮುಂದೊಂದು ದಿನ ಇಸ್ರೋೋದಲ್ಲಿ ಸೈಂಟಿಸ್‌ಟ್‌ ಆದರೂ ಆಶ್ಚರ್ಯವಿಲ್ಲ!
2019ರ ಈ ವರ್ಷ, ಭಾರತಕ್ಕೆೆ ಎರಡು ಕಾರಣಗಳಿಗಾಗಿ ಮುಖ್ಯ. ಒಂದು, ಇದು ‘ಇಸ್ರೋೋ’ ಎಂಬ ಗಗನದೆತ್ತರ ಬೆಳೆದು ನಿಂತ ದೈತ್ಯ ಸಂಸ್ಥೆೆಯ – ನಮ್ಮ ದೇಶದ ಹೆಮ್ಮೆೆಯ ವಿಜ್ಞಾಾನ/ತಂತ್ರಜ್ಞಾಾನ ಸಂಸ್ಥೆೆಯ – ಸುವರ್ಣ ಹಬ್ಬದ ವರ್ಷ. ಇನ್ನೊೊಂದು, ಇಂಥ ಸಂಸ್ಥೆೆಯನ್ನು ಗಗನದೆತ್ತರಕ್ಕೆೆ ಬೆಳೆದುನಿಲ್ಲುವಂತೆ ಕಟ್ಟಿಿದ, ಅಡಿಪಾಯ ಹಾಕಿದ ವ್ಯಕ್ತಿಿ ವಿಕ್ರಂ ಜನ್ಮಶತಮಾನೋತ್ಸವವೂ ಇದೇ ವರ್ಷ ನಡೆಯುತ್ತಿಿದೆ.

ವಿಕ್ರಂ ಅವರು ಹುಟ್ಟಿಿದ್ದು ಆಗಸ್‌ಟ್‌ 12ರಂದು, ಇಸ್ರೋೋ ಕಣ್ಬಿಿಟ್ಟದ್ದು ಆಗಸ್‌ಟ್‌ 15ರಂದು. ಎರಡೂ ದಿನಾಚರಣೆಗಳು ಒಂದೇ ವಾರದಲ್ಲಿ, ಮೂರು ದಿನಗಳ ಅಂತರದಲ್ಲಿ ಬರುತ್ತವೆ ಎಂಬುದು ವಿಶೇಷ. ಇವೆರಡರ ಜತೆ ಸೇರಿಸಿಕೊಳ್ಳಬಹುದಾದ ಮೂರನೆಯ ವಿಶೇಷ ಏನೆಂದರೆ, ಇಸ್ರೋದ ಎಲ್ಲ ಸಾಧನೆಗಳನ್ನು ಅಕ್ಷರಶಃ ಬಾನೆತ್ತರಕ್ಕೆೆ ಹಾರಿಸಿದ ರಾಕೆಟ್ ಲಾಂಚಿಂಗ್ ಪ್ಯಾಾಡ್ ಶ್ರೀಹರಿಕೋಟಾದಲ್ಲಿ ಸ್ಥಾಾಪನೆಯಾಗಬೇಕು ಎಂದು ನೀಲನಕ್ಷೆ ಹಾಕಿ ಕೂಡ ಈ ವರ್ಷಕ್ಕೆೆ ಐವತ್ತು ವರ್ಷಗಳು ತುಂಬುತ್ತಿಿವೆ.
ಕಾಲವಿತ್ತು. ನಾವು ನಮ್ಮ ಪೀಣ್ಯದ ಷೆಡ್‌ನಲ್ಲಿ ಅಥವಾ ಇಸ್ರೋೋದ ಬೇರೆ ಬೇರೆ ಕೇಂದ್ರಗಳಲ್ಲಿ ಬೇರೆ ಬೇರೆ ಹಂತಗಳಲ್ಲಿ ನಿರ್ಮಿಸಿದ ಉಪಗ್ರಹಗಳನ್ನು ಜೋಡಿಸಿ ನಂತರ ರಷ್ಯದ ಬೈಕಾನೂರ್‌ಗೆ ಅಥವಾ ಲ್ಯಾಾಟಿನ್ ಅಮೆರಿಕದಲ್ಲಿರುವ ಫ್ರೆೆಂಚ್ ಗಯಾನಕ್ಕೆೆ ಸಾಗಿಸಬೇಕಿತ್ತು. ಅಲ್ಲಿ ಅವುಗಳನ್ನು ರಾಕೆಟ್‌ಗಳಲ್ಲಿ ಕೂರಿಸಿ ಗಗನಕ್ಕೆೆ ಹಾರಿಸುವ ಸಾಹಸಕಾರ್ಯ ನಡೆಯುತ್ತಿಿತ್ತು. ಇಸ್ರೋೋದ ಕೆಲಸ ಸೌಂಡಿಂಗ್ ರಾಕೆಟ್‌ಗಳನ್ನು ಆಕಾಶಕ್ಕೆೆ ಹಾರಿಸುವ ಮೂಲಕವೇ ಪ್ರಾಾರಂಭವಾದರೂ ತುಸು ಭಾರದ ರಾಕೆಟ್‌ಗಳನ್ನು ಗಗನಕ್ಕೆೆ ಚಿಮ್ಮಿಿಸಬಲ್ಲ ಸಾಮರ್ಥ್ಯ ನಮ್ಮ ಲಾಂಚಿಂಗ್ (ಸಂಕ್ಷಿಪ್ತವಾಗಿ ಚಿಮ್ಮುಗ ಎನ್ನೋೋಣ) ಇರಲಿಲ್ಲ. ಹಾಗಾಗಿ ಹದಿನೈದಿಪ್ಪತ್ತು ಕೆಜಿಯ ಉಪಗ್ರಹಗಳನ್ನು ಬಾಹ್ಯಾಾಕಾಶಕ್ಕೆೆ ಹಾರಿಸಿ ಕಕ್ಷೆಯಲ್ಲಿ ಕೂರಿಸಬೇಕಾದರೂ ನಾವು ಬೇರೆ ದೇಶಗಳ ಮರ್ಜಿಗೆ ಕಾಯಬೇಕಿತ್ತು.

