Wednesday, 8th February 2023

ಸಾಮಾಜಿಕ ಜಾಲತಾಣಗಳ ‘ಗಾಳಿಸುದ್ದಿ’ಗಳ ಒಳ ಮರ್ಮ

‘ಗಾಳಿಮಾತು’ ಹೀಗೊಂದು ಕಾದಂಬರಿ ಆಧಾರಿತ ಸಿನಿಮಾ 80ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ತೆರೆಕಂಡಿತ್ತು. ಈ ಚಿತ್ರದಲ್ಲಿ ಜೈಜಗದೀಶ, ಲಕ್ಷ್ಮಿಿ, ಹೇಮ ಚೌಧರಿಯವರ ಮನೋಜ್ಞ ಅಭಿನಯ ಯಾರೂ ಮರೆತಿರಲಿಕ್ಕಿಿಲ್ಲ. ಒಂದು ಸುಳ್ಳಿಿನಿಂದಾಗಿ ಅದ್ಹೇಗೆ ಅನಾಹುತಗಳನ್ನು ಸೃಷ್ಟಿಿಸುತ್ತದೆಂಬುದನ್ನು ಅದ್ಭುತವಾಗಿ ಚಿತ್ರಿಿಸಿರುವ ಸಿನಿಮಾವಿದು. ಒಂದು ಗಾಳಿ ಮಾತಿನಿಂದ ಹೆಣ್ಣಿಿನ ಜೀವನವೇ ಹಾಳಾಗಿಬಿಡುತ್ತದೆ. ಅಂದಿನ ಕಾಲಕ್ಕೆೆ ಮಾತೆಂಬುದು ಅಷ್ಟೊೊಂದು ಬಲವಾಗಿರುತ್ತಿಿತ್ತು.

ಈಗಿನ ಕಾಲದಲ್ಲಿ ಆ ರೀತಿಯ ಸಾವಿರಾರು ಮಾತುಗಳನ್ನಾಾಡಿದರೂ, ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಅದರಲ್ಲಿಯೂ ರಾಜಕಾರಣಿಗಳಂತೂ ಎಷ್ಟು ಗಾಳಿಮಾತು ಕೇಳಿಬಂದರೂ ಕಲ್ಲುಬಂಡೆಯಂತೆಯೇ ಇರುತ್ತಾಾರೆ. ಕುಮಾರಸ್ವಾಾಮಿ ಹಾಗೂ ರೇವಣ್ಣನ ತರಹದವರಿಗೆ ನೀವು ಎಷ್ಟೇ ಬೈದರೂ, ಅವರ ಬಗ್ಗೆೆ ಎಷ್ಟೇ ಗಾಳಿಮಾತುಗಳನ್ನಾಾಡಿದರೂ ಅವರು ಆ ಬಗ್ಗೆೆ ತಲೆಯನ್ನೇ ಕೆಡಿಸಿಕೊಳ್ಳುವುದಿಲ್ಲ. ಜೀವನದಲ್ಲಿ ಮೂರು ಬಿಟ್ಟರೆ ಸಾಕು, ಏನನ್ನಾಾದರೂ ಸಾಧಿಸಬಹುದು ಎಂಬ ಮನಸ್ಥಿಿತಿ ಜನರಿವರು.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಾದಂತೆಲ್ಲ ಈ ‘ಗಾಳಿ ಸುದ್ದಿ’ಗಳು ತುಂಬಾನೇ ಹರಿದಾಡುತ್ತಿಿವೆ. ಕಳೆದ ಎರಡು ತಿಂಗಳಿನಿಂದ ಅತಿ ಹೆಚ್ಚು ಗಾಳಿಸುದ್ದಿ ಹರಿದಾಡಲಾರಂಭಿಸಿವೆ. ಜಾಲತಾಣ ಬಳಕೆದಾರರು ಇಂಥ ಗಾಳಿಸುದ್ದಿಗಳು ನಿಜವೋ, ಸುಳ್ಳೋೋ ಎಂಬುದನ್ನು ತಿಳಿಯುವ ಪ್ರಯತ್ನವನ್ನೇ ಮಾಡದೇ, ಎಲ್ಲೆೆಡೆಯೂ ಅಂಥ ಸುದ್ದಿಗಳನ್ನು ಹಂಚಿಕೊಳ್ಳುವ ಮೂಲಕ ಹರಿಬಿಡಲಾಗುತ್ತಿಿದೆ. ಇತ್ತೀಚೆಗೆ ಹರಿದಾಡಿದ ಅಂಥ ಗಾಳಿಸುದ್ದಿಗಳ ಸತ್ಯಾಾಸತ್ಯತೆಯನ್ನು ಬಿಚ್ಚಿಿಡುವ ಸಣ್ಣ ಪ್ರಯತ್ನವನ್ನು ಮಾಡಿದ್ದೇನೆ.

ಎಲ್ಲಿಂದ ಶುರು ಮಾಡಬೇಕೋ ತಿಳಿಯುತ್ತಿಿಲ್ಲ. ಓಕೆ, ಗಾಳಿಸುದ್ದಿಯಾಗಿರುವುದರಿಂದ ಗಾಳಿಯಲ್ಲಿ ಹಾರಾಡುವ ವಿಮಾನದಿಂದಲೇ ಶುರು ಮಾಡೋಣ ಬನ್ನಿಿ. ಜೆಟ್ ಏರ್‌ವೇಸ್ ಸಂಸ್ಥೆೆಯು ಆರ್ಥಿಕ ಸಂಕಷ್ಟಕ್ಕೆೆ ಸಿಲುಕಿ ತನ್ನ ಸೇವೆಯನ್ನು ರದ್ದು ಮಾಡಿರುವ ವಿಷಯ ನಿಮಗೆಲ್ಲರಿಗೂ ತಿಳಿದೇ ಇದೆ. ಈ ಕಂಪನಿಯು ಸಂಕಷ್ಟಕ್ಕೆೆ ಸಿಲುಕುವುದೆಂದು ಈ ಮುಂಚೆಯೇ ಹಲವರಿಗೆ ಗೊತ್ತಿಿದ್ದರೂ ಸಹ ಸರಕಾರಗಳಾಗಲಿ, ಬ್ಯಾಾಂಕುಗಳಾಗಲಿ ಅಷ್ಟು ಗಮನಹರಿಸಿರಲಿಲ್ಲ. ಈ ಸಂಕಷ್ಟದ ಮಧ್ಯೆೆ ಹರಿದಾಡುತ್ತಿಿರುವ ಗಾಳಿ ಸುದ್ದಿ ಎಂದರೆ, ‘ಜೆಟ್ ಏರ್‌ವೇಸ್’ ಕಂಪನಿಯು ಸಂಪೂರ್ಣವಾಗಿ ಮುಚ್ಚಿಿಹೋಗಿದೆ ಎಂಬುದು. ಆದರೆ ಸಂಪೂರ್ಣವಾಗಿ ಮುಚ್ಚಿಿಹೋಗುವುದಕ್ಕೂ, ಆರ್ಥಿಕವಾಗಿ ಸಂಕಷ್ಟಕ್ಕೆೆ ಸಿಲುಕುವುದಕ್ಕೂ ಬಹಳವೇ ವ್ಯತ್ಯಾಾಸವಿದೆ.

