Saturday, 8th August 2020

ಸಾಲಗಾರರ ಕಾಟ: ಕುಟುಂಬದ ನಾಲ್ವರ ಜತೆ ಉದ್ಯಮಿ ಆತ್ಮಹತ್ಯೆ ; ಸಿದ್ಧಾರ್ಥ ಸಾವಿನ ಬೆನ್ನಲ್ಲೇ ಮತ್ತೊಂದು ಆಘಾತಕರ ಘಟನೆ

ಖ್ಯಾತ ಕಾಫಿ ಉದ್ಯಮಿ ಜಿ ವಿ ಸಿದ್ಧಾರ್ಥ ಅವರ ಆತ್ಮಹತ್ಯೆಯ ಸುದ್ದಿ ಜನಮಾನಸದಲ್ಲಿ ಇನ್ನೂ ಹಸಿರಾಗಿರುವಂತೆಯೇ, ಮತ್ತೊಬ್ಬ ಉದ್ಯಮಿ, ಕುಟುಂಬ ಸಮೇತ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಮೈಸೂರಿನ ಓಂಪ್ರಕಾಶ್ ಎಂಬುವವರೇ ಈ ಉದ್ಯಮಿಯಾಗಿದ್ದು, ಸಾಲಗಾರರ ಕಾಟ ತಾಳಲಾರದೆ ಈ ಕ್ರಮಕ್ಕೆೆ ಮುಂದಾಗಿದ್ದಾರೆ ಎನ್ನಲಾಗಿದೆ.

ಅವರು ತಮ್ಮ ಕುಟುಂಬದ ನಾಲ್ವರನ್ನು ಗುಂಡು ಹಾರಿಸಿ ಸಾಯಿಸಿ ಬಳಿಕ ತಾವೂ ಆತ್ಮಹತ್ಯೆೆ ಮಾಡಿಕೊಂಡಿದ್ದಾಾರೆ.
ಓಂಪ್ರಕಾಶ್ ಅವರು ಮೈಸೂರಿನ ದಟ್ಟಗಳ್ಳಿಿ ಬಡಾವಣೆಯಲ್ಲಿ ಉದ್ಯಮ ನಡೆಸುತ್ತಿಿದ್ದು, ಇದಕ್ಕಾಾಗಿ ಸ್ಥಳೀಯ ಲೇವಾದೇವಿದಾರರಿಂದ ಕೋಟ್ಯಂತರ ರು. ಸಾಲ ಮಾಡಿದ್ದರು ಎನ್ನಲಾಗಿದೆ. ಉದ್ಯಮದಲ್ಲಿ ನಷ್ಟ ಉಂಟಾಗಿ, ಕೋಟ್ಯಂತರ ರು. ಸಾಲ ತೀರಿಸಲು ಸಾಧ್ಯವಾಗದ ಕಾರಣ ಕುಟುಂಬದ ಎಲ್ಲರೂ ಒಮ್ಮತವಾಗಿ ಚರ್ಚೆ ನಡೆಸಿ ಆತ್ಮಹತ್ಯೆೆಯ ತೀರ್ಮಾನ ತೆಗೆದುಕೊಂಡಿದ್ದಾಾರೆ ಎಂದು ತಿಳಿದುಬಂದಿದೆ.

ಕುಟುಂಬ ಸಮೇತ ಗುಂಡ್ಲುಪೇಟೆಗೆ ಬಂದಿದ್ದ ಅವರು ಎರಡು ದಿನ ವಸತಿ ಗೃಹದಲ್ಲಿ ಉಳಿದುಕೊಂಡಿದ್ದರು.ಗುರುವಾರ ರಾತ್ರಿಿ ಊಟಕ್ಕೆೆಂದು ಎಲ್ಲರೂ ಹೊರಹೋಗಿದ್ದರು. ಶುಕ್ರವಾರ ಬೆಳಗಿನ ಜಾವ ಪಟ್ಟಣದ ಹೊರ ವಲಯದ ಜಮೀನಿನಲ್ಲಿ ತಾವೇ ತಂದಿದ್ದ ಪಿಸ್ತೂಲ್‌ನಿಂದ ಓಂಪ್ರಕಾಶ್ ಅವರು ಹೆಂಡತಿ ನಿಖಿತಾ(26), ಮಗ ಆರ್ಯಕೃಷ್ಣ(06), ತಂದೆ ನಾಗರಾಜ ಭಟ್ಟಾಾಚಾರ್ಯ(73), ತಾಯಿ ಹೇಮಲತಾ(60) ಅವರುಗಳ ಮೇಲೆ ಗುಂಡು ಹಾರಿಸಿ, ತದನಂತರ ತಾವೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆೆ ಮಾಡಿಕೊಂಡಿದ್ದಾಾರೆ.