ಅವರು ತಮ್ಮ ರಾಕೆಟ್ ತಯಾರಿದೆ ಎಂದಾಗ ನಮ್ಮ ಉಪಗ್ರಹವನ್ನು ವಿಶೇಷ ವಿಮಾನದಲ್ಲಿಟ್ಟು ಸಾಗಿಸಬೇಕಿತ್ತು. ನಮ್ಮ ವಿಜ್ಞಾಾನಿಗಳು ಸಾವಿರಾರು ಮೈಲಿಗಳ ಪ್ರಯಾಣ ಮಾಡಿ, ಆ ಚಿಮ್ಮುಗ ಕೇಂದ್ರಗಳನ್ನು ಸೇರಿಕೊಳ್ಳಬೇಕಿತ್ತು. ನಮ್ಮ ಸೆಟಲೈಟುಗಳನ್ನು ನಮ್ಮದೇ ರಾಕೆಟ್‌ಗಳಲ್ಲಿಟ್ಟು ನಮ್ಮ ನೆಲದಿಂದ ಹಾರಿಸುವುದು ಯಾವಾಗ, ಇದೊಂದು ಕೆಲಸ ಬೇಗ ಆಗಬೇಕಲ್ಲ ಆ ಕನಸಿನ ಬೀಜವನ್ನು ನಮ್ಮ ವಿಜ್ಞಾಾನಿಗಳ ತಲೆಗಳಲ್ಲಿ, ನಮ್ಮ ಸರಕಾರಗಳ ಆಲಸಮಿದುಳುಗಳಲ್ಲಿ ಬಿತ್ತಿಿ ಅದಕ್ಕಾಾಗಿ ಹಗಲಿರುಳು ಕೆಲಸ ಮಾಡಿದವರು ಇದೇ ವಿಕ್ರಂ ಸಾರಾಭಾಯಿ. ರೋಹಿಣಿ -125 ಹೆಸರಿನ ಸಣ್ಣದೊಂದು ಸೌಂಡಿಂಗ್ ರಾಕೆಟ್ ಅನ್ನು ಗಗನಕ್ಕೆೆ ಹಾರಿಸುವ ಮೂಲಕ ಅಧಿಕೃತವಾಗಿ ಲಾಂಚಿಂಗ್ ಪ್ಯಾಾಡ್ ಆಗಿ ಶ್ರೀಹರಿಕೋಟಾ ಕೆಲಸ ಮಾಡತೊಡಗಿದ್ದು 1971ರ ಅಕ್ಟೋೋಬರ್ 9ರಂದು. ಆ ವರ್ಷದ ಡಿಸೆಂಬರ್ 30ಕ್ಕೆೆ ವಿಕ್ರಂ ಸಾರಾಭಾಯಿ ಇಹಲೋಕಕ್ಕೆೆ ಗುಡ್‌ಬೈ ಹೇಳಿದರು, ತಾನು ಮಾಡಬೇಕಿದ್ದ ಕೆಲಸಗಳೆಲ್ಲವನ್ನೂ ಎಂದು ಹೇಳಿ ಹೊರಟುಬಿಟ್ಟರೋ ಎಂಬಂತೆ.
ಇಸ್ರೋೋ ವಲಯದಲ್ಲಿ ಈ ಚಿಮ್ಮುಗ ಕೇಂದ್ರವನ್ನು ‘ಶಾರ್’ ಎಂದು ಕರೆಯುವುದು ವಾಡಿಕೆ. ಶ್ರೀಹರಿಕೋಟಾ ರೇಂಜ್ ಎಂಬುದರ ಸಂಕ್ಷಿಪ್ತವದು. ಅದೀಗ ‘ಸತೀಶ್ ಧವನ್ ಸ್ಪೇಸ್ ಸೆಂಟರ್’ ಎಂಬ ಹೊಸ ಹೆಸರಿಗೆ ತನ್ನ ಐಡೆಂಟಿಟಿಯನ್ನು ಬದಲಾಯಿಸಿಕೊಂಡಿದೆ. ಸತೀಶ್ ಧವನ್ ಇಸ್ರೋೋ ಅಧ್ಯಕ್ಷರಾಗಿ ಬಂದ ಮೇಲೆ ರಾಕೆಟ್ ಅಭಿವೃದ್ಧಿಿಯ ಕೆಲಸಕ್ಕೆೆ ರಾಮಬಾಣದ ವೇಗ ಬಂತೆಂಬುದನ್ನು ಎಲ್ಲರೂ ಬಲ್ಲರು. ಹಾಗಾಗಿ ಶ್ರೀಹರಿಕೋಟಾ ಚಿಮ್ಮುಗಕ್ಕೆೆ ಧವನ್‌ರ ಹೆಸರಿಗಿಂತ ಸೂಕ್ತವಾದ ಬೇರೆ ಸಾಧ್ಯವೇ ಇಲ್ಲವೆನ್ನೋೋಣ. ಶ್ರೀಹರಿಕೋಟಾ ಭಾರತದ ಪೂರ್ವಭಾಗದಲ್ಲಿದೆ; ಆಂಧ್ರದಲ್ಲಿದೆ; ಬಂಗಾಳ ಕೊಲ್ಲಿಯತ್ತ ಮುಖ ಮಾಡಿನಿಂತಿದೆ ಎಂಬುದನ್ನೆೆಲ್ಲ ಎಲ್ಲರೂ ಬಲ್ಲರು. ಆದರೆ ಅದೊಂದು ದ್ವೀಪ ಎಂಬುದು ಕೆಲವರಿಗೆ ಮಾತ್ರ ಗೊತ್ತು! ಬಹಳಷ್ಟು ಪತ್ರಕರ್ತರಿಗೆ ಕೂಡ ಆ ವಿವರಗಳು ಗೊತ್ತಿಿರಲಿಕ್ಕಿಿಲ್ಲ.