ಜೆಟ್ ಏರ್‌ವೇಸ್ ಕಂಪನಿಯು ತನ್ನ ವ್ಯವಹಾರವನ್ನು ತಾತ್ಕಾಾಲಿಕವಾಗಿ ಸ್ಥಗಿತಗೊಳಿಸಿರುವುದು ನಿಜ. ಈ ಕಂಪನಿಯ ಪುನಶ್ಚೇತನ ಕೆಲಸಗಳು ನಡೆಯುತ್ತಿಿವೆ. ಹೊಸದಾದ ಬಂಡವಾಳ ನಿರೀಕ್ಷೆೆಯಲ್ಲಿ ಕಂಪನಿಯಿದೆ. ಹಲವಾರು ವಿದೇಶಿ ವಿಮಾನಯಾನ ಕಂಪನಿಗಳು, ಬ್ಯಾಾಂಕುಗಳು, ಬಂಡವಾಳಶಾಹಿಗಳು, ಭಾರತದಲ್ಲಿಯೇ ಇರುವ ಹಲವು ಸಂಸ್ಥೆೆಗಳು ಈ ಕಂಪನಿಯಲ್ಲಿ ಬಂಡವಾಳ ಹೂಡುವ ಬಗ್ಗೆೆ ಚಿಂತನೆಯನ್ನು ನಡೆಸುತ್ತಿಿವೆ.

800 ರುಪಾಯಿಗಳ ಆಸುಪಾಸಿನಲ್ಲಿರುವ ಈ ಕಂಪನಿಯ ಷೇರುಗಳ ಬೆಲೆಯು 30ರುಪಾಯಿಗಳಿಗೆ ಬಿದ್ದಿರುವುದು ಅಷ್ಟೇ ನಿಜ. ಇದೇ ರೀತಿಯ ಪರಿಸ್ಥಿಿತಿ ಸತ್ಯಂ ಕಂಪನಿಯದ್ದಾಾಗಿತ್ತು. ನಂತರದ ದಿನಗಳಲ್ಲಿ ಟೆಕ್ ಮಹಿಂದ್ರಾಾ ಕಂಪನಿಯವರು ಸತ್ಯಂ ಕಂಪನಿಯನ್ನು ತಮ್ಮ ತೆಕ್ಕೆೆಗೆ ತೆಗೆದುಕೊಂಡು ಪುನಶ್ಚೇತನಗೊಳಿಸಲಿಲ್ಲವೇ? ವಿಮಾನಯಾನ ಕಂಪನಿಗಳು ಅಷ್ಟು ಸುಲಭವಾಗಿ ಲಾಭವನ್ನು ಗಳಿಸಲು ಸಾಧ್ಯವಿಲ್ಲ.

ಜಗತ್ತಿಿನ ಹಲವು ವಿಮಾನಯಾನ ಕಂಪೆನಿಗಳ ಹಣೆಬರಹವೇ ಇಷ್ಟು. ಬೋಯಿಂಗ್ ಕಂಪೆನಿಯ ವಿಮಾನಗಳನ್ನೇ ಖರೀದಿಸಲು ಕಂಪೆನಿಗಳಲ್ಲಿದೆ, ತನ್ನ ವಿಮಾನಗಳನ್ನು ಮರುಭೂಮಿಯ ನಡುವೆ ದೊಡ್ಡ ಹವಾನಿಯಂತ್ರಿಿತ ಶೆಡ್‌ಗಳಲ್ಲಿ ನಿಲ್ಲಿಸಲಾಗಿದೆ. ಈ ಸುದ್ದಿಯ ಜತೆಗೆ ಹರಿದಾಡುತ್ತಿಿರುವ ಮತ್ತೊೊಂದು ವಿಮಾನಯಾನದ ಸುದ್ದಿಯೆಂದರೆ, ಏರ್ ಇಂಡಿಯಾ ಕಂಪೆನಿಯ 7,400 ಕೋಟಿಯ ನಷ್ಟ. 2007ರಿಂದಲೂ ನಷ್ಟದಲ್ಲಿರುವ ಏರ್‌ಇಂಡಿಯಾ ಕಂಪೆನಿಯು ಕಳೆದ ಹನ್ನೆೆರಡು ವರ್ಷಗಳಿಂದ ಲಾಭವನ್ನೇ ಮಾಡಿಲ್ಲ.

ಸರಿಯಾದ ಮಾರ್ಗದರ್ಶಕರಿಲ್ಲದೇ ಪ್ರತಿವರ್ಷ ಏರ್‌ಇಂಡಿಯಾ ತನ್ನ ನಷ್ಟವನ್ನು ಹೆಚ್ಚಿಿಸಿಕೊಳ್ಳುತ್ತಲೇ ಬಂದಿದೆ. ಇದರ ಪ್ರತಿಫಲವಾಗಿ 58,000 ಕೋಟಿಯಷ್ಟು ಸಾಲವನ್ನು ಈ ಸಂಸ್ಥೆೆ ಹೊಂದಿದೆ. ಇದರಲ್ಲಿ ಶೇ.50ರಷ್ಟು ಅಂದರೆ, ಸುಮಾರು 29,000 ಕೋಟಿಯಷ್ಟು ಹಣವನ್ನು ಬೇರೆಯದ್ದೇ ಸಂಸ್ಥೆೆಗೆ ವರ್ಗಾಯಿಸಿ, ನೂತನ ಖರೀದಿದಾರರನ್ನು ಹುಡುಕುವ ನಿರ್ಧಾರವನ್ನು ಕೈಗೊಂಡಿದೆ. ಕಳೆದ ಬಾರಿ ಅಷ್ಟೂ ಸಾಲವನ್ನು ತೋರಿಸಿದ್ದರಿಂದ ಖರೀದಿಸಲು ಯಾರೂ ಸಹ ಮನಸ್ಸು ಮಾಡಿರಲಿಲ್ಲ.

ಈಗ ಶೇ.50ರಷ್ಟು ಸಾಲವನ್ನು ಬೇರೆಡೆ ವರ್ಗಾಯಿಸಿರುವುದರಿಂದ ನೂತನ ಖರೀದಿದಾರರು ಬರುವುದರ ನಿರೀಕ್ಷೆೆಯಲ್ಲಿ ಸರಕಾರವಿದೆ. ಹೀಗಿದ್ದರೂ ಸಹ 2018-19ನೇ ಸಾಲಿನಲ್ಲಿ 7,400 ಕೋಟಿಯಷ್ಟು ನಷ್ಟವನ್ನು ಸಂಸ್ಥೆೆಯು ಅನುಭವಿಸಬಹುದೆಂದು ಅಂದಾಜಿಸಲಾಗಿದೆ. ಹಾಗಾಗಿ ಈ ಸುದ್ದಿ 50:50 ಆಗಿದೆ. ಸುರೇಶ ಪ್ರಭು ಅಧಿಕಾರವಹಿಸಿಕೊಂಡಮೇಲೆ ತನ್ನ ಸೇವೆಯಲ್ಲಿನ ಹಲವು ಲೋಪಗಳನ್ನು ಸರಿಪಡಿಸಿಕೊಂಡಿರುವ ಏರ್ ಇಂಡಿಯಾ ಸಂಸ್ಥೆೆಯು, ಒಂದು ಹಂತಕ್ಕೆೆ ಸರಿಯಾಗುವ ದಿಕ್ಕಿಿನತ್ತ ಸಾಗಿದೆ. ಈ ಒಂದೇ ಒಂದು ಆಶಾವಾದದಿಂದ ಸರಕಾರವು ತನ್ನ ಶೇ.100ರಷ್ಟು ಷೇರುಗಳನ್ನು ನೀಡಲು ನಿರ್ಧರಿಸಿದೆ.