ಗುಂಡ್ಲುಪೇಟೆ ಸರಕಾರಿ ಸಾರ್ವಜನಿಕ ಆಸ್ಪತ್ರೆೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ವರಸೂದಾರರಿಗೆ ಕಳೇಬರಗಳನ್ನು ಹಸ್ತಾಾಂತರಿಸಲಾಯಿತು, ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಆತ್ಮಹತ್ಯೆೆಯ ಹಿಂದೆ ಹಲವು ಅನುಮಾನದ ಕರಿನೆರಳು

ಕುಟುಂಬದ ಸಮೇತ ಆತ್ಮಹತ್ಯೆೆ ಮಾಡಿಕೊಂಡ ಉದ್ಯಮಿಯ ಸಾವಿನ ಹಿಂದೆ ಹಲವು ಅನುಮಾನದ ಕರಿನೆರಳಿನ ಛಾಯೆ ಹೊರ ಬರುತ್ತಿಿದ್ದು, ಪೊಲೀಸ್ ತನಿಖೆಯಿಂದಷ್ಟೇ ಸತ್ಯಾಾಂಶ ಹೊರಬರಬೇಕಿದೆ.
ಮೈಸೂರು ನಗರದ ದಟ್ಟಗಳ್ಳಿಿಯಲ್ಲಿರುವ ಜೋಡಿಬೇವಿನ ಮರದ ರಸ್ತೆೆಯ ಪಕ್ಕದಲ್ಲೇ ಇರುವ ಉದ್ಯಮಿ ಓಂಪ್ರಕಾಶ್ ವಾಸಿಸುತ್ತಿಿದ್ದ ಬಂಗಲೆಯಲ್ಲೀಗ ಮೌನ ಆವರಿಸಿದೆ. ಸಾಲದ ವಿಚಾರಕ್ಕೆೆ ಆತ್ಮಹತ್ಯೆೆ ಮಾಡಿಕೊಳ್ಳುವಷ್ಟು ನಮ್ಮ ವರು ದುರ್ಬಲರಾಗಿಲ್ಲ ಎಂದು ಹತ್ತು ವರ್ಷದಿಂದ ಸ್ನೇಹಿತರಾಗಿದ್ದ ವಕೀಲ ಅಮೃತೇಶ್ ಹೇಳಿರುವ ಮಾತು ಕೇಳಿದರೆ ಆತ್ಮಹತ್ಯೆೆಯ ಸಾವಿನ ನಿಗೂಢತೆಗೆ ಹಲವು ಪ್ರಶ್ನೆೆಗಳನ್ನು ಹುಟ್ಟುಹಾಕುವಂತೆ ಮಾಡಿದೆ.