ಶ್ರೀಹರಿಕೋಟಾ ಭಾರತದ ಪೂರ್ವ ಕರಾವಳಿಯಲ್ಲಿ ಬಂಗಾಳ ಕೊಲ್ಲಿಗೆ ಮೈತಾಗಿಸಿ ನಿಂತಿದ್ದರೂ ಅದೊಂದು ಪುಟ್ಟ ದ್ವೀಪ. ಮುಖ್ಯ ಭೂಭಾಗದಿಂದ ಮಡಿ ಕಾಯ್ದುಕೊಂಡು ಹಿಡಿ ದೂರದಲ್ಲಿ ಬಾಗಿ ಬಳುಕಿ ನಿಂತಿರುವ ನೆಲಭಾಗವದು. ಇವೆರಡು ನೆಲಗಳ ‘ಪುಲಿಕಾಟ್’ ಎಂಬ ಹೆಸರಿನ ದೊಡ್ಡ ಸರೋವರವಿದೆ. ಬ್ರಿಿಟಿಷ್ ವಸಾಹತುಶಾಹಿಯ ಕಾಲವನ್ನು ನೆನಪಿಸುವಂತೆ ಈ ಸರೋವರಕ್ಕೆೆ ಬಕಿಂಗ್‌ಹಂ ಹೆಸರಿನ ಒಂದು ದೊಡ್ಡ ರಾಜಕಾಲುವೆ ಹರಿದುಬರುತ್ತದೆ. ಆಂಧ್ರದ ಸೂಳ್ಳೂರುಪೇಟ ಎಂಬ ಊರಿಗೆ ಬಂದು ಅಲ್ಲಿಂದ, ಪುಲಿಕಾಟ್ ಸರೋವರದ ಮೇಲಿಂದ ಹಾದುಹೋಗುವ ಏಕೈಕ ರಸ್ತೆೆಯಲ್ಲಿ ಬಂದರೆ ಅದರ ಕೊನೆಯಲ್ಲಿ ನಮಗೆ ಸಿಗುವುದೇ ಶ್ರೀಹರಿಕೋಟಾ. ಕೋರಮಂಡಲ ತೀರದಲ್ಲಿ 50 ಕಿಮೀ ಉದ್ದಕ್ಕೆೆ ಹರಡಿಕೊಂಡಿರುವ ಈ ದ್ವೀಪದ ಒಟ್ಟು ವಿಸ್ತಾಾರ 44,000 ಎಕರೆಗಳು. ಕಾಡಿನ ಮಧ್ಯದಲ್ಲಿ ಔನ್ನತ್ಯಕ್ಕೆೆ ಸಾಕ್ಷಿಯಾದ ಕಟ್ಟಡಗಳು. ಕಾಡುಪ್ರಾಾಣಿಗಳ ಆವಾಸದ ಜತೆ ಜತೆಗೇ ವಿಜ್ಞಾಾನಿಗಳ ಪ್ರಯೋಗಾಲಯಗಳು. ಈ ಭೂಭಾಗ ಪ್ರಕೃತಿ ಮತ್ತು ವಿಜ್ಞಾಾನದ ಸುಮಧುರ ಸಾಮರಸ್ಯದ ಯುಗಳಗೀತೆಯಂತೆ ಕಾಣುತ್ತದೆ ಎಂದರೆ ಅತಿಶಯೋಕ್ತಿಿ ಎನಿಸಲಿಕ್ಕಿಿಲ್ಲ, ನೋಡಿರುವ ಯಾರಿಗಾದರೂ.
ಇದೊಂದು ವಿಸ್ಮಯದಂತೆ ಕಾಣುತ್ತದೆ. ಯಾಕೆಂದರೆ ಭಾರತದಲ್ಲಿ ಪ್ರಗತಿ ಎಂದು ಕರೆಸಿಕೊಳ್ಳುವ ಯಾವುದಕ್ಕೂ ಕಲ್ಲುಹಾಕಲು ಕಾಯ್ದುಕೊಂಡಿರುವ ಬುದ್ಧಿಿಜೀವಿಗಳು, ಪ್ರಗತಿಪರರು, ಸಾಕ್ಷಿಪ್ರಜ್ಞೆಗಳು ಆಗಲೂ ಇದ್ದರು! ಆದರೆ ಅವರೆಲ್ಲರ ಗೃಧ್ರದೃಷ್ಟಿಿಯನ್ನು ತಪ್ಪಿಿಸಿ ಭಾರತದ ಸರಕಾರ ಇಲ್ಲೊೊಂದು ರಾಕೆಟ್ ಲಾಂಚಿಂಗ್ ಪ್ಯಾಾಡ್ ನಿರ್ಮಿಸಿಬಿಟ್ಟಿಿತು! ಐವತ್ತು ವರ್ಷಗಳ ಹಿಂದೆ ಈ ಇಡೀ ದ್ವೀಪ ಕೇವಲ ಅರಣ್ಯವಾಗಿತ್ತು. ಯಾನಾದಿ ಹೆಸರಿನ ಮೂಲನಿವಾಸಿಗಳು ಇಲ್ಲಿ ತಮ್ಮ ಮನೆಮಾರು ಕಟ್ಟಿಿಕೊಂಡು ವಾಸವಿದ್ದರು. ಅರಣ್ಯದ ಪ್ರಾಾಣಿಗಳನ್ನು ಬೇಟೆಯಾಡುವುದು, ಜೇನಿಳಿಸುವುದು, ಹಕ್ಕಿಿ-ಪಿಕ್ಕಿಿ ಹೊಡೆಯುವುದು ಅವರ ದಿನನಿತ್ಯದ ಕೆಲಸ. ನೂರೆಂಟು ಚಾನೆಲ್‌ಗಳಿಲ್ಲದ ಕಾಲದ ಮಹಿಮೆ, ಇಲ್ಲಿ ಯಾವ ಹೋರಾಟ – ಪ್ರತಿಭಟನೆಗಳ ಬಿಸಿ ಇಲ್ಲದೆ ಇಸ್ರೋೋದ ಕೆಲಸಗಳಿಗೆ ಚಾಲನೆ ಸಿಕ್ಕಿಿತು. ಸದ್ದಿಲ್ಲದೆ ಒಂದು ಲಾಂಚಿಂಗ್ ಪ್ಯಾಾಡ್ ಎದ್ದುನಿಂತಿತು. ಇದೇ ಜಾಗ ಯಾಕೆ? ಸಾರಾಭಾಯಿ ಅದನ್ನು ತಮ್ಮ ಎಲ್ಲ ಪ್ರಭಾವ, ಪ್ರಭಾವಳಿ ಬಳಸಿ ರಾಜಕಾರಣಿಗಳಿಗೆ ಮನವರಿಕೆ ಮಾಡಿಕೊಟ್ಟಿಿದ್ದರು. ಈ ಜಾಗ ಭೂಮಧ್ಯರೇಖೆಗೆ ಹತ್ತಿಿರದಲ್ಲಿದೆ. ವಿಶಾಲವಾದ ಸಾಗರಕ್ಕೆೆ ಅಭಿಮುಖವಾಗಿ ನಿಂತಿದೆ. ಇಲ್ಲಿಂದಾಚೆಗೆ ಕನಿಷ್ಠ ಸಾವಿರ ಮೈಲಿಗಳಷ್ಟು ದೂರದಲ್ಲಿ ಜಲರಾಶಿಯ ಮಧ್ಯದಲ್ಲಿ ಯಾವೊಂದು ದ್ವೀಪಭಾಗವೂ ಇಲ್ಲ.