ಇನ್ನು ಬೆಂಗಳೂರಿನ ಎಚ್‌ಎಎಲ್ ಸಂಸ್ಥೆೆಯು ತನ್ನ ನೌಕರರಿಗೆ ಸಂಬಳ ನೀಡಲು ಹಣವಿಲ್ಲದೇ ಪರದಾಡುತ್ತಿಿದೆಯೆಂಬ ಸುದ್ದಿಯೊಂದು ಹರಿದಾಡುತ್ತಿಿದೆ. ಚುನಾವಣಾ ಸಮಯದಲ್ಲಿ ರಾಹುಲ್ ಗಾಂಧಿ ರಫೇಲ್‌ನ ವಿಚಾರವನ್ನಿಿಟ್ಟುಕೊಂಡು ಎಚ್‌ಎಎಲ್‌ನಲ್ಲಿ ರಾಜಕೀಯ ಮಾಡಿದ್ದು ನಿಜವೇ ಸರಿ. ಎಚ್‌ಎಎಲ್ ಸಂಸ್ಥೆೆಯು ಭಾರತ ಸರಕಾರದ ಒಡೆತನದ ಸಾರ್ವಜನಿಕ ಉದ್ದಿಮೆ. ಎಚ್‌ಎಎಲ್ ಸಂಸ್ಥೆೆಯು ತಯಾರಿಸುವ ವಿಮಾನಗಳು, ಹೆಲಿಕಾಪ್ಟರ್‌ಗಳು, ಯುದ್ಧ ಸಾಮಗ್ರಿಿಗಳನ್ನು ಬಳಸುತ್ತಿಿರುವವರು ಯಾರು ಸ್ವಾಾಮಿ? ಬಹುಪಾಲು ರಕ್ಷಣಾ ಸಚಿವಾಲಯವೇ ತಾನೇ? ಹಾಗಾದರೆ ನಷ್ಟದ ಪ್ರಶ್ನೆೆ ಎಲ್ಲಿಂದ ಬಂತು? ಸರಕಾರ ಪ್ರತಿವರ್ಷ ಬಜೆಟ್‌ನಲ್ಲಿ ಮೀಸಲಿಡುವ ಹಣವು ಹೋಗುವುದಾದರೂ ಎಲ್ಲಿಗೆ? ಎಚ್‌ಎಎಲ್ , ಎನ್‌ಎಎಲ್, ಬಿಪಿಎಲ್, ಬಿಎಚ್‌ಇಎಲ್, ಬಿಇಎಮ್‌ಎಲ್‌ಗಳಿಗೆ ತಾನೇ? ಹಾಗಾದರೆ ಹಣದ ಕೊರತೆ ಎಲ್ಲಿಂದ ಬಂತು? ಎಚ್‌ಎಎಲ್ ನವರತ್ನ ಕಂಪೆನಿಗಳಲ್ಲೊೊಂದು.

ಹಣವನ್ನು ಸಾಲದ ರೂಪದಲ್ಲಿ ತೆಗೆದುಕೊಂಡಿದ್ದರಿಂದ, ಈ ಸಂಸ್ಥೆೆಯಲ್ಲಿ ಉದ್ಯೋೋಗಿಗಳಿಗೆ ಸಂಬಳ ನೀಡಲು ಇಲ್ಲವೇ ಇಲ್ಲವೆಂದು ಸುದ್ದಿಯನ್ನು ಹಬ್ಬಿಿಸಿಬಿಡುವುದೇ? ಹೀಗೆ ಹಬ್ಬಿಿಸುವ ಮುನ್ನ ಸಾಮಾನ್ಯಜ್ಞಾಾನವನ್ನಾಾದರೂ ತಿಳಿದುಕೊಂಡಿದ್ದರೆ, ಇವರಪ್ಪನ ಮನೆಯ ಗಂಟೇನಾದರೂ ಹೋಗುವುದೇ ಸ್ವಾಾಮಿ?
ಹಾಗೆ ಭಾರತೀಯ ಅಂಚೆ ಇಲಾಖೆಯ ನಷ್ಟದ ಮೊತ್ತವು 15,000 ಕೋಟಿ ತಲುಪಿರುವ ವಿಷಯವೊಂದು ಹರಿದಾಡುತ್ತಿಿದೆ. ಎಷ್ಟು ಜನರಿಗೆ ತಿಳಿದಿತ್ತೋೋ, ಇಲ್ಲವೋ ಗೊತ್ತಿಿಲ್ಲ. ಭಾರತೀಯ ಅಂಚೆ ಇಲಾಖೆಯು ಹಲವು ದಶಕಗಳಿಂದ ನಷ್ಟವನ್ನು ಅನುಭವಿಸುತ್ತಿಿದೆ.

ಈಗ ಈ ನಷ್ಟದ ಮೊತ್ತವು ಎಷ್ಟಿಿದೆಯೆಂದರೆ, ಹರಿದಾಡುವ ಸುದ್ದಿಯೂ ನಿಜವಾಗಿದೆ. 15,000ಕೋಟಿಯಷ್ಟು ನಷ್ಟವನ್ನು ಅಂಚೆ ಇಲಾಖೆಯು ಕೇವಲ ಒಂದು ವರ್ಷದಲ್ಲಿಯೇ ಅನುಭವಿಸಿದೆ. ಇದರ ಮುಖ್ಯ ಕಾರಣ, ತನ್ನ ಕೆಲಸಗಾರರಿಗೆ ಅಂಚೆ ಇಲಾಖೆಯು ನೀಡುತ್ತಿಿರುವ ಸಂಬಳ ಹಾಗೂ ಇತರ ಪರಿಕರಗಳು. ಕಳೆದ ವರ್ಷದಲ್ಲಿ ಅಂಚೆ ಇಲಾಖೆಯ ಒಟ್ಟಾಾರೆ ಆದಾಯ 18,000 ಕೋಟಿಯಷ್ಟಿಿದ್ದರೆ, ಕೇವಲ ಸಂಬಳ ವೆಚ್ಚವು ಸುಮಾರು 16,620 ಕೋಟಿಯಷ್ಟಾಾಗಿದೆ. ಇತರ ವೆಚ್ಚವನ್ನು ಸೇರಿಸಿದರೆ, ಭಾರತದಲ್ಲಿಯೇ ಅತಿ ಹೆಚ್ಚು ನಷ್ಟವನ್ನು ಅನುಭವಿಸುತ್ತಿಿರುವ ಸರಕಾರ ಸ್ವಾಾಮ್ಯದ ಸಂಸ್ಥೆೆ ಇದಾಗಿದೆ. ಏರ್‌ಇಂಡಿಯಾ ಹಾಗೂ ಬಿಎಸ್‌ಎನ್‌ಎಲ್ ಸಂಸ್ಥೆೆಯನ್ನೂ ಮೀರಿಸಿದ ಸಂಸ್ಥೆೆ ಭಾರತೀಯ ಅಂಚೆ ಇಲಾಖೆ.