ದೂರದ ಚಿಕ್ಕಬಳ್ಳಾಾಪುರದಿಂದ ಮೈಸೂರಿಗೆ ಎಂಜಿನಿಯರಿಂಗ್ ವ್ಯಾಾಸಂಗ ಮಾಡಲು ಬಂದ ಓಂ ಪ್ರಕಾಶ್, ಪಡುವಾರಹಳ್ಳಿಿಯ ನಿವಾಸಿಯಾಗಿದ್ದ ನಿಖಿತಾ ಅವರನ್ನು ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದರು. ಬೆಂಗಳೂರು ನಗರದಲ್ಲಿ ವಿವಾಹವಾದ ಬಳಿಕ ವಿಜಯನಗರದ ಬಳಿ ಬಾಡಿಗೆ ಮನೆಯೊಂದನ್ನು ಪಡೆದು ತಮ್ಮ ತಂದೆ ತಾಯಿಯನು ಕರೆದುಕೊಂಡು ಬಂದಿದ್ದರು. ಕೆಲಸಕ್ಕೆೆ ಸೇರದೆ ತಾವೇ ಉದ್ಯಮಿಯಾಗುವ ಕನಸು ಕಂಡು ಮೈಸೂರಿನಲ್ಲೇ ಜಿ.ವಿ.ಇನ್ಫೋೋಟೆಕ್ ಡೇಟಾ ಬೇಸ್ ಕಂಪನಿಯನ್ನು ಶುರು ಮಾಡಿದ್ದರು.ನಂತರದ ದಿನದಲ್ಲಿ ದಟ್ಟಗಳ್ಳಿಿಯ ಜೋಡಿಬೇವಿನ ಮರದ ರಸ್ತೆೆಯ ಪಕ್ಕದ ಕ್ರಾಾಸ್‌ನಲ್ಲೇ ಒಂದೂವರೆ ಕೋಟಿ ರು.ಬೆಲೆ ಬಾಳುವ ಮನೆಯನ್ನು ಖರೀದಿಸಿದ ಬಳಿಕ ಕುಟುಂಬ ಸಮೇತ ಎಲ್ಲರು ಹೊಸ ಮನೆಯಲ್ಲೇ ವಾಸವಾಗಿದ್ದರು.

ಸಾಲದ ಕೂಪಕ್ಕೆೆ ಸಿಲುಕಿದರೆ ? ಉದ್ಯಮದಲ್ಲಿ ಕೈಸುಟ್ಟುಕೊಳ್ಳುತ್ತಿಿದ್ದರಿಂದ ಬದಲಿ ಉದ್ಯಮದ ಕಡೆಗೆ ಕಣ್ಣಿಿಟ್ಟ ಓಂಪ್ರಕಾಶ್ ಕಂಪನಿಯನ್ನು ಮುಚ್ಚಿಿ ರಿಯಲ್ ಎಸ್ಟೇಟ್, ಮೈನಿಂಗ್, ಅನಿಮೇಷನ್ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು. ಬಳ್ಳಾಾರಿಯಲ್ಲಿ ಮೈನಿಂಗ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಲ್ಲದೆ ಮೈನಿಂಗ್ ನಡೆಸಲು ಪರವಾನಗಿ ಪಡೆದು ಅದಿರನ್ನು ವಿದೇಶಗಳಿಗೂ ರಫ್ತುು ಮಾಡುತ್ತಿಿದ್ದರು ಎಂದು ಹೇಳಲಾಗಿದೆ. ಆದರೆ,ಬಳ್ಳಾಾರಿಯಲ್ಲಿ ಮೈನಿಂಗ್ ವ್ಯವಹಾರ ಕೈಕೊಟ್ಟಿಿದ್ದರಿಂದ ಸಂಕಷ್ಟಕ್ಕೆೆ ಸಿಲುಕಿದ್ದ ಅವರು ಆದಾಯ ತೆರಿಗೆ, ಇಡಿಯಿಂದಲೂ ಎರಡು ಬಾರಿ ವಿಚಾರಣೆಗೊಳಪಟ್ಟಿಿದ್ದರು. ಆದರೆ, ಇದಾವುದರಿಂದಲೂ ಧೃತಿಗೆಡದ ಓಂಪ್ರಕಾಶ್ ತನ್ನದೇ ಆದ ಕಲ್ಪನೆಯೊಂದಿಗೆ ಅನಿಮೇಷನ್ ಚಿತ್ರವನ್ನು ತಯಾರು ಮಾಡಲು ಮುಂದಾಗಿದ್ದರು.ಅದಕ್ಕಾಾಗಿಯೇ ಮೈಸೂರಿನ ತಮ್ಮ ಆಪ್ತರು,ನೆಂಟರ ಬಳಿ ಸಾಲ ಪಡೆದು 65ಲಕ್ಷದಷ್ಟು ಬಂಡವಾಳ ತೊಡಗಿಸಿದ್ದರು. ಆದರೆ, ಈ ಅನಿಮೇಷನ್ ಚಿತ್ರ ಹೊರ ಬರುವ ಮುನ್ನವೇ ಅವರೇ ಆತ್ಮಹತ್ಯೆೆ ಮಾಡಿಕೊಂಡಿರುವುದು ಗಮನಾರ್ಹವಾಗಿದೆ.