ಹಾಗಾಗಿ ವಿಫಲ ಯತ್ನಗಳಲ್ಲಿ ರಾಕೆಟ್‌ಗಳು ಅಧೋಮುಖಿಯಾದರೂ ಜನರ ಜೀವ ಎರವಾಗುವ ಸಂದರ್ಭ ಎದುರಾಗುವುದಿಲ್ಲ. ಅಲ್ಲದೆ, ಇಲ್ಲಿಂದ ಜಿಯೋಸ್ಟೇಷನರಿ ಮತ್ತು ಪೋಲಾರ್ (ಭೂಸ್ಥಿಿರ ಮತ್ತು ಧ್ರುವೀಯ) – ಈ ಎರಡೂ ರಾಕೆಟ್‌ಗಳನ್ನು ಕಳಿಸುವುದು ಸುಲಭ.
ಶ್ರೀಹರಿಕೋಟಾ ಭೂಮಧ್ಯರೇಖೆಗೆ ಹತ್ತಿಿರದಲ್ಲಿರುವುದರಿಂದ ಇನ್ನೊೊಂದು ಲಾಭವೂ ಇದೆ. ಅದೇನೆಂದರೆ ಭೂಗ್ರಹ ತನ್ನ ಅಕ್ಷದಲ್ಲಿ ಸತತವಾಗಿ ಸುತ್ತುತ್ತಿಿರುವಾಗ ಭೂಮಧ್ಯರೇಖೆಯ ಬಳಿ ಅದರ ಪ್ರದಕ್ಷಿಣೆಯ ವೇಗ ಹೆಚ್ಚು. ಅಲ್ಲಿಂದ ದೂರ ಹೋದಂತೆ ವೇಗ ಇಳಿಯುತ್ತ ಹೋಗುತ್ತದೆ. ಶ್ರೀಹರಿಕೋಟಾ ಬಳಿ ಭೂಮಿಯ ಈ ಗಿರಗಿಟ್ಟಿಿ ಪ್ರದಕ್ಷಿಣೆಯ ವೇಗ ಗಂಟೆಗೆ 1622 ಕಿಮೀ. ಇದು, ಈ ಪ್ರದೇಶದಲ್ಲಿ ಹಾರಿಬಿಟ್ಟ ರಾಕೆಟ್‌ಗಳಿಗೆ ತುಸು ಹೆಚ್ಚುವರಿ ವೇಗವನ್ನೂ ದಯಪಾಲಿಸುತ್ತದೆ. ಸೆಕೆಂಡಿಗೆ 0.4 ಕಿಮೀ ರಾಕೆಟ್‌ಗೆ, ಈ ಸ್ಥಳದ ಕಾರಣದಿಂದ ಸಿಗುತ್ತದೆ. ಅಷ್ಟರಮಟ್ಟಿಿಗೆ ನಾವು ಕಡಿಮೆ ಇಂಧನ ಬಳಸಬಹುದು. ಇವೆಲ್ಲ ರಾಕೆಟ್ ಹಾರಿಸುವ ತಾಂತ್ರಿಿಕತೆಗೆ ಸಂಬಂಧಿಸಿದ ಅನುಕೂಲಗಳ ಮಾತಾಯಿತು. ರಾಕೆಟ್‌ಗಳನ್ನು ಮತ್ತೆೆಲ್ಲೋೋ ಅಭಿವೃದ್ಧಿಿಪಡಿಸಿ ಮೇಲಿಂದ ಮೇಲೆ ಪರೀಕ್ಷಿಸಿ ನಂತರವಷ್ಟೇ ಲಾಂಚಿಂಗ್ ಸ್ಟೇಷನ್‌ಗೆ ತರಬೇಕು ತಾನೆ? ಹಾಗೆ ತರುವಾಗ ಒಂದೋ ರಸ್ತೆೆಮಾರ್ಗದಲ್ಲಿ ತರಬೇಕು, ಇಲ್ಲವೇ ಜಲಮಾರ್ಗದಿಂದ ತರಬೇಕು. ಇವೆರಡಕ್ಕೂ ಶ್ರೀಹರಿಕೋಟಾ ಮುಕ್ತ. ಸಮಾಜದ ಮುಖ್ಯವಾಹಿನಿಗೆ ರಗಳೆ ಮಾಡದೆ ದೂರದಲ್ಲಿ ದ್ವೀಪದಲ್ಲಿ ಸ್ಥಿಿತವಾಗಿರುವುದರಿಂದ ಇಲ್ಲಿಗೆ ಬಂದುಹೋಗುವ ವಾಹನಗಳಿಂದ ಅಂಥ ಅಡಚಣೆಯೇನಿಲ್ಲ ಎಂಬುದು ಒಂದು ಪ್ಲಸ್ ಪಾಯಿಂಟ್.

ಭೂ, ಜಲ ಸಾರಿಗೆಗಳ ಜತೆಗೆ, ಈ ಸ್ಥಳಕ್ಕೆೆ ವಾಯುಸಾರಿಗೆ (ಚೆನ್ನೈ ಏರ್‌ಪೋರ್ಟ್) ಕೇವಲ 70 ಕಿಮೀ ದೂರದಲ್ಲಿದೆ ಎಂಬುದು ಮತ್ತೊೊಂದು ಪ್ಲಸ್ ಪಾಯಿಂಟ್. ಜಗತ್ತಿಿನ ಯಾವ್ಯಾಾವುದೋ ದೇಶಗಳವರ ಉಪಗ್ರಹಗಳನ್ನು ನಾವು ಇಲ್ಲಿಂದ ಹಾರಿಸುವಾಗ, ಆಯಾ ದೇಶಗಳ ವಿಜ್ಞಾಾನಿಗಳಿಗೆ ಇದೊಂದು ಅನುಕೂಲವೇ ತಾನೇ? ಬೈಕಾನೂರ್ ನೆಲೆಗೆ ಹೋಗುವವರು ಮಾಸ್ಕೋೋಗೆ ಹೋಗಿಳಿದ ಮೇಲೂ ಎರಡೂವರೆ ಸಾವಿರ ಕಿಮೀಗಳ ಮತ್ತೊೊಂದು ವಿಮಾನ ಪ್ರಯಾಣ ಮಾಡಬೇಕು ಅನನುಕೂಲವನ್ನು ಇದರೊಂದಿಗೆ ಹೋಲಿಸಿ ನೋಡಿ!