ಇತ್ತೀಚಿನ ಕೊರಿಯರ್ ಯುಗದಲ್ಲಿ ಖಾಸಗಿ ಕಂಪೆನಿಗಳದ್ದೇ ಸಿಂಹಪಾಲು ಆಗಿರುವಾಗ, ಅವರ ಜತೆಗೆ ನಿಂತು ವ್ಯವಹರಿಸಬಲ್ಲ ಸಾಮರ್ಥ್ಯ ಅಂಚೆ ಇಲಾಖೆಗೆ ಸಾಧ್ಯವಾಗುತ್ತಿಿಲ್ಲ. ಆದರೆ ಅಂಚೆ ಇಲಾಖೆಯ ಬಹುದೊಡ್ಡ ಸಾಮರ್ಥ್ಯವೆಂದರೆ, ತನ್ನ ವಿಸ್ತರಣಾ ಸಾಮರ್ಥ್ಯ, ಮೊಬೈಲ್ ನೆಟ್‌ವರ್ಕ್‌ಗಳೇ ತಲುಪದ ಸ್ಥಳಗಳಿಗೆ ನಮ್ಮ ಅಂಚೆ ಇಲಾಖೆಯ ಶಾಖೆಗಳು ತಲುಪಿವೆ. ಇಂಥ ಊರುಗಳಿಗೆ ತಲುಪಿಸಲೂ ಸಾಮರ್ಥ್ಯವಿರುವ ಮೂಲ ಸೌಕರ್ಯಗಳ ವ್ಯವಸ್ಥೆೆಯು ಅಂಚೆ ಇಲಾಖೆಯಲ್ಲಿದೆ. ಈ ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಂಡಿದ್ದೇ ಆದಲ್ಲಿ, ಎಂಥವರಿಗೂ ಸೆಡ್ಡು ಹೊಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇದರ ಜತೆಗೆ ಸರಕಾರಿ ಸಂಸ್ಥೆೆಯಲ್ಲಿ ಯಾರ ಬಳಿಯೂ ಇಲ್ಲದ ಸ್ಥಿಿರಾಸ್ತಿಿಗಳು ಅಂಚೆ ಇಲಾಖೆಯಲ್ಲಿವೆ. ದೇಶದ ಹಳ್ಳಿಿಹಳ್ಳಿಿಗಳಲ್ಲೂ ಅಂಚೆ ಇಲಾಖೆಯ ಆಸ್ತಿಿಗಳಿವೆ. ಅದೆಷ್ಟೋೋ ಲಕ್ಷಕೋಟಿಗಳಿಗೆ ಈ ಆಸ್ತಿಿಗಳು ಸಮವೋ, ಆ ದೇವರೇ ಬಲ್ಲ. ಹಾಗಾಗಿ ಸರಿಯಾದ ಯೋಜನೆಯನ್ನು ಸಿದ್ಧಪಡಿಸಿದರೆ, ಅಂಚೆ ಇಲಾಖೆಯನ್ನು ಲಾಭದ ಸ್ಥಿಿತಿಗೆ ತರಲು ಅಷ್ಟು ಕಷ್ಟವಾಗುವುದಿಲ್ಲ.

ಮೋದಿಯವರು ಪ್ರಧಾನಿಯಾದ ಮೇಲೆ ಅಂಚೆ ಇಲಾಖೆಯ ಶಾಖೆಗಳನ್ನು ಬ್ಯಾಾಂಕುಗಳನ್ನಾಾಗಿ ಪರಿವರ್ತಿಸಿದರು. ಹಾಗಾಗಿ ತನ್ನ ಹಣಕಾಸಿನ ವ್ಯವಹಾರವನ್ನೇ ನೆಚ್ಚಿಿಕೊಂಡಿರುವ ಅಂಚೆ ಇಲಾಖೆಯು ಇನ್ನು ಬ್ಯಾಾಂಕುಗಳ ಜತೆಗೆ ಸರಿಸಮನಾಗಿ ಕೆಲಸ ಮಾಡಬೇಕು. ಈಗಿರುವ ಇಲಾಖೆಯ ಉದ್ಯೋೋಗಿಗಳಿಗೆ ಇನ್ನೂ ಬ್ಯಾಾಂಕಿಂಗ್ ಕ್ಷೇತ್ರಗಳ ವ್ಯವಹಾರಗಳ ತರಬೇತಿಯು ಅಷ್ಟೊೊಂದಿಲ್ಲ. ಹೀಗಾಗಿ ಈ ಕ್ಷೇತ್ರದಲ್ಲಿ ಅಭಿವೃದ್ಧಿಿ ಸಾಧಿಸಲು ಹಲವಾರು ವರ್ಷಗಳೇ ಬೇಕಾಗಬಹುದು.

ಸರಿಯಾದ ಸಂಗ್ರಹಣಾ ಸಾಮರ್ಥ್ಯದ ಉಗ್ರಾಾಣಗಳಿದ್ದರೆ, ಫ್ಲಿಿಪ್‌ಕಾರ್ಟ್ ಹಾಗೂ ಅಮೆಜಾನ್ ಕಂಪೆನಿಗಳ ವಸ್ತುಗಳನ್ನು ಮನೆ ಮನೆಗೆ ತಲುಪಿಸಲು ಸಹಾಯವಾಗುತ್ತಿಿತ್ತು. ಈ ಬಗ್ಗೆೆ ಎಲ್ಲಾಾ ಆಯಾಮಗಳಿಂದಲೂ ಸರಕಾರ ಚಿಂತನೆ ನಡೆಸುತ್ತಿಿದ್ದು, ನಿಧಾನವಾಗಿ ಅಂಚೆ ಇಲಾಖೆಯನ್ನು ಸರಿಪಡಿಸುವ ನಿಟ್ಟಿಿನಲ್ಲಿ ಕೆಲಸ ಮಾಡುತ್ತಿಿದೆ. ನೂರಾರು ವರ್ಷಗಳ ಇತಿಹಾಸವಿರುವ ಅಂಚೆ ಇಲಾಖೆಯನ್ನು ಅಷ್ಟು ಸುಲಭವಾಗಿ ಮುಚ್ಚಲು ಸಾಧ್ಯವಿಲ್ಲ. ಇರುವ ಸಾಮರ್ಥ್ಯವನ್ನೇ ಬಳಸಿಕೊಂಡು ಒಂದೊಂದೇ ಹೆಜ್ಜೆೆ ಇಡುತ್ತಾಾ, ಇರುವ ಸಮಸ್ಯೆೆಗಳನ್ನು ಬಗೆಹರಿಸಬೇಕಿದೆ.