ನಾಲ್ವರು ಗನ್‌ಮ್ಯಾನ್
ಏಕಕಾಲದಲ್ಲಿ ಹಲವು ಉದ್ಯಮದಲ್ಲಿ ಯಶಸ್ಸು ಕಾಣಬೇಕೆಂಬ ಗುರಿಯೊಂದಿದ್ದ ಈತನಿಗೆ ಭೂಗತ ಲೋಕದಿಂದ ಬೆದರಿಕೆ ಬರುತ್ತಿಿದ್ದರಿಂದ ನಾಲ್ವರು ಗನ್‌ಮ್ಯಾಾನ್‌ಗಳನ್ನು ನೇಮಿಸಿಕೊಂಡಿದ್ದರು. ಈ ಗನ್‌ಮ್ಯಾಾನ್‌ಗಳು ಎಲ್ಲೇ ಹೋಗಲಿ,ಬರಲೀ ಆತನೊಂದಿಗೆ ಇರುತ್ತಲೇ ಇದ್ದರು. ಆದರೆ, ನಿನ್ನೆೆ ತಾವು ಕುಟುಂಬದೊಂದಿಗೆ ಕಾಲ ಕಳೆಯಲಿದ್ದೇನೆಂದು ಹೇಳಿ ಈ ಗನ್‌ಮ್ಯಾಾನ್‌ಗಳನ್ನು ಬೇರೆ ಕಡೆ ಇರುವಂತೆ ಸೂಚಿಸಿ ಕಳುಹಿಸಿದ್ದರೆಂದು ಗನ್‌ಮ್ಯಾಾನ್‌ವೊಬ್ಬರು ಪೊಲೀಸರಿಗೆ ಹೇಳಿದ್ದಾಾನೆ.

ಮನೆಯಲ್ಲಿ ಮೌನ
ಓಂಪ್ರಕಾಶ್ ತಂದೆ ನಾಗರಾಜ್ ಭಟ್ಟಾಾಚಾರ್ಯರು ಜ್ಯೋೋತಿಷ್ಯ ಹೇಳುತ್ತಿಿದ್ದರಾದರೂ ಮಗನ ಮನೆಗೆ ಬಂದ ಮೇಲೆ ನಿಲ್ಲಿಸಿ ಬಿಟ್ಟಿಿದ್ದರು. ಒಂದು ವರ್ಷದಿಂದ ಈ ಮನೆಯಲ್ಲಿ ವಾಸವಿದ್ದರೂ ಯಾರೊಂದಿಗೂ ಮಾತನಾಡುತ್ತಿಿರಲಿಲ್ಲ. ಹೀಗಾಗಿ, ಅಕ್ಕಪಕ್ಕದ ಮನೆಯವರಿಗೂ ಇವರೊಂದಿಗಿನ ಒಡನಾಟ ಕಡಿಮೆಯಾಗಿದೆ. ಇದಲ್ಲದೆ ಒಂದು ವರ್ಷದಿಂದ ಹಾಲು ಹಾಕುತ್ತಿಿದ್ದವನಿಗೂ ಸಹಾ ವಾರದ ಹಿಂದೆಯಷ್ಟೇ ನಾಳೆಯಿಂದ ಹಾಲು ಕೊಡುವುದು ಬೇಡ,ನಾವು ಒಂದು ತಿಂಗಳು ವಿದೇಶ ಪ್ರವಾಸಕ್ಕೆೆ ಹೋಗ್ತಾಾ ಇದ್ದೇವೆಂದು ಹೇಳಿ ಎಲ್ಲವನ್ನು ಕ್ಲಿಿಯರ್ ಮಾಡಿ ಕಳುಹಿಸಿದ್ದರು.ಅದೇ ರೀತಿ ನಿತ್ಯ ದಿನ ಬಳಕೆಯ ವಸ್ತುಗಳನ್ನು ನೀಡುತ್ತಿಿದ್ದವರಿಗೂ ಮುಂಗಡ ಹಣ ಕೊಟ್ಟು ಕಳುಹಿಸಿದ್ದರು.ಆದರೆ, ಈ ಕುಟುಂಬದ ಆತ್ಮಹತ್ಯೆೆ ವಿಚಾರ ಕೇಳಿದ ಹಾಲು ಹಾಕುವವನು ಸಹ ಅಚ್ಚರಿಗೊಂಡಿದ್ದಾಾನೆ. ಮತ್ತೊೊಂದು ಮಾಹಿತಿ ಪ್ರಕಾರ ಆದಾಯ ತೆರಿಗೆ ಇಲಾಖೆ ಸೇರಿ ಇನ್ನಿಿತರ ಕಡೆಗಳಿಂದ ತಮ್ಮ ಅಳಿಯ ಮನನೊಂದಿದ್ದರೆಂದು ಮಾವ ಶಾಂತರಾಮ್ ಘಟನೆಯ ಬಳಿ ಹೇಳಿಕೊಂಡು ಬಿಕ್ಕಿಿಸಿಬಿಕ್ಕಿಿಸಿ ಕಣ್ಣೀರಿಟ್ಟಿಿರುವುದರಿಂದ ಪೊಲೀಸರು ಮಾಹಿತಿ ಪಡೆಯುವ ಸಾಧ್ಯತೆಯಿದೆ.

