Tuesday, 17th September 2019

ಶನಿವಾರ ಬೆಳ್ಳಂ ಬೆಳಿಗೆ ಮೂಡಿಗೆರೆ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ಕಾಡಾನೆಯೊಂದು ವಾಕಿಂಗ್ ಹೋಗುತ್ತಿರುವ ದ್ರಶ್ಯ


ಬೆಳ್ಳಂ ಬೆಳಿಗೆ ಗಜರಾಜನ ವಾಕಿಂಗ್
ಮೂಡಿಗೆರೆ: ಮಲೆನಾಡು ಕಳೆದೊಂದು ವಾರದಿಂದ ಸುರಿದ ಮಳೆಗೆ ಜನರು ಹೈರಾಣಾಗಿ ಹೋಗಿದ್ದಾರೆ. ಇದರ ನಡುವೆ ಕಾಡಾನೆಗಳ ಕಾಟ ಬೇರೆ.
ಶನಿವಾರ ಬೆಳ್ಳಂ ಬೆಳಿಗೆ ಮೂಡಿಗೆರೆ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ಕಾಡಾನೆಯೊಂದು ವಾಕಿಂಗ್ ಹೋಗುತ್ತಿರುವ ದ್ರಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಗ್ರಾಮದ ರಸ್ತೆಯಲ್ಲಿ ಯಾರ ಭಯವು ಇಲ್ಲದೆ ರಾಜಗಾಂಭೀರ್ಯದಿಂದ ಕಾಡಾನೆ ಹೆಜ್ಜೆ ಹಾಕಿದೆ.
ಬೆಳ್ಳೂರು ಗ್ರಾಮಸ್ಥರು ಬೆಳಿಗ್ಗೆ ಎದ್ದು ತುಂತುರು ಮಳೆ ಚುಮು ಚುಮು ಚಳಿಯಲ್ಲಿ ಕಾಫೀ ಹೀರುತ್ತಿದ್ದರೇ ಊರಿನ ನಾಯಿಗಳು ಬೊಗಳಲೂ ಆರಂಭಿಸಿವೆ ಏಕೆ ನಾಯಿಗಳು ಇಷ್ಟೋಂದು ಬೊಗಳುತ್ತೀವೆ ಎಂದು ಗ್ರಾಮಸ್ಥರು ಹೋರ ಬಂದು ನೋಡಿದರೇ ಕಾಡಾನೆಯೊಂದು ಬೆಳ್ಳಂ ಬೆಳಿಗೆಯೇ ಊರಿನ ಮುಖ್ಯರಸ್ತೆಯಲ್ಲೇ ವಾಕಿಂಗ್ ಮಾಡುತ್ತಾ ಗೀಳಿಡುತ್ತಾ ಬರುವ ದ್ರಶ್ಯ ಮೊಬೈಲ್ ಕ್ಯಾಮರಾರದಲ್ಲಿ ಮನೆಯ ಎರಡನೇ ಮಹಡಿಯಲ್ಲಿದ್ದ ವ್ಯಕ್ತಿಯೋರ್ವರು ಸೆರೆ ಹಿಡಿದಿದ್ದಾರೆ. ಒಂದು ಕಡೆ ಮಳೆಯಿಂದ ಆದ ಹಾನಿ ಮತ್ತೋಂದು ಕಡೆ ಕಾಡಾನೆ ಕಾಟದಿಂದ ಮಲೆನಾಡಿನ ಜನರು ಭಯಗೊಂಡಿದ್ದಾರೆ

Leave a Reply

Your email address will not be published. Required fields are marked *