Monday, 6th February 2023

ಬಿಟೌನ್ ಚಿತ್ರರಂಗಕ್ಕೆ ಸಾಯಿ ಪಲ್ಲವಿ ಭರ್ಜರಿ ಎಂಟ್ರಿ

ಮುಂಬೈ: ದಕ್ಷಿಣ ಭಾರತದ ಸಿನಿಮಾ ರಂಗದ ಪ್ರತಿಭಾನ್ವಿತ ನಟಿ Sai `ಗಾರ್ಗಿ’ ಸಿನಿಮಾ ಬಳಿಕ ಮತ್ತೆ ಸುದ್ದಿಯಲ್ಲಿ ದ್ದಾರೆ. ಸೀತಾ ಮಾತೆ ಪಾತ್ರ ಮಾಡುವ ಮೂಲಕ ಬಿಟೌನ್ ಚಿತ್ರರಂಗಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ.

ಇತ್ತೀಚೆಗೆ ಸಾಯಿಪಲ್ಲವಿ ನಟಿಸಿರುವ ಗಾರ್ಗಿ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಹೇಳಿಕೊಳ್ಳು ವಂತಹ ಸೌಂಡ್ ಮಾಡದೇ ಇದ್ದರೂ, ರೌಡಿ ಬೇಬಿ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಸಿನಿಮಾರಂಗವನ್ನೇ ನಟಿ ತೊರೆಯುತ್ತಾರೆ ಎಂಬ ಸುದ್ದಿಯ ಬೆನ್ನಲ್ಲೇ ಇದೀಗ ಬಾಲಿವುಡ್‌ಗೆ ಎಂಟ್ರಿಕೊಡುವ ಮೂಕ ಹರಿದಾಡುತ್ತಿರುವ ಗಾಸಿಪ್ ಗೆ ಬ್ರೇಕ್ ಹಾಕಿದ್ದಾರೆ.

ಬಾಲಿವುಡ್‌ನ ನಿರ್ಮಾಪಕ ಮಧು ಮಂತೇನಾ ನಿರ್ಮಾಣದಲ್ಲಿ ರಾಮಾಯಣ ಕಾವ್ಯವನ್ನ ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ. ಹಾಗಾಗಿ ಸೀತೆಯಾಗಿ ನಟಿಸಲು ಸಾಯಿ ಪಲ್ಲವಿಗೆ ಬುಲಾವ್ ಬಂದಿದೆ. ಈ ಹಿಂದೆ ಸೀತೆಯ ಪಾತ್ರಕ್ಕೆ ಕರೀನಾ ಕಪೂರ್ ಮತ್ತು ದೀಪಿಕಾ ಪಡುಕೋಣೆಗೆ ಕೇಳಲಾಗಿತ್ತಂತೆ, ಆದರೆ ಈಗ ಸಾಯಿಪಲ್ಲವಿನೇ ಸೀತಾ ಪಾತ್ರಕ್ಕೆ ಸೂಕ್ತ ಎಂದೇನಿಸಿ ಕೇಳಲಾಗಿದೆ.

ಶ್ರೀರಾಮನ ಪಾತ್ರದಲ್ಲಿ ರಣ್‌ಬೀರ್ ಕಪೂರ್, ರಾವಣನ ಪಾತ್ರಕ್ಕೆ ಹೃತಿಕ್ ರೋಷನ್ ನಟಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. 2023ರಲ್ಲಿ ಸೆಪ್ಟೆಂಬರ್ ಸಿನಿಮಾ ಸೆಟ್ಟೇರಲಿದೆ.

error: Content is protected !!