ಬ್ಯಾಾಂಕಿಂಗ್ ಎಂದಕೂಡಲೇ ನಮ್ಮ ದೇಶದಲ್ಲಿ ಸಾಲವನ್ನು ಮಾಡಿ ತೀರಿಸಲಾಗದೇ ಓಡಿಹೋದವರೇ ನೆನಪಾಗುತ್ತಾಾರೆ. ವಿಜಯಮಲ್ಯ, ನೀರವ್ ಮೋದಿ, ಚೋಕ್ಸಿಿ, ಲಲಿತ್ ಮೋದಿ.. ಈ ಹೆಸರುಗಳೇ ಎಲ್ಲರ ಕಿವಿಯಲ್ಲಿ ಡಿಂಗುಬಡಿಸಿರುವುದು. ದೊಡ್ಡವರು ದೇಶ ಬಿಟ್ಟಿಿರುವ ವಿಷಯವೇನು ಹೊಸತಲ್ಲ. ಈ ರೀತಿ ದೇಶಬಿಟ್ಟು ಹೋದವರ ಒಟ್ಟಾಾರೆ ಸಂಖ್ಯೆೆಯು 36 ಎಂಬ ಸುದ್ದಿಯು ಹರಿದಾಡುತ್ತಿಿದೆ.

ಈ ಸುದ್ದಿಯಂತೆಯೇ ಹಲವಾರು ಜನರು ದೇಶವನ್ನು ಬಿಟ್ಟಿಿರುವ ಸಂಗತಿಯು ನಿಜ. ಆದರೆ ಅದರಲ್ಲಿ ಎಲ್ಲರೂ ದೊಡ್ಡ ಸಾಲಗಾರರ ಜತೆಗೆ ಸಣ್ಣಪುಟ್ಟ ಸಾಲ ಮಾಡಿಕೊಂಡವರೂ ಅನೇಕರಿದ್ದಾಾರೆ. ದೊಡ್ಡ ಸಾಲಗಾರರನ್ನು ಭಾರತಕ್ಕೆೆ ಕರೆತರುವ ಪ್ರಯತ್ನಗಳು ಈಗಾಗಲೇ ನಡೆಯುತ್ತಿಿವೆ. ನೀರವ್ ಮೋದಿಯ ಬಂಧನದ ಅವಧಿಯು ಪ್ರತಿ ತಿಂಗಳು ವಿಸ್ತರಣೆಯಾಗುತ್ತಲೇ ಇದೆ. ವಿಜಯ ಮಲ್ಯನ ಕೇಸ್ ಕೂಡ ಲಂಡನ್‌ನಲ್ಲಿ ಪ್ರತಿ ತಿಂಗಳೂ ವಿಚಾರಣೆಗೊಳಪಡುತ್ತಲೇ ಇದೆ. ಮೇಹುಲ್ ಚೊಕ್ಸಿಿಯನ್ನು ಅಂಟಿಗುವಾ ದೇಶದಿಂದ ಗಡಿಪಾರು ಮಾಡುವ ಎಲ್ಲ ಒತ್ತಡಗಳನ್ನೂ ಹಾಕಲಾಗುತ್ತಿಿದೆ. ದೊಡ್ಡ ಸಾಲಗಾರರ ಜತೆಗೆ ಸಣ್ಣಪುಟ್ಟ ಸಾಲಗಾರರೂ ಓಡಿಹೋಗಿದ್ದಾಾರೆ. ಈ ಸುದ್ದಿ ಕೂಡ ಹೀಗಾಗಿ 50:50.

ಇದೇ ಬ್ಯಾಾಂಕಿಂಗ್ ವ್ಯವಸ್ಥೆೆಯ ಮತ್ತೊೊಂದು ಗಾಳಿ ಸುದ್ದಿಯೆಂದರೆ, ಸುಮಾರು 2,40,000 ಕೋಟಿಯಷ್ಟು ಸಾಲವನ್ನು ಮನ್ನಾಾ ಮಾಡಲಾಗಿದೆ ಎಂಬುದು. ಹಲವು ಜನರಿಗೆ ‘ಸಾಲಮನ್ನಾಾ’ ಹಾಗೂ ‘ಅನುತ್ಪಾಾದಿತ ಸಾಲ’ ಈ ಎರಡರ ನಡುವಿನ ವ್ಯತ್ಯಾಾಸವೇ ತಿಳಿದಿಲ್ಲ. ಸಾಲಮನ್ನಾಾ ಎಂದರೆ ಕೊಟ್ಟ ಸಾಲವನ್ನು ಯಾವುದೇ ಕಾರಣಕ್ಕೂ ವಾಪಸ್ ಪಡೆಯುವುದಿಲ್ಲ ಹಾಗೂ ಸಾಲಗಾರನ ಆಸ್ತಿಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಿಲ್ಲ.

ಸಾಲಗಾರನನ್ನು ಜೈಲಿಗೆ ಹಾಕುವುದಿಲ್ಲ. ಸಾಲಮನ್ನಾಾದಿಂದ ಒಂದು ರುಪಾಯಿಯೂ ಬ್ಯಾಾಂಕುಗಳಿಗಾಗಲಿ, ಸರಕಾರಕ್ಕಾಾಗಲಿ, ವಾಪಸ್ ಬರುವುದಿಲ್ಲ. ಸಾಲಗಾರರು ಮುಕ್ತವಾಗಿ ದೇಶದಲ್ಲಿ ಓಡಾಡಿಕೊಂಡು ಇರಬಹುದು. ಆದರೆ ಅನುತ್ಪಾಾದಿತ ಸಾಲ ಎಂದರೆ ಹಾಗಲ್ಲ, ಕೊಟ್ಟ ಸಾಲವನ್ನು ಕಟ್ಟಲಾಗದೇ, ಸಾಲಗಾರರಿಂದ ಬ್ಯಾಾಂಕುಗಳಿಗೆ ಬಡ್ಡಿಿ ಹಾಗೂ ಅಸಲು ಎರಡೂ ಸಹ ವಸೂಲಿಯಾಗುತ್ತಿಿರುವುದಿಲ್ಲ.

ಹರಿದಾಡುತ್ತಿಿರುವ ಸುದ್ದಿಯಲ್ಲಿನ 2,40,000 ಕೋಟಿಯಷ್ಟು ಹಣವು ‘ಸಾಲಮನ್ನಾಾ’ ಅಲ್ಲವೇ ಅಲ್ಲ. ಆ ಹಣವು ಬ್ಯಾಾಂಕುಗಳ ‘ಅನುತ್ಪಾಾದಿತ ಆಸ್ತಿಿ’ ಯಾವ ಕ್ಷಣದಿಂದ ಬ್ಯಾಾಂಕುಗಳಿಗೆ ತನ್ನ ಸಾಲ ಹಾಗೂ ಬಡ್ಡಿಿ ಹಣವು ಬರುವುದು ನಿಲ್ಲುತ್ತದೆಯೋ, ಅಂದಿನಿಂದ ಆ ಸಾಲವು ‘ಅನುತ್ಪಾಾದಿತ’ ಆಸ್ತಿಿಯಾಗುತ್ತದೆ. ಸಾಲವು ಅನುತ್ಪಾಾದಿತವಾದ ಮೇಲೆ ವಸೂಲಿ ಪ್ರಕ್ರಿಿಯೆಗಳು ಪ್ರಾಾರಂಭವಾಗುತ್ತವೆ. ಈ ಪ್ರಕ್ರಿಿಯೆಯಲ್ಲಿ ಸಾಲಗಾರನ ಆಸ್ತಿಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.

ಆಸ್ತಿಿಗಳ ಮಾರಾಟದಿಂದ ಬಂದ ಹಣದಿಂದಲೇ, ಬಡ್ಡಿಿ, ಅಸಲುಗಳನ್ನು ವಸೂಲಿ ಮಾಡಲಾಗುತ್ತದೆ. ಕೈಗೆ ಸಿಕ್ಕರೆ ಬಂಧಿಸಲಾಗುತ್ತದೆ. ಜೈಲು ಶಿಕ್ಷೆೆಯೂ ನೀಡಲಾಗುವುದು. ಇನ್ನು ಒಂದು ಹೆಜ್ಜೆೆ ಮುಂದೆ ಹೋಗಿ, ಈ ರೀತಿಯ ಸಾಲದ ಸುಳಿಯಲ್ಲಿರುವ ಕಂಪೆನಿಗಳ ಪುನಶ್ಚೇತನವನ್ನು ಮಾಡುವ ಕಾನೂನನ್ನು ಸಹ ರೂಪಿಸಿದೆ. ಈ ಕಾನೂನಿನಲ್ಲಿ ಕೋರ್ಟುಗಳು ಅತ್ಯಂತ ವೇಗವಾಗಿ ಸಮಸ್ಯೆೆಯನ್ನು ಇತ್ಯರ್ಥಪಡಿಸಬೇಕೆಂದು ಹೇಳಲಾಗಿದೆ. ಇದರ ಅಡಿಯಲ್ಲಿ ಕೆಲವು ವರ್ಷಗಳಿಂದ ಹಲವಾರು ‘ಅನುತ್ಪಾಾದಿತ ಆಸ್ತಿಿ’ಯನ್ನು ಸಾಲದ ಶೂಲದಿಂದ ಹೊರತರಲಾಗಿದೆ.

ಉದಾಹರಣೆಗೆ, ಭೂಷಣ್ ಸ್ಟೀಲ್‌ಸ್‌ ಕಂಪೆನಿಯ ಸುಮಾರು 46,000 ಕೋಟಿ ರುಪಾಯಿ ಸಾಲವನ್ನು ಅನುತ್ಪಾಾದಿತ ಆಸ್ತಿಿಯಿಂದ ಹೊರತರಲಾಗಿದೆ. ಟಾಟಾ ಕಂಪನಿಯು ಈ ಕಂಪೆನಿಯನ್ನು ಖರೀದಿಸಿ, ತಾನು ಮುನ್ನಡೆಸುತ್ತೇನೆಂದು ಮುಂದೆ ಬಂದಿದೆ. ಅನಿಲ್ ಅಂಬಾನಿ ಒಡೆತನದ ‘ರಿಲಯನ್‌ಸ್‌’ ಕಮ್ಯುನಿಕೇಶನ್‌ಸ್‌ ಸಂಸ್ಥೆೆಯನ್ನು ಅಣ್ಣ ಮುಖೇಶ ಅಂಬಾನಿಯೇ ಸಾಲದ ಶೂಲದಿಂದ ಮುಕ್ತಗೊಳಿಸಿ, 22,000 ಕೋಟಿಯ ಸಾಲವನ್ನು ಮೇಲ್ದರ್ಜೆಗೆ ಏರಿಸಲಿಲ್ಲವೇ? ಹೀಗೆ ಹಲವಾರು ಕಂಪೆನಿಗಳು ಈ ಕಾನೂನಿನಿಂದ ಲಾಭವನ್ನು ಪಡೆದಿವೆ. ಹೀಗಾಗಿ 2,40,000ಕೋಟಿಯ ಸಾಲಮನ್ನಾಾ ಎಂಬ ವಿಷಯವೂ ಶುದ್ಧ ಸುಳ್ಳು.

ಬ್ಯಾಾಂಕಿನಿಂದ ಹೊರಬಂದರೆ, ‘ಮಾರುತಿ’ ಕಂಪೆನಿಯ ಸುದ್ದಿಯೊಂದು ಹರಿದಾಡುತ್ತಿಿದೆ. ಮಾರುತಿ ಕಂಪೆನಿಯು ತನ್ನ ಉತ್ಪಾಾದನೆಯನ್ನು ಕಡಿತಗೊಳಿಸಿದೆ. ಮಾರುಕಟ್ಟೆೆಯಲ್ಲಿ ತನ್ನ ಕಾರುಗಳನ್ನು ಕೊಳ್ಳುವವರಿಲ್ಲದ ಕಾರಣ ಈ ನಿರ್ಧಾರಕ್ಕೆೆ ಬರಲಾಗಿದೆಯೆಂಬ ಸುದ್ದಿಯು ಹರಿದಾಡುತ್ತಿಿದೆ. ಈ ಸುದ್ದಿ ನಿಜ. ಮಾರುತಿ ಕಂಪೆನಿಯೊಂದೇ ಅಲ್ಲ, ಟೊಯೊಟಾ, ಮೈಕೋ, ಭಾಷ್, ಹ್ಯುಂಡೈ ಕಂಪೆನಿಗಳೂ ಸಹ ತನ್ನ ಉತ್ಪಾಾದನೆಯನ್ನು ಕಡಿತಗೊಳಿಸಿದೆ. ಇಡೀ ಜಾಗತಿಕಮಟ್ಟದಲ್ಲಿ ಈ ಸಮಸ್ಯೆೆಯು ತಲೆದೋರಿದೆ. ಇಡೀ ಯುರೋಪಿನ ಮಾರುಕಟ್ಟೆೆಯೇ ಅಲ್ಲಾಾಡುತ್ತಿಿದೆ.

ಅಲ್ಲಿಯೂ ವಾರದಲ್ಲಿ ಕೇವಲ ಮೂರು ದಿನಗಳು ಮಾತ್ರ ಉತ್ಪಾಾದನೆಯು ನಡೆಯುತ್ತಿಿದೆ. ಹಲವಾರು ಉದ್ಯೋೋಗಿಗಳನ್ನು ಮನೆಗೆ ಕಳುಹಿಸಲಾಗಿದೆ. ಇನ್ನು ಭಾರತದಲ್ಲಿ ತಿಂಗಳಿಗೆ ಎರಡು ಹೊಸ ಮಾದರಿಯ ಕಾರುಗಳು ಮಾರುಕಟ್ಟೆೆಗೆ ಬರುತ್ತಿಿವೆ. ದೊಡ್ಡ ನಗರಗಳಲ್ಲಿ ಮೆಟ್ರೋೋ ಬಳಸುವವರ ಸಂಖ್ಯೆೆಯೂ ಹೆಚ್ಚಾಾಗಿದೆ. ಇಷ್ಟಲ್ಲದೇ, ಓಲಾ, ಉಬರ್ ಬಳಕೆದಾರರೂ ಹೆಚ್ಚಾಾಗಿದ್ದಾಾರೆ. ಸಮಸ್ಯೆೆಯೂ ಅತ್ಯಧಿಕವಾಗಿದೆ. ಪಾರ್ಕಿಂಗ್ ವ್ಯವಸ್ಥೆೆಗಳಿಲ್ಲ.