ಭಾರತ ಇದುವರೆಗೆ ಹಾರಿಸಿರುವ ಪ್ರತಿಯೊಂದು ಉಪಗ್ರಹವೂ ಬಾಹ್ಯಾಾಕಾಶ ಚರಿತ್ರೆೆಯಲ್ಲಿ ಬರೆಯಲ್ಪಟ್ಟ ಒಂದು ಐತಿಹಾಸಿಕ ಪುಟ ಎಂದು ಭಾವಿಸುವುದಾದರೆ ಅದನ್ನು ಬರೆದದ್ದು ಶ್ರೀಹರಿಕೋಟಾ ಎಂಬ ಶಾಯಿಬುಡ್ಡಿಿಯಲ್ಲಿ ಅದ್ದಿ ಎಂದು ಭಾವಿಸಿಕೊಳ್ಳಬೇಕು. ಹಿಂದೆಲ್ಲ ನಾವು ಒಂದು ಟನ್‌ಗಿಂತ ಹೆಚ್ಚಿಿನ ಭಾರದ ಉಪಗ್ರಹವನ್ನು ಬಾಹ್ಯಾಾಕಾಶಕ್ಕೆೆ ಕಳಿಸಬೇಕಾದರೆ ಬೈಕಾನೂರ್ ಅಥವಾ ಫ್ರೆೆಂಚ್ ಗಯಾನದ ಆರಿಯಾನ್ ಕಡೆ ಮುಖ ಮಾಡಬೇಕಿತ್ತು. ಆದರೆ ಯಾವಾಗ ಜಿಎಸ್‌ಎಲ್‌ವಿ ಮತ್ತು ಮ್ಯಾಾಕ್3 ಹೆಸರಿನ ಶಕ್ತಿಿಶಾಲಿ ನಾವೇ ಅಭಿವೃದ್ಧಿಿಪಡಿಸಿ ಗಗನಮುಖಿಯಾಗಿ ನಿಲ್ಲಿಸಿದೆವೋ ಅವನ್ನು ವ್ಯೋೋಮಕ್ಕೆೆ ಕಳಿಸುವುದಕ್ಕೆೆ ಶ್ರೀಹರಿಕೋಟಾ ಕೂಡ ಅಪ್‌ಗ್ರೇಡ್ ಆಗಿ, ನಾನು ರೆಡಿ ಎಂದಿತು. ಸೌಂಡಿಂಗ್ ರಾಕೆಟ್ ಹಾರಿಸುವ ಮೂಲಕ ಬಾಲಹೆಜ್ಜೆೆಗಳನ್ನಿಿಟ್ಟಿಿದ್ದ ಒಂದು ಲಾಂಚಿಂಗ್ ಸ್ಟೇಷನ್, ಇಂದು ನಾಲ್ಕು ಟನ್ನಿಿಗೂ ಅಧಿಕ ಭಾರದ ಉಪಗ್ರಹವನ್ನು ಹೊತ್ತು ಅಂತರಿಕ್ಷಕ್ಕೆೆ ನೆಗೆಯಬಲ್ಲ ಮಹಾದೈತ್ಯ ಉಪಗ್ರಹವಾಹಕಗಳನ್ನು ಕೂಡ ಯಶಸ್ವಿಿಯಾಗಿ ಹಾರಿಸಬಲ್ಲ ಸಾಮರ್ಥ್ಯ ಪಡೆದಿರುವುದು ಸಣ್ಣ ಮಾತೇನಲ್ಲ. ಇಂದು ಶ್ರೀಹರಿಕೋಟಾದಲ್ಲಿ, ಸೌಂಡಿಂಗ್ ರಾಕೆಟ್‌ಗಳನ್ನು ಹಾರಿಸುವ ಲಾಂಚಿಂಗ್ ಪ್ಯಾಾಡ್ ಹೊರತಾಗಿ ಎರಡು ನಮ್ಮೆೆಲ್ಲ ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿ ರಾಕೆಟ್‌ಗಳು ಹಾರುವುದು ಇಲ್ಲಿಂದಲೇ. ನಮ್ಮ ಮಂಗಳಯಾನ, ಚಂದ್ರಯಾನದ ರಾಕೆಟ್‌ಗಳು ಆಕಾಶಕ್ಕೆೆ ಮುಖವೆತ್ತಿಿ ಚಿಮ್ಮಿಿದ್ದು ಕೂಡ ಈ ನೆಲೆಯ ನೆಲದಿಂದಲೇ. ಒಂದು ಚಿಮ್ಮುಗ, ರಾಕೆಟ್ಟನ್ನು ಹಂತ ಹಂತವಾಗಿ ಜೋಡಿಸಿ ನಂತರ ತಾನು ದೂರ ಹೋಗಬಲ್ಲ ತಂತ್ರಜ್ಞಾಾನದ್ದಾಾದರೆ ಇನ್ನೊೊಂದು ತಾನು ಇದ್ದಲ್ಲೇ ಇದ್ದು, ಜೋಡಿಸಿದ ರಾಕೆಟ್ ಅನ್ನು ದೂರಕ್ಕೆೆ ಸಾಗಿಸಿ ಚಿಮ್ಮಿಿಸಬಲ್ಲಂಥಾದ್ದು.