ದುರ್ಬಲ ವ್ಯಕ್ತಿಯಲ್ಲ
ಹತ್ತು ವರ್ಷದಿಂದ ಸ್ನೇಹಿತನಾಗುವ ಜತೆಗೆ ಎಲ್ಲ ಕೇಸ್ ನಾನೇ ನೋಡ್ತಾಾ ಇದ್ದೆೆ. ಮೂರು ತಿಂಗಳ ಹಿಂದೆ ಬಂದು ಭೇಟಿ ಮಾಡಿದ್ದರು. ವಾರದ ಹಿಂದೆ ಫೋನ್ ಸಹಾ ಮಾಡಿ ಕೆಲವುವಿಚಾರ ಮಾತನಾಡಿದ್ದರು. ಸಾಲದಿಂದಾಗಿ ಈ ರೀತಿ ಮಾಡಿಕೊಂಡಿದ್ದಾಾರೆಂದು ನನಗೆ ಅನ್ನಿಿಸ್ತಿಿಲ್ಲ. ಅಷ್ಟೊೊಂದು ದುರ್ಬಲವಾದ ಮನಸ್ಸು ಅವರದ್ದಲ್ಲವೆಂದು ವಕೀಲ ಅಮೃತೇಶ್ ಹೇಳಿರುವುದು ಆತ್ಮಹತ್ಯೆೆಯ ಪ್ರಕರಣದ ನೈಜತೆಯ ಶಂಕೆ ಮೂಡಿಸಿದೆ. ತನಗೆ ಜನ್ಮ ಕೊಟ್ಟ ಅಪ್ಪ,ಅಮ್ಮ,ಬಾಳಸಂಗಾತಿ ಪತ್ನಿಿ,ಮುದ್ದು ಕಂದನಿಗೆ ಗುಂಡಿಟ್ಟು ಕೊಂದು,ತಾನೂ ಮಾಡಿಕೊಂಡ ಈ ಹೃದಯ ವಿದ್ರಾಾವಕ ಆತ್ಮಹತ್ಯೆೆಯ ಪ್ರಕರಣದ ಬಗ್ಗೆೆ ಪೊಲೀಸರು ತನಿಖೆ ಕೈಗೊಂಡಿದ್ದು,ಸತ್ಯಾಾಂಶ ಹೊರ ಬರಬೇಕಿದೆ.

Leave a Reply

Your email address will not be published. Required fields are marked *