ಇವೆಲ್ಲವೂ, ಸಹ ಕಾರುಕೊಳ್ಳುವ ಭಾರತೀಯನ ಮನಸ್ಥಿಿತಿಯನ್ನ ಬದಲಿಸಿವೆ. ಐದು ವರ್ಷಕ್ಕೊೊಮ್ಮೆೆ ಕಾರುಗಳನ್ನು ಬದಲಾಯಿಸುವ ಮನಸ್ಥಿಿತಿ ಇಂದಿಗೂ ಸಹ ಬಹುತೇಕ ಭಾರತೀಯರಲ್ಲಿದೆ. ಹೀಗಿರುವಾಗ ಯಾರು ತಾನೇ ಕಾರುಗಳನ್ನು ಕೊಂಡುಕೊಳ್ಳುವವರು? ಕಾರುಗಳ ಪೂರೈಕೆಯೂ ಬೇಡಿಕೆಗಿಂತಲೂ ಹೆಚ್ಚಾಾಗಿ ಬಿಟ್ಟಿಿದೆ. ಯಾವುದೋ ಒಂದು ಗೂಗಲ್‌ನ ಗ್ರಾಾಹಕರ ನಂಬರ್‌ಗಳನ್ನು ತೆಗೆದುಕೊಂಡು, ಇಷ್ಟು ಜನರಿಗೊಂದು ಕಾರೆಂದು ಎಲ್ಲರೂ ಉತ್ಪಾಾದನೆಯನ್ನು ಮಾಡಿದರೆ, ತಪ್ಪುು ಯಾರದ್ದು? ತನ್ನ ಎಲೆಕ್ಟ್ರಿಿಕ್ ಕಾರುಗಳನ್ನು ನಿಧಾನವಾಗಿ ಭಾರತದಲ್ಲಿ ಪರಿಚಯಿಸುವ ಪ್ರಕ್ರಿಿಯೆಗಳು ಶುರುವಾಗಿವೆ.

ಕೆಲವರ ತಲೆಯಲ್ಲಿ ಎಲೆಕ್ಟ್ರಿಿಕ್ ಕಾರು ಬಂದಮೇಲೆ ಈಗಿರುವ ಕಾರನ್ನು ಬದಲಾಯಿಸುವ ಯೋಚನೆಯೂ ಇದೆ ಹಾಗೂ ವಾಯುಮಾಲಿನ್ಯ ಮಾಪಕ ಬಿಎಸ್-6 ಮಾದರಿಯ ಕಾರುಗಳನ್ನು ಬಳಸಬೇಕೆಂಬ ಜಾಗತಿಕ ಮಟ್ಟದ ನಿರ್ಧಾರಗಳು ಹೊರಬಿದ್ದಿರುವುದರಿಂದ ಹಲವರು ಅವೇ ಮಾದರಿಯ ಕಾರುಗಳಿಗಾಗಿಯೇ ಕಾಯುತ್ತಿಿದ್ದಾಾರೆ. ಇದೂ ಸಹ ಈಗಿರುವ ಕಾರುಗಳ ಮಾರಾಟದ ಮೇಲೆ ಒತ್ತಡವನ್ನು ಹೇರಿದೆ. ಹೀಗೆ ಹತ್ತು ಹಲವು ಕಾರಣಗಳಿಗಾಗಿ ಮಾರುತಿ ಸಂಸ್ಥೆೆಯು ತನ್ನ ವ್ಯವಹಾರವನ್ನು ಸ್ವಲ್ಪ ಕಡಿಮೆ ಮಾಡಿಕೊಂಡಿದೆ. ಹಾಗಂತ ವ್ಯವಹಾರಗಳಿಗೆ ಪೆಟ್ಟು ಬಿದ್ದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಜಾಗತಿಕ ಆರ್ಥಿಕ ಹಿಂಜರಿತವು ಈಗಾಗಲೇ ಶುರುವಾಗಿದೆ. ಬೇರೆ ದೇಶಗಳನ್ನು ನಂಬಿ ಕೆಲಸ ನಡೆಸುತ್ತಿಿರುವ ಹಲವು ಕಂಪನಿಗಳು, ಈಗಾಗಲೇ ವಾರದಲ್ಲಿ 3 ರಿಂದ 4 ದಿನ ಮಾತ್ರ ಉತ್ಪಾಾದನೆ ನಡೆಸುತ್ತಿಿವೆ. ಸರಕಾರವು ಈ ನಿಟ್ಟಿಿನಲ್ಲಿ ಅತ್ಯಂತ ವೇಗವಾಗಿ ಕೆಲವು ಆರ್ಥಿಕ ಬದಲಾವಣೆಯನ್ನು ಮಾಡಬೇಕಿದೆ. ಇಲ್ಲದಿದ್ದರೆ, ಅಪಾಯವು ಕಟ್ಟಿಿಟ್ಟ ಬುತ್ತಿಿ.

ಇನ್ನು ಭಾರತೀಯ ರೈಲ್ವೆೆ ಮಾರಾಟಕ್ಕಿಿದೆಯಂತೆ ಎಂಬ ಗಾಳಿಸುದ್ದಿಯೊಂದು ಬಹುದಿನಗಳಿಂದ ಹರಿದಾಡುತ್ತಿಿದೆ. ಇಡೀ ವಿಶ್ವದಲ್ಲಿಯೇ ಅತಿ ದೊಡ್ಡ ಸಂಖ್ಯೆೆಯಲ್ಲಿ ಉದ್ಯೋೋಗಿಗಳನ್ನು ಹೊಂದಿರುವ ಸಂಸ್ಥೆೆಗೆ ಪಾತ್ರವಾಗಿರುವ, ಭಾರತೀಯ ರೈಲ್ವೆೆ ಮಾರಾಟಕ್ಕಿಿದೆ ಎಂದರೆ ಎಂಥವರಿಗಾದರೂ ಸಹ ಭಯವಾಗುತ್ತದೆ. ‘ಮಾರಾಟ’ ಹಾಗೂ ‘ಖಾಸಗೀ’ಕರಣ ಈ ಎರಡರ ನಡುವೆ ವ್ಯತ್ಯಾಾಸವಿದೆ. ಖಾಸಗೀಕರಣಗೊಳಿಸಬೇಕೆಂಬ ಯೋಚನೆಯು ಬಹುದಿನಗಳಿಂದ ಇದೆ. ಐರೋಪ್ಯ ರಾಷ್ಟ್ರಗಳಲ್ಲಿರುವ ಹಲವಾರು ರೈಲ್ವೆೆ ಕಂಪೆನಿಗಳು ಖಾಸಗೀ ಸಹಭಾಗಿತ್ವದಲ್ಲಿಯೇ ನಡೆಯುತ್ತಿಿವೆ. ಹೀಗಾಗಿ ಅಲ್ಲಿ ಸಿಗುವ ಸೌಲಭ್ಯಗಳು ನಮ್ಮ ದೇಶದಲ್ಲಿ ಅಷ್ಟು ಸುಲಭವಾಗಿ ದೊರೆಯುವುದಿಲ್ಲ. ಕಳೆದ ಬಜೆಟ್‌ನಲ್ಲಿ ರೈಲ್ವೆೆ ಹಳಿಯ ಕಾಮಗಾರಿಯನ್ನು ಸಂಪೂರ್ಣವಾಗಿ ಖಾಸಗಿ ಮಾಡುವ ನಿರ್ಧಾರವನ್ನು ಪ್ರಕಟಿಸಲಾಗಿದೆ.