ತಾಂತ್ರಿಿಕ ವಿವರಗಳನ್ನೆೆಲ್ಲ ಬದಿಗಿಟ್ಟು ನೋಡುವುದಾದರೂ ಶ್ರೀಹರಿಕೋಟಾದ ಬಗ್ಗೆೆ ನಾವು ವಿಸ್ಮಯಪಡುವಂಥ, ಪರದೇಶಗಳವರು ಅಸೂಯೆಪಡುವಂಥ ಒಂದಷ್ಟು ಸಂಗತಿಗಳಿವೆ. 44 ಸಾವಿರ ಎಕರೆ ಪ್ರದೇಶದಲ್ಲಿ ಹರಡಿರುವ ಈ ಬಡಾವಣೆ ತನ್ನಷ್ಟಕ್ಕೆೆ ತಾನೇ ಒಂದು ಪುಟ್ಟ ಜಗತ್ತು. ಇಲ್ಲಿ ಕೇಂದ್ರ ಸರಕಾರದ ವತಿಯಿಂದ ನಡೆಯುವ ಶಾಲೆಯಿದೆ, ಆಸ್ಪತ್ರೆೆ, ಶಾಪಿಂಗ್ ಕಾಂಪ್ಲೆೆಕ್‌ಸ್‌ ಇವೆ. ಇದಕ್ಕೇ ಆದ ಸಾರಿಗೆ ವ್ಯವಸ್ಥೆೆಯಿದೆ, ಪೊಲೀಸ್ ಠಾಣೆಯಿದೆ. ಸಮಾಜದ ಎಲ್ಲ ಜಾತಿ-ಧರ್ಮಗಳವರೂ ಇಲ್ಲಿರುವುದರಿಂದ ಮಂದಿರ, ಮಸೀದಿ, ಚರ್ಚುಗಳೂ ಉಂಟು. ಆಯಾ ನಂಬಿಕೆಗಳವರ ಸ್ಮಶಾನ, ಖಬರಸ್ಥಾಾನಗಳೂ ಉಂಟು. ದೊಡ್ಡ, ಮಹತ್ವದ ರಾಕೆಟ್ ಉಡಾವಣೆಯಾಗುತ್ತಂತೆ ಎಂಬ ಪ್ರಚಾರವಾದಾಗ ಇಲ್ಲಿ ಕಾಣಿಸಿಕೊಳ್ಳುತ್ತಾಾರೆ. ಒಂದೆರಡು ದಿನ ಗೂಟದ ಕಾರುಗಳು ಓಡಾಡುತ್ತವೆ. ಖಾದಿಗಳು ಮಿಂಚುತ್ತವೆ, ಕಮಾಂಡೋಗಳು, ಕಪ್ಪುುಬೆಕ್ಕುಗಳು ಓಡಾಡುತ್ತಾಾರೆ. ಕಳೆದೈವತ್ತು ವರ್ಷಗಳಲ್ಲಿ ಬಹುತೇಕ ಎಲ್ಲ ಪ್ರಧಾನಿಗಳು, ರಾಷ್ಟ್ರಪತಿಗಳು ಮತ್ತು ರಕ್ಷಣಾ ಸಚಿವರುಗಳು ಈ ಪುಟ್ಟ ದ್ವೀಪಕ್ಕೆೆ ಬಂದುಹೋಗಿದ್ದಾಾರೆ. ಪಿ.ವಿ. ನರಸಿಂಹ ರಾಯರು ಪ್ರಧಾನಿಯಾಗಿದ್ದಾಾಗ ಇಲ್ಲಿಗೆ ಬಂದಿದ್ದರಂತೆ. ಪ್ರಧಾನಿಗಳ ಸೆಕ್ಯುರಿಟಿ ಎಷ್ಟು ಟೈಟ್ ಇತ್ತೆೆಂದರೆ ಈ ರಾಕೆಟ್ ಉಡಾವಣಾ ಕೇಂದ್ರದ ನಿರ್ದೇಶಕರನ್ನೇ ಸೆಕ್ಯುರಿಟಿ ಗಾರ್ಡ್‌ಗಳು ಒಳಬಿಡಲು ಕೇಳಲಿಲ್ಲ! ನಾನು ಇಲ್ಲಿನ ಡೈರೆಕ್ಟರ್! ನನ್ನನ್ನು ನೀವು ಅಲ್ಲಿ ನಮ್ಮ ಆಫೀಸಿನಲ್ಲಿ ಪ್ರಧಾನಿಗಳನ್ನು ಇದಿರುಗೊಳ್ಳುವವರಾದರೂ ಯಾರು? ಎಂದು ದಬಾಯಿಸಿ, ಗೋಳಾಡಿ, ಕೆಂಪುಪಟ್ಟಿಿಗಳನ್ನು ಜಗ್ಗಿಿಕೇಳಿದ ಮೇಲೆ ಯಾರೋ ಒಬ್ಬ ಅಧಿಕಾರಿಗೆ ಪಿಚ್ಚೆೆನ್ನಿಿಸಿ ಪರಿಸ್ಥಿಿತಿ ಅರ್ಥವಾಗಿ, ಆ ಡೈರೆಕ್ಟರರನ್ನು ತನ್ನ ಕಾರಲ್ಲೇ ಕೂರಿಸಿಕೊಂಡು ಪ್ರಧಾನಿಗಳಿಗಿಂತ ಮುಂಚೆ ದ್ವೀಪ ಸೇರುವಂತೆ ನೋಡಿಕೊಂಡು ಪರಿಸ್ಥಿಿತಿಯನ್ನು ಹೇಗೋ ನಿಭಾಯಿಸಿದನಂತೆ.