ನಮ್ಮ ಹಳಿಗಳ ಗುಣಮಟ್ಟವು ಹೆಚ್ಚಾಾದರೆ ವೇಗವಾಗಿರುವ ರೈಲುಗಳನ್ನಾಾದರೂ ಸಹ ಓಡಿಸಬಹುದೆಂಬ ಆತ್ಮವಿಶ್ವಾಾಸದೊಂದಿಗೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಹಂತಹಂತವಾಗಿ ಕೆಲವಷ್ಟು ವಿಭಾಗಗಳನ್ನು ಖಾಸಗೀಕರಣಗೊಳಿಸುವ ನಿಟ್ಟಿಿನಲ್ಲಿ ಭಾರತೀಯ ರೈಲ್ವೆೆ ಮಂತ್ರಿಿಮಂಡಲವು ಕೆಲಸ ಮಾಡುತ್ತಿಿರುವುದು ನಿಜ. ಹಾಗಂತ ಭಾರತೀಯ ರೈಲ್ವೆೆ ವಲಯವನ್ನೇ ಮಾರಾಟ ಮಾಡುತ್ತಿಿದ್ದಾಾರೆಂಬ ಸುದ್ದಿಯೂ ಶುದ್ಧ ಸುಳ್ಳು.

ಇನ್ನೂ ಹಲವಾರು ಗಾಳಿಸುದ್ದಿಗಳು ಹರಿದಾಡುತ್ತಿಿವೆ. ಬಿಎಸ್‌ಎನ್‌ಎಲ್ ಕಂಪೆನಿಯಲ್ಲಿರುವ 54,000 ಉದ್ಯೋೋಗಿಗಳ ಕೆಲಸವು ಸಂಕಷ್ಟದಲ್ಲಿದೆ. ಏರ್‌ಸೆಲ್ ಕಂಪೆನಿಯು ಮುಳುಗಿಹೋಗಿದೆ, ಓಎನ್‌ಜಿಸಿ ಕಂಪೆನಿಯು ನಷ್ಟದಲ್ಲಿದೆ. ದೆಹಲಿಯ ಕೆಂಪುಕೋಟೆಯನ್ನು ಮಾರಾಟಕ್ಕಿಿಡಲಾಗಿದೆ. ಗೃಹ ನಿರ್ಮಾಣವನ್ನೂ ಹಲವಾರು ಕಂಪೆನಿಗಳು ನಿಲ್ಲಿಸಿವೆ. ಕೋಟ್ಯಂತರ ಜನರು ನೋಟು ಅಮಾನ್ಯೀಕರಣವಾದ ಬಳಿಕ ಕೆಲಸವನ್ನು ಕಳೆದುಕೊಂಡಿದ್ದಾಾರೆ. ಭಾರತದ ಐದು ವಿಮಾನ ನಿಲ್ದಾಾಣಗಳನ್ನು ಅದಾನಿಗೆ ಮಾರಾಟ ಮಾಡಲಾಗಿದೆ. ವಿಡಿಯೋಕಾನ್ ಕಂಪೆನಿಯೂ ಸಂಪೂರ್ಣ ದಿವಾಳಿಯಾಗಿದೆ. 45 ವರ್ಷಗಳಲ್ಲಿ ಅತಿ ಹೆಚ್ಚು ನಿರುದ್ಯೋೋಗ ಸೃಷ್ಟಿಿಯಾಗಿದೆ.

ಇಷ್ಟೆೆಲ್ಲ ಗಾಳಿಸುದ್ದಿಗಳಿದ್ದರೂ, ಸಹ ಕಟ್ಟಕಡೆಯದಾಗಿ ಕಾಡುವ ದೊಡ್ಡ ಪ್ರಶ್ನೆೆಯೆಂದರೆ, ನಮ್ಮ ಮನೆಯ ನಲ್ಲಿಯೂ ಕೆಟ್ಟು ಹೋದರೆ, ಒಬ್ಬ ಪ್ಲಂಬರ್‌ಗಾಗಿ ನಾಲ್ಕು ದಿವಸ ಹುಡುಕಾಡಬೇಕು, ಕರೆಂಟಿನ ತೊಂದರೆಯಾದರೆ ‘ಎಲೆಕ್ಟ್ರಿಿಷಿಯನ್’ಗಾಗಿ ಎರಡು ದಿವಸ ಹುಡುಕಬೇಕು, ಆಟೋದವರು ನಾವು ಇದ್ದಲ್ಲಿಗೆ ಬರುವುದಿಲ್ಲ, ಅವರು ಇದ್ದಲ್ಲಿಗೆ ನಾವು ಹೋಗಬೇಕು. ಓಲಾ, ಉಬರ್ ಡ್ರೈವರ್‌ಗಳೂ ಅಷ್ಟೇ, ಅವರಿಗೆ ಇಷ್ಟವಾದ ಜಾಗಕ್ಕೆೆ ನಾವು ಹೋಗಬೇಕು, ನಾವು ಕರೆದಲ್ಲಿಗೆ ಅವರು ಬರುವುದಿಲ್ಲ. ನ್ಯೂಸ್ ಚಾನೆಲ್‌ಗಳಲ್ಲಿ ಸರಿಯಾಗಿ ವರದಿಗಾರರು ಸಿಗುತ್ತಿಿಲ್ಲ. ಇನ್ಫೋೋಸಿಸ್ ಸಂಸ್ಥೆೆಯಲ್ಲಿ ಸಾಫ್‌ಟ್‌‌ವೇರ್ ಉದ್ಯೋೋಗಿಗಳ ಕೊರತೆಯಿದೆ, ಶಾಲೆಗಳಲ್ಲಿ ಪಾಠ ಮಾಡಲು ಶಿಕ್ಷಕರುಗಳೇ ಸಿಗುತ್ತಿಿಲ್ಲ, ಆಫೀಸ್‌ಗೆ ಹುಡುಗರು ಕೆಲಸಕ್ಕೆೆ ಸಿಗುತ್ತಿಿಲ್ಲ, ವ್ಯಾಾಪಾರಿಗಳಲ್ಲಿ ತರಬೇತಿ ಪಡೆದ ನೌಕರರು ಸಿಗುತ್ತಿಿಲ್ಲ, ಹಾಗಾದರೆ ಏನಾಗಿದೆ? ಇವರಿಗೆಲ್ಲ ಕೆಲಸವು ಹೆಚ್ಚಾಾಗಿದೆಯೋ ? ಹಣ ಹೆಚ್ಚಾಾಗಿದೆಯೋ? ತಲೆಯಲ್ಲಿ ಬುದ್ಧಿಿ ಇಲ್ಲವೋ? ತಿಳಿಯುತ್ತಿಿಲ್ಲ.

error: Content is protected !!