1991ರಲ್ಲಿ ಆಗಿನ ಪ್ರಧಾನಿ ರಾಜೀವ್ ಘಂಡಿಯ ಹತ್ಯೆೆಯಾದಾಗ ದೇಶಾದ್ಯಂತ ಒಂದು ಆಘಾತದಲೆ ಹೊಮ್ಮಿಿದ್ದು ನೆನಪಿರಬಹುದು. ಆ ಅಲೆಯ ಒಂದು ಸೆಳಕು ಶ್ರೀಹರಿಕೋಟಾದಲ್ಲೂ ಕಾಣಿಸಿಕೊಂಡಿತು. ರಾಜೀವ್ ಸ್ಕೆೆಚ್ ಹಾಕಿದ್ದು ಎಲ್‌ಟಿಟಿಇ ಎಂಬುದು ಸರ್ವವೇದ್ಯವಾಗಿತ್ತು. ಕೆಲವು ಬಂಧನಗಳೂ ನಡೆದಿದ್ದವು. ಕೊಲೆಯ ಮಾಸ್ಟರ್ ಮೈಂಡ್ ಶಿವರಸನ್ ತಲೆಮರೆಸಿಕೊಂಡಿದ್ದ. ಅವನು ತಮಿಳುನಾಡಿಂದ ಹೊರಟು ಬಂಗಾಳ ಕೊಲ್ಲಿಯಲ್ಲಿ ಸಾಗಿ ಆಂಧ್ರದ ಕರಾವಳಿಯ ಮೂಲಕ ಭೂಭಾಗ ಸೇರಿಕೊಳ್ಳಲು ಯತ್ನಿಿಸುತ್ತಿಿದ್ದಾಾನೆಂದೂ ಯಾವುದಾದರೂ ಉನ್ನತ ಸರಕಾರೀ ಅಧಿಕಾರಿಯನ್ನು ಒತ್ತೆೆ ಇರಿಸಿಕೊಂಡು ತನ್ನ ಬೇಡಿಕೆಗಳನ್ನು ಮುಂದಿಡಬಹುದೆಂದೂ ಬೇಹು ಇಲಾಖೆ ಎಚ್ಚರಿಕೆ ಕೊಟ್ಟಿಿತ್ತು. ಆ ಗುಪ್ತಮಾಹಿತಿ ನಿಜವೇ ಆಗಿದ್ದರೆ ಆತ ಶ್ರೀಹರಿಕೋಟಾದ ಲಾಂಚಿಂಗ್ ಸ್ಟೇಷನ್‌ನ ಡೈರೆಕ್ಟರರನ್ನೇ ಒತ್ತೆೆ ಇಟ್ಟುಕೊಳ್ಳುವ, ಮಾಡುವ ಅಥವಾ ಕೊಲೆಯೇ ಮಾಡಿಬಿಡುವ ಸಾಧ್ಯತೆ ಹೆಚ್ಚು ಎಂದು ಪೊಲೀಸರು ಬಗೆದರು. ಒಂದು ಬೆಳ್ಳಂಬೆಳಗ್ಗೆೆ ಶ್ರೀಹರಿಕೋಟಾದಲ್ಲಿ ಖಾಕಿಗಳ ಪಡೆ ಕಾಣಿಸಿಕೊಂಡಿತು! ಆಗ ಉಡ್ಡಯನ ಕೇಂದ್ರದ ಡೈರೆಕ್ಟರ್ ಆಗಿದ್ದವರು ಆರ್. ಅರವಮುದನ್ ಎಂಬವರು. ಅವರನ್ನು ಶಿವರಸನ್ ಒತ್ತೆೆ ಇಟ್ಟುಕೊಳ್ಳಲಿಲ್ಲ. ಆದರೆ ಪೊಲೀಸರು ಒತ್ತೆೆ ಇಟ್ಟುಕೊಂಡರು! ಶಿವರಸನ್ ಕೊನೆಗೂ ಬೆಂಗಳೂರಲ್ಲಿ ಸಿಕ್ಕಿಿಬಿದ್ದಾಾಗ ಎಲ್ಲರಿಗಿಂತ ದೊಡ್ಡ ನಿಟ್ಟುಸಿರು ಬಿಟ್ಟವರು ಅರವಮುದನ್ ಅವರೇ!

ಇಂಥ ಅನಪೇಕ್ಷಿತ ಅನಿರೀಕ್ಷಿತ ವಿದ್ಯಮಾನಗಳನ್ನು ಹೊರತುಪಡಿಸಿದರೆ ಶ್ರೀಹರಿಕೋಟಾ ಸದ್ದಿಲ್ಲದ ಸುಂದರಿ. ತನ್ನ ಪಾಡಾಯಿತು ಎಂಬಂತೆ ಇಲ್ಲಿಯ ಜನಜೀವನ, ಜೀವನಕ್ರಮ. ರಾಜಕೀಯ ಇಲ್ಲಿಂದ ಬಹಳ ದೂರ. ರಾಕೆಟ್‌ಗಳ ಲಾಂಚಿಂಗ್ ಇದ್ದಾಾಗ ಒಂದೆರಡು ವಾರಗಳ ಮಟ್ಟಿಿಗೆ ಗಿಜಿಗುಡುವ ಗೂಡಾಗುವ ಇದು ಉಳಿದಂತೆ ಮೌನಋಷಿ. ರಾಕೆಟ್‌ಗಳನ್ನು ಹಾರಿಸುವುದು ಮಾತ್ರವಲ್ಲ, ರಾಕೆಟ್‌ಗಳಿಗೆ ಬೇಕಾದ ಇಂಧನ ಮತ್ತು ಬೂಸ್ಟರ್‌ಗಳನ್ನು ಅಭಿವೃದ್ಧಿಿಪಡಿಸುವ ಘಟಕವೂ ಇಲ್ಲಿದೆ. ಸರಿಸುಮಾರು 10,000 ಮಂದಿ ಕೆಲಸ ಮಾಡುವ ಬೃಹತ್ ಕಾರ್ಖಾನೆಯಂಥ ವ್ಯವಸ್ಥೆೆ ಇದು. ಇಲ್ಲಿಯ ಉದ್ಯೋೋಗಿಗಳೆಲ್ಲರಿಗೆ ವಸತಿ ಕಲ್ಪಿಿಸಲು ದ್ವೀಪದಲ್ಲಿ ಜಾಗ ಸಾಲದೆ ಒಂದಷ್ಟು ಹೊರಗಿನ ಸೂಳ್ಳೂರುಪೇಟದಂಥ ಊರಿನಲ್ಲೂ ವ್ಯವಸ್ಥೆೆ ಮಾಡಬೇಕಾಗಿ ಬಂದಿದೆ. ಈ ಎರಡು ಬಿಂದುಗಳ ನಡುವೆ ಹರಡಿಕೊಂಡಿರುವ ಪುಲಿಕಾಟ್ ಸರೋವರದಲ್ಲಿ ಆಗೀಗ ನೀರಿನ ಉಬ್ಬರ, ವರ್ಷದ ಬಹುತೇಕ ಸಮಯ ಮಂದಮಾರುತ. ಸದಾ ಒಂದಿಲ್ಲೊೊಂದು ಜಾತಿಯ ಕಡಲಹಕ್ಕಿಿಗಳ ಕಲರವ. ಆಕಾಶಕ್ಕೆೆ ಏಣಿ ಕಟ್ಟಲು ಇತ್ತ ಮನುಷ್ಯ ಏನೇನೆಲ್ಲ ಕಸರತ್ತು ಮಾಡುತ್ತಿಿದ್ದರೆ ಅತ್ತ ಈ ಖಗರತ್ನಗಳು ತಮ್ಮ ರೆಕ್ಕೆೆಯನ್ನೇ ಚಾಪೆಯಂತೆ ಬಿಚ್ಚಿಿ ಸ್ವಚ್ಛಂದ ಹಾರಾಡಿಕೊಂಡು ಕಿಚಾಯಿಸುತ್ತವೆ. ಗ್ರೀಕರಿಂದ, ಪೋರ್ಚುಗೀಸರಿಂದ, ಡಚ್ಚರಿಂದ, ಬ್ರಿಿಟಿಷರಿಂದ ಆಳಿಸಿಕೊಂಡ ಈ ಪ್ರಾಾಂತ್ಯದಲ್ಲಿ ಒಂದಾನೊಂದು ಕಾಲದಲ್ಲಿ ಮೆಕ್ಕಾಾದಲ್ಲಿ ಟ್ಯಾಾಕ್‌ಸ್‌ ಕಟ್ಟಲಿಲ್ಲ ಎಂಬ ಕಾರಣಕ್ಕೆೆ ಖಲೀಫನಿಂದ ಬಹಿಷ್ಕಾಾರ ಹಾಕಿಸಿಕೊಂಡ ಅರಬ್ಬರೂ ಬಂದು ತಮ್ಮ ನೆಲೆ ಕಂಡುಕೊಂಡಿದ್ದರಂತೆ. ಹಾಗಿದ್ದ ಮೇಲೆ ಜಗತ್ತಿಿನ ಮೂಲೆ ಮೂಲೆಗಳಿಂದ ಹಕ್ಕಿಿಗಳು ಬರುವುದೇನು ದೊಡ್ಡ ಮಾತೆ? ದೂರದ ಸೈಬೀರಿಯಾದಿಂದ ಈ ಬಿಸಿಲ ಹವೆ ಹುಡುಕಿ ಪುಲಿಕಾಟಿಗೆ ಬರುವ ಹಕ್ಕಿಿಗಳೂ ಇವೆ. ಇಲ್ಲಿ ಬಂದು ಮೀನು ತಿಂದುಂಡು ಸುಖವಾಗಿದ್ದು ಗೂಡು ಕಟ್ಟಿಿ ಮರಿ ಮಾಡಿ ಸಂಸಾರ ಬೆಳೆಸಿಕೊಂಡು ವಾಪಸು ತವರಿಗೆ ಮರಳುವ ವಿಜ್ಞಾಾನಿಗಳಂತೆಯೇ ಜಗದ ಜಂಜಡಗಳನ್ನು ಮರೆತ ಅವಧೂತ ಬದುಕು. ಫ್ಲಾಾಮಿಂಗೋಗಳ ವಲಸೆಯ ಕಾಲದಲ್ಲಂತೂ ಇಡೀ ಕೆರೆತುಂಬ ಗುಲಾಬಿಯ ಓಕುಳಿ. ಎಲ್ಲೆೆಲ್ಲಿ ನೋಡಿದರೂ ಕೆಂಪು ಕಾಲಿನ, ಗುಲಾಬಿ ಕತ್ತಿಿನ ಹಕ್ಕಿಿಗಳ ಕಡಲಧ್ಯಾಾನ. ರಸ್ತೆೆಯಲ್ಲಿ ನೂರಾರು ಕ್ಯಾಾಮೆರಾ ಕಣ್ಣುಗಳ ತಟವಟ. ತಮಾಷೆಯಂತೆ ಕಾಣುವ ಸ್ವಾಾರಸ್ಯದ ಸಂಗತಿ ಎಂದರೆ, ರಾಕೆಟ್ ವಿಜ್ಞಾಾನಿ ಸತೀಶ್ ಧವನ್ ಅವರು ಏರೋಡೈನಮಿಕ್‌ಸ್‌ ಬಗ್ಗೆೆ ಬರೆದ ಪುಸ್ತಕದ ತುಂಬ ಈ ಪುಲಿಕಾಟ್ ಸರೋವರದ ಬಾನಾಡಿಗಳದ್ದೇ ಚಿತ್ರಗಳು!


ಮುಂದಿನ ಸಲ ಮೂರ್ನಾಲ್ಕು ರಜೆ ಸಿಕ್ಕಾಾಗ ಮನೆಯಲ್ಲಿ ಕಳ್ಳೆೆಪುರಿ ತಿನ್ನುತ್ತ ಕೌಚ್ ಪೊಟ್ಯಾಾಟೋ ಆಗುವ ಬದಲು, ಧರ್ಮಕ್ಷೇತ್ರಗಳಿಗೆ ಹೋಗಿ ಅಲ್ಲಿನ ಜನಸಂದಣಿಯ ಮಧ್ಯೆೆ ಏಗಿ ಹಣ್ಣಾಾಗುವ ಬದಲು, ಯಾವ್ಯಾಾವುದೋ ಗಿರಿಶಿಖರ ಹಿಮಕಂದರಗಳಿಗೆಲ್ಲ ಹೋಗಿ ಸೆಲ್ಫಿಿ ಹೊಡೆದು ಫೇಸ್ಬುಕ್ಕಿಿಗೇರಿಸುವ ಬದಲು, ಫಾರ್ ಎ ಚೇಂಜ್, ಶ್ರೀಹರಿಕೋಟಾಕ್ಕೆೆ ಹೋಗಿಬನ್ನಿಿ! ಕಡಲ ಬಾನಾಡಿಗಳನ್ನು ಮಾತಾಡಿಸಿ, ಲೋಹದ ಬಾನಾಡಿಗಳನ್ನು ಬಾಹ್ಯಾಾಕಾಶಕ್ಕೇರಿಸುವ ನಮ್ಮ ಹೆಮ್ಮೆೆಯ ತಂತ್ರಜ್ಞರಿಗೆ ದೂರದಿಂದ ಒಂದು ಕೃತಜ್ಞತೆಯ ಸೆಲ್ಯೂಟ್ ಹೊಡೆದುಬನ್ನಿಿ!

3 thoughts on “ಸದಾ ಮೇಲ್ಮುಖವಿರಲಿ ನೋಟ ಎನ್ನುತ್ತಿದೆ ಶ್ರೀಹರಿ ಕೋಟಾ!

  1. ಧನ್ಯವಾದಗಳು ಅತ್ಯುತ್ತಮ ಅಂಕಣ ಬರೆದಿರುವದಕ್ಕೆ.

Leave a Reply

Your email address will not be published. Required fields are marked *